ಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಮೆರಿಕದ ಸಂಯುಕ್ತ ಸಂಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಟ ಸಂದರ್ಭದಲ್ಲಿ ಬಿಡುಗಡೆ ಮಾಡಲಾದ ಜಂಟಿ ಹೇಳಿಕೆ (ಅಮೆರಿಕ-ಭಾರತ: 21ನೆಯ ಶತಮಾನದ ಚಿರಕಾಲದ ಸಹಭಾಗಿಗಳು) ಜೂನ್ 7, 2016

ಅಮೆರಿಕದ ಸಂಯುಕ್ತ ಸಂಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಟ ಸಂದರ್ಭದಲ್ಲಿ ಬಿಡುಗಡೆ ಮಾಡಲಾದ ಜಂಟಿ ಹೇಳಿಕೆ (ಅಮೆರಿಕ-ಭಾರತ: 21ನೆಯ ಶತಮಾನದ ಚಿರಕಾಲದ ಸಹಭಾಗಿಗಳು)  ಜೂನ್ 7, 2016

ಅಮೆರಿಕದ ಸಂಯುಕ್ತ ಸಂಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಟ ಸಂದರ್ಭದಲ್ಲಿ ಬಿಡುಗಡೆ ಮಾಡಲಾದ ಜಂಟಿ ಹೇಳಿಕೆ (ಅಮೆರಿಕ-ಭಾರತ: 21ನೆಯ ಶತಮಾನದ ಚಿರಕಾಲದ ಸಹಭಾಗಿಗಳು)  ಜೂನ್ 7, 2016

ಅಮೆರಿಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಭೇಟಿಯ ಸಂದರ್ಭದಲ್ಲಿ ಶ್ವೇತಭವನದಲ್ಲಿ ಇಂದು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅಮೆರಿಕದ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷ ಶ್ರೀ ಬರಾಕ್ ಒಬಾಮ ಅವರು ಪರಸ್ಪರ ಭೇಟಿ ಮಾಡಿದರು. ಇದು ಈ ಇಬ್ಬರು ನಾಯಕರ ಮೂರನೆಯ ದ್ವಿಪಕ್ಷೀಯ ಶೃಂಗಸಭೆಯಾಗಿದ್ದು, ಸ್ವಾತಂತ್ರ್ಯ, ಪ್ರಜಾತಂತ್ರ, ಜಾಗತಿಕ ಮಾನವ ಹಕ್ಕುಗಳು, ತಾಳ್ಮೆ ಮತ್ತು ಬಹುತತ್ತ್ವವಾದ, ಎಲ್ಲ ನಾಗರಿಕರಿಗೆ ಸಮಾನ ಹಕ್ಕುಗಳು ಮತ್ತು ಶಾಸನಬದ್ಧ ಆಡಳಿತಗಳ ಅಂಗೀಕೃತ ಮೌಲ್ಯಗಳ ಆಧಾರದಲ್ಲಿ ಬಲಗೊಳ್ಳುತ್ತಿರುವ ಭಾರತ ಅಮೆರಿಕ ಕಾರ್ಯತಂತ್ರಾತ್ಮಕ ಪಾಲುದಾರಿಕೆಯನ್ನು ಈ ಇಬ್ಬರು ನಾಯಕರು ಪುನರ್ಪರಿಶೀಲಿಸಿದರು. ಆರ್ಥಿಕ ಬೆಳವಣಿಗೆ ಮತ್ತು ಬಲವಾದ ಅಭಿವೃದ್ಧಿಯ ಮಾರ್ಗಗಳನ್ನು ಅನುಸರಿಸಲು, ಸ್ವದೇಶದಲ್ಲಿ ಮತ್ತು ಜಗತ್ತಿನಾದ್ಯಂತ ಶಾಂತಿ ಮತ್ತು ಭದ್ರತೆಯನ್ನು ಪೋಷಿಸಲು, ವ್ಯಾಪಕ ಪ್ರಜಾಸತ್ತಾತ್ಮಕ ಆಡಳಿತ ಮತ್ತು ಸಾರ್ವತ್ರಿಕ ಮಾನವ ಹಕ್ಕುಗಳಿಗೆ ಗೌರವವನ್ನು ಹೆಚ್ಚಿಸಲು, ಪರಸ್ಪರ ಹಿತಾಸಕ್ತಿಗಳಲ್ಲಿ ಜಾಗತಿಕ ನಾಯಕತ್ವವನ್ನು ವಹಿಸಲು ಸಂಕಲ್ಪ ಮಾಡಿದರು.

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ 2014ರ ಸೆಪ್ಟೆಂಬರ್‌ನಲ್ಲಿ ಅಮೆರಿಕದ ಭೇಟಿ ಮತ್ತು ಅಧ್ಯಕ್ಷ ಶ್ರೀ ಬರಾಕ್ ಒಬಾಮ ಅವರ 2015ರ ಜನವರಿಯ ಭಾರತ ಭೇಟಿಗಳ ಸಂದರ್ಭಗಳಲ್ಲಿ ಹೊರಡಿಸಲಾದ ಜಂಟಿ ಹೇಳಿಕೆಗಳಲ್ಲಿನ ಪಥನಕ್ಷೆಗಳಿಗನುಗುಣವಾಗಿ ತಮ್ಮ ಆಡಳಿತಾವಧಿಗಳಲ್ಲಿ ಭಾರತ – ಅಮೆರಿಕಗಳ ದ್ವಿಪಕ್ಷೀಯ ಬಾಂಧವ್ಯಗಳಲ್ಲಿ ಉಂಟಾಗಿರುವ ಪ್ರಗತಿಯನ್ನು ಈ ನಾಯಕರು ಸ್ವಾಗತಿಸಿದರು. ತಮ್ಮ ವ್ಯೂಹ ದೃಷ್ಟಿಕೋನದಲ್ಲಿ ಏಕೋಭಾವ ವೃದ್ಧಿಸಿರುವುದನ್ನು ಈ ಇಬ್ಬರು ನಾಯಕರು ದೃಢೀಕರಿಸಿದರು ಮತ್ತು ಪರಸ್ಪರರ ಭದ್ರತೆ ಹಾಗೂ ಪ್ರಗತಿಯ ವಿಷಯದಲ್ಲಿ ನಿಕಟವಾಗಿ ಮಗ್ನವಾಗಿರಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.

ಹವಾಮಾನ ಮತ್ತು ಸ್ವಚ್ಛ ಇಂಧನ ಕ್ಷೇತ್ರಗಳಲ್ಲಿ ಅಮೆರಿಕ-ಭಾರತ ನಾಯಕತ್ವವನ್ನು ವೃದ್ಧಿಸುವುದು

ಅಣು ಹಾನಿಗೆ ಪೂರಕ ಪರಿಹಾರವನ್ನು ನೀಡುವ ಒಡಂಬಡಿಕೆಯನ್ನು ಭಾರತ ಸ್ಥಿರೀಕರಿಸುವ ಮೂಲಕ ಅಣ್ವಸ್ತ್ರ ಹೊಂದಿರುವ ಪ್ರಶ್ನೆಯೂ ಸೇರಿದಂತೆ ಅಮೆರಿಕ-ಭಾರತ ತಂಡದ ಮೂಲಕ ಎರಡೂ ಸರ್ಕಾರಗಳು ಕಳೆದ ಎರಡು ವರ್ಷಗಳಲ್ಲಿ ಕೈಗೊಂಡಿರುವ ಕ್ರಮಗಳು ಭಾರತದಲ್ಲಿ ಅಣು ಸ್ಥಾವರಗಳನ್ನು ನಿರ್ಮಿಸುವ ವಿಷಯದಲ್ಲಿ ಅಮೆರಿಕ ಮತ್ತು ಭಾರತದ ಸಂಸ್ಥೆಗಳ ನಡುವೆ ದೀರ್ಘಕಾಲೀನ ಸಹಭಾಗಿತ್ವಕ್ಕೆ ಭದ್ರ ಬುನಾದಿ ಹಾಕಿವೆ. ನಾಗರಿಕ ಪರಮಾಣು ಬಳಕೆ ವಿಷಯದಲ್ಲಿ ಒಂದು ದಶಕದ ಸಹಭಾಗಿತ್ವದ ಅವಧಿಯ ಸಂದರ್ಭದಲ್ಲಿ ಭಾರತದಲ್ಲಿ ವೆಸ್ಟಿಂಗ್‌ ಹೌಸ್ ಸಂಸ್ಥೆ ನಿರ್ಮಿಸಲಿರುವ ಆರು ಎಪಿ 1000 ಅಣು ವಿದ್ಯುತ್ ಸ್ಥಾವರಗಳ ತಾಣದಲ್ಲಿ ಸಿದ್ಧತೆ ಕಾರ್ಯ ಪ್ರಾರಂಭವಾಗಿರುವುದನ್ನು ಈ ನಾಯಕರು ಸ್ವಾಗತಿಸಿದರು ಮತ್ತು ಈ ಯೋಜನೆಗೆ ಸ್ಪರ್ಧಾತ್ಮಕ ಬೆಲೆಯ ಆರ್ಥಿಕ ಮೊತ್ತವನ್ನು ನಿರ್ಧರಿಸುವಲ್ಲಿ ಭಾರತದ ಮತ್ತು ಅಮೆರಿಕದ ಆಮದು ಮತ್ತು ರಫ್ತು ಬ್ಯಾಂಕ್‌ನ ಉದ್ದೇಶದತ್ತ ಗಮನ ಹರಿಸಿದರು. ಈ ಯೋಜನೆ ಮುಗಿದ ಮೇಲೆ ಇದು ಇಂಥ ಯೋಜನೆಗಳಲ್ಲೇ ಅತ್ಯಂತ ದೊಡ್ಡದೆನಿಸಲಿದ್ದು ಅಮೆರಿಕ-ಭಾರತ ಅಣು ಒಪ್ಪಂದದಲ್ಲಿ ನೀಡಲಾದ ಭರವಸೆಯನ್ನು ಪೂರೈಸಲಿದೆಯಲ್ಲದೆ ಭಾರತದ ಹೆಚ್ಚುತ್ತಿರುವ ಇಂಧನ ಅಗತ್ಯಗಳನ್ನು ಪೂರೈಸುವ ಸಹಭಾಗಿತ್ವದ ಬದ್ಧತೆಯನ್ನು ಪಾಲಿಸಿದಂತಾಗುತ್ತದೆ ಮತ್ತು ಭಾರತ ಪಳೆಯುಳಿಕೆಯ ಇಂಧನಗಳ ಮೇಲೆ ಅವಲಂಬಿಸುವುದನ್ನು ಕಡಮೆ ಮಾಡಿದಂತಾಗುತ್ತದೆ. ಎಂಜಿನಿಯರಿಂಗ್ ಮತ್ತು ನಿವೇಶನ ವಿನ್ಯಾಸದ ಕೆಲಸ ಕೂಡಲೇ ಪ್ರಾರಂಭವಾಗುತ್ತದೆ ಹಾಗೂ 2017ರ ಜೂನ್ ತಿಂಗಳಲ್ಲಿ ಗುತ್ತಿಗೆ ಏರ್ಪಾಡುಗಳನ್ನು ಅಂತಿಮಗೊಳಿಸುವತ್ತ ಎರಡೂ ಕಡೆಯವರು ಕಾರ್ಯೋನ್ಮುಖವಾಗುತ್ತವೆಯೆಂದು ಭಾರತದ ಅಣು ಇಂಧನ ನಿಗಮ ಮತ್ತು ವೆಸ್ಟಿಂಗ್‌ ಹೌಸ್ ಸಂಸ್ಥೆಗಳು ಪ್ರಕಟಿಸಿರುವುದನ್ನು ಉಭಯ ಪಕ್ಷಗಳು ಸ್ವಾಗತಿಸಿದವು.

ಅಮೆರಿಕ ಮತ್ತು ಭಾರತ ಹವಾಮಾನ ಮತ್ತು ಶುದ್ಧ ಇಂಧನ ಕುರಿತ ಸಮಾನ ಆಸಕ್ತಿಗಳನ್ನು ಹಂಚಿಕೊಳ್ಳುವ ಮತ್ತು ಹವಾಮಾನ ಬದಲಾವಣೆ ವಿರುದ್ಧ ಹೋರಾಟದಲ್ಲಿ ನಿಕಟ ಪಾಲುದಾರರಾಗಿದ್ದಾರೆ. ಎರಡೂ ದೇಶಗಳ ನಾಯಕತ್ವ ಹವಾಮಾನ ಬದಲಾವಣೆ ಹೋರಾಟಕ್ಕೆ ಜಾಗತಿಕ ಕ್ರಮವನ್ನು ಹುರಿದುಂಬಿಸಲು ಸಹಕಾರಿಯಾಗಿದೆ ಮತ್ತು ಕಳೆದ ಡಿಸೆಂಬರ್ ನಲ್ಲಿ ಪ್ಯಾರಿಸ್ ನಲ್ಲಿ ಐತಿಹಾಸಿಕ ಒಪ್ಪಂದ ಆಖೈರುಗೊಳಿಸಲು ಸಹಕಾರಿಯಾಗಿದೆ. ಹವಾಮಾನ ಬದಲಾವಣೆ ಎದುರಾದ ತುರ್ತು ಬೆದರಿಕೆಗಳನ್ನು ಪ್ಯಾರಿಸ್ ಒಪ್ಪಂದ ಪೂರ್ಣ ಅನುಷ್ಠಾನಕ್ಕೆ ಉತ್ತೇಜಿಸಲು ಎರಡೂ ದೇಶಗಳಲ್ಲಿ ಒಟ್ಟಿಗೆ ಕೆಲಸ ಮತ್ತು ಇತರರೊಂದಿಗೆ ಬದ್ಧವಾಗಿರುತ್ತವೆ. ಭಾರತ ಮತ್ತು ಅಮೆರಿಕ ಹವಾಮಾನ ಬದಲಾವಣೆಯ ತುರ್ತು ಅಗತ್ಯವನ್ನು ಮನಗಂಡು ಮತ್ತು ಪ್ಯಾರಿಸ್ ಒಪ್ಪಂದದ ಪ್ರವೇಶಕ್ಕೆ ಎಷ್ಟು ಸಾಧ್ಯವೋ ಅಷ್ಟು ಬೇಗ ಅನುವು ಮಾಡಿಕೊಡುವ ಗುರಿಯ ಬಗ್ಗೆ ವಿನಿಮಯ ಮಾಡಿಕೊಂಡಿವೆ. ಅಮೆರಿಕವು ಈ ವರ್ಷವೇ ಎಷ್ಟು ಸಾಧ್ಯವೋ ಅಷ್ಟು ಬೇಗ ಒಪ್ಪಂದಕ್ಕೆ ಸೇರುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ. ಭಾರತ ಕೂಡ ಅದೇ ರೀತಿ ಈ ವಿನಿಮಯಿತ ಉದ್ದೇಶದತ್ತೆ ಕಾರ್ಯ ನಿರ್ವಹಿಸಲು ಪ್ರಕ್ರಿಯೆ ಆರಂಭಿಸಲಿದೆ. 2020ಕ್ಕೂ ಮೊದಲ ಅವಧಿಯಲ್ಲಿ ಅತಿ ಕಿಡಿಮೆ ಹಸಿರು ಮನೆ ಅನಿಲ ಹೊರಸೂಸುವ ಅಭಿವೃದ್ಧಿ ಕಾರ್ಯತಂತ್ರ ಮತ್ತು ಅತಿ ಕಡಿಮೆ ಹಸಿರು ಮನೆ ಅನಿಲ ಹೊರಸೂಸುವ ಅಭಿವೃದ್ಧಿ ಕಾರ್ಯತಂತ್ರವನ್ನು ದೀರ್ಘಾವಧಿಗೆ ಅಭಿವೃದ್ಧಿಪಡಿಸುವ ಮುಂದುವರಿಸುವ ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದರು. ಜೊತೆಗೆ ಎರಡೂ ರಾಷ್ಟ್ರಗಳು ಅನುಷ್ಠಾನಕ್ಕಾಗಿ ಅಭಿವೃದ್ಧಿಶೀಲ ದೇಶಗಳಿಗೆ ನೆರವಾಗಲು ದಾನಿ ರಾಷ್ಟ್ರಗಳ ಬೆಂಬಲದೊಂದಿಗೆ ಬಹುಪಕ್ಷೀಯ ನಿಧಿಗೆ ಹೆಚ್ಚಿನ ಹಣಕಾಸು ಬೆಂಬಲದೊಂದಿಗೆ 2016ರಲ್ಲಿ ಎಚ್.ಎಫ್.ಸಿ. ತಿದ್ದುಪಡಿ ಅಳವಡಿಸಿಕೊಳ್ಳಲು ಮತ್ತು ಮೋಂಟ್ರಿಯಲ್ ಶಿಷ್ಠಾಚಾರದ ಅಡಿಯಲ್ಲಿ ದುಬೈ ಮಾರ್ಗಕ್ಕೆ ಅನುಸಾರವಾಗಿ ಮಹತ್ವಾಕಾಂಕ್ಷೆಯ ಕೆಳಹಂತದ ವೇಳಾಪಟ್ಟಿ ಸಿದ್ಧಪಡಿಸಲು ನಾಯಕರು ನಿರ್ಣಯಿಸಿದರು.ಅಂತಾರಾಷ್ಟ್ರೀಯ ವಿಮಾನಯಾನದಿಂದ ಹೊಸಹೊಮ್ಮುವ ಹಸಿರುಮನೆ ಅನಿಲ ಸಮಸ್ಯೆ ಎದುರಿಸಲು ಯಶಸ್ವಿಯಾದ ಫಲಶ್ರುತಿಗಾಗಿ ಈ ನಾಯಕರು ಮುಂಬರುವ ಅಂತಾರಾಷ್ಟ್ರೀಯ ನಾಗರಿಕ ವಿಮಾನ ಸಮಾವೇಶದಲ್ಲಿ ಒಗ್ಗೂಡಿ ಕಾರ್ಯನಿರ್ವಹಿಸಲು ನಿರ್ಧರಿಸಿದರು. ಜೊತೆಗೆ ತಮ್ಮ ರಾಷ್ಟ್ರೀಯ ಸಾಮರ್ಥ್ಯ ಮತ್ತು ಆದ್ಯತೆಗಳಿಗೆ ಅನುಸಾರವಾಗಿ ಹೆಚ್ಚು ತೂಕದ ವಾಹನಗಳ ಗುಣಮಟ್ಟ ಮತ್ತು ಸಾಮರ್ಥ್ಯವನ್ನು ಸುಧಾರಿಸಲು ಜಿ.20 ನಾಯಕತ್ವದಲ್ಲಿ ಮುಂದುವರಿಯಲೂ ನಿರ್ಧರಿಸಿದರು.

ನಾಯಕರು ಇಂಧನ ಸುರಕ್ಷತೆ, ಶುದ್ಧ ಇಂಧನ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಎಂ.ಓ.ಯು.ಮತ್ತು ಅನಿಲ ಹೈಡ್ರೇಟ್ಸ್ ಸಹಕಾರದ ಎಂ.ಓ.ಯು.ಗೆ. ಅಂಕಿತ ಹಾಕಿರುವುದನ್ನೂ ಸ್ವಾಗತಿಸಿದರು.

ವನ್ಯಜೀವಿ ಸಂರಕ್ಷಣೆಯು ಅಭಿವೃದ್ಧಿ ಆಜ್ಞಾರ್ಥವಾಗಬೇಕು ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟ ನಾಯಕರು ವನ್ಯಜೀವಿ ಸಂರಕ್ಷಣೆ ಮತ್ತು ಹೋರಾಟಕ್ಕಾಗಿ ವನ್ಯಜೀವಿ ಸಾಗಾಣಿಕೆ ಮೇಲೆ ಸಹಕಾರ ಹೆಚ್ಚಿಸಲು ಸಂಬಂಧಿಸಿದಂತೆ ಎಂ.ಓ.ಯು.ಗೆ ಸಹಿ ಹಾಕಿರುವುದನ್ನು ಸ್ವಾಗತಿಸಿದರು.

ಶುದ್ಧ ಇಂಧನ ಹೂಡಿಕೆ

ಸೌರ ವಿದ್ಯುತ್ ನಿಂದ 100 ಗಿಗಾವ್ಯಾ ಸೇರಿದಂತೆ 175 ಗಿಗಾ ವ್ಯಾಟ್ ಪುನರ್ ನವೀಕರಿಸುವ ಇಂಧನ ಸ್ಥಾವರ ಅಳವಡಿಸುವ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಗುರಿಗೆ ಅಮೆರಿಕ ಬೆಂಬಲ ನೀಡಲಿದೆ.

ಅಮೆರಿಕದ ಅಂತಾರಾಷ್ಟ್ರೀಯ ಸೌರ ಸಹಯೋಗ (ಐ.ಎಸ್.ಎ), ಯನ್ನು ಸ್ವಾಗತಿಸಿದ್ದು, ಸೌರ ವಿದ್ಯುತ್ ಉತ್ಪಾದನೆ ಮತ್ತು ನಿಯೋಜನೆಯಲ್ಲಿ ತಾನು ವಹಿಸಬಹುದಾದ ಮಹತ್ವದ ಪಾತ್ರವನ್ನೂ ಗುರುತಿಸುತ್ತದೆ ಮತ್ತು ಐ.ಎಸ್.ಎ.ನಲ್ಲಿ ಸದಸ್ಯತ್ವ ಇಂಗಿತ ವ್ಯಕ್ತಪಡಿಸಿದೆ. ಈ ನಿಟ್ಟಿನಲ್ಲಿ ಮತ್ತು ಐ.ಎಸ್.ಎ.ಬಲಪಡಿಸುವ ಸಲುವಾಗಿ ಭಾರತದಲ್ಲಿ 2016ರ ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಐ.ಎಸ್.ಎ. ಯ ಸ್ಥಾಪನಾ ಸಮಾವೇಶದಲ್ಲಿ ಆಫ್- ಗ್ರಿಡ್ ಸೌರ ಇಂಧನದ ಲಭ್ಯತೆಗೆ ಅಮೆರಿಕ ಮತ್ತು ಭಾರತ ಜಂಟಿಯಾಗಿ ಐ.ಎಸ್.ಎ.ಯ ಮೂರನೇ ಉಪಕ್ರಮ ಆರಂಭಿಸಲಿವೆ, ಅಭಿವೃದ್ಧಿಶೀಲ ರಾಷ್ಟ್ರಗಳ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಅರ್ಥಪೂರ್ಣವಾದ ನಿಯಂತ್ರಣ ಮತ್ತು ಅಳವಡಿಕೆ ಕ್ರಮಕ್ಕೆ ನೆರವಾಗಲು 2020ರ ಹೊತ್ತಿಗೆ ವಾರ್ಷಿಕ 100 ಶತಕೋಡಿ ಡಾಲರ್ ಜಂಟಿ ನಿಧಿ ಗುರಿಯಲ್ಲಿ ಅಮೆರಿಕ ಸಹ ಇತರ ಅಭಿವೃದ್ಧಿಹೊಂದಿದ ರಾಷ್ಟ್ರಗಳೊಂದಿಗೆ ಉಳಿಯುವ ಬದ್ಧತೆ ವ್ಯಕ್ತಪಡಿಸಿದೆ.

ಇತರ ಐ.ಎಸ್.ಎ. ಸದಸ್ಯ ರಾಷ್ಟ್ರಗಳಿಗೆ ಮಾದರಿ ಆಗುವಂತೆ ತನ್ನ ಪ್ರಯತ್ನಗಳು ಸೇರಿದಂತೆ, ಭಾರತದಲ್ಲಿ ಪುನರ್ ನವೀಕರಿಸುವ ಇಂಧನ ಕ್ಷೇತ್ದಲ್ಲಿ ಜಂಟಿಯಾಗಿ ದೊಡ್ಡ ಹೂಡಿಕೆ ಮಾಡಲು ಮತ್ತು ತನ್ನ ತಾಂತ್ರಿಕ ಸಾಮರ್ಥ್ಯ, ಸಂಪನ್ಮೂಲ ಮತ್ತು ಖಾಸಗಿ ವಲಯವನ್ನು ಎಳೆದು ತರಲು ಅಮೆರಿಕ ಬದ್ಧವಾಗಿದೆ. ಅದರಲ್ಲೂ ಅಮೆರಿಕ ಮತ್ತು ಭಾರತ ಇಂದು ಪ್ರಕಟಿಸಿರುವುದು: ಭಾರತ ಮತ್ತು ಅಮೆರಿಕ ಸಮಾನವಾಗಿ ಬೆಂಬಲ ನೀಡುವ 20 ದಶಲಕ್ಷ ಡಾಲರ್ ಅಮೆರಿಕ-ಭಾರತ ಶುದ್ಧ ಇಂಧನ ಹಣಕಾಸು (ಎಸ್.ಎಸ್.ಐ.ಸಿ.ಆ.ಎಫ್.) ಉಪಕ್ರಮ, ಇದು 2020ರ ಹೊತ್ತಿಗೆ 10 ಲಕ್ಷ ವಸತಿಗಳಿಗೆ ಪುನರ್ ನವೀಕರಿಸುವ ಇಂಧನ ಮತ್ತು ಶುದ್ಧ ಇಂಧನ ಒದಗಿಸಲು 400 ದಶಲಕ್ಷ ಡಾಲರ್ ಸಂಗ್ರಹಿಸುವ ನಿರೀಕ್ಷೆಯನ್ನು ಹೊಂದಿದೆ; ಭಾರತದಲ್ಲಿ ನವೀಕರಿಸಬಹುದಾದ ಇಂಧನ ವಲಯದ ಹೂಡಿಕೆ ಹೆಚ್ಚಿಸಲು ಭಾರತೀಯ ಹಣಕಾಸು ಸಂಸ್ಥೆಗಳ ಪಾಲುದಾರಿಕೆಯಲ್ಲಿ ಅಮೆರಿಕ ಸರ್ಕಾರದ ಪ್ರಯತ್ನದೊಂದಿಗೆ ಅಮೆರಿಕ-ಭಾರತ ಶುದ್ಧ ಇಂಧನ ಹಬ್ ಸ್ಥಾಪಿಸಲು ಬದ್ಧತೆ ತೋರಿದೆ. ಗ್ರಿಡ್ ಸಂಪರ್ಕವನ್ನೇ ಹೊಂದದ ಬಡ, ಗ್ರಾಮೀಣ ಹಳ್ಳಿಗಳಲ್ಲಿ ಸಣ್ಣ ಪ್ರಮಾಣದ ಮರು ಬಳಕೆ ಇಂಧನ ಹೂಡಿಕೆಗೆ ಅಗತ್ಯವಾದ ಹಣದ ಹರಿವು ಒದಗಿಸಲು,ಇಂಥ ಯೋಜನೆಗಳಿಗೆ 1 ಶಕತೋಟಿ ಡಾಲರ್ ಹೊಂದಿಸಲು ಭಾರತ ಮತ್ತು ಅಮೆರಿಕ ಸಮಾನವಾಗಿ ಬೆಂಬಲ ನೀಡುವ 40 ದಶಲಕ್ಷ ಡಾಲರ್ ಅಮೆರಿಕ- ಭಾರತ ವೇಗವರ್ಧಕ ಸೌರ ಹಣಕಾಸು ಕಾರ್ಯಕ್ರಮ. ಯು.ಎಸ್.ಎ.ಐ.ಡಿ. ಯಶಸ್ವಿ ಸಹಕಾರ ಮುಂದುವರಿಕೆಯೊಂದಿಗೆ ಭಾರತೀಯ ಕುಟುಂಬಗಳಿಗೆ ಬೆಂಬಲವಾಗಿ ಮೇಲ್ಛಾವಣಿಯ ಸೌರ ಮತ್ತು “ಗ್ರೀನಿಂಗ್ ಗ್ರಿಡ್” ವಿಸ್ತರಣೆ. ಅಮೆರಿಕ ಹಾಗೂ ಭಾರತ ಎರಡೂ ನಾವಿನ್ಯ ಅಭಿಯಾನದ ಗುರಿಗೆ ಬದ್ಧರಾಗಿದ್ದು, ಅವು ತಮ್ಮ ಶುದ್ಧ ಇಂಧನ ಸಂಶೋಧನೆ ಮತ್ತು ಅಭಿವೃದ್ಧಿಯ ಹೂಡಿಕೆಯನ್ನು ಐದು ವರ್ಷಗಳಲ್ಲಿ ದುಪ್ಪಟ್ಟುಗೊಳಿಸಲು ಪ್ಯಾರಿಸ್ ನಲ್ಲಿ ನಡೆದ ಕಾಪ್ 21 ಶೃಂಗದ ವೇಳೆ ಜಂಟಿಯಾಗಿ ಇದನ್ನು ಆರಂಭಿಸಿವೆ. ಈ ನಿಟ್ಟಿನಲ್ಲಿ ಇಬ್ಬರೂ ನಾಯಕರು ಸ್ಮಾರ್ಟ್ ಗ್ರಿಡ್ ಮತ್ತು ಗ್ರಿಡ್ ದಾಸ್ತಾನು ಸಂಶೋಧನೆಯಲ್ಲಿ 30 ದಶಲಕ್ಷ ಡಾಲರ್ ಸಾರ್ವಜನಿಕ – ಖಾಸಗಿ ಸಂಶೋಧನಾ ಪ್ರಯತ್ನದ ಪ್ರಕಟಣೆಯೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿಯ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

ಜಾಗತಿಕ ಪ್ರಸರಣ ತಡೆ ಬಲಪಡಿಸುವಿಕೆ

ವಾಷಿಂಗ್ಟನ್ ಡಿ.ಸಿ.ಯಲ್ಲಿ 2016ರಲ್ಲಿ ಪರಮಾಣು ಭದ್ರತಾ ಶೃಂಗಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಕ್ಕೆ ಹಾಗೂ ತಮ್ಮ ಅಮೂಲ್ಯ ಕೊಡುಗೆ ನೀಡಿದ್ದಕ್ಕಾಗಿ ಅಧ್ಯಕ್ಷರು, ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು. ಮತ್ತು 2018 ರಲ್ಲಿ ಸಾಮೂಹಿಕ ವಿನಾಶ ತರುವಂಥ ಅಸ್ತ್ರಗಳ ಭಯೋತ್ಪಾದನೆ ಎದುರಿಸುವ ಕುರಿತಂತೆ ಶೃಂಗಸಭೆಯ ಆತಿಥ್ಯವಹಿಸುವ ಪ್ರಸ್ತಾವವನ್ನು ಸ್ವಾಗತಿಸಿದರು. ರಾಸಾಯನಿಕ, ಜೈವಿಕ, ಪರಮಾಣು ಮತ್ತು ವಿಕಿರಣ ಸಾಧನಗಳನ್ನು ಪಡೆದು ಮತ್ತು ಬಳಸುತ್ತಿರುವ ಭಯೋತ್ಪಾದನೆಯ ಭೀತಿಯನ್ನು ಎದುರಿಸಲು ಅಮೆರಿಕ ಮತ್ತು ಭಾರತ ಒಗ್ಗೂಡಿ ಕೆಲಸ ಮಾಡಲಿವೆ. ಸಾಮೂಹಿಕ ನಾಶಕ್ಕೆ ಕಾರಣವಾಗುವ ಅಸ್ತ್ರಗಳ ಪ್ರಸರಣ ತಡೆ ಮತ್ತು ಅವುಗಳ ಸರಬರಾಜು ತಡೆಯ ತಮ್ಮ ವಿನಿಮಯಿತ ಬದ್ಧತೆಯನ್ನು ಸ್ಮರಿಸಿದ ನಾಯಕರು, ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಆಡಳಿತದಲ್ಲಿ ಭಾರತದ ಸನ್ನಿಹಿತ ಪ್ರವೇಶದ ನಿರೀಕ್ಷೆಯಲ್ಲಿದ್ದಾರೆ. ಪರಮಾಣು ಸರಬರಾಜುದಾರರ ಗುಂಪು (ಎನ್.ಎಸ್.ಜಿ.) ಸೇರುವ ಭಾರತದದ ಮನವಿಯನ್ನು ಸ್ವಾಗತಿಸಿದ ಅಧ್ಯಕ್ಷ ಒಬಾಮಾ ಅವರು ಭಾರತವು ಸದಸ್ಯತ್ವಕ್ಕೆ ಸನ್ನದ್ಧವಾಗಿದೆ ಎಂದರು. ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಎಸ್.ಎಸ್.ಜಿ.ಯ ಸರ್ವ ಸದಸ್ಯರ ಸಭೆಯಲ್ಲಿ ಈ ವಿಷಯ ಪ್ರಸ್ತಾಪಕ್ಕೆ ಬಂದಾಗ ಭಾರತದ ಅರ್ಜಿಗೆ ಬೆಂಬಲ ನೀಡುವಂತೆ ಎಸ್.ಎಸ್.ಜಿ.ಯಲ್ಲಿ ಭಾಗವಹಿಸುವ ಸರ್ಕಾರಗಳಿಗೆ ಅಮೆರಿಕ ಕರೆ ನೀಡಿದೆ. ಆಸ್ಟ್ರೇಲಿಯಾ ಗುಂಪಿನಲ್ಲಿ ಮತ್ತು ವಸ್ಸೆನಾರ್ ಸಿದ್ಧತೆಯಲ್ಲಿ ಭಾರತದ ಮುಂಚಿತವಾದ ಸದಸ್ಯಕ್ಕೆ ಅಮೆರಿಕ ಬೆಂಬಲವನ್ನು ಪುನರುಚ್ಚರಿಸಿದೆ.

ತಾಣಗಳ ಸುರಕ್ಷತೆ: ಭೂ, ಸಾಗರ, ವಾಯು, ಬಾಹ್ಯಾಕಾಶ ಮತ್ತು ಸೈಬರ್

ಮುಂಬರುವ ವರ್ಷಗಳಲ್ಲಿ ಸಹಯೋಗಕ್ಕಾಗಿ ಮಾರ್ಗದರ್ಶಕವಾಗಿ 2015 ಅಮೇರಿಕಾ -ಭಾರತ ಜಂಟಿ ಕಾರ್ಯತಂತ್ರದ ದೃಷ್ಟಿಕೋನ ಅಡಿಯಲ್ಲಿ ಏಷ್ಯಾ-ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರದ ಪ್ರದೇಶಕ್ಕಾಗಿ ರೂಪಿಸಲಾಗಿರುವ ಸಹಕಾರ ಮಾರ್ಗಸೂಚಿಯನ್ನು ಪೂರ್ಣಗೊಳಿಸಿರುವುದಕ್ಕೆ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು. ಅಮೆರಿಕ ಮತ್ತು ಭಾರತ, ಏಷ್ಯಾ ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಪರಸ್ಪರ ಆದ್ಯತೆಯ ಪಾಲುದಾರರಾಗಿ ಕಾಣುವುದಕ್ಕೂ ಅವರು ಒಪ್ಪಿಗೆ ಸೂಚಿಸಿದರು.

ಸಾಗರ ಭದ್ರತೆ ಕುರಿತ ಚರ್ಚೆಯ ಉದ್ಘಾಟನಾ ಸಭೆಯನ್ನು ಅವರು ಸ್ವಾಗತಿಸಿದರು. ಕಡಲ ತೀರದ ಭದ್ರತೆ ಮತ್ತು ಕಡಲ ತಾಣ ಅರಿವಿನಲ್ಲಿ ಪರಸ್ಪರ ಹಿತಾಸಕ್ತಿಯನ್ನು ಹೊಂದಿರುವ ಕಾರಣದಿಂದ, ಕಡಲಲ್ಲಿ “ವೈಟ್ ಶಿಪ್ಪಿಂಗ್” ಮಾಹಿತಿ ಯನ್ನು ವಿನಿಮಯ ಮಾಡಿಕೊಳ್ಳುವ ತಾಂತ್ರಿಕ ವ್ಯವಸ್ಥೆ ರೂಪಿಸುವ ತೀರ್ಮಾನವನ್ನು ನಾಯಕರು ಸ್ವಾಗತಿಸಿದರು.

ಸಾಗರ ಭದ್ರತೆ ಉತ್ತೇಜಿಸುವ ಭಾರತ – ಅಮೆರಿಕ ಸಹಕಾರಕ್ಕೆ ತಮ್ಮ ಬೆಂಬಲವನ್ನು ನಾಯಕರು ದೃಢಪಡಿಸಿದರು. ವಿಶ್ವಸಂಸ್ಥೆಯ ಸಾಗರ ಕಾನೂನು ಸಮಾವೇಶ ಮತ್ತು ಶಾಂತಿಯುತ ಮಾರ್ಗದಲ್ಲಿ ಗಡಿ ವಿವಾದ ಇತ್ಯರ್ಥ ಸೇರಿದಂತೆ ಅಂತಾರಾಷ್ಟ್ರೀಯ ಕಾನೂನಿನಂತೆ ಹಾರಾಟ, ಪಥದರ್ಶನ ಮತ್ತು ಸಂಪನ್ಮೂಲಗಳ ಶೋಧನೆ ಸ್ವಾತಂತ್ರ್ಯದ ಖಾತ್ರಿಯ ಮಹತ್ವವನ್ನು ಪ್ರತಿಪಾದಿಸಿದರು.

ಎರಡೂ ದೇಶಗಳ ನಡುವಿನ ಜಂಟಿ ಸಮರಾಭ್ಯಾಸ, ತರಬೇತಿ ಮತ್ತು ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಎಚ್.ಎ/ಡಿಆರ್) ದಲ್ಲಿ ಸೇನೆ ಸೇನೆಯ ನಡುವಿನ ಹೆಚ್ಚಿನ ಸಹಕಾರವನ್ನೂ ನಾಯಕರು ಪ್ರಶಂಸಿಸಿದರು.

ಪ್ರಾಯೋಗಿಕ ಮಾರ್ಗದಲ್ಲಿ ದ್ವಿಪಕ್ಷೀಯ ರಕ್ಷಣಾ ಸಹಕಾರದ ವಿಸ್ತರಣೆಗೆ ಅನುಕೂಲ ಮಾಡಿಕೊಡುವ ಒಪ್ಪಂದಗಳನ್ನು ಅನ್ವೇಷಿಸುವ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಅವರು ಲಾಜಿಸ್ಟಿಕ್ಸ್ ವಿನಿಮಯ ತಿಳಿವಳಿಕೆ ಒಪ್ಪಂದ (ಎಲ್.ಇ.ಎಂ.ಓ.ಎ) ಪಠ್ಯ ಆಖೈರುಗೊಳಿಸಿರುವುದನ್ನು ಸ್ವಾಗತಿಸಿದರು.

ಅಮೆರಿಕ ಮತ್ತು ಭಾರತ ರಕ್ಷಣಾ ಬಾಂಧವ್ಯ ಸ್ಥಿರತೆಯ ಲಂಗರಾಗಿದ್ದು, ಮತ್ತು ರಕ್ಷಣಾ ವಲಯದಲ್ಲಿ ಹೆಚ್ಚಿನ ಬಲಯುತ ಪಾಲುದಾರಿಕೆಗೆ ಅವಕಾಶ ನೀಡಿದ್ದು, ಅಮೆರಿಕವು ಈ ಮೂಲಕ ಭಾರತವನ್ನು ಪ್ರಮುಖ ರಕ್ಷಣಾ ಪಾಲುದಾರ ಎಂದು ಪರಿಗಣಿಸಿದೆ. ಉದಾಹರಣೆಗೆ:

ಅಮೆರಿಕವು ತನ್ನ ಆತ್ಮೀಯ ಮಿತ್ರರಾಷ್ಟ್ರಗಳು ಹಾಗೂ ಸಹಭಾಗಿಗಳು ಎನ್ನುವ ಮಟ್ಟಿಗೆ ಭಾರತದೊಂದಿಗೆ ತಂತ್ರಜ್ಞಾನ ಹಂಚಿಕೆ ಮಾಡಿಕೊಳ್ಳುವ ವಿಚಾರದಲ್ಲಿ ಮುಂದುವರಿಯುತ್ತದೆ. ಭಾರತ ರಫ್ತು ನಿಯಂತ್ರಣ ಉದ್ದೇಶಗಳನ್ನು ಮುನ್ನಡೆ ಪಡೆಯಲು ಕೈಗೊಂಡ ಕ್ರಮಗಳ ಸಂಯೋಗದೊಂದಿಗೆ ಭಾರತಕ್ಕೆ ವಿಸ್ತೃತ ಶ್ರೇಣಿಯ ದ್ವಿಬಳಕೆಯ ತಂತ್ರಜ್ಞಾನ ಪರವಾನಗಿ ಮುಕ್ತವಾಗಿ ಲಭ್ಯವಾಗುವಂಥ ಒಡಂಬಡಿಕೆಗೆ ನಾಯಕರು ಬಂದಿದ್ದಾರೆ.

ಮೇಕ್ ಇನ್ ಇಂಡಿಯಾ ಉಪಕ್ರಮದ ಬೆಂಬಲದೊಂದಿಗೆ ಮತ್ತು ರಕ್ಷಣಾ ಕೈಗಾರಿಕೆಗಳ ಅಭಿವೃದ್ಧಿಗೆ ಚೈತನ್ಯ ನೀಡಲು ಮತ್ತು ಅವುಗಳ ಜಾಗತಿಕ ಸರಬರಾಜು ಸರಣಿಗೆ ಏಕತೆ ಮೂಡಿಸಲು, ಅಧಿಕೃತ ಅಮೆರಿಕ- ಭಾರತ ರಕ್ಷಣಾ ಸಹಕಾರದ ಯೋಜನೆಗಳಿಗೆ, ಕಾರ್ಯಕ್ರಮಗಳಿಗೆ ಮತ್ತು ಜಂಟಿ ಸಹಯೋಗಕ್ಕೆ ಅಮೆರಿಕವು ತನ್ನ ಕಾನೂನಿನನ್ವಯ ಸರಕು ಮತ್ತು ತಂತ್ರಜ್ಞಾನ ರಫ್ತು ಮುಂದುವರಿಸಲಿದೆ.
ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಬೆಂಬಲವಾಗಿ ಸಹಕಾರ ಹೆಚ್ಚಿಸಲು ಮತ್ತು ಸಹ ಉತ್ಪನ್ನ ವಿಸ್ತರಿಸಲು ಮತ್ತು ರಕ್ಷಣಾ ತಂತ್ರಜ್ಞಾನ ಮತ್ತು ವಾಣಿಜ್ಯ ಉಪಕ್ರಮ (ಡಿಟಿಟಿಐ) ಅಡಿಯಲ್ಲಿ ತಂತ್ರಜ್ಞಾನದ ಸಹ ಅಭಿವೃದ್ಧಿಗೆ ನಾಯಕರು ಬದ್ಧರಾಗಿದ್ದಾರೆ. ನೌಕಾ ವ್ಯವಸ್ಥೆ, ವಾಯು ವ್ಯವಸ್ಥೆ ಮತ್ತು ಇತರ ಶಸ್ತ್ರಾಸ್ತ್ರ ವ್ಯವಸ್ಥೆ ಸೇರಿದಂತೆ ಒಪ್ಪಿತ ವಸ್ತುಗಳನ್ನು ಸೇರಿಸಲು ಹೊಸ ಡಿಟಿಟಿಐ ಕಾರ್ಯ ಗುಂಪಿನ ಸ್ಥಾಪನೆಯನ್ನು ಅವರು ಸ್ವಾಗತಿಸಿದರು. ನಾಯಕರು ವಿಮಾನ ಹಾರಾಟ ತಂತ್ರಜ್ಞಾನ ಸಹಕಾರದ ಮೇಲಿನ ಜಂಟಿ ಕಾರ್ಯಪಡೆಯ ಅಡಿಯಲ್ಲಿ ಮಾಹಿತಿ ವಿನಿಮಯ ಅನುಬಂಧದ ಪಠ್ಯದ ಅಂತಿಮಗೊಳಿಸಿರುವುದನ್ನು ಪ್ರಕಟಿಸಿದರು.

ಅಧ್ಯಕ್ಷ ಒಬಾಮಾ ಅವರು, ಭಾರತದಲ್ಲಿ ರಕ್ಷಣಾ ಪಿಓಡಬ್ಲ್ಯು/ಎಂ.ಐ.ಎ. ಅಕೌಂಟಿಂಗ್ ಏಜೆನ್ಸಿ (ಡಿಪಿಎಎ) ಅಭಿಯಾನಕ್ಕೆ ಮತ್ತು ಎರಡನೇ ಮಹಾಯುದ್ಧದ ಸಮಯದಿಂದ ನಾಪತ್ತೆಯಾಗಿರುವ ಅಮೆರಿಕ ರಕ್ಷಣಾ ಸೇವಾ ಸದಸ್ಯರ ಅವಶೇಷಗಳ ವಾಪಸಾತಿಗೆ ಇತ್ತೀಚೆಗೆ ಕಾರಣವಾಗಿದ್ದ ಒಂದು ಚೇತರಿಕೆ ಮಿಷನ್ ಸೇರಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರವನ್ನು ಅಭಿನಂದಿಸಿದರು. ಅಲ್ಲದೆ ನಾಯಕರು ಭವಿಷ್ಯದ ಡಿಪಿಎಎ ಅಭಿಯಾನಕ್ಕೆ ತಮ್ಮ ಬದ್ಧತೆ ವ್ಯಕ್ತಪಡಿಸಿದರು. ಬಾಹ್ಯಾಕಾಶ ಕ್ರಮಿಸುವ ದೇಶಗಳಾದ ಭಾರತ ಮತ್ತು ಅಮೆರಿಕಾ ಹೊರಗಿನ ಬಾಹ್ಯಾಕಾಶ ಸದಾ ಮಾನವನ ಪ್ರಯತ್ನಗಳಿಗೆ ವಿಸ್ತರಣೆಯ ತಾಣವಾಗಿರಬೇಕು, ಮತ್ತು ಭೂಮಿಯ ನಿಗಾ ಸಹಕಾರವನ್ನು ಮತ್ತಷ್ಟು ನಿಕಟಗೊಳಿಸಬೇಕು, ಮಂಗಳನ ಅನ್ವೇಷಣೆ, ಬಾಹ್ಯಾಕಾಶ ಶಿಕ್ಷಣ ಮತ್ತು ಬಾಹ್ಯಾಕಾಶಕ್ಕೆ ಮಾನವ ಸಹಿತ ಹಾರಾಟವನ್ನು ದಾಖಲಿಸಿವೆ. ಈ ನಾಯಕರು ಇಸ್ರೋ –ನಾಸಾ ಹೆಲಿಯೋಫಿಸಿಕ್ಸ್ ಕಾರ್ಯಪಡೆ ಸ್ಥಾಪಿಸುವ ಪ್ರಕ್ರಿಯೆಯಲ್ಲಿ ಇಟ್ಟಿರುವ ಮುಂದಡಿಯನ್ನು ಹಾಗೂ ಭೂ ನಿಗಾ ಉಪಗ್ರಹದ ದತ್ತಾಂಶವನ್ನು ವಿನಿಮಯ ಮಾಡಿಕೊಳ್ಳುವ ಒಪ್ಪಂದ ಆಖೈರನ್ನು ಸ್ವಾಗತಿಸಿದರು.

ಸೈಬರ್ ಪ್ರದೇಶ ಒಳಗೊಂಡ ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿಯನ್ನು ಪ್ರತಿಪಾದಿಸಿದ ನಾಯಕರು, ಮುಕ್ತ, ಪರಸ್ಪರ ಸುರಕ್ಷಿತ ಮತ್ತು ವಿಶ್ವಾಸಾರ್ಹ ಅಂತರ್ಜಾಲ, ಬಹುಬಾಧ್ಯಸ್ಥ ಮಾದರಿಯ ಅಂತರ್ಜಾಲ ಆಡಳಿತದ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಸೈಬರ್ ಭದ್ರತೆಯ ಮೇಲಿನ ಸಹಕಾರವನ್ನು ಮತ್ತಷ್ಟು ಆಳಗೊಳಿಸುವ ಬದ್ಧರಾಗಿದ್ದು, ಹತ್ತಿರದ ಅವಧಿಯಲ್ಲೇ ಅಮೆರಿಕ – ಭಾರತ ಸೈಬರ್ ಬಾಂಧವ್ಯದ ಚೌಕಟ್ಟು ಆಖೈರುಗೊಳಿಸುವ ಹಂತಕ್ಕೆ ಬಂದಿರುವುದನ್ನು ಸ್ವಾಗತಿಸಿದರು. ಪ್ರಮುಖ ಮೂಲಸೌಕರ್ಯದಲ್ಲಿ ಸೈಬರ್ ಸಹಯೋಗ, ಸೈಬರ್ ಅಪರಾಧ ತಡೆ ಮತ್ತು ರಾಷ್ಟ್ರಗಳಿಂದ ದುರುದ್ದೇಶಪೂರಿತ ಸೈಬರ್ ಚಟುವಟಿಕೆ ಮತ್ತು ರಾಷ್ಟ್ರಗಳದಲ್ಲದ ಕ್ರಮಗಳು, ಸಾಮರ್ಥ್ಯ ನಿರ್ಮಾಣ ಮತ್ತು ಸೈಬರ್ ಭದ್ರತೆ ಸಂಶೋಧನೆ ಮತ್ತು ಅಭಿವೃದ್ಧಿ, ಮತ್ತು ಮಾರುಕಟ್ಟೆಯ ಪ್ರವೇಶ ಸೇರಿದಂತೆ ತಂತ್ರಜ್ಞಾನ ಮತ್ತು ಸಂಬಂಧಿತ ಸೇವೆಗಳ ಎಲ್ಲ ವಾಣಿಜ್ಯ ವಿಚಾರಗಳಲ್ಲೂ ಸಹಯೋಗ ಹೆಚ್ಚಿಸುವ ಬದ್ಧತೆ. ಐ.ಸಿ.ಎ.ಎನ್.ಎನ್., ಐ.ಜಿ.ಎಫ್. ಮತ್ತು ಇತರ ಸ್ಥಳಗಳು ಸೇರಿದಂತೆ ಅಂತರ್ಜಾಲ ಆಡಳಿತ ವೇದಿಕೆಯಲ್ಲಿನ ಕಾರ್ಯಕ್ರಮಗಳು ಮತ್ತು ಮಾತುಕತೆಯನ್ನು ಮುಂದುವರಿಸುವ ಬದ್ಧತೆಯನ್ನು ಅವರು ಹೊಂದಿದ್ದಾರೆ ಮತ್ತು ಎರಡೂ ರಾಷ್ಟ್ರಗಳ ಈ ವೇದಿಕೆಯ ಎಲ್ಲ ಬಾಧ್ಯಸ್ಥರ ಸಕ್ರಿಯ ಪಾಲ್ಗೊಳ್ಳುವಿಕೆಗೆ ಬೆಂಬಲಿಸಲು ಬದ್ಧರಾಗಿದ್ದಾರೆ. ಇಬ್ಬರೂ ನಾಯಕರು ವಿಶ್ವಸಂಸ್ಥೆಯ ಸನ್ನದು, ಶಾಂತಿ ಸಮಯದಲ್ಲಿ ಜವಾಬ್ದಾರಿಯುತ ರಾಷ್ಟ್ರಗಳ ವರ್ತನೆಗೆ ಸ್ವಯಂ ನಿಯಮಗಳ ಉತ್ತೇಜನ ಮತ್ತು ರಾಷ್ಟ್ರಗಳ ನಡುವೆ ವಿಶ್ವಾಸ ಮೂಡಿಸುವ ಪ್ರಾಯೋಗಿಕ ಅಭಿವೃದ್ಧಿ ಮತ್ತು ಜಾರಿಗೆ ಅಂತಾರಾಷ್ಟ್ರೀಯ ಕಾನೂನಿನಿಗೆ ಒಳಪಟ್ಟು ಸೈಬರ್ ಪ್ರದೇಶ ಆಧಾರದ ಮೇಲೆ ಸ್ಥಿರತೆ ಉತ್ತೇಜಿಸಲು ಬದ್ಧರಾಗಿದ್ದಾರೆ.

ಈ ನಿಟ್ಟಿನಲ್ಲಿ ಅವರು ಸಾರ್ವಜನಿಕ ಸೇವೆ ಒದಗಿಸುವ ಯಾವುದೇ ಮಹತ್ವದ ಮೂಲಸೌಕರ್ಯಕ್ಕೆ ಹಾನಿ ಉಂಟು ಮಾಡುವ ಯಾವುದೇ ದೇಶದ ಉದ್ದೇಶಪೂರ್ವಕ ಪ್ರಯತ್ನ ಅಥವಾ ಗೊತ್ತಿದ್ದೂ ಬೆಂಬಲ ನೀಡುವ ಆನ್ ಲೈನ್ ಚಟುವಟಿಕೆ ನಡೆಸುವುದಿಲ್ಲ ಎಂದು ಸ್ವಯಂ ನಿಯಮ ವಿಧಿಸಿಕೊಳ್ಳಲು ಬದ್ಧವಾಗಿರುವುದನ್ನು ಪುನರುಚ್ಚರಿಸಿವೆ; ಯಾವುದೇ ದೇಶ ಸೈಬರ್ ಘಟನೆಗಳಿಗೆ ಪೂರಕವಾಗಿ ಅಥವಾ ಹಾನಿ ಉಂಟು ಮಾಡುವ ಉದ್ದೇಶದ ಆನ್ ಲೈನ್ ಚಟುವಟಿಕೆಗೆ ತನ್ನದೇ ಆದ ಸ್ವಂತ ನಿಯಮಗಳ ಮೂಲಕ ನಿರ್ಬಂಧಿಸುವುದು, ರಾಷ್ಟ್ರೀಯ ಕಂಪ್ಯೂಟರ್ ಭದ್ರತಾ ತೆಡೆಯುವ ಘಟನೆ ನಡೆಸಲು ಅಥವಾ ಉದ್ದೇಶಪೂರ್ವಕವಾಗಿ ಅಂಥ ಕ್ರಮ ಬೆಂಬಲಿಸಬಾರದು, ಇತರ ರಾಷ್ಟ್ರಗಳಿಂದ ಅದರ ನೆಲದಲ್ಲಿ ಹೊರಹೊಮ್ಮುವ ದುರುದ್ದೇಶಪೂರಿತವಾದ ಸೈಬರ್ ಚಟುವಟಿಕೆ ತಡೆಯುವಂತೆ ನೆರವು ಕೋರಿ ಮನವಿ ಬಂದಾಗ ತಮ್ಮ ನೆಲದ ಕಾನೂನು ಮತ್ತು ಅಂತಾರಾಷ್ಟ್ರೀಯ ಜವಾಬ್ದಾರಿಗಳ ಅಡಿಯಲ್ಲಿ ಇದಕ್ಕೆ ಎಲ್ಲ ರಾಷ್ಟ್ರಗಳೂ ಸಹಕರಿಸಬೇಕು; ಮತ್ತು ಯಾವುದೇ ರಾಷ್ಟ್ರ ಕಂಪನಿಗಳು ಅಥವಾ ವಾಣಿಜ್ಯ ವಲಯಗಳಿಗೆ ಸ್ಪರ್ಧಾತ್ಮಕ ಅನುಕೂಲಗಳನ್ನು ಒದಗಿಸುವ ಉದ್ದೇಶದಿಂದ ವಾಣಿಜ್ಯ ರಹಸ್ಯ ಅಥವಾ ಇತರ ಗೌಪ್ಯ ವಾಣಿಜ್ಯ ಮಾಹಿತಿ ಸೇರಿದಂತೆ ಭೌದ್ಧಿಕ ಆಸ್ತಿಯ ಐ.ಸಿ.ಟಿ. ಶಕ್ತ ಕಳ್ಳತನಕ್ಕೆ ಕೈಹಾಕಬಾರದು ಅಥವಾ ತಿಳಿದೂ ಅದಕ್ಕೆ ಬೆಂಬಲ ನೀಡಬಾರದು;

ಭಯೋತ್ಪಾದನೆ ಮತ್ತು ಹಿಂಸಾತ್ಮಕ ವಿಧ್ವಂಸಕತೆ ವಿರುದ್ಧ ಒಗ್ಗೂಡಿ ನಿಲ್ಲಲು.

ಭಯೋತ್ಪಾದನೆಯಿಂದ ಮಾನವ ನಾಗರೀಕತೆಗೆನಿರಂತರವಾಗಿ ಎದುರಾಗಿರುವ ಭೀತಿಯನ್ನು ನಾಯಕರು ಗುರುತಿಸಿದರು ಮತ್ತು ಪ್ಯಾರಿಸ್ ನಿಂದ ಪಠಾಣ್ ಕೋಟ್ ವರೆಗೆ, ಬ್ರುಸೆಲ್ಸ್ ನಿಂದ ಕಾಬೂಲ್ ವರೆಗೆ ಇತ್ತೀಚೆಗೆ ನಡೆದ ಭಯೋತ್ಪಾದಕ ಕೃತ್ಯಗಳನ್ನು ಖಂಡಿಸಿದರು ಮತ್ತು ಭಯೋತ್ಪಾದನೆ ಜಗತ್ತಿನ ಯಾವುದೇ ಸ್ಥಳದಲ್ಲಿ ದುಷ್ಕರ್ಮಿಗಳಿದ್ದರೂ ಮತ್ತು ಅವರಿಗೆ ಬೆಂಬಲಿಸುವ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ನ್ಯಾಯದ ಕಟೆಕಟೆಗೆ ತರಲು ದ್ವಿಪಕ್ಷೀಯ ಮತ್ತು ಇತರ ಸಮಾನ ಮನಸ್ಕ ರಾಷ್ಟ್ರಗಳೊಂದಿಗೆ ತಮ್ಮ ಪ್ರಯತ್ನಗಳನ್ನು ದುಪ್ಪಟ್ಟುಗೊಳಿಸಲು ಸಂಕಲ್ಪಿಸಿದರು.

ಜನವರಿ 2015 ಭಾರತ-ಅಮೆರಿಕ ಜಂಟಿ ಹೇಳಿಕೆ ಬದ್ಧತೆ ನಿರ್ಮಾಣದ ಅಮೆರಿಕ-ಭಾರತ ಪಾಲುದಾರಿಕೆಯ 21 ನೇ ಶತಮಾನದ ಒಂದು ನಿರ್ಣಾಯಕ ಭಯೋತ್ಪಾದಕ ವಿರೋಧಿ ಹೋರಾಟ ಸಂಬಂಧ, ಹಾಗೂ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಸೆಪ್ಟೆಂಬರ್ 2015ರಲ್ಲಿ ಭಾರತ-ಅಮೆರಿಕ ಜಂಟಿ ಘೋಷಣೆ ಈ ನಾಯಕರು ಪ್ರಕಟಿಸಿರುವ ಮತ್ತಷ್ಟು ಕ್ರಮಗಳಿಂದ ಭಯೋತ್ಪಾದನೆಯ ಭೀತಿಯ ವಿರುದ್ಧದ ಹೋರಾಟಕ್ಕೆ ಸಹಯೋಗ ಗಾಢವಾಗುತ್ತಿದೆ. .

ನಾಯಕರು ವಿಧ್ವಂಸಕ ಗುಂಪುಗಳಿಂದ ಅಂದರೆ ಅಲ್ ಖೈದಾ, ದ ಏಷ್/ಐ.ಎಸ್.ಐ.ಎಲ್, ಜೈಷ್ ಇ ಮೊಹಮದ್, ಲಷ್ಕರ್ ಇ ತೋಯ್ಬಾ, ಡಿ ಕಂಪನಿ ಮತ್ತು ಅವುಗಳ ಸಹವರ್ತಿಗಳಿಂದ ಎದುರಾಗುವ ಭಯೋತ್ಪಾದಕ ಭೀತಿಯ ವಿರುದ್ಧದ ಸಹಕಾರವನ್ನು ವಿಶ್ವಸಂಸ್ಥೆಯ ಭಯೋತ್ಪಾದನೆ ಹುದ್ದೆಗಳ ಸಹಯೋಗದ ಮೂಲಕ ಬಲಪಡಿಸಲು ಬದ್ಧತೆ ತೋರಿದ್ದಾರೆ. ಈ ನಿಟ್ಟಿನಲ್ಲಿ ಅವರು ಮುಂದಿನ ಅಮೆರಿಕ – ಭಾರತ ಭಯೋತ್ಪಾದನೆ ತಡೆ ಜಂಟಿ ಕಾರ್ಯಪಡೆ ಸಭೆಗೆ ಮುನ್ನ ಸಹಯೋಗಕ್ಕೆ ನಿರ್ದಿಷ್ಟ ಹೊಸ ಪ್ರದೇಶಗಳನ್ನು ಗುರುತಿಸುವಂತೆ ತಮ್ಮ ಅಧಿಕಾರಿಗಳಿಗೆ ಸೂಚಿಸಿದರು.

ಭಾರತ- ಅಮೆರಿಕ ಭಯೋತ್ಪಾದನೆ ತಡೆ ಪಾಲುದಾರಿಕೆಯಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸಿದ ನಾಯಕರು, ಭಯೋತ್ಪಾದಕರ ಪತ್ತೆ ಮಾಹಿತಿಯ ವಿನಿಮಯಕ್ಕೆ ಅವಕಾಶ ನೀಡುವ ಒಪ್ಪಂದವನ್ನು ಆಖೈರುಗೊಳಿಸಿರುವುದನ್ನು ಪ್ರಸಂಸಿಸಿದರು. 2008ರ ಮುಂಬೈ ದಾಳಿಕೋರರು ಮತ್ತು 2016ರ ಪಠಾಣ್ ಕೋಟ್ ದಾಳಿಕೋರರನ್ನು ನ್ಯಾಯಾಲಯದ ಮುಂದೆ ತರುವಂತೆ ಪಾಕಿಸ್ತಾನಕ್ಕೆ ಅವರು ಒತ್ತಾಯಿಸಿದರು.

ನಾಯಕರು, ಜಾಗತಿಕ ಸಹಕಾರ ಚೌಕಟ್ಟು ಬಲಪಡಿಸುವ ಮತ್ತು ಭಯೋತ್ಪಾದನೆಯನ್ನು ಸಮರ್ಥಿಸುವ ಯಾವುದೇ ಕುಂದುಕೊರತೆ ಅಥವಾ ಸಮರ್ಥನೆಯನ್ನು ಬಲಪಡಿಸುವ ಅಂತಾರಾಷ್ಟ್ರೀಯ ಭಯೋತ್ಪಾದನೆ ಮೇಲಿನ ವಿಶ್ವಸಂಸ್ಥೆಯ ಸಮಗ್ರ ಸಮಾವೇಶಕ್ಕೆ ಬೆಂಬಲ ವ್ಯಕ್ತಪಡಿಸುವ ನಿಲುವನ್ನು ಪುನರುಚ್ಚರಿಸಿದರು.

ಆರ್ಥಿಕ ಮತ್ತು ವಾಣಿಜ್ಯ ಒಪ್ಪಂದಗಳ ಆಧಾರವಾಗಿರುವಿಕೆ

ನಾಯಕರು ಅಮೆರಿಕ ಮತ್ತು ಭಾರತ ನಡುವೆ ದೃಢವಾದ ಆರ್ಥಿಕ ಬೆಳವಣಿಗೆ ಬೆಂಬಲಿಸಲು ಬದ್ಧತೆಯನ್ನು ಮತ್ತು ಸುಸ್ಥಿರ, ಒಳಗೊಂಡ ಮತ್ತು ಚೈತನ್ಯದಾಯಕ ಆರ್ಥಿಕ ಬೆಳವಣಿಗೆಗೆ ಮತ್ತು ಗ್ರಾಹಕರ ಬೇಡಿಕೆ, ಉದ್ಯೋಗ ಸೃಷ್ಟಿ, ಕೌಶಲ್ಯ ಅಭಿವೃದ್ಧಿ ಮತ್ತು ನಾವೀನ್ಯತೆ ತಮ್ಮ ದೇಶಗಳಲ್ಲಿ ಉತ್ತೇಜಿಸಲು ಸಾಮಾನ್ಯ ಪ್ರಯತ್ನದ ನಡುವೆ ಬಲವಾದ ಮತ್ತು ವಿಸ್ತರಿಸುವ ಆರ್ಥಿಕ ಸಂಬಂಧವನ್ನು ಒತ್ತಿ ಹೇಳಿದರು.

ಗಣನೀಯವಾಗಿ ದ್ವಿಪಕ್ಷೀಯ ವಾಣಿಜ್ಯ ಹೆಚ್ಚಳಕ್ಕೆ, ಸರಕು ಮತ್ತು ಸೇವೆಗಳ ಸಾಗಣೆಯಲ್ಲಿನ ಅಡೆ ತಡೆ ನಿವಾರಿಸಲು ಅವರು ಹೊಸ ಅವಕಾಶಗಳನ್ನು ಶೋಧಿಸಲು, ಮತ್ತು ಜಾಗತಿಕ ಸರಬರಾಜು ಸರಪಣಿಗೆ ಏಕತೆಯ ಬೆಂಬಲ ನೀಡಲು, ಆ ಮೂಲಕ ಉದ್ಯೋಗ ಸೃಷ್ಟಿ ಮತ್ತು ಎರಡೂ ರಾಷ್ಟ್ರಗಳ ಆರ್ಥಿಕ ಪ್ರಗತಿಗೆ ಸಂಕಲ್ಪಿಸಿದರು. ಈ ನಿಟ್ಟಿನಲ್ಲಿ ಈ ವರ್ಷದ ಅಂತ್ಯದಲ್ಲಿ ಭಾರತದಲ್ಲಿ ಎರಡನೇ ವಾರ್ಷಿಕ ಕಾರ್ಯತಂತ್ರಾತ್ಮಕ ಮತ್ತು ವಾಣಿಜ್ಯ ಚರ್ಚೆಗೆ ಗಮನಹರಿಸಲು ಅವರು ಎದಿರು ನೋಡುತ್ತಿದ್ದಾರೆ. ವಾಣಿಜ್ಯ ನೀತಿ ವೇದಿಕೆ (ಟಿಪಿಎಫ್) ಅಡಿಯಲ್ಲಿ ತಮ್ಮ ವಾಣಿಜ್ಯ ಕಾರ್ಯಕ್ರಮಗಳು ಮತ್ತು ಹೂಡಿಕೆಯನ್ನು ಹೆಚ್ಚಿಸಲು ಅವರು ಬದ್ಧರಾಗಿದ್ದು, ಮತ್ತು ಈ ವರ್ಷಾಂತ್ಯದಲ್ಲಿ ಮುಂದಿನ ಟಿ.ಪಿ.ಎಫ್.ನಲ್ಲಿ ಗಣನೀಯ ಫಲಿತಾಂಶ ಉತ್ತೇಜಿಸುತ್ತಿದ್ದಾರೆ. ಅವರು ಅಮೆರಿಕದ ಖಾಸಗಿ ವಲಯದ ಕಂಪನಿಗಳು ಭಾರತದ ಸ್ಮಾರ್ಟ್ ಸಿಟಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದನ್ನು ಸ್ವಾಗತಿಸಿದರು.

ನಾಯಕರು ದ್ವಿಪಕ್ಷೀಯ ಸಹಭಾಗಿತ್ವಕ್ಕೆ ಅದ್ಭುತ ಅಡಿಪಾಯ ಹಾಕಿರುವ ಭಾರತ – ಅಮೆರಿಕದ 150 ಕೋಟಿ ಜನರ ನಡುವಿನ ಸ್ನೇಹದ ಪ್ರಬಲ ಬಂಧಕ್ಕೆ ಮೆಚ್ಚುಗೆ ಸೂಚಿಸಿದರು. ಎರಡೂ ಕಡೆ ಸಂಚಾರದ ಪ್ರವಾಸೋದ್ಯಮ, ವ್ಯಾಪಾರ, ಮತ್ತು ಶಿಕ್ಷಣ ಅಭೂತಪೂರ್ವ ವೃದ್ಧಿ ಕಂಡಿದೆ, 2015 ರಲ್ಲಿ ಅಮೆರಿಕದಿಂದ ಭಾರತಕ್ಕೆ 1 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಆಗಮಿಸಿದ್ದರೆ, ಅಷ್ಟೇ ಸಂಖ್ಯೆಯ ಪ್ರವಾಸಿಗರು ಭಾರತದಿಂದ ಅಮೆರಿಕಕ್ಕೂ ಹೋಗಿದ್ದಾರೆ. ವೃತ್ತಿಪರರು, ಹೂಡಿಕೆದಾರರು ಮತ್ತು ವಾಣಿಜ್ಯೋದ್ದೇಶದ ಪಯಣಿಗರು, ವಿದ್ಯಾರ್ಥಿಗಳ ಹೆಚ್ಚಿನ ಸಂಚಾರಕ್ಕೆ ಅವಕಾಶ ನೀಡಲು ಈ ನಾಯಕರು ಸಂಕಲ್ಪಿಸಿದ್ದಾರೆ ಮತ್ತು ಜನರಿಂದ ಜನರ ಸಂಪರ್ಕವನ್ನು ಹೆಚ್ಚಿಸಲು ಎರಡೂ ದೇಶಗಳ ನಡುವೆ ಪ್ರವಾಸಿಗರ, ಮತ್ತು ಆರ್ಥಿಕ ಮತ್ತು ತಾಂತ್ರಿಕ ಪಾಲುದಾರಿಕೆಯನ್ನು ವಿನಿಮಯ ಹೆಚ್ಚಿಸಲಾಗಿದೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ತ್ವರಿತ ಪ್ರಯಾಣದ ಉಪಕ್ರಮ (ಜಾಗತಿಕ ಪ್ರವೇಶ ಕಾರ್ಯಕ್ರಮ ಎಂದು ಕರೆಯಲಾಗುವ)ಕ್ಕಾಗಿ ಎಂ.ಓ.ಯು.ಗೆ. ಅಂಕಿತ ಹಾಕಿರುವುದನ್ನು ಸ್ವಾಗತಿಸಿದ್ದಾರೆ ಮತ್ತು ಮುಂದಿನ ಮೂರು ತಿಂಗಳುಗಳ ಅವಧಿಯಲ್ಲಿ ಭಾರತದ ಜಾಗತಿಕ ಪ್ರವೇಶ ಕಾರ್ಯಕ್ರಮದ ಪ್ರಕ್ರಿಯೆ ಪೂರ್ಣಗೊಳಿಸಲು ಸಂಕಲ್ಪಿಸಿದ್ದಾರೆ.

ಈ ನಾಯಕರು ಅಮೇರಿಕಾ – ಭಾರತ ಟೋಟಲೈಸೇಷನ್ ಒಪ್ಪಂದ ಮುಂದುವರಿಸಲು ಅಗತ್ಯವಾದ ಆಗಸ್ಟ್ 2015 ಮತ್ತು ಜೂನ್ 2016 ರಲ್ಲಿ ಸಫಲ ವಿನಿಮಯ ಗುರುತಿಸಿದ್ದಾರೆ. ಮತ್ತು ಈ ವರ್ಷದಲ್ಲಿ ಚರ್ಚೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ.

ಉದ್ಯಮಶೀಲತೆಯನ್ನು ಸಬಲೀಕರಿಸಲು ಮತ್ತು ನಾವಿನ್ಯಕ್ಕೆ ವಾತಾವರಣೆವನ್ನು ಸೃಷ್ಟಿಸಲು ತ್ವರಿತತೆಯ ಮಹತ್ವನ್ನು ಮನಗಂಡು, ಅಮೆರಿಕವು ಭಾರತದಲ್ಲಿ 2017ರಲ್ಲಿ ನಡೆಯಲಿರುವ ಜಾಗತಿ ಉದ್ಯಮಶೀಲತಾ ಶೃಂಗಸಭೆಯನ್ನು ಸ್ವಾಗತಿಸಿದೆ.

ನಾಯಕರು, ಬೌದ್ಧಿಕ ಆಸ್ತಿ ಮೇಲಿನ ಉನ್ನತಮಟ್ಟದ ಕಾರ್ಯ ಪಡೆ ಅಡಿಯಲ್ಲಿ ಭೌದ್ಧಿಕ ಆಸ್ತಿಯ ಹಕ್ಕು ಕಾರ್ಯಕ್ರಮ ಹೆಚ್ಚಿಸಿರುವುದನ್ನು ಸ್ವಾಗತಿಸಿದ್ದಾರೆ ಮತ್ತು ನಾವಿನ್ಯತೆ ಮತ್ತು ಎರಡೂ ರಾಷ್ಟ್ರಗಳ ರಚನಾತ್ಮಕತೆಯ ಚಾಲಕರೊಂದಿಗಿನ ಸಹಕಾರದಿಂದ ದ್ವಿಪಕ್ಷೀಯ ಸಹಕಾರ ಹೆಚ್ಚಿಸುವ ಕಾರ್ಯದ ಮೂಲಕ ಐ.ಪಿ.ಆರ್. ವಿಷಯಗಳಲ್ಲಿ ಸಮಗ್ರ ಪ್ರಗತಿ ಸಾಧಿಸಲು ಮಾತುಕತೆ ಮುಂದುವರಿಸಲು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

ಭಾರತವು ಏಷ್ಯಾ ಆರ್ಥಿಕತೆಯ ಪ್ರಮುಖ ಭಾಗವಾಗಿದ್ದು, ಏಷ್ಯಾ ಪೆಸಿಫಿಕ್ ಆರ್ಥಿಕ ಸಹಕಾರ ವೇದಿಕೆಯಲ್ಲಿ ಸೇರುವ ಭಾರತದ ಆಸಕ್ತಿಯನ್ನು ಅಮೆರಿಕವು ಸ್ವಾಗತಿಸಿದೆ.

ಸಹಕಾರದ ವಿಸ್ತರಣೆ : ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಆರೋಗ್ಯ

ನಾಯಕರು ವಿಜ್ಞಾನದ ಮೂಲಭೂತ ತತ್ವಗಳನ್ನು ಅನ್ವೇಷಿಸುವ ನಿಟ್ಟಿನಲ್ಲಿ ತಮ್ಮ ದೇಶಗಳ ಪರಸ್ಪರ ಬೆಂಬಲದ ಬದ್ಧತೆ ಪುನರುಚ್ಚಿರಿಸದರು. ಭಾರತದಲ್ಲಿ ಹತ್ತಿರದ ಭವಿಷ್ಯದಲ್ಲೇ ಲೇಸರ್ ಗುರುತ್ವ ತರಂಗ ವೀಕ್ಷಣಾಲಯ ನಿರ್ಮಾಣ ಸಹಯೋಗಕ್ಕೆ ಸಮ್ಮತಿಸಿದರು. ಯೋಜನೆಯ ಹಣ ಮತ್ತು ಮೇಲುಸ್ತುವಾರಿಗೆ ಭಾರತ ಮತ್ತು ಅಮೆರಿಕ ಜಂಟಿ ಪರಿವೀಕ್ಷಣಾ ತಂಡ ನಿರ್ಮಿಸಲು ಯೋಜಿಸಿರುವುದನ್ನು ಸ್ವಾಗತಿಸಿದರು.
ಸೆಪ್ಟೆಂಬರ್ 2016 ವಾಷಿಂಗ್ಟನ್, ಡಿಸಿಯಲ್ಲಿ ನಡೆಯಲಿರುವ ನಮ್ಮ ಸಾಗರ ಸಮಾವೇಶದಲ್ಲಿ ಪಾಲ್ಗೊಳ್ಳುವುದನ್ನು ಮತ್ತು ಭಾರತ-ಅಮೆರಿಕದ ಮೊದಲ ಸಾಗರ ಚರ್ಚೆಯನ್ನು ಈ ವರ್ಷದ ತರುವಾಯ ನಡೆಸುವುದನ್ನು ನೋಡಲು ನಾಯಕರು ಕಾತರಿಸುತ್ತಿದ್ದು, ಇದು, ಕಡಲ ವಿಜ್ಞಾನ, ಸಾಗರ ಶಕ್ತಿ, ನಿರ್ವಹಣೆ ಮತ್ತು ಸಾಗರ ಜೀವವೈವಿಧ್ಯತೆಯ ಸಂರಕ್ಷಣೆ, ಸಾಗರ ಮಾಲಿನ್ಯ, ಮತ್ತು ಸಾಗರ ಸಂಪನ್ಮೂಲಗಳ ಸುಸ್ಥಿರ ಬಳಕೆ ಬಲಪಡಿಸುವ ಸಹಕಾರವನ್ನು ಸಶಕ್ತಗೊಳಿಸಲಿದೆ.

ಜಾಗತಿಕ ಆರೋಗ್ಯ ಭದ್ರತೆ ಕಾರ್ಯಸೂಚಿಯ ಮತ್ತು ಅದರ ಉದ್ದೇಶಗಳ ಸಕಾಲಿಕ ಅನುಷ್ಠಾನ ತಮ್ಮ ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದರು. ಪ್ರಧಾನಮಂತ್ರಿಯವರು ಸೂಕ್ಷ್ಮಜೀವಿಯ ಪ್ರತಿರೋಧ ಲಸಿಕೆ ತಾಳಿಕೊಳ್ಳುವ ಮತ್ತು ಸಶಕ್ತಗೊಳಿಸುವ ಚುಕ್ಕಾಣಿ ಗುಂಪಿನಲ್ಲಿ ಮತ್ತು ಅದರ ನಾಯಕತ್ವದಲ್ಲಿ ಭಾರತದ ಪಾತ್ರವನ್ನು ಉಲ್ಲೇಖಿಸಿದರು. ಅಧ್ಯಕ್ಷರು ಅಮೇರಿಕಾದ ಬದ್ಧತೆ, ಮತ್ತು ವಿಶ್ವ ಆರೋಗ್ಯ ಸಂಸ್ಥೆ ಸಹಯೋಗದೊಂದಿಗೆ ಬಾಹ್ಯ ಮೌಲ್ಯಮಾಪನ ಉಲ್ಲೇಖಿಸಲು ಜಂಟಿ ಬದ್ಧತೆ ಹಂಚಿಕೊಳ್ಳುವ ಬದ್ಧತೆ ಪ್ರತಿಪಾದಿಸಿದರು.

ನಾಯಕರು ಬಹು ಔಷಧ ನಿರೋಧಕ ಕ್ಷಯದಿಂದ (ಎಂ.ಡಿ.ಆರ್.-ಟಿಬಿ)ಯಿಂದ ಜಾಗತಿಕವಾಗಿ ಎದುರಾಗಿರುವ ಭೀತಿಯನ್ನು ಗುರುತಿಸಿದರು ಮತ್ತು ಕ್ಷಯ ಕ್ಷೇತ್ರದಲ್ಲಿ ಸಹಯೋಗದ ಮುಂದುವರಿಕೆಯ ಬದ್ಧತೆ ಮತ್ತು ಉತ್ತಮ ಪದ್ಥತಿಗಳ ವಿನಿಮಯಕ್ಕೆ ಸಮ್ಮತಿಸಿದರು.

ಅಂಟುರೋಗವಲ್ಲದ ರೋಗಗಳ ಭೀತಿ ಹೆಚ್ಚುತ್ತಿರುವುದನ್ನು ಪ್ರಸ್ತಾಪಿಸಿದ ನಾಯಕರು, ಇದನ್ನು ಆಂತರಿಕ, ಆರೋಗ್ಯಕರ ಜೀವನಶೈಲಿ ಪ್ರಚಾರ, ಸಕ್ಕರೆ ಮತ್ತು ಉಪ್ಪು ಸೇವನೆ ನಿಯಂತ್ರಿಸುವುದು, ಮಕ್ಕಳಲ್ಲಿ ಮತ್ತು ಯುವಕರಲ್ಲಿ ದೈಹಿಕ ಚಟುವಟಿಕೆ ಉತ್ತೇಜಿಸುವುದು ಮತ್ತು ತಂಬಾಕು ಬಳಕೆ ನಿರುತ್ತೇಜಿಸುವ ಪ್ರಯತ್ನ ಬಲಪಡಿಸುವುದು ಸೇರಿದಂತೆ ಅಪಾಯದ ಅಂಶಗಳನ್ನು ತಗ್ಗಿಸುವ ತುರ್ತು ಅಗತ್ಯವನ್ನು ಪ್ರತಿಪಾದಿಸಿದರು.

ನಾಯಕರು, ಆರೋಗ್ಯ ಮತ್ತು ಉತ್ತಮತೆಯ ಬಗ್ಗೆ ಸಮಗ್ರ ನೋಟದ ಮಹತ್ವನ್ನು ಪುನರುಚ್ಚರಿಸಿದರು, ಮತ್ತು ಆರೋಗ್ಯದ ಸಮಗ್ರ ನೋಟವನ್ನು ಯೋಗ ಸೇರಿದಂತೆ ಆಧುನಿಕ ಮತ್ತು ಸಾಂಪ್ರದಾಯಿಕ ಔಷಧ ಪದ್ಧತಿಗಳಿಂದ ಒಗ್ಗೂಡಿಸುವ ಮೂಲಕ ಸಮರ್ಥ ಲಾಭ ಉತ್ತೇಜಿಸುವುದನ್ನು ಪುನರುಚ್ಚರಿಸಿದರು.

ನಾಯಕರು ಸಾರ್ವಜನಿಕ-ಖಾಸಗಿ ಸಂಶೋಧನಾ ಪಾಲುದಾರಿಕೆಯಲ್ಲಿ ಕ್ಷಯ, ಡೆಂಗ್ಯೂ, ಚಿಕನ್ ಗುನ್ಯಾ ಮತ್ತು ಇತರೆ ಜಾಗತಿಕವಾಗಿ ಕಾಣಿಸಿಕೊಂಡಿರುವ ಪ್ರಮುಖ ಸಾಂಕ್ರಾಮಿಕ ರೋಗಗಳಿಗೆ ತ್ವರಿತವಾಗಿ ಲಸಿಕೆ ಅಭಿವೃದ್ಧಿಗಾಗಿ ಭಾರತ- ಅಮೆರಿಕ ಲಸಿಕೆ ಕಾರ್ಯಕ್ರಮದ ವಿಸ್ತರಣೆಯನ್ನು ಬಲವಾಗಿ ಪ್ರತಿಪಾದಿಸಿದರು.

ಜಾಗತಿಕ ನಾಯಕತ್ವ

ಜಾಗತಿಕ ಅಭಿವೃದ್ಧಿ ಮತ್ತು ಭದ್ರತೆಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ವಿಶ್ವಸಂಸ್ಥೆಯ ಸಾಮರ್ಥ್ಯವನ್ನು ಹೆಚ್ಚಿಸಲು ವಿಸ್ತೃತವಾದ ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಒಗ್ಗೂಡಿ ಶ್ರಮಿಸುವುದನ್ನು ಮುಂದುವರಿಸುವ ತಮ್ಮ ನಿರ್ಣಯವನ್ನು ನಾಯಕರು ಪುನರುಚ್ಚರಿಸಿದರು. ಸುಸ್ಥಿರ ಅಭಿವೃದ್ಧಿ ಕುರಿತ 2030ರ ಕಾರ್ಯಕ್ರಮಪಟ್ಟಿಯನ್ನು2015ರ ಸೆಪ್ಟೆಂಬರ್ ನಲ್ಲಿ ಒಪ್ಪಿಕೊಳ್ಳುವ ಮೂಲಕ ನಾಯಕರು, ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮಪಟ್ಟಿಯನ್ನು ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ಜಾರಿಗೊಳಿಸುವ ತಮ್ಮ ಬದ್ಧತೆ ಪುನರ್ ಪ್ರಕಟಿಸಿದರು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸಮರ್ಥವಾಗಿ ಸಹಯೋಗಿ ಪಾಲುದಾರಿಕೆಯಲ್ಲಿ ಕೆಲಸ ಮಾಡುವುದಾಗಿ ತಿಳಿಸಿದರು.

ಭಾರತವು ಶಾಶ್ವತ ಸದಸ್ಯನಾಗಿರುವ ಸುಧಾರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಬೆಂಬಲ ನೀಡುವುದಾಗಿ ನಾಯಕರು ತಿಳಿಸಿದರು. ವಿಶ್ವಸಂಸ್ಥೆಯ ಸನ್ನದಿನಲ್ಲಿರುವಂತೆ ಅಂತಾರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆ ನಿರ್ವಹಿಸುವಲ್ಲಿ ಭದ್ರತಾ ಮಂಡಳಿಯ ರಾಷ್ಟ್ರಗಳು ಮಹತ್ವದ ಪಾತ್ರ ವಹಿಸುವ ಖಾತ್ರಿ ಒದಗಿಸುವ ಬದ್ಧತೆಯನ್ನುಎರಡೂ ಕಡೆಯವರು ಪ್ರಕಟಿಸಿದರು. ಭದ್ರತಾ ಮಂಡಳಿಯ ಸುಧಾರಣೆಗಳ ವಿಶ್ವಸಂಸ್ಥೆಯ ಆಂತರಿಕ ಸರ್ಕಾರಿ ಮಾತುಕತೆ (ಐಜಿಎನ್) ಭದ್ರತಾ ಕೌನ್ಸಿಲ್ ಸುಧಾರಣೆ ಮುಂದುವರಿದ ಕಾರ್ಯಕ್ರಮಕ್ಕೆ ಬದ್ಧವಾಗಿರುತ್ತವೆ ಎಂದು ನಾಯಕರು ಸ್ಪಷ್ಟಪಡಿಸಿದರು..

ವಿಶ್ವಸಂಸ್ಥೆಯ ನಾಯಕರ ಶಾಂತಿ ಪಾಲನಾ ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದನ್ನು ನಾಯಕರು ಸ್ವಾಗತಿಸಿದರು ಮತ್ತು ಆಫ್ರಿಕಾದ 10 ದೇಶಗಳು ಪಾಲ್ಗೊಳ್ಳಲಿರುವ ವರ್ಷದ ಕೊನೆಯಲ್ಲಿ ನವದೆಹಲಿಯಲ್ಲಿ ಆಫ್ರಿಕಾದ ಪಾಲುದಾರಿಗಾಗಿ ವಿಶ್ವಸಂಸ್ಥೆಯ ಪ್ರಥಮ ಶಾಂತಿಪಾಲನಾ ಕೋರ್ಸ್ ನ ಸಹ ಆಯೋಜನೆ ಮೂಲಕ ಮೂರನೇ ರಾಷ್ಟ್ರದಲ್ಲಿ ವಿಶ್ವಸಂಸ್ಥೆಯ ಶಾಂತಿ ಪಾಲನಾ ಸಾಮರ್ಥ್ಯ ನಿರ್ಮಿಸುವ ಪ್ರಯತ್ನವನ್ನು ಮತ್ತಷ್ಟು ಆಳಗೊಳಿಸುವ ಕಾರ್ಯಕ್ರಮಕ್ಕೆ ಬದ್ಧರಾಗಿರುವುದಾಗಿ ಹೇಳಿದರು. ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆ ಬಲಪಡಿಸಲು ನಡೆದಿರುವ ಪ್ರಯತ್ನಗಳಿಗೆ ತಮ್ಮ ಬೆಂಬಲವನ್ನು ನಾಯಕರು ಸ್ಪಷ್ಟಪಡಿಸಿದರು.

ಅಮೆರಿಕ ಆಫ್ರಿಕಾ ನಾಯಕರು ಶೃಂಗಸಭೆ ಮತ್ತು ಭಾರತ – ಆಫ್ರಿಕ ವೇದಿಕೆ ಶೃಂಗದೊಂದಿಗೆ ಆಫ್ರಿಕಾದೊಂದಿಗೆ ತಮ್ಮ ತಮ್ಮ ದ್ವಿಪಕ್ಷೀಯ ಕಾರ್ಯಕ್ರಮ ನಿರ್ಮಿಸುವ ಕುರಿತು ನಾಯಕರು
ಅಮೆರಿಕ ಮತ್ತು ಭಾರತವು ಖಂಡದಾದ್ಯಂತ ಪ್ರಗತಿ ಮತ್ತು ಭದ್ರತೆ ಉತ್ತೇಜಿಸಲು ಆಫ್ರಿಕಾ ಪಾಲುದಾರರೊಂದಿಗೆ ಕೆಲಸ ಮಾಡುವ ಒಂದು ಸಾಮಾನ್ಯ ಆಸಕ್ತಿಯನ್ನು ಹಂಚಿಕೊಳ್ಳುವುದಾಗಿ ತಿಳಿಸಿದರು. ಜಾಗತಿಕ ಅಭಿವೃದ್ಧಿಗಾಗಿ ತ್ರಿಪಕ್ಷೀಯ ಸಹಕಾರದ ಮಾರ್ಗದರ್ಶಿ ನೀತಿಗಳ ಹೇಳಿಕೆಯ ಅಡಿಯಲ್ಲಿ ಕೃಷಿ, ಆರೋಗ್ಯ, ಇಂಧನ, ಮಹಿಳಾ ಸಬಲೀಕರಣ ಮತ್ತು ನೈರ್ಮಲ್ಯ ಕ್ಷೇತ್ರಗಳು ಸೇರಿದಂತೆ ಆಫ್ರಿಕಾದ ಪಾಲುದಾರರೊಂದಿಗೆ ತ್ರಿಪಕ್ಷೀಯ ಸಹಕಾರವನ್ನು ನಾಯಕರು ಸ್ವಾಗತಿಸಿದರು. ಆಫ್ರಿಕಾದಲ್ಲಿ, ಜೊತೆಗೆ ಏಷ್ಯಾ ಮತ್ತು ಅದರಾಚೆ ಅಮೆರಿಕ – ಭಾರತ ಜಾಗತಿಕ ಅಭಿವೃದ್ಧಿ ಸಹಕಾರ ಆಳಗೊಳಿಸುವ ಅವಕಾಶಗಳಿಗೆ ಎದಿರುವ ನೋಡುತ್ತಿರುವುದಾಗಿ ಅವರು ಹೇಳಿದರು.

ಜನರಿಂದ ಜನರ ಬಾಂಧವ್ಯ ನಿರ್ಮಾಣ

ಎರಡೂ ಕಡೆಯವರು ಪರಸ್ಪರರ ರಾಷ್ಟ್ರಗಳಲ್ಲಿ ಹೆಚ್ಚುವರಿ ಕಾನ್ಸೊಲೇಟ್ ತೆರೆಯುವ ಬದ್ಧತೆ ಪ್ರಕಟಿಸಿದರು. ಭಾರತವು ಸಿಯಾಟಲ್ ನಲ್ಲಿ ತನ್ನ ಹೊಸ ಕಾನ್ಸೊಲೇಟ್ ತೆರೆಯಲಿದ್ದರೆ, ಅಮೆರಿಕ ಪರಸ್ಪರರ ಒಪ್ಪುವ ಭಾರತದ ಒಂದು ಸ್ಥಳದಲ್ಲಿ ತನ್ನ ಕಾನ್ಸೊಲೇಟ್ ತೆರೆಯಲಿದೆ.

ನಾಯಕರು ಅಮೆರಿಕ ಮತ್ತು ಭಾರತ 2017ನೇ ಸಾಲಿನ ಪ್ರಯಾಣ ಮತ್ತು ಪ್ರವಾಸೋದ್ಯಮ ಪಾಲುದಾರ ರಾಷ್ಟ್ರಗಳು ಎಂದು ಘೋಷಿಸಿದರು, ಮತ್ತು ಪರಸ್ಪರರ ಪ್ರಜೆಗಳಿಗೆ ವೀಸಾ ಅನುಕೂಲತೆ ಕಲ್ಪಿಸಲು ಬದ್ಧವಾಗಿರುವುದಾಗಿ ಘೋಷಿಸಿದರು.

ಎರಡೂ ದೇಶಗಳ ನಡುವಿನ ಬಲವಾದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಪ್ರಸ್ತಾಪಿಸಿದ ನಾಯಕರು, ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯ ಹೆಚ್ಚಳವನ್ನು ಸ್ವಾಗತಿಸಿದರು, ಇದು 2014-15ನೇ ಸಾಲಿನಲ್ಲಿ ಶೇಕಡ 29ರಷ್ಟು ಹೆಚ್ಚಳವಾಗಿದ್ದು, ಸುಮಾರು 133000 ವಿದ್ಯಾರ್ಥಿಗಳು ಅಲ್ಲಿ ಓದುತ್ತಿದ್ದಾರೆ ಮತ್ತು ಅಮೆರಿಕದ ವಿದ್ಯಾರ್ಥಿಗಳು ಭಾರತದಲ್ಲಿ ವ್ಯಾಸಾಂಗ ಮಾಡುವ ಅವಕಾಶ ಹೆಚ್ಚಳವಾಗುವುದನ್ನು ಎದಿರು ನೋಡುತ್ತಿರುವುದಾಗಿ ಅವರು ಹೇಳಿದರು. ಮುಖಂಡರು ಫುಲ್ ಬ್ರೈಟ್-ಕಲಾಂ ಹವಾಮಾನ ವಿದ್ಯಾರ್ಥಿವೇತನದ ಮೂಲಕ ಜಾಗತಿಕ ಹವಾಮಾನ ಬದಲಾವಣೆಯ ವಿನಿಮಯಿತ ಸವಾಲುಗಳನ್ನು ಎದುರಿಸಲು ಹವಾಮಾನ ವಿಜ್ಞಾನಿಗಳು ಒಂದು ಒಕ್ಕೂಟ ಅಭಿವೃದ್ಧಿಪಡಿಸುವ ತಮ್ಮ ಸರಕಾರಗಳ ಜಂಟಿ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು..

ಜನರಿಂದ ಜನರ ಬಾಂಧವ್ಯ ಹೆಚ್ಚಿಸುವ ತಮ್ಮ ಪರಸ್ಪರರ ಗುರಿಯನ್ನು ಗುರುತಿಸಿದ ನಾಯಕರು, ದೇಶಾಂತರ ವಿವಾಹ, ವಿಚ್ಛೇದನ ಮತ್ತು ಮಕ್ಕಳ ವಶದಂಥ ವಿಚಾರಗಳು ಸೇರಿದಂತೆ ಕಾನೂನು ವ್ಯವಸ್ಥೆಯಿಂದ ಎರಡೂ ದೇಶಗಳ ಪ್ರಜೆಗಳಲ್ಲಿ ಉದ್ಭವಿಸುತ್ತಿರುವ ಭಿನ್ನಾಭಿಪ್ರಾಯದ ಸಮಸ್ಯೆಗಳನ್ನು ಪರಿಹರಿಸಲು ಪರಿಶೀಲನಾ ಪ್ರಯತ್ನಗಳ ಮಾತುಕತೆಯನ್ನು ಹೆಚ್ಚಿಸುವ ಉದ್ದೇಶವನ್ನು ನಾಯಕರು ಪ್ರಸ್ತಾಪಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತಕ್ಕೆ ಪ್ರಾಚೀನ ಕಲಾಕೃತಿಗಳನ್ನು ವಾಪಸು ನೀಡುವ ಸಂಯುಕ್ತ ಸಂಸ್ಥಾನದ ಕ್ರಮವನ್ನು ಸ್ವಾಗತಿಸಿದರು. ಮುಖಂಡರು ಕಳ್ಳತನ ಮತ್ತು ಸಾಂಸ್ಕೃತಿಕ ವಸ್ತುಗಳ ಕಳ್ಳಸಾಗಣೆ ಎದುರಿಸಲು ತಮ್ಮ ಪ್ರಯತ್ನಗಳ ಇಮ್ಮಡಿಗೊಳಿಸಲು ಬದ್ಧವಾಗಿರುವುದಾಗಿ ತಿಳಿಸಿದರು. .

ಪ್ರಧಾನಮಂತ್ರಿ ಮೋದಿ ಅವರು ಅಧ್ಯಕ್ಷ ಒಬಾಮಾ ಅವರ ಆತ್ಮೀಯ ಸ್ವಾಗತ ಮತ್ತು ಆತಿಥ್ಯಕ್ಕೆ ಧನ್ಯವಾದ ಅರ್ಪಿಸಿದರು. ತಮಗೆ ಅನುಕೂಲಕರವಾದ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಅವರು ಅಧ್ಯಕ್ಷ ಒಬಾಮಾ ಅವರಿಗೆ ಆಹ್ವಾನ ನೀಡಿದರು.