Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಭಿವೃದ್ಧಿಗಾಗಿ ಬಾಹ್ಯಾಕಾಶ ತಂತ್ರಜ್ಞಾನದ ಶಾಂತಿಯುತ ಬಳಕೆಯ ಸಹಕಾರಕ್ಕಾಗಿ ಭಾರತ ಮತ್ತು ತಜಕಿಸ್ಥಾನ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಅಭಿವೃದ್ಧಿಗಾಗಿ ಬಾಹ್ಯಾಕಾಶ ತಂತ್ರಜ್ಞಾನದ ಶಾಂತಿಯುತ ಬಳಕೆಯ ಸಹಕಾರಕ್ಕಾಗಿ ಭಾರತ ಮತ್ತು ತಜಕಿಸ್ಥಾನ ನಡುವೆ ಆಗಿರುವ ತಿಳಿವಳಿಕೆ ಒಪ್ಪಂದದ ಬಗ್ಗೆ ವಿವರಣೆ ನೀಡಲಾಯಿತು. ಈ ತಿಳಿವಳಿಕೆ ಒಪ್ಪಂದಕ್ಕೆ 2018ರ ಅಕ್ಟೋಬರ್ 8ರಂದು ತಜಕಿಸ್ಥಾನದ ದುಶಾಂಬೆಯಲ್ಲಿ ಅಂಕಿತ ಹಾಕಲಾಗಿತ್ತು.

ವಿವರಗಳು:

· ಈ ತಿಳಿವಳಿಕೆ ಒಪ್ಪಂದವು, ಭೂಮಿಯ ದೂರ ಸಂವೇದನೆ, ಉಪಗ್ರಹ ಸಂವಹನ ಮತ್ತು ಉಪಗ್ರಹ ಆಧರಿತ ಪಥದರ್ಶಕ; ಬಾಹ್ಯಾಕಾಶ ವಿಜ್ಞಾನ ಮತ್ತು ಗ್ರಹಗಳ ಪರಿಶೋಧನೆ; ಗಗನ ನೌಕೆ ಮತ್ತು ಬಾಹ್ಯಾಕಾಶ ವ್ಯವಸ್ಥೆಗಳು ಮತ್ತು ಭೂ ವ್ಯವಸ್ಥೆಯ ಮತ್ತು ಬಾಹ್ಯಾಕಾಶ ತಂತ್ರಜ್ಞಾನದ ಬಳಕೆಯಂತಹ ಸಹಕಾರದ ಸಂಭಾವ್ಯ ಆಸಕ್ತಿ ಕ್ಷೇತ್ರಗಳ ಮುಂದುವರಿಕೆಗೆ ಶಕ್ತಗೊಳಿಸುತ್ತದೆ.

· ಈ ತಿಳಿವಳಿಕೆ ಒಪ್ಪಂದವು ಡಿಓಎಸ್/ಇಸ್ರೋ ಮತ್ತು ತಜಕಿಸ್ತಾನ ಗಣರಾಜ್ಯದ ಭೂಮಿ ನಿರ್ವಹಣೆ ಮತ್ತು ಜಿಯೋಡೇಸಿಯ ರಾಜ್ಯ ಸಮಿತಿಯ ಸದಸ್ಯರನ್ನು ಸೇರಿಸಿಕೊಂಡು ಜಂಟಿ ಕಾರ್ಯ ಗುಂಪು ಸ್ಥಾಪಿಸಲು ಇಂಬು ನೀಡುತ್ತದೆ. ಇದು ಸಮಯ-ಚೌಕಟ್ಟು ಮತ್ತು ಈ ಕಾಯ್ದೆಯ ಅನುಷ್ಠಾನದ ವಿಧಾನಗಳನ್ನು ಒಳಗೊಂಡಂತೆ ಕಾರ್ಯಯೋಜನೆಯನ್ನು ಮತ್ತಷ್ಟು ಕ್ರಿಯಾಶೀಲವಾಗಿಸುತ್ತದೆ.

ಪ್ರಮುಖ ಪರಿಣಾಮಗಳು:

ಈ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದವು, ಭೂ ದೂರ ಸಂವೇದನೆ, ಉಪಗ್ರಹ ಪಥದರ್ಶಕ, ಬಾಹ್ಯಾಕಾಶ ವಿಜ್ಞಾನ ಮತ್ತು ಬಾಹ್ಯಾಕಾಶ ಪರಿಶೋಧನೆ ಕ್ಷೇತ್ರದಲ್ಲಿ ಆನ್ವಯಿಕ ಸಾಧ್ಯತೆ ಮತ್ತು ಹೊಸ ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳಲು ಒತ್ತು ನೀಡುತ್ತದೆ.

ಪ್ರಯೋಜನಗಳು:

ಈ ತಿಳಿವಳಿಕೆ ಒಪ್ಪಂದವು, ಮಾನವತೆಯ ಅನುಕೂಲಕ್ಕಾಗಿ ಬಾಹ್ಯಾಕಾಶ ತಂತ್ರಜ್ಞಾನದ ಆನ್ವಯಿಕಗಳ ಕ್ಷೇತ್ರದಲ್ಲಿನ ಜಂಟಿ ಕಾರ್ಯ ಚಟುವಟಿಕೆಯ ಅಭಿವೃದ್ಧಿಗೆ ಒತ್ತು ನೀಡುತ್ತದೆ. ಕಾಲದ ಚೌಕಟ್ಟು ಮತ್ತು ಒಪ್ಪಂದದ ನಿಯಮಗಳ ಅನುಷ್ಠಾನದ ವಿಧಾನ ಸೇರಿದಂತೆ ಕಾರ್ಯ ಯೋಜನೆಯನ್ನು ಕಾರ್ಯಗತಗೊಳಿಸಲು ಜಂಟಿ ಕಾರ್ಯಪಡೆ ರಚನೆಗೂ ಇದು ಕಾರಣವಾಗುತ್ತದೆ.

ಹಿನ್ನೆಲೆ:

ತಜಕಿಸ್ಥಾನ ಜೊತೆ ಬಾಹ್ಯಾಕಾಶ ತಂತ್ರಜ್ಞಾನ ಸಹಕಾರ ಸಾಧ್ಯತೆಗಳ ಪ್ರಸ್ತಾಪವನ್ನು ಪರಿಶೀಲಿಸಿದ ತರುವಾಯ, ತಜಕಿಸ್ಥಾನದ ಕಡೆಯಿಂದ, ಭೂ ಸಂಪನ್ಮೂಲಗಳ ನಿರ್ವಹಣೆ / ಕೃಷಿ ಸಂಪನ್ಮೂಲ ನಿರ್ವಹಣೆ ಮತ್ತು ವಿಪತ್ತು ನಿರ್ವಹಣಾ ಬೆಂಬಲದ ಬಗ್ಗೆ ಅದರ ಅಧಿಕಾರಿಗಳಿಗೆ ಸೂಕ್ತ ತರಬೇತಿ ಕಾರ್ಯಕ್ರಮ ಪಡೆಯಲು ಆಸಕ್ತಿ ವ್ಯಕ್ತಪಡಿಸಿದೆ. ಆ ಪ್ರಕಾರವಾಗಿ, ಇಸ್ರೋದ ಭಾರತೀಯ ದೂರ ಸಂವೇದಿ ಸಂಸ್ಥೆ (ಎಂ.ಆರ್.ಎಸ್.) ಎಂ.ಇ.ಎಯ ಐಟಿಇಸಿ ಕಾರ್ಯಕ್ರಮದಡಿಯಲ್ಲಿ 2017ರ ಜುಲೈ-ಡಿಸೆಂಬರ್ ನಡುವೆ ತಜಕಿಸ್ತಾನದ 60 ಅಧಿಕಾರಿಗಳಿಗೆ (ಮೂರು ತಂಡಗಳಲ್ಲಿ) ಅಲ್ಪ ಕಾಲೀನ ತರಬೇತಿ ಕೋರ್ಸ್ ನೀಡುವುದಾಗಿ ತಿಳಿಸಿತ್ತು.

ಈ ಮಧ್ಯೆ, ತಜಕಿಸ್ಥಾನದ ಭಾರತೀಯ ರಾಯಭಾರಿ ಮತ್ತು (ಯುರೇಷಿಯಾ) ಜಂಟಿ ಕಾರ್ಯದರ್ಶಿ, ಎಂ.ಇ.ಎ. ತಜಕಿಸ್ಥಾನದೊಂದಿಗೆ ಬಾಹ್ಯಾಕಾಶ ಸಹಕಾರ ಕುರಿತು ತಿಳಿವಳಿಕೆ ಒಪ್ಪಂದ ರೂಪಿಸುವಂತೆ ಸಲಹೆ ಮಾಡಿದ್ದರು. 2016ರ ನವೆಂಬರ್ ನಲ್ಲಿ ಬಾಹ್ಯಾಕಾಶ ಸಹಕಾರ ಕುರಿತ ಕರಡು ಒಪ್ಪಂದವನ್ನು ತಜಕಿಸ್ಥಾನದ ನಮ್ಮ ಅಭಿಯಾನದೊಂದಿಗೆ ಹಂಚಿಕೊಳ್ಳಲಾಗಿತ್ತು. ಕೆಲವು ಮಾತುಕತೆಗಳ ಬಳಿಕ ಎರಡೂ ಕಡೆಯವರು, ಅಂತರ ಸರ್ಕಾರೀಯ ತಿಳಿವಳಿಕೆ ಒಪ್ಪಂದದ ಪರಸ್ಪರ ಒಪ್ಪಿಗೆಯ ರೂಪಾಂತರಕ್ಕೆ ಬಂದವು ಮತ್ತು ತಜಾಕಿಸ್ತಾನಕ್ಕೆ ಭಾರತದ ರಾಷ್ಟ್ರಪತಿಗಳು ಭೇಟಿ ನೀಡಿದ್ದ ಸಮಯದಲ್ಲಿ ಇದಕ್ಕೆ ಅಂಕಿತ ಹಾಕಿ, ವಿನಿಮಯ ಮಾಡಿಕೊಳ್ಳಲಾಯಿತು.

*****