Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಸ್ಸಾಂನ ಗೋಗಮುಖ್ ಐ.ಎ.ಆರ್.ಐ.ಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ, ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ

ಅಸ್ಸಾಂನ ಗೋಗಮುಖ್ ಐ.ಎ.ಆರ್.ಐ.ಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ, ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ

ಅಸ್ಸಾಂನ ಗೋಗಮುಖ್ ಐ.ಎ.ಆರ್.ಐ.ಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ, ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಂದು ಅಸ್ಸಾಂನ ಗೋಗಮುಖ್ ನಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಗೆ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮಾಡಿರುವ ಕಾರ್ಯಕ್ಕಾಗಿ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್ ಮತ್ತು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಇಂದು ಶಂಕುಸ್ಥಾಪನೆ ನೆರವೇರಿಸಲಾದ ಐ.ಎ.ಆರ್.ಐ.ಗೆ ಇಡೀ ವಲಯವನ್ನು ಧನಾತ್ಮಕ ಭವಿಷ್ಯದ ಹಾದಿಯಲ್ಲಿ ಕೊಂಡೊಯ್ಯಬಲ್ಲ ಸಾಮರ್ಥ್ಯವಿದೆ ಎಂದರು. 21ನೇ ಶತಮಾನದ ಅವಶ್ಯಕತೆಗನುಗುಣವಾಗಿ ಕೃಷಿಯನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ರೈತರು ಬದಲಾಗುತ್ತಿರುವ ತಂತ್ರಜ್ಞಾನದ ಲಾಭ ಪಡೆಯಬೇಕು ಎಂದೂ ಪ್ರತಿಪಾದಿಸಿದರು.

ನಿರ್ದಿಷ್ಟ ಪ್ರದೇಶದ ಅಗತ್ಯಕ್ಕೆ ಅನುಗುಣವಾಗಿ ಆಧುನಿಕ ಕೃಷಿ ಮತ್ತು ತಾಂತ್ರಿಕತೆಯ ಬಳಕೆಯ ಅಗತ್ಯದ ಬಗ್ಗೆ ಅವರು ಒತ್ತಿ ಹೇಳಿದರು.

2022ರಹೊತ್ತಿಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡಬೇಕೆಂಬ ತಮ್ಮ ಸಂಕಲ್ಪದ ಬಗ್ಗೆ ಮಾತನಾಡಿದ ಪ್ರಧಾನಿ, ದೇಶದ 75ನೇ ಸ್ವಾತಂತ್ರ್ಯೋತ್ಸವದ ಹೊತ್ತಿಗೆ ಇದು ಸಾಕಾರವಾಗುತ್ತದೆ ಎಂದರು.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ರೈತರ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದ ಅವರು, ಈ ನಿಟ್ಟಿನಲ್ಲಿ ಮಣ್ಣಿನ ಆರೋಗ್ಯ ಕಾರ್ಡ್, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಪ್ರಧಾನಮಂತ್ರಿ ಫಸಲು ಬಿಮಾ ಯೋಜನೆಯನ್ನು ಉಲ್ಲೇಖಿಸಿದರು. ದೇಶದಾದ್ಯಂತ ಸ್ಥಾಪಿಸಲಾಗುತ್ತಿರುವ ವಿಸ್ತೃತ ಮಣ್ಣಿನ ಆರೋಗ್ಯ ಪರೀಕ್ಷಾ ಪ್ರಯೋಗಾಲಯ ಜಾಲ ಹಾಗೂ ರೈತರಲ್ಲಿ ಫಸಲು ಬಿಮಾ ಯೋಜನೆಯ ಜನಪ್ರಿಯತೆ ಪಡೆದಿರುವ ಬಗ್ಗೆ ಮಾತನಾಡಿದರು.

ಪ್ರಧಾನಮಂತ್ರಿಯವರು ಕೃಷಿಗೆ ಮೌಲ್ಯ ವರ್ಧನೆ ಹಾಗೂ ಉತ್ತೇಜನ ನೀಡುವ “ಸಂಪದ”ಯೋಜನೆಯ ಪ್ರಸ್ತಾಪ ಮಾಡಿದರು.

ಪಂಚತತ್ವದ ಬಗ್ಗೆಯೂ ಪ್ರಸ್ತಾಪಿಸಿದ ಪ್ರಧಾನಿ, ಈಶಾನ್ಯ ರಾಜ್ಯಗಳಲ್ಲಿ ರೈಲು, ಹೆದ್ದಾರಿ, ವಾಯುಯಾನ, ಜಲ ಮಾರ್ಗ ಮತ್ತು ಐ-ವೇಗಳ ಸಂಪರ್ಕಕ್ಕೆ ಇದು ಉತ್ತೇಜನ ನೀಡಲಿದೆ ಎಂದರು. ಕೇಂದ್ರ ಸರ್ಕಾರ ಈಶಾನ್ಯ ರಾಜ್ಯಗಳ ಜನರ ಪ್ರಗತಿ ಮತ್ತು ಕಲ್ಯಾಣಕ್ಕೆ ಈ ಪಂಚ ತತ್ವದ ಅಡಿ ಕಾರ್ಯೋನ್ಮುಖವಾಗಿದೆ ಎಂದರು.

*****

AKT/NT