ಪಿಎಂಇಂಡಿಯಾ
ಅರ್ಮೇನಿಯಾದಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಸಿವಿಲ್ ಕಾಂಟ್ರ್ಯಾಕ್ಟ್ ಪಕ್ಷದ ಅಮೋಘ ಗೆಲುವಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ನಿಕೋಲ್ ಪಶಿನ್ಯಾನ್ ಅವರನ್ನು ಇಂದು ಅಭಿನಂದಿಸಿದ್ದಾರೆ. ಈ ನವ ಚೈತನ್ಯದ ಜನಾದೇಶವು ಪಶಿನ್ಯಾನ ಅವರ ನಾಯಕತ್ವ ಮತ್ತು ಮುನ್ನೋಟದಲ್ಲಿ ಜನರ ನಿರಂತರ ನಂಬಿಕೆ ಮತ್ತು ವಿಶ್ವಾಸದ ಪ್ರತಿಬಿಂಬವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ಭಾರತ ಮತ್ತು ಅರ್ಮೇನಿಯಾ ನಡುವಿನ ಸ್ನೇಹ ಮತ್ತು ಸಹಕಾರದ ಆತ್ಮೀಯ ಮತ್ತು ಐತಿಹಾಸಿಕ ಬಾಂಧವ್ಯವನ್ನು ಇನ್ನಷ್ಟು ಗಾಢವಾಗಿಸಲು ಅವರೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸಲು ಎದುರು ನೋಡುತ್ತಿರುವುದಾಗಿ ಶ್ರೀ ಮೋದಿ ಅವರು ಹೇಳಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
“ಸಂಸದೀಯ ಚುನಾವಣೆಯಲ್ಲಿ ಸಿವಿಲ್ ಕಾಂಟ್ರ್ಯಾಕ್ಟ್ ಪಕ್ಷದ ಅದ್ಭುತ ವಿಜಯಕ್ಕಾಗಿ ಶ್ರೀ ನಿಕೋಲ್ ಪಶಿನ್ಯಾನ್ ಅವರಿಗೆ ಅಭಿನಂದನೆಗಳು. ಈ ನವ ಚೈತನ್ಯದ ಜನಾದೇಶವು ನಿಮ್ಮ ನಾಯಕತ್ವ ಮತ್ತು ದೃಷ್ಟಿಕೋನದ ಮೇಲಿನ ಅರ್ಮೇನಿಯಾ ಜನರ ನಿರಂತರ ನಂಬಿಕೆ ಮತ್ತು ವಿಶ್ವಾಸದ ಪ್ರತಿಬಿಂಬವಾಗಿದೆ. ಭಾರತ ಮತ್ತು ಅರ್ಮೇನಿಯಾ ನಡುವಿನ ಸ್ನೇಹ ಮತ್ತು ಸಹಕಾರದ ಆತ್ಮೀಯ ಮತ್ತು ಐತಿಹಾಸಿಕ ಸಂಬಂಧಗಳನ್ನು ಇನ್ನಷ್ಟು ಗಾಢವಾಗಿಸಲು ನಿಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ.”
@NikolPashinyan”
*****
Congratulations to Mr. Nikol Pashinyan on the impressive victory of the Civil Contract Party in the parliamentary elections. The renewed mandate reflects the enduring trust and confidence of the people of Armenia in your leadership and vision. I look forward to working closely…
— Narendra Modi (@narendramodi) June 8, 2026