Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಟಲ್ ಜಲ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿಯವರ ಭಾಷಣ


ನನ್ನ ಕ್ಯಾಬಿನೆಟ್ ಸಹೋದ್ಯೋಗಿಗಳಾದ ಶ್ರೀ ರಾಜನಾಥ್ ಸಿಂಗ್ ಜಿಶ್ರೀ ಗಜೇಂದ್ರ ಶೇಖಾವತ್ ಜಿಇತರ ಗಣ್ಯರೇ ಮತ್ತು ಇಲ್ಲಿ ಹಾಜರಿರುವ   ಮಹಿಳೆಯರೇ ಮತ್ತು ಮಹನೀಯರೇ  !

ದೇಶಾದ್ಯಂತ ಇರುವ ಅನೇಕ ಸಾಮಾನ್ಯ ಸೇವಾ ಕೇಂದ್ರಗಳಿಂದ ಸಾವಿರಾರು ಜನರುವಿಶೇಷವಾಗಿ ಹಳ್ಳಿಗಳ ಸರ್ಪಂಚರು ಸಹ  ಸಮಯದಲ್ಲಿ ನಮ್ಮೊಂದಿಗೆ ಇದ್ದಾರೆ.

ಅಲ್ಲದೆಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳಾದ  ಜೈರಾಮ್ ಠಾಕೂರ್ ಜಿಅರಣ್ಯ ಸಚಿವರಾದ ಶ್ರೀ ಗೋವಿಂದ್ ಸಿಂಗ್ ಠಾಕೂರ್ ಜಿಸಂಸದರಾದ ರಾಮ್ ಸ್ವರೂಪ್ ಶರ್ಮಾ ಕೂಡ  ತಂತ್ರಜ್ಞಾನದ ಮೂಲಕ  ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಭಾಗವಹಿಸುತ್ತಿದ್ದಾರೆ.

ಅಟಲ್ ಜಿ ಯವರ ಪ್ರೀತಿಯ ಹಳ್ಳಿಯ ಕೆಲವು ಜನರು ಸಹ ಈಗ ಸಂಪರ್ಕದಲ್ಲಿದ್ದಾರೆ.

ಎಲ್ಲರಿಗೂ ನಮಸ್ಕಾರ ! ನಿಮ್ಮೆಗೆಲ್ಲರಿಗೂ ಸುಸ್ವಾಗತ.

ಇಂದು ವೇದಿಕೆಯಲ್ಲಿಮೊದಲನೆಯದಾಗಿನಾನು ಭಾರತೀಯರಿಗೆ  ಮತ್ತು ವಿಶ್ವದ ಭಾಂದವರಿಗೆಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ.

ಮೆರ್ರಿ ಕ್ರಿಸ್ಮಸ್ !!!

ಇಂದು ಭಾರತದ ಎರಡು ಅಮೂಲ್ಯ ಮುತ್ತುಗಳ ಜನ್ಮದಿನಒಂದು ಪೂಜ್ಯ ಅಟಲ್ ಜಿಯವರದು ಮತ್ತೊಂದು ಮಹಾಮಣ ಮದನ್ ಮೋಹನ್ ಮಾಳವಿಯಾ ಜಿಯವರದು.

ನಾನು ಅವರ ಪಾದಾರವಿಂದಗಳಿಗೆ ನಮಸ್ಕರಿಸುತ್ತೇನೆದೇಶದ ಪರವಾಗಿ ಅವರಿಗೆ ಗೌರವ ಸಲ್ಲಿಸುತ್ತೇನೆ.

ಪ್ರಿನಿ ಯಲ್ಲಿ ಅಟಲ್ ಜಿ ಅವರ ನೆನಪಿಗಾಗಿ ಇಂದು ಹವನ ನಡೆದಿದೆ ಎಂದು ನನಗೆ ತಿಳಿಸಲಾಗಿದೆಇನ್ನೂ ಕೆಲವು ಕಾರ್ಯಕ್ರಮಗಳು ನಡೆದಿವೆ.

 

ಸ್ನೇಹಿತರೇ,

ಇಂದು ದೇಶಕ್ಕೆ ಬಹಳ ಮುಖ್ಯವಾದ ಒಂದು ಪ್ರಮುಖ ಯೋಜನೆಯನ್ನು ಅಟಲ್ ಜಿ ಯವರಿಗೆ ಸಮರ್ಪಿಸಲಾಗಿದೆ.

ಹಿಮಾಚಲ ಪ್ರದೇಶವನ್ನು ಲಡಾಖ್ ಮತ್ತು ಜಮ್ಮು ಕಾಶ್ಮೀರದೊಂದಿಗೆ ಜೋಡಿಸುವ ಮತ್ತು ಮನಾಲಿಯನ್ನು ಲೇಹ್ನೊಂದಿಗೆ ಜೋಡಿಸುವ ರೋಹ್ಟಾಂಗ್ ಸುರಂಗಮಾರ್ಗವನ್ನು ಇನ್ನು ಮುಂದೆ ಅಟಲ್ ಟನಲ್ ಎಂದು ಕರೆಯಲಾಗುತ್ತದೆ.

ಅಟಲ್ ಜಿಯವರ ಜನ್ಮ ದಿನಾಚರಣೆಯಂದು ಹಿಮಾಚಲ ಮತ್ತು ಪ್ರಿನಿ ಜನರಿಗೆ ಇದು ಸರ್ಕಾರದ ಸಣ್ಣ ಕೊಡುಗೆಯಾಗಿದೆ.

ಅಟಲ್ ಜಿ ಯವರು  ಸುರಂಗಮಾರ್ಗದ ಮಹತ್ವವನ್ನು ಅರ್ಥಮಾಡಿಕೊಂಡಿದ್ದರು ಮತ್ತು ಅದರ ನಿರ್ಮಾಣಕ್ಕೆ ನಾಂದಿ ಹಾಡಿದರು.

ಅಟಲ್ ಜಿಯವರ ಹೆಸರನ್ನು  ಸುರಂಗಮಾರ್ಗಕ್ಕೆ ಇಡುವುದು ಹಿಮಾಚಲ ಪ್ರದೇಶದ ಮೇಲಿನ ಅವರ ಪ್ರೀತಿಯ ಸಂಕೇತ ಮತ್ತು ಅವರ ಮೇಲಿರುವ  ನಿಮ್ಮ ಗೌರವ ಮತ್ತು ಅಪಾರ ಪ್ರೀತಿಯ ಸಂಕೇತವಾಗಿದೆ.

 

ಸ್ನೇಹಿತರೇ,

ಅಟಲ್ ಜಿ ಅವರಿಗೆ ನೀರಿನ ವಿಷಯ ಬಹಳ ಮುಖ್ಯವಾಗಿತ್ತು ಮತ್ತು ಅದು ಅವರ ಹೃದಯಕ್ಕೆ ಬಹಳ ಹತ್ತಿರವಾಗಿತ್ತು.

ನೀರಿನ ಬಗ್ಗೆ ಇದ್ದ ಅವರ ದೂರದೃಷ್ಟಿ ಇಂದಿಗೂ ನಮಗೆ ಸ್ಫೂರ್ತಿ ನೀಡುತ್ತದೆ.

ಅದು ಅಟಲ್ ಜಲ ಯೋಜನೆ ಆಗಿರಲಿ ಅಥವಾ ಜಲ್ ಜೀವನ್ ಮಿಷನ್ಗೆ ಸಂಬಂಧಿಸಿದ ಮಾರ್ಗಸೂಚಿಗಳಾಗಲಿ,  ಇವುಗಳು 2024  ವೇಳೆಗೆ ದೇಶದ ಪ್ರತಿಯೊಂದು ಮನೆಗೂ ನೀರು ತಲುಪಿಸುವ ಸಂಕಲ್ಪವನ್ನು ಸಾಬೀತುಪಡಿಸುವ ಪ್ರಮುಖ ಹಂತಗಳಾಗಿವೆ.

 

ಸ್ನೇಹಿತರೇ,

ಮನೆಕೃಷಿ ಮತ್ತು ಕೈಗಾರಿಕೆ – ಎಲ್ಲದರ ಮೇಲೆ ಪರಿಣಾಮ ಬೀರುವುದು  ನೀರು.

ಮತ್ತು ನಮ್ಮ ನೀರಿನ ಮೂಲಗಳ ಸ್ಥಿತಿಯನ್ನು ಯಾರಿಂದಲೂ ಮರೆಮಾಚಲಾಗಿಲ್ಲ.

 ನೀರಿನ ಬಿಕ್ಕಟ್ಟು ಕುಟುಂಬ ಮತ್ತು ನಾಗರಿಕನಾಗಿ ಮಾತ್ರವಲ್ಲದೆ ದೇಶಕ್ಕೂ ನಮಗೆ ಆತಂಕಕಾರಿಯಾಗಿದೆ ಏಕೆಂದರೆ ಅದು ಅಭಿವೃದ್ಧಿಯ ಮೇಲೂ ಪರಿಣಾಮ ಬೀರುತ್ತದೆ.

ನೀರಿನ ಬಿಕ್ಕಟ್ಟಿನಿಂದ ಉಂಟಾಗುವ ಪ್ರತಿಯೊಂದು ಪರಿಸ್ಥಿತಿಯನ್ನು ಎದುರಿಸಲು ನಾವು ಹೊಸ ಭಾರತವನ್ನು ಸಿದ್ಧಪಡಿಸಬೇಕಾಗಿದೆ.

ಇದಕ್ಕಾಗಿ ನಾವು ಐದು ಹಂತಗಳಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ.

ಮೊದಲಿಗೆನಾವು ನೀರಿಗೆ ಸಂಬಂಧಿಸಿದ ಇಲಾಖೆಗಳ ಸೈಲೋಗಳನ್ನುಕಾರ್ಯನಿರ್ವಹಣೆಯನ್ನು ಬದಲಿಸಿದ್ದೇವೆ . ಅಂದರೆ ಎಲ್ಲಾ  ಮಾಹಿತಿಯನ್ನು ಕೇಂದ್ರದಿಂದ  ಹಿಡಿದು ತಳಸ್ತರದವರೆಗೆ ಹಂಚುವಂಥ ವ್ಯವಸ್ಥೆಯನ್ನು ಮಾಡಿದ್ದೇವೆ

ಎರಡನೆಯದಾಗಿಭಾರತದಂತಹ ವೈವಿಧ್ಯಮಯ ದೇಶದಲ್ಲಿಪ್ರತಿಯೊಂದು ಪ್ರದೇಶದ ನೆಲದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಲು ನಾವು ಒತ್ತು ನೀಡಿದ್ದೇವೆ.

ಮೂರನೆಯದಾಗಿಲಭ್ಯವಿರುವ ನೀರಿನ ಸರಿಯಾದ ಸಂಗ್ರಹಣೆ ಮತ್ತು ವಿತರಣೆಯ ಬಗ್ಗೆ ಗಮನ ನೀಡಲಾಗುತ್ತದೆ.

ನಾಲ್ಕನೆಯದು –  ನೀರಿನ ಪ್ರತಿ ಹನಿಯ ಬಳಕೆ ಮತ್ತು ನೀರಿನ ಮರುಬಳಕೆಗೆ ಸಂಬಂಧಿಸಿದ ಯೋಜನೆಗಳಿಗೆ ಆದ್ಯತೆ ನೀಡುವುದು.

ಐದನೆಯದು  ಮತ್ತು ಪ್ರಮುಖವಾದದ್ದು  ನೀರಿನ ಬಗ್ಗೆ ಅರಿವು ಮತ್ತು ಸಾರ್ವಜನಿಕರ ಭಾಗವಹಿಸುವಿಕೆ.

 

ಸ್ನೇಹಿತರೇ,

ಚುನಾವಣೆಗೆ ಮೊದಲುನಾವು ನೀರಿಗಾಗಿ ಮೀಸಲಾದ ಜಲಶಕ್ತಿ ಸಚಿವಾಲಯದ ಬಗ್ಗೆ ಮಾತನಾಡುವಾಗಅದೂ ಒಂದು  ಎಂಥ ಭರವಸೆ ಎಂದು ಕೆಲವರು ಯೋಚಿಸಿದ್ದರು.

ಆದರೆ ಕೆಲವೇ ಕೆಲವರು ಅದರ ಅಗತ್ಯವನ್ನು ಮನಗಂಡರು.

 

ಸ್ನೇಹಿತರೇ,

ಇತ್ತೀಚಿನ ವರ್ಷಗಳಲ್ಲಿನಾವು ನೀರಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ನೋಡಿದ್ದೇವೆ,  ಅದು ಸಂಪನ್ಮೂಲಗಳಿರಬಹುದುಸಂರಕ್ಷಣೆಯಾಗಿರಬಹುದುನಿರ್ವಹಣೆಯಾಗಿರಬಹುದು –   ಎಲ್ಲಾ ಕಾರ್ಯಾಚರಣೆಗಳು ಮತ್ತು ಕಾರ್ಯಗಳನ್ನು ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿ ನಿರ್ವಹಿಸಲಾಗುತ್ತಿತ್ತು.

ಇದು ಒಂದು ರೀತಿಯಲ್ಲಿನಾನು ಹೆಚ್ಚಾಗಿ ಮಾತನಾಡುವ ಸೈಲೋಗಳ ಅತ್ಯುತ್ತಮ ಉದಾಹರಣೆಯಾಗಿದೆ.

ಇದರಿಂದಾಗಿಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳ ನಡುವೆ ಮತ್ತು ಕೆಲವೊಮ್ಮೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಆಗಾಗ್ಗೆ ವಿವಾದಗಳು ಮತ್ತು ಸಮಸ್ಯೆಗಳು ಉಂಟಾಗುತ್ತಿದ್ದವು.

ಇದರ ಅನಾನುಕೂಲವೆಂದರೆ ಹಿಂದಿನ ಸರ್ಕಾರಗಳ ಆಡಳಿತದ ಸಮಯದಲ್ಲಿ ನೀರಿನಂತಹ ಮೂಲಭೂತ ಅವಶ್ಯಕತೆಗಳಿಗಾಗಿ  ಸಮಗ್ರವಾದ ವಿಧಾನವನ್ನು ಅನುಸರಿಸಲಾಗುತ್ತಿರಲಿಲ್ಲ.

ಜಲ ಶಕ್ತಿ ಸಚಿವಾಲಯವು  ವಿಭಾಗೀಯ ನೋಟದಿಂದ ನೀರಿನ ಸಮಸ್ಯೆಯನ್ನು ಹೊರತೆಗೆದು ಸಮಗ್ರ ನೋಟಕ್ಕೆ ಒತ್ತು ನೀಡಿತು.

 ಮಾನ್ಸೂನಿನಲ್ಲಿಜನತೆಯು ಮತ್ತು ಜಲಶಕ್ತಿ ಸಚಿವಾಲಯವು ನೀರಿನ ಸಂರಕ್ಷಣೆಗಾಗಿ ಎಷ್ಟು ವ್ಯಾಪಕ ಪ್ರಯತ್ನಗಳನ್ನು ಮಾಡಿದೆ ಎನ್ನುವುದನ್ನು ನಾವು ನೋಡಿದ್ದೇವೆ.

 

ಸ್ನೇಹಿತರೇ,

ನಾನು ಮಾತನಾಡುವ ಪ್ರಾದೇಶಿಕ ವೈವಿಧ್ಯತೆಯು ನೀರಿನ ಸಂಬಂಧಿತ ಯೋಜನೆಗಳಿಗೆ ಬಹಳ ಮುಖ್ಯವಾಗಿದೆ.

ಇಲ್ಲಿಪ್ರತಿ ಮೈಲಿಗೂ ನೀರು ಬದಲಾಗುತ್ತದೆ ಎಂದು ಹೇಳಲಾಗುತ್ತದೆ.

ಈಗ  ಬಹಳ ವೈವಿಧ್ಯಮಯವಾದವಿಶಾಲವಾದ ದೇಶದಲ್ಲಿನೀರಿನಂತಹ ವಿಷಯವನ್ನು ಪರಿಗಣಿಸಿನಾವು ಪ್ರತಿ ಪ್ರದೇಶದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯಬೇಕಾಗಿದೆ.

 ಚಿಂತನೆಯು ಅಟಲ್ ಜಲ ಯೋಜನೆಯ ಅಡಿಪಾಯವಾಗಿದೆ.

ಅಂದರೆಒಂದು ಕಡೆ ಜಲ್ ಜೀವನ್ ಮಿಷನ್ ಇದೆಇದು ಪ್ರತಿ ಮನೆಗೆ ಕೊಳವೆ ಮೂಲಕ ನೀರನ್ನು ಸಾಗಿಸುತ್ತದೆಮತ್ತೊಂದೆಡೆ ಅಟಲ್ ಜಲ ಯೋಜನೆ ಇದೆಇದು ಅಂತರ್ಜಲ ಮಟ್ಟ ತುಂಬಾ ಕಡಿಮೆ ಇರುವ ಪ್ರದೇಶಗಳ ಬಗ್ಗೆ ವಿಶೇಷ ಗಮನವನ್ನು ಹರಿಸುತ್ತದೆ.

 

ಏಳು ರಾಜ್ಯಗಳಲ್ಲಿ ಅಂದರೆ ಮಹಾರಾಷ್ಟ್ರಹರಿಯಾಣಕರ್ನಾಟಕರಾಜಸ್ಥಾನಉತ್ತರ ಪ್ರದೇಶ,  ಮಧ್ಯ ಪ್ರದೇಶ ಮತ್ತು ಗುಜರಾತ್ನಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವಲ್ಲಿ  ಯೋಜನೆ  ಬಹು ಉಪಯೋಗಿಯಾಗಿದೆ.

 ಏಳು ರಾಜ್ಯಗಳ 78 ಜಿಲ್ಲೆಗಳಲ್ಲಿ, 8,300 ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಅಂತರ್ಜಲ ಮಟ್ಟವು ತೀರ ಕೆಳಮಟ್ಟದಲ್ಲಿದ್ದು ಗಂಭೀರ ಸ್ಥಿತಿಯಲ್ಲಿದೆ.

ಈಗ ನಮ್ಮೊಂದಿಗೆ ನೇರ ಸಂಪರ್ಕದಲ್ಲಿರುವ ಜನರಿಗೆ ಹೇಗೆ   ಕಷ್ಟವನ್ನು ಸಹಿಸಿಕೊಂಡಿರುಬೇಕು ಎನ್ನುವುದು ಚೆನ್ನಾಗಿ ತಿಳಿದಿದೆ

 ಪ್ರದೇಶಗಳ ರೈತರುಜಾನುವಾರು ಸಾಕಣೆದಾರರುಸಣ್ಣ ಉದ್ಯಮಿಗಳು ಮತ್ತು ಮಹಿಳೆಯರ ಸಮಸ್ಯೆಗಳು ಎಲ್ಲರಿಗೂ ತಿಳಿದ ವಿಷಯವಾಗಿದೆ

 

ಸ್ನೇಹಿತರೇ,

ಜನರು  ಸಮಸ್ಯೆಗಳನ್ನು ತೊಡೆದುಹಾಕಲು ಮತ್ತು ನೀರಿನ ಮಟ್ಟವನ್ನು ಸುಧಾರಿಸಲುನಾವು ಜಾಗೃತಿ ಅಭಿಯಾನಗಳನ್ನು ನಡೆಸಬೇಕಾಗಿದೆ ಮತ್ತು ಕೃತಕ ಬುದ್ಧಿಮತ್ತೆಅಂತರ್ಜಾಲದಲ್ಲಿ ವಿಷಯ ಮತ್ತು ಅಗತ್ಯ ವಾದ ದತ್ತಾಂಶ ಮಾಹಿತಿಯನ್ನು ಸೇರಿಸಬೇಕಾಗಿದೆ.

ಮತ್ತು ಬಹಳ ಮುಖ್ಯವಾಗಿಪ್ರತಿ ಹನಿ ನೀರನ್ನು ನ್ಯಾಯಯುತವಾಗಿ ಬಳಸುವುದಕ್ಕಾಗಿನೀರಿನ ಸಂರಕ್ಷಣೆ ಮತ್ತು ಉತ್ತೇಜನಕ್ಕೆ ನಾವು ಒತ್ತು ನೀಡಬೇಕಾಗಿದೆ.

ಇದು ಹೇಗೆ ಸಾಧ್ಯ?

 ತಂಡವನ್ನು ಯಾರು ಮುನ್ನಡೆಸುತ್ತಾರೆ?

ಅಧಿಕಾರಿಗಳೇ?  ನೌಕರರೇ?  ಇಲಾಖಾಧಿಕಾರಿಳೇ?

ಇಲ್ಲ.

ಇದಕ್ಕಾಗಿನಾವು ನೀರಿನ ಬಿಕ್ಕಟ್ಟಿನಿಂದ ಬಳಲುತ್ತಿರುವ ಜನರ ಬಳಿಗೆ ಹೋಗಬೇಕು ಮತ್ತು  ನೀರನ್ನು ಬಳಸುವವರನ್ನು ಸೇರಿಸಿಕೊಳ್ಳಬೇಕು.

ಇದಕ್ಕಾಗಿನಾವು ಮನೆಯ ನಿಜವಾದ ಮುಖ್ಯಸ್ಥರಾದ ನಮ್ಮ ತಾಯಂದಿರು ಮತ್ತು ಸಹೋದರಿಯರ ಬಳಿಗೆ ಹೋಗಬೇಕಾಗಿದೆಮನೆಗಳಲ್ಲಿನ ನೀರನ್ನು ಅಗತ್ಯಕ್ಕೆ ತಕ್ಕಂತೆ ಬಳಸಬೇಕುನೀರನ್ನು ಸಾಧ್ಯವಾದಷ್ಟು ಮರುಬಳಕೆ ಮಾಡಬೇಕು ಎನ್ನುವ  ಶಿಸ್ತನ್ನು ಮನೆಗಳೊಳಗೆ ತರಬೇಕಾಗಿದೆ.

ಇದಕ್ಕಾಗಿ ನಾವೂ ರೈತರ ಬಳಿಗೆ ಹೋಗಬೇಕಾಗಿದೆ.

ನಮ್ಮ ಕೃಷಿಯ ನೀರಾವರಿಯು ಅಂತರ್ಜಲದ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಆದರೆ ನಮ್ಮ ಹಳೆಯ ನೀರಾವರಿ ವಿಧಾನಗಳು ಬಹಳಷ್ಟು ನೀರನ್ನು ವ್ಯರ್ಥ ಮಾಡುತ್ತವೆ ಎನ್ನುವುದೂ ನಿಜ.

ಇದಲ್ಲದೆಕಬ್ಬು ಮತ್ತು ಭತ್ತದಂತಹ ಹಲವಾರು ಬೆಳೆಗಳಿಗೆ ಹೆಚ್ಚು ನೀರಿನ ಅಗತ್ಯವಿರುತ್ತದೆ.

 ರೀತಿಯ ಬೆಳೆಗಳನ್ನು ಬೆಳೆಯುವ ಪ್ರದೇಶಗಳಲ್ಲಿನ ಅಂತರ್ಜಲ ಮಟ್ಟವು ವೇಗವಾಗಿ ಕಡಿಮೆಯಾಗುತ್ತಿದೆ ಎಂದು ಆಗಾಗ್ಗೆ ಕಂಡುಬರುತ್ತದೆ.

 ಪರಿಸ್ಥಿತಿಯನ್ನು ಬದಲಾಯಿಸಲುಮಳೆನೀರು ಕೊಯ್ಲುಪರ್ಯಾಯ ಬೆಳೆಗಳ ಬಗ್ಗೆ ನಾವು ರೈತರಿಗೆ ಅರಿವು ಮೂಡಿಸಬೇಕು ಮತ್ತು ನಾವು ಹೆಚ್ಚು ಹೆಚ್ಚು ಸೂಕ್ಷ್ಮ ನೀರಾವರಿಯ ಕಡೆಗೆ ಸಾಗಬೇಕುನಾವು ‘ಪರ್ ಡ್ರಾಪ್ ಮೋರ್ ಕ್ರಾಪ್  – ಪ್ರತಿ ಹನಿಗೆ ಹೆಚ್ಚು ಬೆಳೆ’ ಯನ್ನು ಉತ್ತೇಜಿಸಬೇಕು.

 

ಸ್ನೇಹಿತರೇ,

ನಾವು ಮನೆಗಾಗಿ ಏನನ್ನಾದರೂ ಖರ್ಚು ಮಾಡಿದಾಗನಾವು ನಮ್ಮ ಆದಾಯ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಅನ್ನು ಸಹ ನೋಡುತ್ತೇವೆ ಮತ್ತು ನಮ್ಮ ಬಜೆಟ್ ಅನ್ನು ಸಿದ್ಧಪಡಿಸುತ್ತೇವೆಅದೇ ರೀತಿನೀರಿನ ಕೊರತೆಯಿರುವಲ್ಲಿನೀರಿನ ಬಜೆಟ್ ಮಾಡಲು ಮತ್ತು ಅದರ ಆಧಾರದ ಮೇಲೆ ಬೆಳೆಗಳನ್ನು ಬೆಳೆಯಲು ನಾವು ಗ್ರಾಮದ ಜನರನ್ನು ಪ್ರೋತ್ಸಾಹಿಸಬೇಕು.

ಮತ್ತು ಹಳ್ಳಿಗಳಿಂದ  ಕಾರ್ಯಕ್ರಮಕ್ಕೆ ಬಂದವರಿಗೆ ಮತ್ತು ನಮ್ಮೊಂದಿಗೆ ಈಗ ನೇರ ಸಂಪರ್ಕದಲ್ಲಿರುವವರಿಗೆ ಹೇಳಲು ಬಯಸುವುದೇನೆಂದರೆ ಅಟಲ್ ಜಲ ಯೋಜನೆಯಲ್ಲಿ ನಿಮಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ.

ನಿಮ್ಮ ಮಾಡುವ ಒಳ್ಳೆಯ ಕೆಲಸವು ಹಳ್ಳಿಗಳಿಗೆ ಪ್ರಯೋಜನವಾಗುವುದಲ್ಲದೆಗ್ರಾಮ ಪಂಚಾಯಿತಿಗಳಿಗೂ ಸಹ ಅನುಕೂಲವಾಗುತ್ತದೆ.

ಅಟಲ್ ಜಲ ಯೋಜನೆಯಡಿ ಒಂದು ನಿಬಂಧನೆ ಇದೆಅದರ ಪ್ರಕಾರ ನೀರಿಗೆ ಸಂಬಂಧಿಸಿದಂತೆ  ಅತ್ಯುತ್ತಮ ಕೆಲಸ ಮಾಡುವ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಹಣವನ್ನು ನೀಡಲಾಗುವುದು ಇದರಿಂದಾಗಿ  ಅವರು ಹೆಚ್ಚು  ಉತ್ತಮ ಕೆಲಸಗಳನ್ನು ಮಾಡಲು ಪ್ರೋತ್ಸಾಹ ಸಿಗಬಹುದು.

 

ನನ್ನ ಸರ್ಪಂಚ್ ಸಹೋದರ ಸಹೋದರಿಯರೇ,

ದೇಶದ ಪ್ರತಿಯೊಂದು ಮನೆಗೂ ನೀರು ಲಭ್ಯವಾಗುವಂತೆ ಮಾಡಲು ನಿಮ್ಮ ಶ್ರಮ ಮತ್ತು ಭಾಗವಹಿಸುವಿಕೆ ಬಹಳ ಮುಖ್ಯವಾಗಿದೆ.

ನಿಮ್ಮ ಸಾಧನೆಯು ಅಟಲ್ ಜಲ ಯೋಜನೆಯನ್ನು ಯಶಸ್ವಿಗೊಳಿಸುವುದಲ್ಲದೆ ಜಲ ಜೀವನ್ ಮಿಷನ್ ಅನ್ನು ಬಲಪಡಿಸುತ್ತದೆ ಎಂದು ಅಟಲ್ ಜಲ ಯೋಜನೆಗೆ ಸಂಬಂಧಿಸಿದ ಎಲ್ಲಾ 8,300 ಸರ್ಪಂಚ ರಿಗೆ ನಾನು ಹೇಳಲು ಬಯಸುತ್ತೇನೆ.

ಹೇಗೆ?

ಇದನ್ನು ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ.

ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸಹ ಇದು ತಿಳಿಯುವುದು ಮುಖ್ಯವಾಗಿದೆ.

 

ಸ್ನೇಹಿತರೇ,

ಸ್ವಾತಂತ್ರ್ಯದ ಬಂದ ಹಲವು ವರ್ಷಗಳ ನಂತರವೂ ನೀರು ಇಂದು ಪೈಪ್ ಮೂಲಕ ದೇಶದ ಕೇವಲ 3 ಕೋಟಿ ಮನೆಗಳನ್ನು ಮಾತ್ರ ತಲುಪುತ್ತದೆ.

ಸ್ವಲ್ಪ ಊಹಿಸಿಕೊಳ್ಳಿ !

18 ಕೋಟಿ ಗ್ರಾಮೀಣ ಕುಟುಂಬಗಳಲ್ಲಿ ಕೇವಲ 3 ಕೋಟಿ ಕುಟುಂಬಗಳು ಮಾತ್ರ!

70 ವರ್ಷಗಳಲ್ಲಿ ಕೇವಲ ಇಷ್ಟನ್ನೇ  ಸಾಧಿಸಲಾಗಿರುವುದು.

ಈಗಮುಂದಿನ ಐದು ವರ್ಷಗಳಲ್ಲಿ ನಾವು 15 ಕೋಟಿ ಮನೆಗಳಿಗೆ ಕೊಳವೆಗಳ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಿನ ಐದು ವರ್ಷಗಳಲ್ಲಿ3.5 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಇದಕ್ಕಾಗಿ ಖರ್ಚು ಮಾಡಲಿವೆ.

ಖಂಡಿತವಾಗಿಯೂ  ಸಂಕಲ್ಪ ತುಂಬಾ ದೊಡ್ಡದಾಗಿದೆಆದರೆ ನಾವು ಯಶಸ್ವಿಯಾಗುವುದನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲನಾವು ಯಶಸ್ವಿಯಾಗಲೇಬೇಕು.

ಇಂತಹ ಪರಿಸ್ಥಿತಿಯಲ್ಲಿನಮ್ಮ ಬದ್ಧತೆಯನ್ನು ತೋರಿಸುವುದು ಬಹಳ ಮುಖ್ಯಇದು ಪ್ರತಿ ಹಳ್ಳಿಯಲ್ಲೂ ಕಾಣಬೇಕು.

ಇಂದು ಬಿಡುಗಡೆಯಾದ ಜಲ ಜೀವನ್ ಮಿಷನ್ ಮಾರ್ಗಸೂಚಿಗಳು ನಮ್ಮ ಪ್ರಯತ್ನಕ್ಕೆ ಸಹಾಯ ಮಾಡಲಿವೆ.

 

ಸ್ನೇಹಿತರೇ,

ಜಲ ಜೀವನ್ ಮಿಷನ್ ಕೇವಲ ಪ್ರತಿ ಮನೆಗೆ ಶುದ್ಧ ನೀರನ್ನು ಒದಗಿಸುವುದಲ್ಲ.

 ಮಿಷನ್  ಉದ್ದೇಶವು ನಮ್ಮ ತಾಯಂದಿರು ಮತ್ತು ಸಹೋದರಿಯರು ಹೆಚ್ಚಿನ ದೂರದಿಂದ ನೀರು ತರುವುದನ್ನು ನಿಲ್ಲಿಸುವುದುಅವರು ಗೌರವ ಮತ್ತು ಘನತೆಯಿಂದ ಬದುಕುವುದು ಮತ್ತು ಅವರ ಜೀವನವು ಸುಲಭವಾಗಿರುವಂತೆ  ಇರುವುದನ್ನು ಸಹ  ಖಚಿತಪಡಿಸುವುದು.

ಇಂದಿಗೂ ನಾನು ಒಬ್ಬ ವಯಸ್ಸಾದ ತಾಯಿಯನ್ನು ನೀರಿಗಾಗಿ ಅಲೆದಾಡುವುದನ್ನು ನೋಡಿದಾಗಸಹೋದರಿಯೊಬ್ಬಳು ತಲೆಯ ಮೇಲೆ ಬಿಂದಿಗೆಯನ್ನು ಇಟ್ಟುಕೊಂಡು ಮೈಲುಗಟ್ಟಲೆ ನಡೆದುಕೊಂಡು ಹೋಗುವುದನ್ನು ನೋಡಿದಾಗನನ್ನ ಬಾಲ್ಯದ ಅನೇಕ ನೆನಪುಗಳು ಮರುಕಳಿಸುತ್ತವೆ.

ನೀರಿಗಾಗಿ ಅಲೆದಾಡುವ ತೊಂದರೆಯಿಂದ ದೇಶಾದ್ಯಂತ ಇಂತಹ ಕೋಟಿ ಕೋಟಿ ಸಹೋದರಿಯರನ್ನು ಮುಕ್ತಗೊಳಿಸುವ ಸಮಯ ಬಂದಿದೆ.

ನಾವು ಪ್ರತಿ ಮನೆಯಲ್ಲಿ ಶೌಚಾಲಯಗಳನ್ನು ಒದಗಿಸಿದಂತೆಯೇನಾವು ಪ್ರತಿ ಮನೆಯಲ್ಲಿಯೂ ನೀರನ್ನು ಪೂರೈಸುತ್ತೇವೆ.  ಹಾಗೆಂದು ನಾವು  ಪ್ರತಿಜ್ಞೆಯನ್ನು ತೆಗೆದುಕೊಂಡಿದ್ದೇವೆ.

ನಾವು ನಿರ್ಣಯವನ್ನು ತೆಗೆದುಕೊಂಡ ಕಾರಣನಾವು ಅದನ್ನು ಸಾಧಿಸುತ್ತೇವೆ ಮತ್ತು ಅದನ್ನು ಸಾಬೀತುಪಡಿಸುತ್ತೇವೆ.

 

ಸ್ನೇಹಿತರೇ,

ಗ್ರಾಮಗಳ ಭಾಗವಹಿಸುವಿಕೆ ಮತ್ತು ಸಹಭಾಗಿತ್ವದ  ಯೋಜನೆಯಲ್ಲಿ ಗಾಂಧೀಜಿಯವರ ‘ಗ್ರಾಮ ಸ್ವರಾಜ್‘  ಒಂದು  ಅಂಶವೂ ಕಾಣುತ್ತದೆ.

ಪ್ರತಿ ಗ್ರಾಮದ  ಪರಿಸ್ಥಿತಿಗೆ ಅನುಗುಣವಾಗಿ ನೀರಿಗೆ ಸಂಬಂಧಿತ ಯೋಜನೆಗಳನ್ನು ರೂಪಿಸಬೇಕುಜಲ ಜೀವನ್ ಮಿಷನ್ ಮಾರ್ಗಸೂಚಿಗಳನ್ನು ಸಿದ್ಧಪಡಿಸುವಾಗ ಇದನ್ನು ಪರಿಗಣಿಸಲಾಗಿದೆ.

ಇದಲ್ಲದೆಪಂಚಾಯತಿ ಅಥವಾ ಗ್ರಾಮ ಪಂಚಾಯತಿಯು  ರಚಿಸಿದ ಜಲ ಸಮಿತಿಯು ನೀರಿಗೆ ಸಂಬಂಧಿತ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತದೆ ಮತ್ತು ಅದರ ಮೇಲ್ವಿಚಾರಣೆಯನ್ನೂ ಮಾಡುತ್ತದೆ.

ಆದ್ದರಿಂದನಾವು ಹಳ್ಳಿಗಳನ್ನು ಅದರ ಯೋಜನೆಯಿಂದ ಹಿಡಿದು ಅದರ ನಿರ್ವಹಣೆಗಾಗಿ ಮೊದಲು ಕೊಳವೆಗಳೊಂದಿಗೆ ಜೋಡಿಸಬೇಕಾಗಿದೆ.

ಹಳ್ಳಿಗಳಲ್ಲಿನ ನನ್ನ ಸಹೋದರ ಸಹೋದರಿಯರು ಮತ್ತು ಹಿರಿಯರು ನೀರಿನ ಸಂಗ್ರಹ ಮತ್ತು ನೀರಿನ ಮೂಲಗಳ ಬಗ್ಗೆ ಅಪಾರವಾದ ಜ್ಞಾನವನ್ನು ಹೊಂದಿದ್ದಾರೆನ್ನುವುದನ್ನು ನಾವು ಯಾವಾಗಲೂ ನೆನಪಿನಲ್ಲಿಡಬೇಕು.

ಹಳ್ಳಿಯ ಜನರಿಗಿಂತ ಹೆಚ್ಚಿನ ಪರಿಣಿತರು ಬೇರೆ ಯಾರಿದ್ದಾರೆ ?

ಆದ್ದರಿಂದನಾವು ಹಳ್ಳಿಯ ಜನರ ಅನುಭವವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು.

 

ಸ್ನೇಹಿತರೇ,

ಜಲ ಜೀವನ್ ಮಿಷನ್ನಲ್ಲಿ ಹೆಚ್ಚು ಹೆಚ್ಚು ಜನರನ್ನು ಸಬಲೀಕರಣಗೊಳಿಸುವುದು ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ನಮ್ಮ ಸರ್ಕಾರದ ಪ್ರಯತ್ನವಾಗಿದೆ.

 ಮಿಷನ್ಗಾಗಿಪ್ರತಿ ಗ್ರಾಮದಲ್ಲಿ ವಿಶೇಷ ಸಮಿತಿಯನ್ನು ರಚಿಸಲಾಗುವುದು ಮತ್ತು ಗ್ರಾಮದ ಮಟ್ಟದಲ್ಲಿಯೇ ಕ್ರಿಯಾ ಯೋಜನೆಗಳನ್ನು ರೂಪಿಸಲಾಗುವುದುಗ್ರಾಮದಲ್ಲಿರುವ ಕನಿಷ್ಠ ಶೇಕಡಾ 50ರಷ್ಟು  ಸಹೋದರಿಯರು ಮತ್ತು ಹೆಣ್ಣುಮಕ್ಕಳು  ಸಮಿತಿಯಲ್ಲಿರಬೇಕು ಎಂದು ನಾನು ವಿನಂತಿಸುತ್ತೇನೆ.

ಇದಲ್ಲದೆಶುದ್ಧ ನೀರು ಸರಬರಾಜು ಮಾಡಲಾಗಿದೆಯೆ ಅಥವಾ ಇಲ್ಲವೇ ಎನ್ನುವುದನ್ನು ಪರಿಶೀಲಿಸಲುಗ್ರಾಮದ ನಿವಾಸಿಗಳುಗ್ರಾಮದ ಪುತ್ರರು ಮತ್ತು ಪುತ್ರಿಯರಿಗೆ ತರಬೇತಿ ನೀಡಲಾಗುವುದು.

ಅಂತೆಯೇಕೌಶಲ್ಯ ಅಭಿವೃದ್ಧಿ ಯೋಜನೆಯ ಮೂಲಕದೊಡ್ಡ ಪ್ರಮಾಣದ ಹಳ್ಳಿಗಳ ಯುವಕರಿಗೆ ಫಿಟ್ಟರ್ಗಳುಪ್ಲಂಬರ್ ಗಳುಎಲೆಕ್ಟ್ರಿಷಿಯನ್ಮೆಕ್ಯಾನಿಕ್ಸ್ ಇತ್ಯಾದಿಗಳಾಗಲು ತರಬೇತಿ ನೀಡಲಾಗುವುದು.

ಹೌದುಕೆಲವು ದುರ್ಗಮ ಪ್ರದೇಶಗಳಲ್ಲಿಕೆಲವು ದೂರದ ಗುಡ್ಡಗಾಡು ಪ್ರದೇಶಗಳಲ್ಲಿಹವಾಮಾನ ಮತ್ತು ಭೌಗೋಳಿಕ ಪರಿಸ್ಥಿತಿಗಳಿಂದಾಗಿ,  ಕೊಳವೆಗಳನ್ನು ಹಾಕುವುದು ಕಷ್ಟವಾಗುತ್ತದೆ ಎನ್ನುವುದು ನಿಜ.

ಹಾಗಾದರೆ ನಾವು ಅಂತಹ ಸ್ಥಳಗಳನ್ನ ಬಿಟ್ಟು ಬಿಡುತ್ತೇವೆಯೇ?

ಇಲ್ಲ.

ಅಂತಹ ಸ್ಥಳಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು.

 ಗ್ರಾಮಗಳ ಜನರಿಗೆ ಶುದ್ಧ ಮತ್ತು ಶುದ್ಧ ನೀರು ಸಿಗುವುದನ್ನು ಖಾತ್ರಿಪಡಿಸಿಕೊಳ್ಳಲಾಗುವುದು.

 

ಸ್ನೇಹಿತರೇ,

ಜಲ್ ಜೀವನ್ ಮಿಷನ್ ಅಡಿಯಲ್ಲಿ ಇನ್ನೂ ಒಂದು ಕೆಲಸವನ್ನು ಮಾಡಲಾಗುತ್ತಿದೆ ಯೋಜನೆಯ ಮೇಲ್ವಿಚಾರಣೆಗಾಗಿತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಎರಡನ್ನೂ ಬಳಸಲಾಗುತ್ತಿದೆ.

ಪ್ರತಿ ಹಳ್ಳಿಯಲ್ಲಿಎಷ್ಟು ನೀರನ್ನು ಸಂಗ್ರಹಿಸಲಾಗುತ್ತಿದೆಎಷ್ಟು ಖರ್ಚು ಮಾಡಲಾಗುತ್ತಿದೆನೀರಿನ ಸ್ಥಿತಿಯ ಬಗ್ಗೆ ಎಲ್ಲಾ ಮಾಹಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.

 

ಸ್ನೇಹಿತರೇ,

ಜಲ್ ಜೀವನ್ ಮಿಷನ್ ಅಡಿಯಲ್ಲಿನಿಮ್ಮ ಗ್ರಾಮದಲ್ಲಿ  ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡ ನಂತರಸರ್ಕಾರವು ನೇರವಾಗಿ ನೀರಿನ ಸಮಿತಿಯ ಖಾತೆಗೆ ಹಣವನ್ನು ಕಳುಹಿಸುತ್ತದೆಇದರಿಂದಾಗಿ ಗ್ರಾಮದ ಜನರು ನೀರಿಗೆ ಸಂಬಂಧಿತ ಕೊಳವೆಯಂತ್ರ ವ್ಯವಸ್ಥೆಯನ್ನು ನೋಡಿಕೊಳ್ಳಲು ಮತ್ತು ನಿರ್ವಹಿಸಲು ಸಾಧ್ಯವಾಗುತ್ತದೆ.

ನನ್ನ ಮತ್ತೊಂದು ವಿನಂತಿಯೇನೆಂದರೆ ಪ್ರತಿ ಗ್ರಾಮಸ್ಥರು ನೀರಿನ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು ಮತ್ತು ನೀರಿನ ನಿಧಿಯನ್ನು ರಚಿಸಬೇಕು  ಎನ್ನುವುದು.   ನಿಮ್ಮ ಗ್ರಾಮಕ್ಕೆನೀರಿಗೆ ಸಂಬಂಧಿಸಿದ ಹಲವಾರು ಯೋಜನೆಗಳಿಗೆ ಹಣ ಬರುತ್ತದೆಇದು ಶಾಸಕರು ಮತ್ತು ಸಂಸದರ ನಿಧಿಯಿಂದ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳಿಂದ ಬರುತ್ತದೆ.

ಎಲ್ಲಾ ಹಣವು ಒಂದೇ ಸ್ಥಳದಲ್ಲಿ ಜಮಾವಣೆಯಾಗುವ ಹಾಗೆ ಮತ್ತು ಒಂದೇ ಕ್ರೋಡೀಕರಿಸಿದ ನಿಧಿಯಿಂದ ಖರ್ಚು ಮಾಡುವ ವ್ಯವಸ್ಥೆಯನ್ನು ನಾವು ಮಾಡಬೇಕಾಗಿದೆ.  ಹಲವು ಸಣ್ಣ ಭಾಗಗಳಲ್ಲಿ ಹಣವನ್ನು ಖರ್ಚು ಮಾಡುವ ಬದಲು ಏಕಕಾಲದಲ್ಲಿ ಹೆಚ್ಚಿನ ಹಣವನ್ನು ಖರ್ಚು ಮಾಡಲು ಇದು ಅನುಕೂಲವಾಗುತ್ತದೆ.

 

ಸ್ನೇಹಿತರೇ,

 ಸಂದರ್ಭದಲ್ಲಿ ಪವಿತ್ರ ಅಭಿಯಾನಕ್ಕೆ ಕೊಡುಗೆ ನೀಡುವಂತೆ ವಿಶ್ವದಾದ್ಯಂತ ನೆಲೆಸಿರುವ ಭಾರತೀಯರನ್ನು ನಾನು ಕೋರುತ್ತೇನೆ.

ಹಳ್ಳಿಗಳಲ್ಲಿ ವಾಸಿಸುತ್ರಿರುವ ನನ್ನ ಸಹೋದರ ಸಹೋದರಿಯರಿಗೆನೀರಿನ ಸಂರಕ್ಷಣೆನೀರಿನ ವಿತರಣೆ ಮತ್ತು ನೀರಿನ ಮರುಬಳಕೆ ನಿರ್ವಹಿಸಲು ಮುಂದೆ ಬರಬೇಕೆಂದು ಇಂದು ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ.

ನೀವು ನಿಮ್ಮ ಸಮಯವನ್ನು ಮತ್ತು ಶ್ರಮವನ್ನು ನೀಡಿರಿನೀವು ಒಂದು ಹೆಜ್ಜೆ ಇಟ್ಟರೆ ಸರ್ಕಾರ ಒಂಬತ್ತು ಹೆಜ್ಜೆ ಇಡುತ್ತದೆ.

ಒಟ್ಟಾಗಿಹಂತ ಹಂತವಾಗಿದೇಶದ ಸಾಮಾನ್ಯ ಜನರ ಹಕ್ಕು ಆಗಿರುವ   ಶುದ್ಧ ನೀರನ್ನು ಒದಗಿಸುವ ನಮ್ಮ ಜವಾಬ್ದಾರಿಯನ್ನು ಪೂರೈಸೋಣ.

ದೇಶದ ನೀರಿನ ಸುರಕ್ಷತೆ ಮತ್ತು ಆಹಾರ ಸುರಕ್ಷತೆಗೆ ನಿಮ್ಮ ಪ್ರಯತ್ನಗಳು ಮತ್ತು ಯಶಸ್ಸು ಬಹಳ ಮುಖ್ಯ.

ಅಟಲ್ ಜಲ್ ಯೋಜನೆ ಮತ್ತು ಜಲ ಜೀವನ್ ಮಿಷನ್ ಗಾಗಿ ಮತ್ತೊಮ್ಮೆ ಇಡೀ ದೇಶಕ್ಕೆ ನನ್ನ ಶುಭಾಶಯಗಳು.

ಬಹಳ ಧನ್ಯವಾದಗಳು!!!

***