ಪಿಎಂಇಂಡಿಯಾ
ಬಾಂಗ್ಲಾದೇಶದ ಗೃಹ ಸಚಿವ ಶ್ರೀ ಅಸಾದುಜ್ಜಾಮಾನ್ ಖಾನ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನಿಂದು ಭೇಟಿ ಮಾಡಿದರು.
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಆದ ಜೀವ ಹಾನಿಯ ಬಗ್ಗೆ ಪ್ರಧಾನಮಂತ್ರಿಯವರು ಸಂತಾಪ ಸೂಚಿಸಿದರು. ಭಯೋತ್ಪಾದನೆಯ ವಿರುದ್ಧ ಹೋರಾಡಲು ಬಾಂಗ್ಲಾದೇಶಕ್ಕೆ ಬೆಂಬಲ ನೀಡುವ ಭಾರತದ ಬದ್ಧತೆಯನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದರು.
ಶ್ರೀ ಅಸಾದುಜ್ಜಾ ಮಾನ್ ಖಾನ್ ಅವರು ಭಾರತದ ಬೆಂಬಲ ಮತ್ತು ಏಕಮತ್ಯಕ್ಕೆ ಧನ್ಯವಾದ ಅರ್ಪಿಸಿದರು. ಬಾಂಗ್ಲಾದೇಶದಲ್ಲಿನ ಪರಿಸ್ಥಿತಿಯ ಬಗ್ಗೆ ಅವರು ಪ್ರಧಾನಮಂತ್ರಿಯವರಿಗೆ ವಿವರಿಸಿದರು.
Bangladesh Home Minister Mr. Asaduzzaman Khan called on the Prime Minister. pic.twitter.com/tnrtrTUQra
— PMO India (@PMOIndia) July 28, 2016