ಪಿಎಂಇಂಡಿಯಾ

ಜಾಗತಿಕ ಹುಲಿ ದಿನಾಚರಣೆಯ ಸಂದರ್ಭದಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅವರು ಅಖಿಲ ಭಾರತ ಹುಲಿ ಅಂದಾಜು ಸಮೀಕ್ಷೆ – 2018 ರ ನಾಲ್ಕನೇ ಸುತ್ತಿನ ಫಲಿತಾಂಶಗಳನ್ನು ನವದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿ ಬಿಡುಗಡೆ ಮಾಡಿದರು.
ಈ ಸಮೀಕ್ಷೆಯ ಪ್ರಕಾರ, 2018 ರಲ್ಲಿ ಭಾರತದಲ್ಲಿ ಹುಲಿಗಳ ಸಂಖ್ಯೆ 2967 ಕ್ಕೆ ಏರಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿಯವರು, ಭಾರತಕ್ಕೆ ಇದೊಂದು ಐತಿಹಾಸಿಕ ಸಾಧನೆ ಎಂದು ಬಣ್ಣಿಸಿದರು. ಹುಲಿಯನ್ನು ರಕ್ಷಿಸುವ ಭಾರತದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಇದನ್ನು ಸಾಧಿಸಲು ವಿವಿಧ ಪಾಲುದಾರರು ಕೆಲಸ ಮಾಡಿದ ವೇಗ ಮತ್ತು ಸಮರ್ಪಣೆಯನ್ನು ಪ್ರಧಾನಿಯವರು ಶ್ಲಾಘಿಸಿದರು. ಅವರು ಇದನ್ನು ಸಂಕಲ್ಪ್ ಸೇ ಸಿದ್ಧಿಯ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದು ಎಂದು ಬಣ್ಣಿಸಿದರು. ಭಾರತದ ಜನರು ಒಮ್ಮೆ ಏನನ್ನಾದರೂ ಮಾಡಲು ನಿರ್ಧರಿಸಿದರೆ, ಅವರು ಬಯಸಿದ ಫಲಿತಾಂಶವನ್ನು ಪಡೆಯುವುದನ್ನು ತಡೆಯುವ ಯಾವುದೇ ಶಕ್ತಿ ಇಲ್ಲ ಎಂದು ಅವರು ಘೋಷಿಸಿದರು.
ಸುಮಾರು 3000 ಹುಲಿಗಳನ್ನು ಹೊಂದಿರುವ ಭಾರತವು ಇಂದು ಅತಿದೊಡ್ಡ ಮತ್ತು ಸುರಕ್ಷಿತ ಆವಾಸ ಸ್ಥಾನಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ಹೇಳಿದರು.
ಶ್ರೀ ನರೇಂದ್ರ ಮೋದಿ ಅವರು “ಆಯ್ಕೆ” ಬದಲಿಗೆ “ಸಾಮೂಹಿಕತೆ” ಯನ್ನು ಪ್ರತಿಪಾದಿಸಿದರು. ಪರಿಸರ ಸಂರಕ್ಷಣೆಗೆ ವಿಶಾಲ ಆಧಾರಿತ ಮತ್ತು ಸಮಗ್ರ ನೋಟ ಅತ್ಯಗತ್ಯ ಎಂದು ಅವರು ಹೇಳಿದರು. ಅಭಿವೃದ್ಧಿ ಮತ್ತು ಪರಿಸರದ ನಡುವೆ ಆರೋಗ್ಯಕರ ಸಮತೋಲನವನ್ನು ಸಾಧಿಸಲು ಸಾಧ್ಯವಿದೆ ಎಂದು ಅವರು ಹೇಳಿದರು. “ನಮ್ಮ ನೀತಿಗಳಲ್ಲಿ, ನಮ್ಮ ಅರ್ಥಶಾಸ್ತ್ರದಲ್ಲಿ, ಸಂರಕ್ಷಣೆಯ ಬಗ್ಗೆ ನಾವು ಸಂವಾದವನ್ನು ಬದಲಾಯಿಸಬೇಕಾಗಿದೆ” ಎಂದು ಅವರು ಹೇಳಿದರು.
ಭಾರತವು ನಮ್ಮ ನಾಗರಿಕರಿಗಾಗಿ ಹೆಚ್ಚಿನ ಮನೆಗಳನ್ನು ನಿರ್ಮಿಸುತ್ತದೆ ಮತ್ತು ಅದೇ ಸಂದರ್ಭದಲ್ಲಿ ಪ್ರಾಣಿಗಳಿಗೆ ಗುಣಮಟ್ಟದ ಆವಾಸಸ್ಥಾನಗಳನ್ನೂ ಸೃಷ್ಟಿಸುತ್ತದೆ. ಭಾರತವು ರೋಮಾಂಚಕ ಕಡಲ ಆರ್ಥಿಕತೆ ಮತ್ತು ಆರೋಗ್ಯಕರ ಕಡಲ ಪರಿಸರವನ್ನು ಹೊಂದಿದೆ. ಈ ಸಮತೋಲನವು ಬಲಿಷ್ಠ ಮತ್ತು ಅಂತರ್ಗತ ಭಾರತಕ್ಕೆ ಕೊಡುಗೆ ನೀಡುತ್ತದೆ ಎಂದು ಪ್ರಧಾನಿ ಪ್ರತಿಪಾದಿಸಿದರು.
Releasing the results of All India Tiger Estimation. #InternationalTigerDay https://t.co/b73ADzson4
— Narendra Modi (@narendramodi) July 29, 2019
A commitment fulfilled, that too well in advance!
— Narendra Modi (@narendramodi) July 29, 2019
It was decided to work towards doubling the tiger population by 2022 but India achieved this 4 years in advance!
India is proud to be home to almost 75% of the global tiger population. #InternationalTigerDay pic.twitter.com/t98f2RICE5
Development and the environment are not mutually exclusive.
— Narendra Modi (@narendramodi) July 29, 2019
India will progress economically and take the lead in protecting the environment. #InternationalTigerDay pic.twitter.com/RjcBMGpFvh
कभी ‘एक था टाइगर’ का डर था, लेकिन आज यह यात्रा ‘टाइगर जिंदा है’ तक पहुंच चुकी है।
— Narendra Modi (@narendramodi) July 29, 2019
लेकिन ‘टाइगर जिंदा है’ कहना ही पर्याप्त नहीं है, हमें उनकी संख्या बढ़ाने के लिए अनुकूल वातावरण भी तैयार करना है। #InternationalTigerDay pic.twitter.com/bERsYeM62v
The results of the just declared tiger census would make every Indian, every nature lover happy.
— PMO India (@PMOIndia) July 29, 2019
Nine long years ago, it was decided in St. Petersburg that the target of doubling the tiger population would be 2022. We in India completed this target four years early: PM
आज हम गर्व के साथ कह सकते हैं कि भारत करीब 3 हज़ार टाइगर्स के साथ दुनिया के सबसे बड़े और सबसे सुरक्षित Habitats में से एक है: PM
— PMO India (@PMOIndia) July 29, 2019
India will build more homes for our citizens and that the same time create quality habitats for animals.
— PMO India (@PMOIndia) July 29, 2019
India will have a vibrant marine economy and a healthier marine ecology.
This balance is what will contribute to a strong and inclusive India: PM
मैं इस क्षेत्र से जुड़े लोगों से यही कहूंगा कि जो कहानी ‘एक था टाइगर’ के साथ शुरू होकर ‘टाइगर जिंदा है’ तक पहुंची है, वो वहीं न रुके। केवल टाइगर जिंदा है, से काम नहीं चलेगा। Tiger Conservation से जुड़े जो प्रयास हैं उनका और विस्तार होना चाहिए, उनकी गति और तेज की जानी चाहिए: PM
— PMO India (@PMOIndia) July 29, 2019