Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಂಧ್ರ ಪ್ರದೇಶದಲ್ಲಿ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಕೇಂದ್ರೀಯ ವಿಶ್ವವಿದ್ಯಾಲಯಗಳ ಕಾಯ್ದೆ, 2009 ತಿದ್ದುಪಡಿಗೆ ಸಂಪುಟದ ಅಂಗೀಕಾರ.


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಆಂಧ್ರ ಪ್ರದೇಶದಲ್ಲಿ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆಗೆ ಅನುಮೋದನೆ ನೀಡಿತು. ಆಂಧ್ರ ಪ್ರದೇಶ ಪುನರ್ಸಂಘಟನಾ ಕಾಯ್ದೆ 2014 ರ (2014 ರ ಕ್ರಮಸಂಖ್ಯೆ 6) ಹದಿಮೂರನೇ ಶೆಡ್ಯೂಲ್ ಅನ್ವಯ ವಿಜಯನಗರಂ ಜಿಲ್ಲೆಯ ರೆಲ್ಲಿ ಗ್ರಾಮದಲ್ಲಿ “ ಆಂಧ್ರ ಪ್ರದೇಶ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯ” ಸ್ಥಾಪನೆಯಾಗಲಿದೆ. ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಸ್ಥಾಪನೆಗಾಗಿ ಮೊದಲ ಹಂತದ ಖರ್ಚು ವೆಚ್ಚದ ಅಂಗವಾಗಿ 420 ಕೋ.ರೂ.ಗಳ ನಿಧಿಯ ಪ್ರಸ್ತಾವನೆಗೂ ಸಂಪುಟವು ಅಂಗೀಕಾರ ನೀಡಿತು.