ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಅಂಚೆ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಸಹಕಾರ ಜ್ಞಾಪನಾ ಪತ್ರಕ್ಕೆ ಪೂರ್ವಾನ್ವಯ ಒಪ್ಪಿಗೆ ನೀಡಿದೆ. ಈ ಎಂಒಸಿಯು ಎರಡೂ ರಾಷ್ಟ್ರಗಳ ನಡುವೆ ಅಂಚೆ ಸೇವೆಗಳ ಸುಧಾರಣೆಗೆ ನೆರವಾಗಲಿದೆ.
ಲಾಭಗಳು
ಸಹಕಾರ ಜ್ಞಾಪನಾ ಪತ್ರವು ಭಾರತ ಮತ್ತು ಜಪಾನ್ ನಡುವೆ ಅಂಚೆ ಕ್ಷೇತ್ರದಲ್ಲಿನ ಸೇವೆಗಳಲ್ಲಿ ಸುಧಾರಣೆ ತರಲು ನೆರವಾಗಲಿದೆ.
• ಅಂಚೆ ನೀತಿಗೆ ಸಂಬಂಧಿಸಿದ ಮಾಹಿತಿ ಮತ್ತು ದೃಷ್ಟಿಕೋನಗಳನ್ನು ತಮ್ಮ ಅನುಭವಗಳ ಆಧಾರದ ಮೇಲೆ ಪರಸ್ಪರ ವಿನಿಮಯ ಮಾಡಿಕೊಳ್ಳುವುದು.
• ಸಹಕಾರ ಸಂಬಂಧವನ್ನು ನಿರ್ಮಿಸಲು ಚರ್ಚೆಗಳನ್ನು ಉತ್ತೇಜಿಸುವುದು.
• ಪರಸ್ಪರರು ನಿರ್ಧರಿಸಿದ ನಿರ್ದಿಷ್ಟ ವಿಷಯಗಳನ್ನು ಮುಂದುವರಿಸಿಕೊಂಡು ಹೋಗಲು ಅಂಚೆಸೇವೆಯ ಸಂವಾದವನ್ನು ಸ್ಥಾಪಿಸುವುದು.
ಈ ಎಂಒಸಿಯು ಭಾರತ ಮತ್ತು ಜಪಾನ್ ನಡುವಿನ ಸಹಕಾರ ಉತ್ತೇಜಿಸಲಿದ್ದು ಎರಡೂ ರಾಷ್ಟ್ರಗಳಲ್ಲಿನಅಂಚೆ ಕಾರ್ಯಾಚರಣೆಗಳು ಲಾಭ ಪಡೆಯಲಿವೆ.