Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ, 2012 (ಪೋಕ್ಸೋ-ಪಿ.ಒ.ಸಿ.ಎಸ್.ಒ.) ತಿದ್ದುಪಡಿಗೆ ಸಂಪುಟ ಅನುಮೋದನೆ.


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ (ಪೋಕ್ಸೋ) ಕಾಯ್ದೆ 2012 ರ ತಿದ್ದುಪಡಿ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿತು. ಇದರಿಂದ ಮಕ್ಕಳ ವಿರುದ್ದ ಲೈಂಗಿಕ ಅಪರಾಧ ಎಸಗುವವರಿಗೆ ಶಿಕ್ಷೆ ಹೆಚ್ಚು ಕಠಿಣವಾಗಲಿದೆ.

ಪ್ರಮುಖ ಅಂಶಗಳು:

I . ಪೋಕ್ಸೋ ಕಾಯ್ದೆ 2012 ನ್ನು ಲೈಂಗಿಕ ಹಲ್ಲೆ , ಲೈಂಗಿಕ ಕಿರುಕುಳ ಮತ್ತು ಅಶ್ಲೀಲ ವರ್ತನೆಗಳಂತಹ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವುದಕ್ಕಾಗಿ, ಮಕ್ಕಳ ಹಿತಾಸಕ್ತಿ ಮತ್ತು ಒಳಿತಿನ ರಕ್ಷಣೆಗಾಗಿ ಜಾರಿಗೆ ತರಲಾಗಿತ್ತು. ಈ ಕಾಯ್ದೆಯು 18 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಯಾವುದೇ ವ್ಯಕ್ತಿಯನ್ನು ಮಗು ಎಂದು ವ್ಯಾಖ್ಯಾನಿಸುತ್ತದೆ. ಮತ್ತು ಆ ಮಗುವಿನ ದೈಹಿಕ ಆರೋಗ್ಯ, ಭಾವನಾತ್ಮಕ, ಭೌದ್ಧಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಪ್ರತೀ ಹಂತದಲ್ಲಿಯೂ ಆದ್ಯತೆ ನೀಡಿ ಖಾತ್ರಿಪಡಿಸುತ್ತದೆ. ಈ ಕಾಯ್ದೆ ಲಿಂಗ ತಟಸ್ತವಾಗಿದೆ.

ii. ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ (ಪೋಕ್ಸೋ ) ಕಾಯ್ದೆ-2012 ರ ಸೆಕ್ಷನ್ -4, ಸೆಕ್ಷನ್ -5, ಸೆಕ್ಷನ್ -6, ಸೆಕ್ಷನ್ -9, ಸೆಕ್ಷನ್ -15 ಮತ್ತು ಸೆಕ್ಷನ್ -೧೫ ಮತ್ತು ಸೆಕ್ಷನ್ -42 ಕ್ಕೆ ತಿದ್ದುಪಡಿಗಳನ್ನು ಮಕ್ಕಳ ಲೈಂಗಿಕ ದುರುಪಯೋಗವನ್ನು ಸೂಕ್ತ ರೀತಿಯಲ್ಲಿ ಪರಿಹಸುವುದಕ್ಕಾಗಿ ಮಾಡಲಾಗಿದೆ. ಈ ಸುಧಾರಣೆಯನ್ನು ದೇಶದಲ್ಲಿ ಮಕ್ಕಳ ಮೇಲೆ ಹೆಚ್ಚುತ್ತಿರುವ ಲೈಂಗಿಕ ದುರುಪಯೋಗದ ಪ್ರಕರಣಗಳ ಓಘವನ್ನು ನಿಯಂತ್ರಿಸಲು ಕಠಿಣ ಕ್ರಮಗಳು ಅವಶ್ಯವೆಂಬ ಹಿನ್ನೆಲೆಯಲ್ಲಿ ಮಾಡಲಾಗಿದೆ.

iii. ಮಕ್ಕಳ ಲೈಂಗಿಕ ದುರುಪಯೋಗದ ಹೆಚ್ಚುತ್ತಿರುವ ಪ್ರಕರಣಗಳನ್ನು ಪ್ರೋತ್ಸಾಹಿಸದಿರಲು, ಇದಕ್ಕೆ ಅಡ್ಡಿ ಮಾಡುವ ಸೆಕ್ಷನ್ -4, ಸೆಕ್ಷನ್ -5 ಮತ್ತು ಸೆಕ್ಷನ್ -6 ಕ್ಕೆ ತಿದ್ದುಪಡಿ ತಂದು ಮಕ್ಕಳನ್ನು ಲೈಂಗಿಕ ದುರುಪಯೋಗದಿಂದ ರಕ್ಷಿಸಲು ಅತ್ಯಾಚಾರದಂತಹ ಲೈಂಗಿಕ ಹಲ್ಲೆಗಳನ್ನು ತಡೆಯಲು ಮರಣ ದಂಡನೆಯೂ ಸೇರಿದಂತೆ ಕಠಿಣ ಶಿಕ್ಷೆಗೆ ಅವಕಾಶ ಒದಗಿಸುವ ಪ್ರಸ್ತಾವನೆಗಳನ್ನು ಮಾಡಲಾಗಿದೆ.

iv. ಪ್ರಾಕೃತಿಕ ವಿಕೋಪಗಳು ಮತ್ತು ವಿಪತ್ತುಗಳ ಸಂಧರ್ಭಗಳಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸಲು ಸೆಕ್ಷನ್ -9 ರಲ್ಲಿ ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆ. ಅತ್ಯಾಚಾರದಂತಹ ಲೈಂಗಿಕ ಹಲ್ಲೆ/ ಕೃತ್ಯ ಗಳಿಗಾಗಿ ಅವಧಿಪೂರ್ವವಾಗಿ ಲೈಂಗಿಕ ಪಕ್ವತೆಯನ್ನು ಸಾಧಿಸಲು ಮಕ್ಕಳಿಗೆ ಯಾವುದೇ ರಾಸಾಯನಿಕ ಅಥವಾ ಹಾರ್ಮೋನ್ ಗಳನ್ನು ಯಾವುದೇ ರೀತಿಯಲ್ಲಾದರೂ ನೀಡುವುದನ್ನೂ ಇದು ನಿರ್ಬಂಧಿಸಿ ಮಕ್ಕಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.

v. ಪೋಕ್ಸೋ ಕಾಯ್ದೆ , 2012 ರ ಸೆಕ್ಷನ್ -14 ಮತ್ತು ಸೆಕ್ಷನ್ -15 ನ್ನು ಕೂಡಾ ಮಕ್ಕಳನ್ನು ಅಶ್ಲೀಲತೆಗೆ ದೂಡುವ ಹಾವಳಿಯನ್ನು ನಿಯಂತ್ರಿಸಲು ತಿದ್ದುಪಡಿಗೆ ಒಳಪಡಿಸಲು ಪ್ರಸ್ತಾವಿಸಲಾಗಿದೆ. ಮಗುವೊಂದು ಅಶ್ಲೀಲ ಭಂಗಿಯಲ್ಲಿರುವ ವಸ್ತುವನ್ನು/ ಚಿತ್ರವನ್ನು ವರದಿ ಮಾಡುವುದಕ್ಕೆ ಅಥವಾ ಅದನ್ನು ನಾಶ ಮಾಡದೇ ಇರುವುದಕ್ಕೆ, ತೆಗೆದುಹಾಕದೇ ಇರುವುದಕ್ಕೆ ದಂಡವನ್ನು ವಿಧಿಸುವ ಪ್ರಸ್ತಾವ ಇದರಲ್ಲಿದೆ. ಇಂತಹ ಚಿತ್ರಗಳನ್ನು ವರ್ಗಾವಣೆ ಮಾಡುವುದಕ್ಕಾಗಿ, ಪ್ರಚುರಪಡಿಸುತ್ತಿರುವುದಕ್ಕಾಗಿ, ಯಾವುದೇ ರೀತಿಯಲ್ಲಿ ಅದನ್ನು ನಿರ್ವಹಿಸುತ್ತಿದ್ದಲ್ಲಿ ಅಂತಹ ವ್ಯಕ್ತಿಗೆ ಜೈಲು ವಾಸ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ಆದರೆ ನ್ಯಾಯಾಲಯದಲ್ಲಿ ಇದನ್ನು ಸಾಕ್ಷಿಗಾಗಿ ಬಳಸಲು ಸೂಚಿತ ರೀತಿಯಲ್ಲಿ ವರದಿ ಮಾಡಿದ್ದರೆ ಅದಕ್ಕೆ ವಿನಾಯತಿ ಇದೆ.ಮಕ್ಕಳು ಒಳಗೊಂಡ ಯಾವುದೇ ಅಶ್ಲೀಲ ವಸ್ತುಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ದಾಸ್ತಾನು ಮಾಡಿಡುವುದನ್ನು/ ಹೊಂದಿರುವುದನ್ನು ನಿರ್ಬಂಧಿಸಲು ಇಂತಹ ಕೃತ್ಯ ಎಸಗಿದವರಿಗೆ ದಂಡದ ಪ್ರಸ್ತಾವನೆಗಳನ್ನೂ ಹೆಚ್ಚು ಬಿಗಿಗೊಳಿಸಲಾಗಿದೆ.

ಪ್ರಯೋಜನಗಳು:

ಕಾಯ್ದೆಯಲ್ಲಿ ಕಠಿಣವಾದ , ಬಲವಾದ ದಂಡದ ಪ್ರಸ್ತಾವನೆಗಳು ಇರುವುದರಿಂದ ಮಕ್ಕಳ ಲೈಂಗಿಕ ದುರ್ಬಳಕೆಯನ್ನು ಈ ತಿದ್ದುಪಡಿ ತಡೆಯುತ್ತದೆ ಎಂದು ನಿರೀಕ್ಷಿಸಲಾಗಿದೆ. ಒತ್ತಡದ ಸಂಧರ್ಭಗಳಲ್ಲಿ ಅಪಾಯಕ್ಕೀಡಾಗುವ ಸಾಧ್ಯತೆ ಇರುವ ಮಕ್ಕಳನ್ನು ಇದು ರಕ್ಷಿಸುತ್ತದೆ ಮತ್ತು ಅವರ ಸುರಕ್ಷೆ ಹಾಗು ಘನತೆಯನ್ನು ಖಾತ್ರಿಪಡಿಸುತ್ತದೆ. ಈ ತಿದ್ದುಪಡಿಯು ಮಕ್ಕಳ ದುರ್ಬಳಕೆಗೆ ಸಂಬಂಧಿಸಿದ ಅಂಶಗಳ ಬಗ್ಗೆ ಸ್ಪಷ್ಟತೆಯನ್ನು ಸ್ಥಾಪಿಸುತ್ತದೆ ಮತ್ತು ಆ ಮೂಲಕ ಶಿಕ್ಷೆಯನ್ನೂ ಸ್ಪಷ್ಟಪಡಿಸುತ್ತದೆ.