ಪಿಎಂಇಂಡಿಯಾ

ಸ್ವಚ್ಛ ಭಾರತದೆಡೆಗೆ

ಸ್ವಚ್ಛ ಭಾರತವು 2019ರಲ್ಲಿ ನಡೆಯಲಿರುವ ಮಹಾತ್ಮ ಗಾಂಧಿಯವರ 150ನೇ ಜನ್ಮ ಜಯಂತಿಗೆ ದೇಶವು ಸಲ್ಲಿಸಬಹುದಾದ ಅತಿದೊಡ್ಡ ಕೃತಜ್ಞತೆಯಾಗಿರಲಿದೆ- 2014ರ ಅಕ್ಟೋಬರ್ 2ರಂದು ಸ್ವಚ್ಛ ಭಾರತ ಅಭಿಯಾನಕ್ಕೆ ರಾಜಪಥದಲ್ಲಿ ಚಾಲನೆ ನೀಡಿದ ಬಳಿಕ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದ ಮಾತಿದು. ಸ್ವಚ್ಛ ಭಾರತ ಅಭಿಯಾನವನ್ನು ದೇಶದ ಉದ್ದಗಲಕ್ಕೂ ರಾಷ್ಟ್ರೀಯ ಚಳವಳಿ ರೂಪದಲ್ಲಿ ಜಾರಿಗೆ ತರಲಾಗುತ್ತಿದೆ.

ಈ ಸಾಮೂಹಿಕ ಅಭಿಯಾನದ ನೇತೃತ್ವ ವಹಿಸಿದ್ದ ಪ್ರಧಾನ ಮಂತ್ರಿಗಳು ಮಹಾತ್ಮಾ ಗಾಂಧೀಜಿಯವರ ಸ್ವಚ್ಛ ಮತ್ತು ಆರೋಗ್ಯಕರ ಭಾರತದ ಕನಸನ್ನು ಈಡೇರಿಸಬೇಕು ಎಂದು ಜನತೆಗೆ ಕರೆ ನೀಡಿದರು. ಖುದ್ದು ಶ್ರೀ ನರೇಂದ್ರ ಮೋದಿಯವರೇ ಮಂದಿರ ಮಾರ್ಗ ಪೊಲೀಸ್ ಠಾಣೆಯಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಿದ್ದರು. ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ, ದೇಶಾದ್ಯಂತ ಸಾಮೂಹಿಕ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿದ ಪ್ರಧಾನ ಮಂತ್ರಿಗಳು ಖುದ್ದು ಪೊರಕೆ ಹಿಡಿದು ಸ್ವಚ್ಛತೆ ಆರಂಭಿಸಿದ್ದರು. ಜನರು ಸಾರ್ವಜನಿಕ ಸ್ಥಳಗಳಲ್ಲಿ ಉಗುಳಲೂ ಬಾರದು, ಇತರರಿಗೆ ಉಗುಳಲೂ ಬಿಡಬಾರದು ಎಂದು ಕಿವಿಮಾತು ಹೇಳಿದರು. ನಾವು ಗಲೀಜು ಮಾಡುವುದಿಲ್ಲ, ಗಲೀಜು ಮಾಡಲೂ ಬಿಡುವುದಿಲ್ಲ ಎನ್ನುವುದು ಮಂತ್ರವಾಗಬೇಕು ಎಂದು ಪ್ರಧಾನ ಮಂತ್ರಿಗಳು ಹೇಳಿದ್ದರು. ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಳ್ಳುವಂತೆ ಶ್ರೀ ನರೇಂದ್ರ ಮೋದಿಯವರು 9 ಗಣ್ಯರಿಗೆ ಆಹ್ವಾನವನ್ನೂ ನೀಡಿದ್ದರು. ಅಲ್ಲದೆ ಮತ್ತೆ ತಲಾ 9 ಮಂದಿಗೆ ಆಹ್ವಾನ ನೀಡುವಂತೆ ಆ ಗಣ್ಯರನ್ನು ಕೋರಿದ್ದರು.

ಜನರಿಗೆ ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡುವ ಮೂಲಕ ಸ್ವಚ್ಛಭಾರತ ಅಭಿಯಾನವನ್ನು ರಾಷ್ಟ್ರೀಯ ಆಂದೋಲನವಾಗಿ ಪರಿವರ್ತಿಸಿದರು. ಸ್ವಚ್ಛ ಭಾರತ ಚಳವಳಿ ಮೂಲಕ ಜನರಲ್ಲಿ ಜವಬ್ದಾರಿಯ ಅರಿವನ್ನು ಮೂಡಿಸಿದರು. ದೇಶದ ಜನರು ಸ್ವ ಇಚ್ಛೆಯಿಂದ ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಆರಂಭಿಸಿರುವುದರಿಂದ, ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತದ ಕನಸು ಈಡೇರುವ ಆಸೆಗಳು ಮೂಡಲಾರಂಭಿಸಿವೆ.

ಪ್ರಧಾನ ಮಂತ್ರಿಗಳು ತಮ್ಮ ಮಾತು, ಸಂದೇಶ ಮತ್ತು ಕೃತಿಯ ಮೂಲಕ ಸ್ವಚ್ಛ ಭಾರತದ ಸಂದೇಶವನ್ನು ಜನರಿಗೆ ತಲುಪಿಸಿದ್ದಾರೆ. ವಾರಣಾಸಿಯಲ್ಲೂ ಅವರು ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿದ್ದಾರೆ. ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ವಾರಣಾಸಿಯ ಗಂಗಾ ತಟದಲ್ಲಿನ ಅಸ್ಸಿ ಘಾಟ್ ಸ್ವಚ್ಛತೆಗೆ ಚಾಲನೆ ನೀಡಿದ್ದಾರೆ. ಸ್ವಚ್ಛ ಭಾರತ ಅಭಿಯಾನಕ್ಕೆ ಕೈ ಜೋಡಿಸಿದ ಸಾವಿರಾರು ಮಂದಿಯ ಜೊತೆ ಖುದ್ದು ಪ್ರಧಾನಿಯವರೂ ಸೇರಿಕೊಂಡರು. ನೈರ್ಮಲೀಕರಣದ ಅನಿವಾರ್ಯತೆಯನ್ನು ಮನಗೊಂಡಿರುವ ಪ್ರಧಾನಿಯವರು ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಶೌಚಾಲಯಗಳ ಹೆಚ್ಚಳಕ್ಕೆ ಆದ್ಯತೆ ನೀಡಿದ್ದಾರೆ.

ವಿವಿಧ ಕ್ಷೇತ್ರಗಳ ಜನರು ಸ್ವ-ಇಚ್ಛೆಯಿಂದ ಈ ಸಾಮೂಹಿಕ ಆಂದೋಲನದಲ್ಲಿ ಭಾಗಿಯಾಗುತ್ತಿದ್ದಾರೆ. ಸರಕಾರಿ ಅಧಿಕಾರಿಗಳಿಂದ ಹಿಡಿದು ಜವಾನರವರೆಗೆ, ಬಾಲಿವುಡ್ ನಟರಿಂದ ಹಿಡಿದು ಕ್ರೀಡಾಪಟುಗಳವರೆಗೆ, ಕೈಗಾರಿಕೋದ್ಯಮಗಳಿಂದ ಆರಂಭಿಸಿ ಆಧ್ಯಾತ್ಮಿಕ ನಾಯಕರವರೆಗೆ, ಈ ಕಾರ್ಯಕ್ಕಾಗಿ ಎಲ್ಲರೂ ಕೈಜೋಡಿಸಿದ್ದಾರೆ. ದೇಶಾದ್ಯಂತ ಲಕ್ಷಾಂತರ ಜನರು ಪ್ರತಿದಿನ ಈ ಆಂದೋಲನಕ್ಕೆ ಧುಮುಕುತ್ತಿದ್ದಾರೆ. ಸರಕಾರಿ ಇಲಾಖೆಗಳು, ಎನ್ ಜಿ ಇಗಳು, ಸ್ಥಳೀಯ ಸಮುದಾಯ ಕೇಂದ್ರಗಳು ಭಾರತವನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ಅಷ್ಟೇ ಅಲ್ಲ ದೇಶಾದ್ಯಂತ ಸಂಗೀತ, ನಾಟಕಗಳ ಮೂಲಕವೂ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಬಾಲಿವುಡ್ ನಟರಿಂದ ಆರಂಭಿಸಿ ಕಿರುತೆರೆ ಕಲಾವಿದರು, ಖ್ಯಾತನಾಮರಾದ ಅಮಿತಾಬ್ ಬಚ್ಚನ್, ಆಮಿರ್ ಖಾನ್, ಕೈಲಾಶ್ ಖೇರ್, ಪ್ರಿಯಾಂಕ ಚೋಪ್ರಾ, ಸಬ್ ಟಿವಿ ಕಾರ್ಯಕ್ರಮ ತಾರಕ್ ಮೆಹ್ತಾ ಕಾ ಉಲ್ಟಾ ಚಸ್ಮಾ ಕಲಾವಿದರು. ಸ್ವಚ್ಛಭಾರತ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಕ್ರೀಡಾಪಟುಗಳಾದ ಸಚಿನ್ ತೆಂಡುಲ್ಕರ್, ಸಾನಿಯಾ ಮಿರ್ಜಾ, ಸೈನಾ ನೆಹ್ವಾಲ್, ಮೇರಿ ಕೋಂ ಮೊದಲಾದವರೂ ಸ್ವಚ್ಛ ಭಾರತ ಆಂದೋಲನದಲ್ಲಿ ಭಾಗಿಯಾಗಿದ್ದಾರೆ.

0.08413900-1451572653-swachh-bharat-1

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ತಮ್ಮ ಮಾಸಿಕ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಸ್ವಚ್ಛ ಭಾರತ ಆಂದೋಲನಕ್ಕೆ ಸಹಕಾರ ನೀಡಿದ ಎಲ್ಲಾ ಗಣ್ಯರನ್ನೂ ಪದೇ ಪದೇ ನೆನಪಿಸಿಕೊಳ್ಳುತ್ತಿದ್ದಾರೆ. ಸಂಘ ಸಂಸ್ಥೆಗಳ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.ಮಧ್ಯಪ್ರದೇಶದ ಹರ್ದಾ ಜಿಲ್ಲೆಯ ಸರಕಾರಿ ಅಧಿಕಾರಿಗಳ ತಂಡವನ್ನು ಪ್ರಧಾನ ಮಂತ್ರಿಗಳು ವಿಶೇಷವಾಗಿ ಶ್ಲಾಘಿಸಿದ್ದಾರೆ. ಬೆಂಗಳೂರಿನ ನ್ಯೂ ಹಾರಿಜನ್ ಶಾಲೆಯ 5 ಮಕ್ಕಳಿಗೂ ಪ್ರಧಾನ ಮಂತ್ರಿಗಳ ಶ್ಲಾಘನೆ ಸಂದಿದೆ. ಈ ವಿದ್ಯಾರ್ಥಿಗಳು ತ್ಯಾಜ್ಯವನ್ನು ಮಾರುವುದಕ್ಕೆ ಮತ್ತು ಖರೀದಿಸುವುದಕ್ಕೆ ಮೊಬೈಲ್ ಅಪ್ಲಿಕೇಶನ್ ಒಂದನ್ನು ಅಭಿವೃದ್ಧಿ ಪಡಿಸಿದ್ದಾರೆ.

ಐಸಿಐಸಿಐ ಬ್ಯಾಂಕ್. ಪಂಜಾಬ್ ನ್ಯಾಷನಲ್ ಬ್ಯಾಂಕ್, ಎಕ್ಸ್ ಎಲ್ ಆರ್ ಐ ಜೇಮ್ಷೆಡ್ ಪುರ, ಐಐಎಂ ಬೆಂಗಳೂರು ಮೊದಲಾದ ಸಂಸ್ಥೆಗಳು ಸಮೂಹ ಸ್ವಚ್ಛತೆಗಾಗಿ ವಿಶೇಷ ಕ್ರಮಗಳನ್ನು ಕೈಗೊಂಡಿವೆ. ಜನರಲ್ಲಿ ಜಾಗೃತಿ ಮೂಡಿಸಿವೆ.

0.52207900_1451629836_swachh

ಅಲ್ಲದೆ, ಪ್ರಧಾನ ಮಂತ್ರಿಯವರು ಸಾಮಾಜಿಕ ಜಾಲ ತಾಣಗಳ ಮೂಲಕವೂ ಜನಸಾಮಾನ್ಯರ ಪಾಲ್ಗೊಳ್ಳುವಿಕೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ತೆಮ್ಸುತುಲಾ ಇಂಸಾಂಗ್, ದರ್ಶಿಕಾ ಶಾ ಸೇರಿದಂತೆ ಹಲವು ಸ್ವಯಂ ಸೇವಕ ಗುಂಪುಗಳು ವಾರಣಾಸಿಯಲ್ಲಿ ಆಯೋಜಿಸಿದ್ದ ಮಿಷನ್ ಪ್ರಭುಘಾಟ್ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಸ್ವಚ್ಛ ಭಾರತ ಆಂದೋಲನದ ಅಂಗವಾಗಿ, #ಮೈ ಕ್ಲೀನ್ ಇಂಡಿಯಾ ಹ್ಯಾಶ್ ಟ್ಯಾಗ್ ಆರಂಭಿಸಲಾಗಿದ್ದು, ಆಂದೋಲನ ಕುರಿತು ಮಾಹಿತಿಗಳನ್ನು ನೀಡಲಾಗುತ್ತಿದೆ. ಜನಸಾಮಾನ್ಯರು ಮಾಡುತ್ತಿರುವ ಕೆಲಸಗಳನ್ನು ಈ ಮೂಲಕ ಎಲ್ಲರಿಗೂ ತಿಳಿಸಲಾಗುತ್ತಿದೆ.

ಸ್ಬಚ್ಛ ಭಾರತ ಅಭಿಯಾನವು, ಜನಾಂದೋಲನವಾಗಿ ಮಾರ್ಪಟ್ಟಿದೆ. ಜನಸಾಮಾನ್ಯರು ದೊಡ್ಡ ಪ್ರಮಾಣದಲ್ಲಿ, ಭಾರತವನ್ನು ಸ್ವಚ್ಛಗೊಳಿಸುವ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಸ್ತೆಗಳನ್ನು ಗುಡಿಸಲು ಪೊರಕೆಗಳನ್ನು ಕೈಗೆತ್ತಿಕೊಂಡಿದ್ದಾರೆ, ಕಸವನ್ನು ತೆಗೆದು ಬೇರೆಡೆ ಸಾಗಿಸುತ್ತಿದ್ದಾರೆ, ನೈರ್ಮಲೀಕರಣದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಹೀಗೆ ನಾನಾ ವಿಧಾನಗಳ ಮೂಲಕ ದೇಶ ಸೇವೆ ಮಾಡುತ್ತಿದ್ದಾರೆ. ಸ್ವಚ್ಛತೆಯೇ ದೇವರನ್ನು ತಲುಪುವ ಮಾರ್ಗ ಎಂಬ ಅರಿವು ಎಲ್ಲರಲ್ಲೂ ಮೂಡತೊಡಗಿದೆ.

0.92400400-1451572703-clean-india

ಸ್ವಚ್ಛ ಭಾರತ ಅಭಿಯಾನವು ನಗರ ಪ್ರದೇಶಗಳಲ್ಲಿ ವೈಯುಕ್ತಿಕ ಶೌಚಾಲಯ ನಿರ್ಮಾಣ, ಸಮುದಾಯ ಶೌಚಾಲಯ ನಿರ್ಮಾಣ, ಘನತ್ಯಾಜ್ಯ ನಿರ್ವಹಣೆ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಜನರ ಮನಸ್ಥಿತಿ ಬದಲಾವಣೆ, ವ್ಯಕ್ತಿಗತ ಸಂವಹನ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಯೋಜನೆಗಳ ಅನುಷ್ಠಾನ, ಸ್ಥಳೀಯ ಸಂಸ್ಕೃತಿ, ಪದ್ಧತಿ, ಬೇಡಿಕೆಗಳನ್ನು ಈಡೇರಿಸಲು ಗಮನ ಹರಿಸಲಾಗುತ್ತಿದೆ. ಶೌಚಾಲಯ ನಿರ್ಮಾಣಕ್ಕೆ ಉತ್ತೇಜಕ ಧನಸಹಾಯವನ್ನು 2000 ರೂಪಾಯಿಗಳ ಬದಲಾಗಿ 10000 ರಿಂದ 12000 ರೂಪಾಯಿಗಳವರೆಗೆ ಏರಿಸಲಾಗಿದೆ. ದ್ರವ ಮತ್ತು ಘನತ್ಯಾಜ್ಯ ನಿರ್ವಹಣೆಗಾಗಿ ಗ್ರಾಮ ಪಂಚಾಯತ್ ಗೆ ಧನಸಹಾಯವನ್ನೂ ಮಾಡಲಾಗುತ್ತಿದೆ.

Loading...