Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವೆಂಬರ್ 26, 2016 ರಂದು ಸಂವಿಧಾನ ದಿನ ಆಚರಣೆ ನಿಮಿತ್ತ , ಸಂಸತ್ ಅನೆಕ್ಸ್ ಸಭಾಂಗಣದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣ

ನವೆಂಬರ್ 26, 2016 ರಂದು ಸಂವಿಧಾನ ದಿನ ಆಚರಣೆ ನಿಮಿತ್ತ , ಸಂಸತ್  ಅನೆಕ್ಸ್ ಸಭಾಂಗಣದಲ್ಲಿ ಪ್ರಧಾನಮಂತ್ರಿ  ಅವರು ಮಾಡಿದ ಭಾಷಣ


ಸನ್ಮಾನ್ಯ ಸುಮಿತ್ರಾ ಅವರೇ ಮತ್ತು ಇಲ್ಲಿ ನೆರೆದಿರುವ ಎಲ್ಲ ಹಿರಿಯ ಗಣ್ಯರೇ

ನವೆಂಬರ್ 26 ಅನ್ನು ಸಂವಿಧಾನ ದಿನ ಎಂಬುದಾಗಿ ನಿರ್ಧರಿಸಿದ್ದು 2015 ರಲ್ಲಿ. ಇದರ ಉದ್ದೇಶ್ಯ ನಮ್ಮ ಯುವ ಪೀಳಿಗೆಗೆ ಈ ಸಂವಿಧಾನದ ಜೊತೆಗೆ, ಅದರ ಅನುಷ್ಠಾನದ ಜೊತೆಗೆ, ಅದರ ಉದ್ದೇಶ್ಯದ ಜೊತೆಗೆ ಸಂಬಂಧವಿರಬೇಕೆಂದು. ಎಲ್ಲ ನಡಕೊಂಡು ಹೋಗುತ್ತೆ ಅಂದ ಮಾತ್ರಕ್ಕೆ ಹೇಗೆ ನಡಕೊಂಡು ಹೋಗುತ್ತೆ ಅನ್ನುವುದನ್ನು ತಿಳಿಯೋದು ಬೇಡವೇ. ಇಂಥ ವಿಷಯಗಳನ್ನು ಬಾರಿಬಾರಿಗೆ ನಿರಂತರವಾಗಿ ನೆನೆಪಿಸಿಕೊಳ್ಳುವ ಅಗತ್ಯವಿದೆ. ಮೂಲ ತತ್ವಗಳನ್ನು ಪದೇ ಪದೇ ಸ್ಮರಿಸುತ್ತಿರುವುದರಿಂದ ಅನುಕೂಲಗಳಿವೆ.

ಒಂದು ವಿಷಯದ ವ್ಯಾಖ್ಯಾನ 40 ವರುಷಗಳ ಹಿಂದೆ ಏನಾಗುತ್ತಿತ್ತೊ ಬಹುಶಃ 10 ವರುಷಗಳ ನಂತರ ಅದೇ ವಿಷಯದ ವ್ಯಾಖ್ಯಾನ ಬೇರೊಂದೇ ಅರ್ಥವನ್ನು ಪಡೆಯ ಬಹುದು. ಇದೊಂದು ಪ್ರಗತಿಪರ ಸ್ವರೂಪ (progressive format) ವಾಗಿ ಕಾಣುತ್ತದೆ . ಅದು ಯಾವಾಗ ಸಾಧ್ಯ ಎಂದರೆ ನಾವು ಮೂಲಭೂತ ವಿಷಯದೊಂದಿಗೆ ಪ್ರತಿಯೊಂದು ವಿಷಯವನ್ನು ವಿಶ್ಲೇಷಣೆ ಮಾಡಿಕೊಂಡು ಮತ್ತು ತೌಲನಿಕ ಅಧ್ಯಯನ ಮಾಡಿಕೊಂಡು ಬಂದಿರುತ್ತೇವೆ. ನಮ್ಮ ಶಾಲೆ ಮತ್ತು ಕಾಲೇಜಿನ ಮಕ್ಕಳಿಗೆ ವರ್ಷಕೊಮ್ಮೆಯಾದರು ಸಂವಿಧಾನದ ಪೀಠಿಕೆ, ಉಧ್ಘೋಷ ಮತ್ತು ವ್ಯಾಖ್ಯೆ ಸಾಮೂಹಿಕವಾಗಿ ಆಗಬೇಕು. ಇದರಿಂದಾಗುವ ಲಾಭ ಸಂವಿಧಾನದ ಮಹತ್ವ ಸಾಮಾನ್ಯರಿಗೂ ತಿಳಿಯುವಂತೆ ಮಾಡುವುದು.

ಇದರಿಂದ ಅದಕ್ಕೊಂದು ಸ್ಥಾನ ದೊರೆಯುವಂತಾಗುತ್ತದೆ. ಬಹಳಷ್ಟು ಕಡಿಮೆ ರಾಷ್ಟ್ರಜೀವನದಲ್ಲಿ ಮಾತ್ರವೇ ಸಂವಿಧಾನದ ಉಲ್ಲೇಖ ಮತ್ತು ಪ್ರಯೋಗ ಮತ್ತೆ ಮತ್ತೆ ಆಗುತ್ತಿರುತ್ತದೆ. ಆದರೆ ಭಾರತ ದೇಶ ಹಾಗಲ್ಲ. ಇಲ್ಲಿ ಸಂವಿಧಾನದ ಉಲ್ಲೇಖ ಅದ ಸಂದರ್ಭದಲ್ಲೆಲ್ಲ ಡಾ|| ಅಂಬೇಡ್ಕರ್ ಹೆಸರಿನ ಪುಣ್ಯಸ್ಮರಣೆಯ ಪ್ರಸ್ತಾಪ ಆಗುತ್ತಲೇ ಇರುತ್ತದೆ. ಅಂದರೆ ಬಾಬಾ ಅಂಬೇಡ್ಕರ್ ಅವರ ಸಾಧನೆ ಎಲ್ಲರ ಜೀವನದಲ್ಲಿಯೂ ಅಸಾಧ್ಯ . ಬಾಬಾ ಅಂಬೇಡ್ಕರ್ ಅವರ ಜೀವನದ ಶ್ರಮದ ಸಂಪೂರ್ಣ ಫಲವನ್ನು ಸಂವಿಧಾನದ ಮೂಲಕ ನಾವು ಅನುಭವಿಸಿತ್ತಿದ್ದೇವೆ ಆದರೆ ಬಹುಶಃ ಅವರೇ ಸ್ವತಃ ಅನುಭವಿಸಿರಲಿಕ್ಕೆ ಸಾಧ್ಯವಾಗದೆ ಹೋಗಿರಬಹುದು. ಅವರ ಜೀವಿತಕಾಲಾವಧಿಯಲ್ಲಿಯೂ ಸಹ ಯಾರೂ ಇದನ್ನು ಗುರುತಿಸಿರಲಿಕ್ಕೆ ಸಾಧ್ಯವಿಲ್ಲ. ಅವರ ಅನುಭವದಿಂದ ಸಂವಿಧಾನರಚನೆಯ ಮೂಲಕ ಅವರೆಂಥಹ ಮಹಾನ್ ಕಾರ್ಯ ಮಾಡಿ ಕೊಟ್ಟಿದ್ದಾರೆಂಬುದು ಕಾಲ ಕಳೆದಂತೆ ನಮಗೆ ಗೋಚರಿಸುತ್ತಿದೆ. ಸಮಯ ಎಷ್ಟು ಬದಲಾಗಿದೆಯೆಂದರೆ ಪ್ರತಿಯೊಬ್ಬರು ತಮ್ಮ ಅಧಿಕಾರಕ್ಕಾಗಿ ಮತ್ತು ತಮ್ಮ ಅಧಿಕಾರಕ್ಕೆ ಮತ್ತಷ್ಟು ಪುಷ್ಠಿ ದೊರೆಕಿಸಿ ಕೊಳ್ಳಲು ಸಂವಿಧಾನವನ್ನು ತಿರುಚುತ್ತಾರೆ. ಕೆಲವು ಬುದ್ದಿವಂತರಂತೂ ಸಂವಿಧಾನವನ್ನೆ ತಮ್ಮ ಮೂಲ ಬಂಡವಾಳವನ್ನಾಗಿ ಮಾಡಿಕೊಂಡು, ಅಧಿಕಾರ ದುರುಪಯೋಗ ಪಡಿಸಿಕೊಂಡು ಇತಿ-ಮಿತಿಗಳನ್ನೆ ಉಲಂಘಿಸಿರುವುದುಂಟು.ಇದರಿಂದ ಅರಾಜಕತೆ ಉಂಟಾಗುತ್ತದೆ ಹಾಗೂ ಇಂಥಹವರೇ ಬಾಬಾ ಸಾಹೇಬ್ ಅಂಬೇಡ್ಕರ್ ವ್ಯಾಖ್ಯೆಯ ಮಾತಾನಾಡುತ್ತಾರೆ. ಉತ್ತಮ ನಾಗರಿಕನಾಗಿರುವುದು.ಶಾಸನ ಬದ್ದ ಸರ್ಕಾರವಿರುವುದು. ಶಾಸನ ವ್ಯವಸ್ಥೆಯಲ್ಲಿ ವಿವಿಧ ಪ್ರಕಾರಗಳಿರುವುದು ಮತ್ತು ಅವುಗಳ ಮಧ್ಯೆ ತಾಳಮೇಳವಿರಬೇಕಾದಲ್ಲಿ ಬಹು ಮುಖ್ಯವಾದ ಮೂಲ ಅಥವಾ ಬೇರಾದ ಸಂವಿಧಾನದ ರಕ್ಷಣೆ ಇದು ನಮ್ಮ-ನಿಮ್ಮೆಲ್ಲರ ಹೊಣೆ, ಅಥವಾ ಬುಡ ಎಂದಾದಲ್ಲಿ ಅದು ಸಂವಿಧಾನ ಮಾತ್ರ. ನಯಗೊಳಿಸಬೇಕಾದಲ್ಲಿ, ರಕ್ಷಿಸಬೇಕಾದಲ್ಲಿ ಅದು ಸಂವಿಧಾನವೆ ಹೊರತು ಬೇರಾವುದು ಇದರ ಸ್ಥಾನ ಪಡೆಯಲಾರದು. ಹೀಗಾಗಿ ಅದರೊಂದಿಗೆ ಬೆಸೆದುಕೊಳ್ಳುವುದು ಅತಿ ಅಗತ್ಯ. ಸಂವಿಧಾನದ ಅಧ್ಯಾಯಗಳಲ್ಲಿ ಉಲ್ಲೇಖಿಸಿರುವ ಅನುಚ್ಛೇದ ಗಳಿಂದ ಮಾತ್ರವೆ ಕೂಡಿಬಾಳುವ ಮಾತು ಹಾಸ್ಯಸ್ಪದ ಎನಿಸಿಕೊಳ್ಳುತ್ತದೆ. ಸಂವಿಧಾನದ ಮಹತ್ವ ಮತ್ತು ಅದರ ಪ್ರಕ್ಕ್ರಿಯೆ ಬಗೆಗೆ ಪುಸ್ತಕ ಪ್ರಕಟಗೊಂಡಲ್ಲಿ ಅದರ ಒಂದು ಪುಟವಾದರೂ ಓದಿದರೆ ನಾನು ಸ್ವಾಗತಿಸುತ್ತೇನೆ.

ತ್ಯಾಗ ಬಲಿದಾನಗಳಿಂದ, ಉತ್ಕೃಷ್ಠ ಅಭಿವ್ಯಕ್ತಿಯ ಹೊಣೆಗಾರಿಕೆಯ ಪರಿಣಾಮ ದೇಶ ಸ್ವತಂತ್ರ್ಯವಾಯಿತು ಎಂಬ ಮಾತು ಸರಿಯಾದದು. ದೇಶದ ಪ್ರತಿಯೊಬ್ಬ ಪ್ರಜೆ ಇದನ್ನು ತನ್ನ ಪರಮ ಕರ್ತವ್ಯ ಎಂದು ಭಾವಿಸಿದ. ದೇಶ ಸ್ವಾತಂತ್ರ್ಯ ಪಡೆಯುವವರೆವಿಗೂ ಕರ್ತವ್ಯಪ್ರಜ್ಞೆ ಪರಾಕಾಷ್ಠೆಯಲ್ಲಿತ್ತು.

ಶತ ಶತಮಾನಗಳವರೆವಿಗೂ ಈ ಭಾವ ನಮ್ಮಲ್ಲಿ ಜೀವಂತವಾಗಿತ್ತು. ಆದರೆ ಸ್ವಾತಂತ್ರಾನಂತರ ಇದ್ದಕ್ಕಿದ್ದಂತೆ ಕರ್ತವ್ಯಪ್ರಜ್ಞೆ ಮಾಯವಾಗಿ ಸಾಮಾಜಿಕ ಜೀವನದಲ್ಲಿ ನೈತಿಕತೆ ಕುಸಿದು ಅಧಿಕಾರ ಮನೋಭಾವವಾಗಿ ಪರಿವರ್ತಿತ ವಾಗಿ ಬಿಟ್ಟಿದೆ. ಹಕ್ಕು, ಅಧಿಕಾರ, ನನ್ನದೆಂಬ ಮನೋಭಾವ ಈ ಎಲ್ಲವೂ ಸೇರಿಕೊಂಡು ಕರ್ತವ್ಯ ಎನ್ನುವುದು ಹಿಂದಕ್ಕೆ ಸರಿಯುತ್ತಿದೆ.

ನಾವು ಸಂವಿಧಾನದ ಮುಖಾಂತರ ಕರ್ತವ್ಯ ಮತ್ತು ಅಧಿಕಾರ ಈ ಎರಡರ ನಡುವೆ ಸಮತೋಲನ ಕಾಯ್ದು ಕೊಳ್ಳುವುದು ಹೇಗೆ ಎಂದು ಚಿಂತಿಸ ಬೇಕಿದೆ. ನಮಗೆ ಇದೊಂದು ಸವಾಲೇ ಸರಿ. ಈ ದಿಕ್ಕಿನಲ್ಲಿ ಪರಿಹಾರಗಳನ್ನು ಕುರಿತು ಆಲೋಚಿಸುತ್ತಿದ್ದೇವೆ. ನಾವು 26 ಜನವರಿಯನ್ನು ಬಹಳ ಸಂಭ್ರಮದಿಂದ ಆಚರಿಸುತ್ತೇವೆ. ಆದರೆ 26 ನವೆಂಬರ್ ಇಲ್ಲದಿದ್ದ ಪಕ್ಷದಲ್ಲಿ 26 ಜನವರಿ ಅರ್ಥಪೂರ್ಣವಾಗಿರುತ್ತಿರಲ್ಲಿಲ್ಲ. ಜನವರಿ 26 ರ ಹಿಂದಿನ ಶಕ್ತಿ 26 ರ ನವೆಂಬರ್ ಎಂಬುದನ್ನು ಮರೆಯಬಾರದು.

ಈ ಕಾರಣದಿಂದಾಗಿ ನಾವು 26ರ ನವೆಂಬರ್ ಅನ್ನು ಸಂವಿಧಾನದ ದಿನ ಎಂಬುದಾಗಿ ನಮ್ಮ ಮುಂದಿನ ಪೀಳಿಗೆಗೆ ನೆನಪಿಸುದಷ್ಟೆ ಅಲ್ಲದೆ ಈ ಮುಖಾಂತರ ದೇಶದ ವಿವಿಧೆಡೆ ಬೇರೆ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಚರಿಸುತ್ತಿದ್ದೇವೆ. ಆನ್- ಲೈನ್ ಮುಖಾಂತರ ಸ್ಪರ್ಧೆ . ಲೇಖನ ಹಾಗೂ ಪ್ರಬಂಧ ಸ್ಪರ್ಧೆ ಮುಂತಾದವನ್ನು ಮಕ್ಕಳಿಗಾಗಿ ಆಯೋಜಿಸುತ್ತೇವೆ. ಇದರ ಹಿಂದಿರುವ ನಮ್ಮ ಉದ್ದೇಶ್ಯ ಹೀಗಾದರೂ ಮುಂದಿನ ಯುವ ಜನಾಂಗ ಈ ವಿಷಯದೊಂದಿಗೆ ಬೆಸೆದು ಕೊಂಡಿರಲಿ ಎಂಬುದು. ಇತ್ತೀಚಿನ ದಿನಗಳಲ್ಲಿ ದೇಶ ಭ್ರಷ್ಟಾಚಾರ, ಕಪ್ಪು ಹಣ ಮುಂತಾದುವುಗಳ ಬಗ್ಗೆ ಹೋರಾಟ ನಡೆಸುತ್ತಿದೆ. ಸಾಮಾನ್ಯ ನಾಗರೀಕ ಇದರ ಸೈನಿಕನಾಗಿದ್ದಾನೆ. ಈ 70 ವರುಷಗಳಲ್ಲಿ ಕಾನೂನು ಮತ್ತು ನಿಯಮಗಳನ್ನು ದುರುಪಯೋಗ ಪಡಿಸಿಕೊಂಡು ದೇಶವನ್ನು ಭ್ರಷ್ಟತೆಗೆ ತಳ್ಳಿದ್ದಾರೆ ಎಂದು ಅವನಿಗೆ ಅನಿಸಿದೆ. ಸಂವಿಧಾನದ ಕಾನೂನುಗಳನ್ನು ತಿರುಚಿ ಇಂಥ ಕೆಲಸ ಮಾಡಿರುತ್ತಾರೆ. ಇದರ ಬಗ್ಗೆ ಕೆಲವೇ ಮಂದಿಯಷ್ಟೇ ತುಂಬಾ ಗಂಭೀರವಾಗಿ ಚಿಂತಿಸುತ್ತಿರುವುದು. ಆದರೆ ಇನ್ನೊಂದು ಕಡೆ ಸರ್ಕಾರ ಪೂರ್ಣ ಸಿದ್ಧತೆ ಮಾಡಿಕೊಂಡಿಲ್ಲವೆಂದು ಈ ಬಗೆಗೂ ಠೀಕೆ – ಟಿಪ್ಪಣಿಗಳನ್ನು ಮಾಡಿರುವುದುಂಟು.

ಸರ್ಕಾರ ಪೂರ್ಣ ಸಿದ್ದತೆ ಮಾಡಿಕೊಂಡಿಲ್ಲ ಅನ್ನುವುದು ಕೇವಲ ಪ್ರಚಾರ ಗಿಟ್ಟಿಸಿಕೊಳ್ಳಲು ಮಾಡಿಕೊಂಡರುವ ವ್ಯವಸ್ಥೆ ಎಂದು ನನಗನಿಸಿದೆ, ಇದರ ಹಿಂದಿನ ಉದ್ದೇಶ್ಯ ಯಾರೊಬ್ಬರಿಗೂ ಸಮಯಾವಕಾಶವನ್ನು ಕೊಡಲಿಲ್ಲ ಎನ್ನುವುದೇ ಆಗಿದೆ. ನುಣುಚಿ ಕೊಳ್ಳಲು 72 ಘಂಟೆಗಳ ಅವಕಾಶ ಸಿಕ್ಕಿದ್ದರೂ ಸಾಕು, ಮೋದಿಯಂತಹ ನಾಯಕರಿಲ್ಲ ವಾಹ್..ವಾಹ್…ಎಂದು ಬಿಡುತ್ತಿದ್ದರು. ಎಂಥ ದೊಡ್ಡ ನಿರ್ಣಯವನ್ನು ತೆಗೆದು ಕೊಂಡಿರುತ್ತಾರೆ ಎಂದು ಹಾಡಿ ಹೊಗಳಿ ಬಿಡುತ್ತಿದ್ದರು. ದೇಶದ ಭವಿಷ್ಯದ ಬಗ್ಗೆ ಚಿಂತನೆಯಿದ್ದರಷ್ಟೇ ಇಂಥ ನಿರ್ಣಯ ಕೈಗೊಳ್ಳಲು ಸಾಧ್ಯ. ಬನ್ನಿ ಎಲ್ಲರು ಸೇರಿ ಸಾಮಾನ್ಯ ನಾಗರೀಕರ ಸಮಸ್ಯೆಯನ್ನು ಬಗೆಹರಿಸೋಣ.

ಇಂಥದೊಂದು ಮಹಾನ್ ಹೋರಾಟದಲ್ಲಿ ಯಶಸ್ವಿಯಾಗಿ ವಿಶ್ವದ ಮುಂದೆ ದೇಶವನ್ನು ಮಹಾನ್ ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡೋಣ. ಭ್ರಷ್ಟಾಚಾರ ವಿಷಯ ಕುರಿತು ನಡೆದ ಸಮೀಕ್ಷೆಗಳಲ್ಲಿ ಭಾರತ ಮೊದಲ ಪಂಕ್ತಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ದೇಶ ತಲೆ ತಗ್ಗಿಸುವಂತಾಗುತ್ತಿದೆ. ನಾವು ತಲೆ ಎತ್ತಿಕೊಂಡು ಗರ್ವದಿಂದ ನಡೆಯಬೇಕಾದಲ್ಲಿ ಇಂಥ ನಿರ್ಣಯ ಮತ್ತು ಅನುಷ್ಠಾನ ಅನಿವಾರ್ಯ. ಹೀಗಾದಾಗಲೇ ಕಾರ್ಯದಲ್ಲಿ ಯಶಸ್ಸು ಸಾಧ್ಯ. ನಾನು ಎಲ್ಲ ರಾಜಕೀಯ ಪಕ್ಷಗಳ ನಾಯಕರನ್ನು, ಸಾಮಾಜಿಕ ಸಂಸ್ಥೆಗಳನ್ನು, ಮಾಧ್ಯಮದವರನ್ನು ಈ ಸಂದರ್ಭದಲ್ಲಿ ಆಹ್ವಾನಿಸುತ್ತೇನೆ. ಡಿಜಿಟಲ್ ಕರೆನ್ಸಿಯೆನ್ನುವುದು ಪ್ರತಿಯೊಬ್ಬರ ಹಣದ ಹಕ್ಕು. ಪ್ರತಿಯೊಬ್ಬರಿಗೂ ತಮ್ಮ ಹಣವನ್ನು ಖರ್ಚು ಮಾಡುವ ಹಕ್ಕು ಇದ್ದೇ ಇರುತ್ತೆ. ಇಲ್ಲಿ ಯಾರೂ ಯಾರನ್ನೂ ತಡೆಯುವುದಿಲ್ಲ. ಆದರೆ ನೋಟು ಕೈಯಲ್ಲಿಯೇ ಇರಬೇಕೆಂಬ ನಿಯಮವೇನಿಲ್ಲ. ನೋಟು ಕೈಯಲ್ಲಿಲ್ಲದಿದ್ದರೂ ವ್ಯವಹಾರ ಮಾಡುವ ಹಕ್ಕು ಬೇಕು. ಇಂಥ ವ್ಯವಸ್ಥೆ ಇಂದು ಸಾಧ್ಯವಾಗಿದೆ. ನೀವು ನಿಮ್ಮ ಮೊಬೈಲ್ ಮುಖಾಂತರವೂ ಸಹ ನಿಮ್ಮ ಹಣವನ್ನು ನಿಮಗೆ ಬೇಕೆನಿಸಿದ ಹಾಗೆ ಖರ್ಚು ಮಾಡಬಹುದು. ನಿಮ್ಮ ಒಂದೊಂದು ಪೈಸೆಗೂ ಬೆಲೆಯಿದೆ. ಅದು ನಿಮ್ಮ ಹಕ್ಕು. ಈ ಮುಖಾಂತರ ಸಂವಿಧಾನದ ಚೌಕಟ್ಟಿನಲ್ಲಿ ಚರ್ಚೆಯಾಗಬೇಕು. ಸಂವಿಧಾನ ಈ ರೀತಿಯ ಒಂದು ವ್ಯವಸ್ಥೆಗೆ ಸಂರಕ್ಷಣೆನೀಡಬೇಕು.

ನಾನು ನನ್ನ ನಾಗರೀಕ ಬಂಧುಗಳಲ್ಲಿ ಅದರಲ್ಲೂ ಮುಖ್ಯವಾಗಿ ಸಮಾಜದ ಗಣ್ಯರಲ್ಲಿ ಮತ್ತು ಮಾಧ್ಯಮದವರಲ್ಲಿ ಕೇಳಿಕೊಳ್ಳುವುದೇನೆಂದರೆ – ದೇಶ ದಲ್ಲಿ ಶೇಕಡ 65 ರಷ್ಟು ಮಂದಿ ಯುವಕರಿರುವಾಗ ಅದರಲ್ಲೂ 35 ಕ್ಕಿಂತ ಕಡಿಮೆ ವಯಸ್ಸಿನವರು ಇರುವಾಗ, ಯಾವ ದೇಶದಲ್ಲಿ 100 ಕೋಟಿ ಹೆಚ್ಚು ಮೊಬೈಲ್ ಇದೆಯೊ, ಯಾವ ದೇಶದಲ್ಲಿ ಟೆಕ್ನೋಲಜಿ ಸೌಲಭ್ಯ ಮೊಬೈಲ್ ಮುಖಾಂತರ ಸಾಧ್ಯವಾಗಿದೆಯೊ ಅಂತಹ ಸಂದರ್ಭದಲ್ಲಿ ಬ್ಯಾಂಕ್ ವ್ಯವಹಾರವೆಲ್ಲವನ್ನು ಮಾಡಲಿಕ್ಕೆ ಜನರನ್ನು ಯಾಕೆ ಪ್ರೇರೆಪಿಸ ಬಾರದು ? ಜನರಿಗೆ ಏಕೆ ತರಬೇತಿ ನೀಡಬಾರದು?. ಇದು ಅಂತಹ ಕಷ್ಟದ ಕೆಲಸವೇನಲ್ಲ. ಇಂದು ದೇಶದಲ್ಲಿ ಓದುಬರಹ ಬಾರದವರೂ ಸಹ ಸುಲಭವಾಗಿ ವಾಟ್ಸ್ ಆಪ್ ನೋಡ ಬಹುದಾದರೆ, ಸಂದೇಶಗಳನ್ನು ಚಿತ್ರಗಳನ್ನು ರವಾನಿಸ ಬಹುದಾದರೆ, ಫಾರ್ವರ್ಡ್ ಮಾಡಬಹುದಾದರೆ ಯಾಕಿದು ಸಾಧ್ಯವಿಲ್ಲ? ಇದಕ್ಕಾಗಿ ಯಾರೇನು ಐ.ಟಿ ಕಾಲೇಜಿಗಾಗಲಿ, ಇಂಜನೀಯರಿಂಗ್ ಕಾಲೇಜಿಗಾಗಲಿ ಹೋಗಬೇಕಾಗಿಲ್ಲ, ಇಷ್ಟೆಲ್ಲ ಸಾಧ್ಯವಾಗುವುದಾದರೆ ಮೊಬೈಲ್ ಮುಖಾಂತರ ಆನ್-ಲೈನ್ ಶಾಪಿಂಗ್ ಏಕಾಗಬಾರದು. ದೇಶದ ಉಜ್ವಲ ಭವಿಷ್ಯಕ್ಕಾಗಿ ಎಲ್ಲ ವ್ಯವಹಾರಗಳಲ್ಲೂ ಪಾರದರ್ಶಿಕತೆಯನ್ನು ತರುವ ಅಗತ್ಯವಿದೆ. ಡಿಜಿಟಲ್ ಕರೆನ್ಸಿ ಕಡೆಗೆ ಹೋಗುವ ಅಗತ್ಯವಿದೆ. ಭಾರತದ 500ಕ್ಕೂ ಹೆಚ್ಚು ನಗರ ಪ್ರದೇಶಗಳಲ್ಲಿ ಒಂದು ವಾರದಲ್ಲಿ ಈ ಕಾರ್ಯ ಸಂಪೂರ್ಣವಾಗಲು ಸಾಧ್ಯವಿದೆ..

ನಿಮಗಿದು ಅಶ್ಟರ್ಯವಾಗ ಬಹುದು . ನಾವು ತೆಗೆದು ಕೊಂಡ ನವೆಂಬರ್ 8ರ ನಿರ್ಣಯದಿಂದ ಯಾರಿಗಾದರೂ ಲಾಭವಾಗಿದ್ದಲ್ಲಿ ಅದು ನಗರ ಪ್ರದೇಶದ ಪೌರ ಸಮಿತಿಗಳು, ನಗರ ಪಾಲಿಕೆಗಳು, ಮಹಾನಗರ ಪಾಲಿಕೆಗಳು ಇತ್ಯಾದಿಗಳಿಗೆ. ಈ ಹಿಂದೆ ಮೂರು ಸಾವಿರ ದಿಂದ ಮೂರುವರೆ ಸಾವಿರ ಕೋಟಿ ತೆರಿಗೆ ಸಂಗ್ರಹ ಮಾಡುತ್ತಿದ್ದ ಸ್ಥಾನದಲ್ಲಿ ನವೆಂಬರ್ 8 ರ ನಂತರ 13 ಸಾವಿರ ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹ ವಾಗುತ್ತಿದೆ. ಇದು ದೇಶದ ಖಜಾನೆಗೆ ಹರಿದು ಬಂದಿದೆ. ಇಂಥ 40 – 50 ಪಾಲಿಕೆಗಳ ಮಾಹಿತಿ ನನಗೆ ಬಂದಿದೆ. ಕೊನೆಗೆ ಈ ಹಣ ಬಳಕೆಯಾಗುವುದು ಸಾರ್ವಜನಿಕ ಉಪಯೋಗಕ್ಕೆ ತಾನೆ? ಇದರಿಂದ ಹಲವಾರು ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ನೆಲಸಿರುವ ಬಡವರಿಗೆ ಕುಡಿಯುವ ನೀರು ಮತ್ತು ನಲ್ಲಿಯ ವ್ಯವಸ್ಥೆ, ರಸ್ತೆ ಮತ್ತು ಒಳ ಚರಂಡಿ ವ್ಯವಸ್ಥೆ, ವಿದ್ಯುತ್ ದೀಪದ ವ್ಯವಸ್ಥೆ ಆಗಲಿದೆ. ಸಾಮಾಜಿಕ ಜೀವನದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಲಿದೆ. ಇದು ರಾಜಕೀಯವಾಗಿ ತರುವ ಲಾಭಕ್ಕಿಂತ ಸಾಮಾಜಿಕ ಜೀವನದಲ್ಲಿ ಲಾಭ ತರುವಲ್ಲಿ ಸಂವಿಧಾನ ಪ್ರೆರೇಪಣೆ ನೀಡುತ್ತದೆ. ಸಂವಿಧಾನ ನಮಗೆ ನಮ್ಮ ಪರಂಪರೆಯನ್ನು ಉಳಿಸಿಕೊಂಡು ಬರಲಿಕ್ಕೆ ಜವಬ್ದಾರಿಯನ್ನು ನೀಡುತ್ತದೆ. ನಮ್ಮ ಮಹಾನ್ ಪರಂಪರೆಯನ್ನು ಕಾಯ್ದುಕೊಂಡು ಬರುವುದು ನಮ್ಮೆಲ್ಲರ ಜವಬ್ದಾರಿ.

ಬನ್ನಿರಿ ಎಲ್ಲರೂ ಸೇರಿ ಬಾಬಾ ಸಾಹೇಬ್ ಅಂಬೇಡ್ಕರ್ ಮಾಡಿರುವ ಮಹಾನ್ ಕಾರ್ಯವನ್ನು, ಅವರ ಮಾತುಗಳನ್ನು, ಶಬ್ದ, ಅರ್ಥ ಮತ್ತು ಭಾವನೆಗಳನ್ನು ಮುಂಬರುವ ಪೀಳಿಗೆಗೆ ಕೊಂಡೊಯ್ಯೋಣ, ಸಮಯಾನುಕೂಲಕ್ಕೆ ತಕ್ಕಂತೆ ಬದುಕಿ ತೋರಿಸೋಣ, ಸದಾ ಹೊಸ ಹುರುಪು, ಹೊಸ ಶಕ್ತಿ, ಹೊಸ ಚೈತನ್ಯ ನೀಡುವ ಅವರ ಉದ್ದೇಶ್ಯಗಳನ್ನು ಸಾರ್ಥಕ ಪಡಿಸೋಣ.

ನಾನು ಸುಮಿತ್ರಾ ರವರನ್ನು ಹೃದಯ ಪೂರ್ವಕವಾಗಿ ಅಭಿನಂದಿಸುತ್ತೇನೆ. ಈ ಬಾರಿ ಸಂಸತ್ತು ರಜೆಯಲ್ಲಿ ಇತ್ತು, 26 ರಜಾ ದಿನವಾಗಿತ್ತು. ಆದರೂ ಅವರು ಸಂವಿಧಾನ ದಿನವನ್ನು ಆಚರಿಸಲಿಕ್ಕೆ ಸಂಕಲ್ಪಬದ್ದರಾಗಿ ಇಷ್ಟು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿ ಕೊಂಡಿದ್ದು ಸಂತಸ ತಂದಿದೆ. ರಾಜ್ಯಗಳಲ್ಲಿಯೂ ಸಹ ಇಂಥ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ. ಶಾಲಾ-ಕಾಲೇಜುಗಳಲ್ಲಿಯೂ ಇದು ಪ್ರಾರಂಭವಾಗಿದೆ. ಮುಂದೊಂದುದಿನ ಇದೊಂದು ಮಹತ್ವಪೂರ್ಣ ಘಟನೆಯಾಗಲಿದೆ ಎಂಬ ವಿಶ್ವಾಸ ನನಗಿದೆ. ನನಗೆ ಇಂದು ಇಲ್ಲಿಗೆ ಬರುವ ಅವಕಾಶ ಸಿಕ್ಕಿದೆ.

ಸಮಯಾಭಾವದಿಂದಾಗಿ ಕಾರ್ಯಕ್ರಮ ಬೇಗ ಆರಂಭಿಸಬೇಕಾಯಿತು ಇದಕ್ಕಾಗಿ ತಮ್ಮಲ್ಲಿ ಕ್ಷಮೆ ಕೋರುತ್ತೇನೆ.

ಧನ್ಯವಾದಗಳು.

******