ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಅಮೆರಿಕದ ಭೂ ದೂರಸಂವೇದಿ ಉಪಗ್ರಹ ದತ್ತಾಂಶದ ಬಳಕೆ ಮತ್ತು ವಿನಿಮಯ ಸಹಕಾರಕ್ಕೆ ಅಮೆರಿಕದ ಭೂವೈಜ್ಞಾನಿಕ ಸರ್ವೇಕ್ಷಣೆ (ಯುಎಸ್.ಜಿ.ಎಸ್) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲಾಗಿರುವ ಬಗ್ಗೆ ಮಾಹಿತಿ ನೀಡಲಾಯಿತು. ಈ ತಿಳಿವಳಿಕೆ ಒಪ್ಪಂದಕ್ಕೆ 2016ರ ಜುಲೈ 9ರಂದು ಬೆಂಗಳೂರಿನಲ್ಲಿ ಸಹಿ ಹಾಕಲಾಗಿತ್ತು.
ಈ ತಿಳಿವಳಿಕೆ ಒಪ್ಪಂದವು ಇಸ್ರೋಗೆ ಯುಎಸ್.ಜಿ.ಎಸ್.ನ ಲ್ಯಾಂಡ್ ಸ್ಯಾಟ್ 7 ಮತ್ತು 8ರ ಮಾಹಿತಿಯನ್ನು ಭಾರತದಲ್ಲಿ ಪಡೆಯಲು ಮತ್ತು ಇಸ್ರೋದ ರಿಸೋರ್ಸ್ ಸ್ಯಾಟ್ -2(AWiFS and LISS III) ದತ್ತಾಂಶವನ್ನು ಯುಎಸ್ ವಲಯದಲ್ಲಿ ಪಡೆಯಲು ಅವಕಾಶ ನೀಡುತ್ತದೆ.
ಹಿನ್ನೆಲೆ:
ಬಾಹ್ಯಾಕಾಶ ಇಲಾಖೆ ಇಸ್ರೋ ವಾಸ್ತವವಾಗಿ ನಾಗರಿಕ ಬಾಹ್ಯಾಕಾಶ ಸಹಕಾರವನ್ನು ರಾಷ್ಟ್ರೀಯ ವೈಮಾನಿಕ ಮತ್ತು ಬಾಹ್ಯಾಕಾಶ ಆಡಳಿತ (ನಾಸಾ), ರಾಷ್ಟ್ರೀಯ ಸಾಗರ ಮತ್ತು ವಾರಾವರಣ ಆಡಳಿತ (ಎನ್.ಓ.ಎ.ಎ.) ಮತ್ತು ಅಮೆರಿಕ ಭೂವಿಜ್ಞಾನ ಸರ್ವೇಕ್ಷಣಾ ಸಂಸ್ಥೆ (ಯುಎಸ್.ಜಿ.ಎಸ್) ಸೇರಿದಂತೆ ಹಲವು ಅಮೆರಿಕದ ಸಂಸ್ಥೆಗಳೊಂದಿಗೆ ಹೊಂದಿದೆ, ಯುಎಸ್.ಜಿ.ಎಸ್. ನಿರ್ವಹಿಸುತ್ತಿರುವ ಲ್ಯಾಂಡ್ ಸ್ಯಾಟ್ ಸರಣಿಯ ಉಪಗ್ರಹಗಳಿಂದ ದತ್ತಾಶಂವನ್ನು ಭಾರತೀಯ ವಿಜ್ಞಾನಿಗಳು ಭಾರತೀಯ ದೂರಸಂವೇದಿ ಕಾರ್ಯಕ್ರಮದ ಆರಂಭದಲ್ಲಿ ಬಳಸಿದ್ದರು. ಇಸ್ರೋ ತನ್ನ ಶಾದ್ ನಗರ್ ಭೂನಿಲ್ದಾಣದಿಂದ ಲ್ಯಾಂಡ್ ಸ್ಯಾಟ್ ದತ್ತಾಂಶವನ್ನು 1984ರಿಂದ 2001ರವರೆಗೆ ಪಡೆದುಕೊಳ್ಳುತ್ತಿತ್ತು. ಯು.ಎಸ್.ಜಿ.ಎಸ್. ಲ್ಯಾಂಡ್ ಸ್ಯಾಟ್ -8 ಉಪಗ್ರಹವನ್ನು 2013ರಲ್ಲಿ ಉಡಾವಣೆ ಮಾಡಿತ್ತು. ಇಸ್ರೋ ಭಾರತದಲ್ಲಿ ಲ್ಯಾಂಡ್ ಸ್ಯಾಟ್ -8ರ ದತ್ತಾಂಶವನ್ನು ನೇರವಾಗಿ ಪಡೆದುಕೊಳ್ಳುವ ಆಸಕ್ತಿಯನ್ನು ತೋರಿತ್ತು, ಅದೇ ರೀತಿ ಯು.ಎಸ್.ಜಿ.ಎಸ್. ಕೂಡ ಇಸ್ರೋದ ರಿಸೋರ್ಸ್ ಸ್ಯಾಟ್ ಉಪಗ್ರಹದ ದತ್ತಾಂಶವನ್ನು ಪಡೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿತ್ತು.
ಇಸ್ರೋ ಮತ್ತು ಯು.ಎಸ್.ಜಿ.ಎಸ್. ಪರಸ್ಪರರ ದತ್ತಾಂಶ ವಿನಿಮಯಕ್ಕಾಗಿ ಪರಸ್ಪರರ ಆಸಕ್ತಿಯನ್ನು ಪರಿಗಣಿಸಿ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಿದ್ದವು.
AKT/VBA/SH