ಪಿಎಂಇಂಡಿಯಾ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಅನುಮೋದಿಸಿರುವ ಅಂಶಗಳು :
i. ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿ ವಂಚಿತ ಪ್ರದೇಶಗಳು, ಸಮಾಜದ ನಿರ್ಲಕ್ಷಿತ ವರ್ಗಗಳು ಮತ್ತು ಆದ್ಯತಾ ಕ್ಷೇತ್ರಗಳ ಕೇಂದ್ರೀಕೃತ ಅಭಿವೃದ್ಧಿಗಾಗಿ ಅಸ್ತಿತ್ವದಲ್ಲಿರುವ “ ಈಶಾನ್ಯ ಮಂಡಳಿ ಯೋಜನೆಗಳು ” ಅಡಿಯಲ್ಲಿ ಹೊಸ ಯೋಜನೆಗಳಿಗೆ ಈಶಾನ್ಯ ಮಂಡಳಿಯ ( ಎನ್ ಇಸಿ ) ಶೇ. 30 ರಷ್ಟು ಹಂಚಿಕೆ ; ಬಾಕಿ ಹಂಚಿಕೆಯನ್ನು ಅಸ್ತಿತ್ವದಲ್ಲಿರುವ ಎರಡು ಘಟಕಗಳಲ್ಲಿ ವಿಭಜಿಸಲಾಗುತ್ತದೆ ( ರಾಜ್ಯ ಘಟಕ ಶೇ. 60 ಮತ್ತು ಕೇಂದ್ರ ಘಟಕ ಶೇ. 40)
ii. ಮೌಲ್ಯಮಾಪನ ಮತ್ತು ಅನುಮೋದನೆ ಕಾರ್ಯವಿಧಾನವನ್ನು ಸರಳೀಕರಿಸಲು ಎನ್ ಇಸಿ ಮಾರ್ಗಸೂಚಿಗಳ ಪರಿಷ್ಕರಣೆ
iii. ಎನ್ ಇಸಿಯಲ್ಲಿ ಒಳಗೊಳ್ಳದ ಕ್ಷೇತ್ರಗಳಿಗೆ , ಆದರೆ ರಾಜ್ಯ ಸರ್ಕಾರಗಳ ಶಿಫಾರಸ್ಸಿನ ಆಧಾರದಲ್ಲಿ ಹಾಗೂ ಸ್ಥಳೀಯ ಭಾವನೆಗಳ ಪ್ರಕಾರ ಮುಖ್ಯವೆಂದು ಪರಿಗಣಿಸಲಾಗುವ ಕ್ಷೇತ್ರಗಳಿಗೆ , ಪ್ರತಿ ರಾಜ್ಯದ ಪ್ರಮಾಣಿತ ಹಂಚಿಕೆಯ ಶೇ. 25 ರವರೆಗೆ ರಾಜ್ಯ ಘಟಕದ ಅಡಿಯಲ್ಲಿ ಯೋಜನೆಗಳಿಗೆ ಅವಕಾಶ ನೀಡುವುದು .
ಅಸ್ತಿತ್ವದಲ್ಲಿರುವ ” ಎನ್ ಇಸಿ ಯೋಜನೆಗಳು ” ಅಡಿಯಲ್ಲಿನ ಯೋಜನೆಗಳು ಈಶಾನ್ಯ ರಾಜ್ಯಗಳ ಹಿಂದುಳಿದ ಮತ್ತು ನಿರ್ಲಕ್ಷಿತ ಪ್ರದೇಶಗಳ ದೀನ ಮತ್ತು ದುರ್ಬಲ ವರ್ಗಗಳಿಗೆ ಸಾಮಾಜಿಕ – ಆರ್ಥಿಕ ಪ್ರಯೋಜನಗಳನ್ನು ನೀಡುತ್ತವೆ . ಇದು ತ್ವರಿತ ನಿರ್ಧಾರ ಕೈಗೊಳ್ಳಲು ಮತ್ತು ಯೋಜನೆಗಳನ್ನು ತ್ವರಿತ ವಾಗಿ ಅನುಷ್ಠಾನಗೊಳಿಸಲು ಕಾರಣವಾಗುತ್ತದೆ .
**********