Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರೋಹಿತ್ ಸರ್ದಾನಾ ನಿಧನಕ್ಕೆ ಪ್ರಧಾನಿ ಸಂತಾಪ


ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಪತ್ರಕರ್ತ ರೋಹಿತ್ ಸರ್ದಾನಾ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಮೋದಿ ಅವರು: “ರೋಹಿತ್ ಸರ್ದಾನಾ ಅವರು ಅತಿ ಬೇಗನೆ ನಮ್ಮನ್ನೆಲ್ಲಾ ಅಗಲಿದರು. ತುಂಬಾ ಚೈತನ್ಯಶೀಲ, ಭಾರತದ ಪ್ರಗತಿಯ ಬಗ್ಗೆ ಅತೀವ ಉತ್ಸಾಹ ಹೊಂದಿದ್ದ, ಸಹೃದಯಿ ರೋಹಿತ್ ಅವರನ್ನು ಅನೇಕ ಮಂದಿ ಕಳೆದುಕೊಂಡಿದ್ದಾರೆ. ಅವರ ಅಕಾಲಿಕ ನಿಧನವು ಮಾಧ್ಯಮ ಜಗತ್ತಿನಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ.” ಎಂದು ತಿಳಿಸಿದ್ದಾರೆ.

***