Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಂಜಾರ್ ನಲ್ಲಿ ಎಲ್ ಎನ್ ಜಿ ಟರ್ಮಿನಲ್ ಮತ್ತು ಕೊಳವೆ ಮಾರ್ಗ ಯೋಜನೆ ಉದ್ಘಾಟಿಸಿದ ಪ್ರಧಾನಿ ಪ್ರಧಾನಮಂತ್ರಿ


ಶ್ರೀ ನರೇಂದ್ರ ಮೋದಿ ಅವರು, ಅಂಜಾರ್ ನಲ್ಲಿಂದು ಮುಂದ್ರಾ ಎಲ್ ಎನ್ ಜಿ ಘಟಕ, ಅಂಜಾರ್-ಮುಂದ್ರಾ ಕೊಳವೆ ಮಾರ್ಗ ಯೋಜನೆ ಮತ್ತು ಪಲನ್ ಪುರ್ – ಪಾಲಿ –ಬರ್ಮೇರ್ ಕೊಳವೆಮಾರ್ಗ ಯೋಜನೆಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ತಮಗೆ ಕಛ್ ಭಾಗದಿಂದ ಸಿಗುತ್ತಿರುವ ಪ್ರೀತಿ ಅಸಮಾನವಾದುದು ಎಂದರು. ಕಳೆದ 20 ವರ್ಷಗಳಿಂದೀಚೆಗೆ ಕಛ್ ಭಾಗದಲ್ಲಿ ಆಗಿರುವ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಅವರು ಶ್ಲಾಘಿಸಿದರು.

ಎಲ್ ಎನ್ ಜಿ ಘಟಕದ ಉದ್ಘಾಟನಾ ಸಮಾರಂಭ ಇಂದಿನ ಕಾರ್ಯಕ್ರಮದ ಪ್ರಮುಖಾಂಶವಾಗಿದೆ ಎಂದರು. ಮೂರು ಎಲ್ ಎನ್ ಜಿ ಘಟಗಳನ್ನು ಉದ್ಘಾಟಿಸುವ ಅದೃಷ್ಟ ನನಗೆ ದೊರೆತಿದೆ ಎಂದು ಅವರು ಹೇಳಿದರು.

ಗುಜರಾತ್ ಗೆ ಮೊದಲ ಎಲ್ ಎನ್ ಜಿ ಘಟಕ ದೊರೆತಾಗ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದರು ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿದರು. ರಾಜ್ಯ ಇದೀಗ ನಾಲ್ಕನೇ ಎಲ್ ಎನ್ ಜಿ ಘಟಕವನ್ನು ಎದುರು ನೋಡುತ್ತಿದೆ ಎಂದು ಅವರು ಹೇಳಿದರು.

ಗುಜರಾತ್ ಇದೀಗ ಭಾರತದ ಎಲ್ ಎನ್ ಜಿ ತಾಣವಾಗಿ ಅಭಿವೃದ್ಧಿಯಾಗುತ್ತಿದೆ ಎಂದು ಹೇಳಿದ ಪ್ರಧಾನಿ ಅವರು, ಇದು ಪ್ರತಿಯೊಬ್ಬ ಗುಜರಾತಿಯು ಹೆಮ್ಮೆ ಪಡುವಂತಹುದು ಎಂದರು.

ಯಾವುದೇ ದೇಶದ ಪ್ರಗತಿಗೆ ಬಲಿಷ್ಠ ಇಂಧನ ವಲಯದ ಅಗತ್ಯವಿದೆ ಎಂದು ಪ್ರತಿಪಾದಿಸಿದ ಪ್ರಧಾನಮಂತ್ರಿ, ನಾವು ಇಂಧನ ಬಡತನ ಎದುರಿಸುತ್ತಿದ್ದರೆ, ಬಡತನ ನಿರ್ಮೂಲನೆ ಸಾಧ್ಯವಿಲ್ಲ ಎಂದರು.

ಜನರ ನಿರೀಕ್ಷೆಗಳು ಅಥವಾ ಆಶೋತ್ತರಗಳು ಹೆಚ್ಚಾಗುತ್ತಿವೆ ಎಂದ ಪ್ರಧಾನಿ ಅವರು, ಸಾಂಪ್ರದಾಯಿಕ ಮೂಲಸೌಕರ್ಯದ ಜೊತೆಗೆ ಜನರಿಗೆ ಐ-ವೇಸ್, ಅನಿಲ ಗ್ರಿಡ್, ಜಲಗ್ರಿಡ್ ಮತ್ತು ಆಪ್ಟಿಕಲ್ ಫೈಬರ್ ಸಂಪರ್ಕಜಾಲ ಅಗತ್ಯವಿದೆ ಎಂದರು.

ಪ್ರವಾಸೋದ್ಯಮ ವಲಯದಲ್ಲಿ ವಿಫುಲ ಅವಕಾಶಗಳಿವೆ ಎಂದು ಹೇಳಿದ ಪ್ರಧಾನಿ ಅವರು, ಇಡೀ ವಿಶ್ವವೇ ಭಾರತಕ್ಕೆ ಬರಲು ಹಾತೊರೆಯುತ್ತಿದೆ ಎಂದು ಹೇಳಿದರು. ಕಛ್ ನಲ್ಲೂ ನಾವು ಅದನ್ನೇ ನೋಡುತ್ತಿದ್ದೇವೆ. ಇಲ್ಲಿನ ವೈಟ್ ರಣ್ ವಿಶ್ವದ ಎಲ್ಲರ ಕಣ್ ಸೆಳೆದಿದೆ ಎಂದು ಪ್ರಧಾನಿ ತಿಳಿಸಿದರು. ನಾಗರಿಕ ವಿಮಾನಯಾನ ವಲಯವನ್ನು ಜನರ ಕೈಗೆಟಕುವಂತೆ ಮಾಡಲು ಮತ್ತು ಸಂಪರ್ಕ ಸುಧಾರಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ಹಲವು ಕ್ರಮಗಳ ಕುರಿತು ಅವರು ಮಾತನಾಡಿದರು.

ಭಾರತದ ಎಲ್ಲ ಗ್ರಾಮಗಳ ವಿದ್ಯುದೀಕರಣಕ್ಕೆ ಕೈಗೊಂಡಿರುವ ಪ್ರಯತ್ನಗಳನ್ನು ಕುರಿತು ಪ್ರಧಾನಿ ಮಾತನಾಡಿದರು. ಭಾರತದ ಪ್ರತಿಯೊಂದು ಕುಟುಂಬಕ್ಕೂ ವಿದ್ಯುತ್ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಮಾಡಿರುವ ಕೆಲಸವನ್ನು ವಿವರಿಸಿದರು. ಭಾರತದ ಸಾಮಾನ್ಯ ಜನರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆಗಳನ್ನು ತರಲು ಬಯಸಿರುವುದಾಗಿ ಪ್ರಧಾನಿ ಹೇಳಿದರು.