ಪಿಎಂಇಂಡಿಯಾ
ಗುಜರಾತಿನ ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ವಿಜಯ್ ರೂಪಾನಿಯವರೇ,
ನನ್ನ ಸಂಪುಟ ಸಹೋದ್ಯೋಗಿಯಾದ ಶ್ರೀ ಹರ್ಷವರ್ಧನರವರೇ
ಸ್ವೀಡನ್ ನ ಗೌರವಾನ್ವಿತ ಮಂತ್ರಿಗಳಾದ ಶ್ರೀಮತಿ ಅನ್ನಾ ಸಕ್ಸ್ ಟ್ರಾಂ ಅವರೇ,
ಉಪಮುಖ್ಯಮಂತ್ರಿಗಳಾದ ಶ್ರೀ ನಿತಿನ್ ಭಾಯ್ ಪಟೇಲ್ ಅವರೇ,
ಗೌರವಾನ್ವಿತ ನೋಬೆಲ್ ಪ್ರಶಸ್ತಿ ಪುರಸ್ಕೃತರುಗಳೇ,
ನೋಬೆಲ್ ಪ್ರತಿಷ್ಠಾನದ ಗೌರವಾನ್ವಿತ ಉಪಾಧ್ಯಕರಾದ ಡಾ. ಗೊರಾನ್ ಹನ್ಸೋನ್ ರವರೇ,
ಗೌರವಾನ್ವಿತ ವಿಜ್ಞಾನಿಗಳೇ,
ಮಹಿಳೆಯರೇ, ಮಹನೀಯರೇ,
ನಿಮಗೆಲ್ಲರಿಗೂ ಸಂಜೆಯ ಶುಭಕಾಮನೆಗಳು,
ಮೊದಲು ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಸಚಿವಾಲಯ, ಗುಜರಾತ್ ಸರ್ಕಾರ ಮತ್ತು ನೋಬೆಲ್ ಮೀಡಿಯಾವನ್ನು ಕೇವಲ ಐದು ವಾರಗಳಲ್ಲಿ ಈ ಪ್ರದರ್ಶನವನ್ನು ವಿಜ್ಞಾನ ನಗರಕ್ಕೆ ತಂದಿದ್ದಕ್ಕಾಗಿ ಅಭಿನಂದಿಸುತ್ತೇನೆ.
ಈ ಪ್ರದರ್ಶನವನ್ನು ಉದ್ಘಾಟಿಸಲು ನಾನು ಹರ್ಷ ಚಿತ್ತನಾಗಿದ್ದು ನಿಮಗೆಲ್ಲರಿಗೂ ಇದರ ಅನುಭವವನ್ನು ಪಡೆಯುವ ಅವಕಾಶ ಸಿಗಲೆಂದು ಆಶಿಸುತ್ತೇನೆ.
ಮೂಲಭೂತ ವಿಜ್ಞಾನದ ಕಾರ್ಯ, ಚಿಂತನೆ ಮತ್ತು ಸೃಜನಾತ್ಮಕ ಉಪಾಯಗಳನ್ನು ಅನ್ವೇಷಣೆ ಮಾಡುವ ಅತ್ಯುನ್ನತ ಹಂತವನ್ನು ಗುರುತಿಸಿ ಗೌರವಿಸುವ ವಿಶ್ವದ ಮಹೋನ್ನತ ಪುರಸ್ಕಾರವೇ ನೋಬೆಲ್ ಪ್ರಶಸ್ತಿ.
ಒಂದೋ, ಎರಡೋ ಅಥವಾ ಮೂರೋ ನೋಬೆಲ್ ಪುರಸ್ಕೃತರು ಭಾರತಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳು ಮತ್ತು ವಿಜ್ಞಾನಿಗಳ ಜತೆ ಸಂವಾದಿಸುವ ಸೀಮಿತ ಸಂದರ್ಭಗಳು ಒಂದು ಕಾಲದಲ್ಲಿತ್ತು. ಆದರೆ ಇಂದು ಗುಜರಾತಿನಲ್ಲಿ ನೋಬೆಲ್ ಪುರಸ್ಕೃತರ ತಾರಾಲಯವನ್ನೇ ಸೃಷ್ಟಿಮಾಡುವ ಮೂಲಕ ಇತಿಹಾಸವನ್ನು ನಿರ್ಮಾಣಮಾಡಿದ್ದೇವೆ.
ಇಲ್ಲಿ ಸೇರಿರುವ ಎಲ್ಲ ವಿಜ್ಞಾನಿಗಳಿಗೂ ನನ್ನ ಹೃದಯಪೂರ್ವಕವಾದ ಸ್ವಾಗತವನ್ನು ನೀಡುತ್ತಿದ್ದೇನೆ. ನೀವೆಲ್ಲರೂ ಭಾರತದ ಅತ್ಯಂತ ಮೌಲ್ಯಯುತವಾದ ಸ್ನೇಹಿತರು. ನಿಮ್ಮಲ್ಲಿ ಕೆಲವರು ಈ ಹಿಂದೆಯೇ ಹಲವರು ಬಾರಿ ಬಂದುಹೋಗಿದ್ದೀರಿ. ನಿಮ್ಮಲ್ಲಿ ಒಬ್ಬರು ಇಲ್ಲೆ ಜನಿಸಿದ್ದಿರಿ, ವಡೋಧರಾದಲ್ಲೇ ಹುಟ್ಟಿಬೆಳೆದಿದ್ದೀರಿ!
ಇಲ್ಲಿ ನಮ್ಮ ಇಷ್ಟೊಂದು ದೊಡ್ಡ ಪ್ರಮಾಣದ ಯುವ ವಿದ್ಯಾರ್ಥಿಗಳನ್ನು ನೋಡಿ ಸಂತೋಷಭರಿತನಾಗಿದ್ದೇನೆ. ಮುಂದಿನ ದಿನಗಳಲ್ಲಿ ನೀವೆಲ್ಲರೂ ನಿಮ್ಮ ಸ್ನೇಹಿತರು ಮತ್ತು ಕುಟುಂಬ ವರ್ಗದವರನ್ನು ವಿಜ್ಞಾನ ನಗರ ನೋಡುವಂತೆ ಒತ್ತಾಯಿಸಬೇಕು.
ನಿಮ್ಮೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳುವ ಮೂಲಕ ನಮ್ಮ ವಿದ್ಯಾರ್ಥಿಗಳು ಮಿಂಚಲು ಅಪೂರ್ವವಾದ ಅನುಭವವು ಈ ಮೂಲಕ ದೊರಕಿದೆ. ನಮ್ಮ ಸುಸ್ಥಿರ ಭವಿಷ್ಯವನ್ನು ಕಂಡುಕೊಳ್ಳಲು ಹೊಸ ಮತ್ತು ಸೂಕ್ತವಾದ ಸವಾಲುಗಳನ್ನು ತಗೆದುಕೊಳ್ಳಲು ಈ ಅವಕಾಶವು ಪ್ರೇರೇಪಣೆ ನೀಡುತ್ತದೆ.
ಈ ವಸ್ತು ಪ್ರದರ್ಶನ ಮತ್ತು ವಿಚಾರಸರಣಿಯು ನಿಮ್ಮ ಮತ್ತು ನಮ್ಮ ವಿದ್ಯಾರ್ಥಿಗಳ ನಡುವೆ ದೊಡ್ಡ ಬೆಸುಗೆಯಾಗಲಿದೆ. ವಿಜ್ಞಾನ ಬೋಧಕರು ಮತ್ತು ನಮ್ಮ ವಿಜ್ಞಾನಿಗಳಿಗೂ ಇದು ಕೊಂಡಿಯಾಗಲಿದೆ.
ಮುಂದಿನ 15 ವರ್ಷಗಳಲ್ಲಿ ಭಾರತ ದೇಶವನ್ನು ಎಲ್ಲಿಗೆ ತಂದು ನಿಲ್ಲಿಸಬೇಕು ಎಂಬ ಬಗ್ಗೆ ನಮ್ಮ ಸರ್ಕಾರಕ್ಕೆ ಸ್ಪಷ್ಟವಾದ ಗುರಿಯಿದೆ. ಕಾರ್ಯಯೋಜನೆ ಮತ್ತು ತಂತ್ರಗಾರಿಕೆಯನ್ನು ಚರ್ಚೆ ಮತ್ತು ಅನುಸಂದಾನದ ಮೂಲಕ ರೂಪಿಸುವಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಅಗತ್ಯ ಎಷ್ಟಿದೆ ಎನ್ನುವುದರ ಅರಿವು ನಮ್ಮ ಸರ್ಕಾರಕ್ಕಿದೆ.
ನಮ್ಮ ಎಲ್ಲ ಯುವ ಸಮುದಾಯಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಇರುವ ಅವಕಾಶಗಳನ್ನು ತಲುಪಿಸುವುದೇ ನಮ್ಮ ಗುರಿಯಾಗಿದೆ.ತರಬೇತಿ ಮತ್ತು ಸಿದ್ಧಗೊಳಿಸುವಿಕೆಯು ಉತ್ತಮ ಸ್ಥಳಗಳಲ್ಲಿ ನಮ್ಮ ಯುವಕರು ಉದ್ಯೋಗ ಪಡೆಯಲು ಅವಕಾಶ ನೀಡುತ್ತದೆ. ಭಾರತ ಬಹುದೊಡ್ಡ ವಿಜ್ಞಾನ ಕೇಂದ್ರ ಆಗಬೇಕಿದೆ. ಆಳ ಸಾಗರದ ಪರಿಶೋಧನೆ ಮತ್ತು ಸೈಬರ್ ವ್ಯವಸ್ಥೆಯಲ್ಲಿ ಬಹುದೊಡ್ಡ ಪ್ರೇರೇಪಣಾ ಸವಾಲುಗಳನ್ನು ಸ್ವೀಕರಿಸಬೇಕಿದೆ.
ಈ ಗುರಿಯನ್ನು ತಲುಪುವ ಗುರಿಯನ್ನು ಒಳಗೊಂಡಿರುವ ಕಾರ್ಯಯೋಜನೆಯ ರೂಪುರೇಷೆಯನ್ನು ನಾವು ಹೊಂದಿದ್ದೇವೆ.
ದೇಶದ ಎಲ್ಲೆಡೆ ಇರುವ ಶಾಲೆಗಳಲ್ಲಿ ವಿಜ್ಞಾನದ ಬೋಧನೆ ಮೇಲೆ ಕಾರ್ಯಕ್ರಮಗಳನ್ನು ರೂಪಿಸುವಂತೆ ನಮ್ಮ ವಿಜ್ಞಾನಿಗಳಿಗೆ ಈಗಾಗಲೇ ಸೂಚಿಸಿದ್ದೇವೆ. ಇದು ತರಬೇತಿ ನಿರತ ಶಿಕ್ಷಕ ವರ್ಗವನ್ನು ಕೂಡ ಒಳಗೊಂಡಿದೆ.
ಕೌಶಲ್ಯತೆ ಮತ್ತು ಅತ್ಯಾಧುನಿಕ ತರಬೇತಿ ಎರಡರಲ್ಲೂ ಹೊಸ ಕಾರ್ಯಕ್ರಮಗಳನ್ನು ರೂಪಿಸುವಂತೆ ತಿಳಿಸುವುದು ಎರಡನೇ ಹಂತವಾಗಿದೆ. ಹೊಸ ಜ್ಞಾನ ಕೇಂದ್ರಿದ ಆರ್ಥಿಕ ವ್ಯವಸ್ಥೆಯಲ್ಲಿ ನಿಮಗೆ ಉದ್ಯೋಗ ನೀಡಲು ಈಕಾರ್ಯಕ್ರಮಗಳು ನೆರವಿಗೆ ಬರುತ್ತವೆ. ನಿಮ್ಮನ್ನು ಪರಿಣಾಮಕಾರಿ ಉದ್ಯಮಿ ಮತ್ತು ಆಲೋಚನೆ ಮಾಡುವ ವಿಜ್ಞಾನಿಯನ್ನಾಗಿ ಇವು ರೂಪಿಸುತ್ತವೆ. ಇಡೀ ವಿಶ್ವದ ಯಾವುದೇ ಭಾಗದಲ್ಲಿಯೇ ಆಗಲಿ. ನಮ್ಮಲ್ಲೇ ಆಗಲಿ ಉನ್ನತ ಸ್ಥಾನಮಾನ ಮತ್ತು ಹುದ್ದೆಗಳಿಗೆ ಪೈಪೋಟಿ ನಡೆಸಲು ನಿಮ್ಮನ್ನು ಈ ಕಾರ್ಯಕ್ರಮಗಳು ಸಮರ್ಥಗೊಳಿಸುತ್ತವೆ.
ಮುಂದಿನ ಹಂತಗಳಲ್ಲಿ ನಮ್ಮ ವಿಜ್ಞಾನಿಗಳು ನಗರಗಳಲ್ಲಿರುವ ನಮ್ಮ ಪ್ರಯೋಗಾಲಯಗಳನ್ನು ಸಂಪರ್ಕಗೊಳಿಸಲಿದ್ದಾರೆ. ನೀವು ನಿಮ್ಮ ವಿಚಾರಗಳ ವಿನಿಮಯ, ಉಪನ್ಯಾಸ, ಸಂಪನ್ಮೂಲ ಹಾಗೂ ಸಲಕರಣೆಗಳನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯವಿದೆ. ನಾವು ಇನ್ನೂ ವಿಸ್ತೃತ ಮತ್ತು ಉತ್ತಮ ಸಹಯೋಗಿ ವಿಜ್ಞಾನವನ್ನು ಬಳಸಿಕೊಳ್ಳಲು ಅವಕಾಶ ನೀಡುತ್ತದೆ.
ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ನಮ್ಮ ವಿಜ್ಞಾನ ಸಂಸ್ಥೆಗಳು ವಿಜ್ಞಾನ ಕೇಂದ್ರಿದ ಉದ್ಯಮಗಳು ಮತ್ತು ವಾಣಿಜ್ಯೀಕರಣವನ್ನು ಪ್ರತಿ ರಾಜ್ಯದಲ್ಲೂ ದೊಡ್ಡ ಮಟ್ಟದಲ್ಲಿ ವಿಸ್ತರಿಸಬೇಕು. ನಿಮ್ಮ ಸ್ಟಾರ್ಟ್ ಅಪ್ ಗಳು ಮತ್ತು ಕೈಗಾರಿಕೆಗಳು ಆಗ ಮಾತ್ರ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಲು ಸಾಧ್ಯವಿದೆ.
ಈ ಬೀಜವನ್ನು ನಾವು ಈ ವರ್ಷ ಕಡ್ಡಾಯವಾಗಿ ಬಿತ್ತನೆ ಮಾಡಿದರೆ ಮುಂದೆ ಫಲವು ಅಚಲವಾಗಿ ಲಭಿಸಲಿದೆ.
ನನ್ನ ಯುವ ಸ್ನೇಹಿತರೇ, ನೀವು ಭಾರತ ಮತ್ತು ವಿಶ್ವದ ಭವಿಷ್ಯ. ಭಾರತವು ನಿಮಗೆ ಅಸಂಖ್ಯವಾದ ಮಾನವ ಸಂಪನ್ಮೂಲ ಮತ್ತು ಅತ್ಯುತ್ತಮ ಬೋಧಕರನ್ನು ಒಳಗೊಂಡ ಸಕ್ರಿಯ ಮತ್ತು ವಿಶಿಷ್ಟವಾದ ಅವಕಾಶವನ್ನು ನೀಡುತ್ತಿದೆ. ಯುವಕರೇ ಜ್ಞಾನ ಮತ್ತು ನಿಪುಣತೆಯ ಬಾವಿಯನ್ನು ತುಂಬುವ ತೊರೆಗಳು ನೀವು. ನಿಮ್ಮ ತರಬೇತಿ ಮತ್ತು ನಿಮ್ಮ ಭವಿಷ್ಯವು ಇದೆಲ್ಲವನ್ನು ಒಳಗೊಂಡಿದೆ.
ಮಾನವ ಸ್ಪರ್ಧೆ ಎನ್ನುವುದ ಪ್ರವರ್ಧಮಾನಕ್ಕೆ ಬಂದಿದೆ. ಇದಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಧನ್ಯವಾದಗಳನ್ನು ಸಲ್ಲಿಸಲೇ ಬೇಕು. ಮಾನವ ಜೀವನದ ಇತಿಹಾಸದಲ್ಲಿ ಯಾವತ್ತಿಗೂ ಆಗದಂತಹ ಸರಿಸಮಾನವಾದ ಗುಣಮಟ್ಟದ ಜೀವನವನ್ನು ಅನುಭವಿಸಲು ದೊಡ್ಡ ಮಟ್ಟದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಹಕಾರಿಯಾಗಿದೆ.
ಬಡತನದಿಂದ ಬಹುತೇಕ ಮಂದಿಯನ್ನು ಮೇಲೆತ್ತುವ ಬಹುದೊಡ್ಡ ಸವಾಲನ್ನು ಭಾರತ ಹೊತ್ತಿದೆ. ನೀವು ಸದ್ಯದಲ್ಲೇ ವಿಜ್ಞಾನಿಗಳಾಗುತ್ತಿದ್ದೀರಿ. ಈ ಸವಾಲನ್ನು ನೀವು ಯಾವತ್ತಿಗೂ ನಿರ್ಲಕ್ಷ್ಯ ಮಾಡಬೇಡಿ.
ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ನಮ್ಮ ಗ್ರಹವನ್ನು ನಾವೆಷ್ಟು ಜವಾಬ್ದಾರಿಯುತವಾಗಿ ನಡೆಸಿಕೊಂಡಿದ್ದೇವೆ ಎನ್ನುವುದು ನಮ್ಮ ವಿಜ್ಷಾನದ ಪರಿಪಕ್ವತೆಯನ್ನು ತೀರ್ಮಾನ ಮಾಡುತ್ತದೆ. ನೀವು ಸದ್ಯದಲ್ಲೇ ವಿಜ್ಞಾನಿಗಳಾಗುತ್ತೀರಿ ಹಾಗೆಯೇ ಈ ಗ್ರಹದ ಪೋಷಕರೂ ಕೂಡಾ ಆಗುತ್ತೀರಿ.
ನಾವು ಈ ನೋಬೆಲ್ ವಸ್ತು ಪ್ರದರ್ಶನ ಮತ್ತು ವಿಜ್ಞಾನ ನಗರದಿಂದ ಒಂದು ಉತ್ತಮ ಫಲಿತಾಂಶವನ್ನು ಹೊರತರಬೇಕಿದೆ.
ಜಗತ್ತಿನ ಸಮಾಜೋ-ಆರ್ಥಿಕ ಅಭಿವೃದ್ಧಿಗೆ ವಿಜ್ಞಾನ ಮತ್ತು ತಂತ್ರಜ್ಞಾನವು ಒಂದು ಬೃಹತ್ ಚಾಲನಾ ಸಾಧನವಾಗಿ ಬೆಳೆದುನಿಂತಿದೆ. ವೇಗವಾಗಿ ಬೆಳೆಯುತ್ತಿರುವ ಭಾರತದ ಆರ್ಥಿಕತೆಯಲ್ಲಿ ವೈಜ್ಞಾನಿಕ ಮಧ್ಯಸ್ಥಿಕೆಯ ವೃದ್ಧಿಯ ಅಗತ್ಯವಿದೆ.
ನೋಬೆಲ್ ಪ್ರಶಸ್ತಿ ಪುರಸ್ಕೃತರ ಈ ಪ್ರದರ್ಶನದಲ್ಲಿ ನಾನು ಮೂರು ಪ್ರಮುಖ ಅಂಶಗಳು ಹೊರಬರುವುದನ್ನು ನಾನು ಬಯಸುತ್ತೇನೆ.
ಮೊದಲಿಗೆ ವಿದ್ಯಾರ್ಥಿಗಳು ಮತ್ತು ಅವರ ಬೋಧಕರ ನಡುವಿನ ಹಿಂಬಾಲಿಸುವಿಕೆ. ದೇಶದ ಮುಂದಿರುವ ಸವಾಲುಗಳನ್ನು ನಿಭಾಯಿಸಲು ಅಗತ್ಯವಾದ ಸ್ಪರ್ಧಾತ್ಮಕವಾದ ಆಲೋಚನೆಗಳೊಂದಿಗೆ ವಿದ್ಯಾರ್ಥಿ ವೃಂದ ಮತ್ತು ಬೋಧಕ ವೃಂದ ಹೊರಬರಬೇಕು. ಇವರಿಬ್ಬರಲ್ಲಿ ಯಾರೂ ಪಥ ತಪ್ಪಬಾರದು.
ಈ ವಸ್ತುಪ್ರದರ್ಶನ ಸಂದರ್ಭದಲ್ಲಿ ಗುಜರಾತ್ ರಾಜ್ಯದ ಎಲ್ಲ ಶಾಲಾ ಶಿಕ್ಷಕರಿಗೆ ವಿಜ್ಞಾನ ಅಧಿವೇಶನಗಳನ್ನು ನಡೆಸಬಹುದು.
ಎರಡನೇಯದಾಗಿ, ಸ್ಥಳಿಯವಾಗಿ ಉದ್ದಿಮೆಗಳನ್ನು ಉತ್ತೇಜಿಸುವುದು. ನಮ್ಮ ಯುವ ಸಮುದಾಯದಲ್ಲಿ ಅಗಾಧವಾದ ಉದ್ದಿಮೆದಾರರಾಗುವ ಉತ್ಸಾಹವಿದೆ. ಗುಜರಾತ್ ನಲ್ಲಿ ನಮ್ಮ ಕೇಂದ್ರ ಸರ್ಕಾರದ ವಿಜ್ಞಾನ ಇಲಾಖೆಯ ಶಾಖೆಗಳಿವೆ. ಮುಂದಿನ ಐದು ವಾರಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತವಾದ ಹೊಸ ಉದ್ದಿಮೆಗಳನ್ನು ಆರಂಭಿಸಲು ಸಾಧ್ಯವಿದೆ ಎನ್ನುವುದನ್ನು ತಿಳಿದುಕೊಳ್ಳಲು ಕಾರ್ಯಾಗಾರಗಳನ್ನು ನಡೆಸಬಹುದಾಗಿದೆ. ಒಂದು ಸ್ಮಾರ್ಟ್ ಫೋನ್ ಅನ್ವೇಷಣೆಗೆ ಹತ್ತು ನೋಬೆಲ್ ಪುರಸ್ಕಾರ ವಿಜೇತರ ಸಾಧನೆಯನ್ನು ಬಳಸಿಕೊಳ್ಳಲಾಗಿದೆ ಎನ್ನುವುದನ್ನು ನಾನು ಹಲವು ಬಾರಿ ಹೇಳಿದ್ದೇನೆ.
ಪ್ರಶಸ್ತಿ ಪುರಸ್ಕೃತವಾಗ ಭೌತ ವಿಜ್ಞಾನವು ವಿದ್ಯುತ್ ಶುಲ್ಕ ಮತ್ತು ಈ ಗ್ರಹ ಎರಡನ್ನೂ ರಕ್ಷಣೆ ಮಾಡಬಹುದು. 2014ನೇ ಸಾಲಿನಲ್ಲಿ ಭೌತಶಾಸ್ತ್ರ ವಿಭಾಗಕ್ಕೆ ಬ್ಲೂ ಲೆಡ್ ಸಂಶೋದನೆಗಾಗಿ ನೋಬೆಲ್ ಪುರಸ್ಕಾರವು ದಕ್ಕಿತ್ತು. ಇದು ಮೂವರು ಜಪಾನ್ ವಿಜ್ಞಾನಿಗಳಾದ ಅಕಾಸಾಕಿ, ಅಮಾನೋ ಮತ್ತು ನಕಾಮುರಾ ಅವರ ಮೂಲ ಸಂಶೋಧನೆಯಿಂದ ಬಂದಿತ್ತು. ಈ ಮೊದಲೇ ತಿಳಿಸಿದ್ದ ಕೆಂಪು ಲೆಡ್ ಮತ್ತು ಹಸಿರು ಲೆಡ್ ಸಮ್ಮಿಳಿತಗೊಳಿಸಿ ವೈಟ್ ಲೈಟ್ ಸಾಧನವನ್ನು ಕೊನೆಯ ನೂರಾರು, ಸಾವಿರಾರು ಗಳಿಗೆಯ ಅವಧಿಯಲ್ಲಿ ಮಾಡಲಾಗಿತ್ತು.
ಉದ್ಯಮದಲ್ಲಿ ಅಳವಡಿಸಬಹುದಾದ ಇಂತಹ ಅದೆಷ್ಟೋ ಸಂಶೋಧನೆಗಳು ನಡೆದಿವೆ.
ಮೂರನೇಯದ್ದು, ಸಮಾಜದ ಮೇಲಾಗುವ ಪರಿಣಾಮ..
ಸಾಕಷ್ಟು ನೋಬೆಲ್ ಪುರಸ್ಕಾರ ವಿಜೇತ ಸಂಶೋಧನೆಗಳು ನಮ್ಮ ಸಮಾಜದ ಮೇಲೆ ದೊಡ್ಡ ಮಟ್ಟದ ಪರಿಣಾಮಗಳನ್ನು ಬೀರಿವೆ. ವಿಶೇಷವಾಗಿ ಕೃಷಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಇದನ್ನು ಕಂಡಿದ್ದೇವೆ.
ಉದಾಹರಣೆಗೆ ಅಸಂದಿಗ್ದ ಸಂದರ್ಭದಲ್ಲಿ ನೀಡುವ ಔಷಧಿಗಳು ಜೆನ್-ಟೆಕ್ನಾಲಜಿಯ ಸಾಧನವಾಗಿ ಸದ್ಯ ವಾಸ್ತವವಾಗಿವೆ. ಈ ಸಾಧನವನ್ನು ಇದೀಗ ಕ್ಯಾನ್ಸರ್, ಡಯಾಬಿಟಿಕ್ ಮತ್ತು ಸೋಂಕು ಪೀಡಿತ ರೋಗಗಳ ಅಧ್ಯಯನಕ್ಕೆ ಬಳಸುತ್ತಿದ್ದೇವೆ.
ಭಾರತ ಈಗಾಗಲೇ ಜೆನರಿಕ್ ಬಯೋ ಸಿಮಿಲರ್ ಕ್ಷೇತ್ರದ ನಾಯಕ ಎನಿಸಿದೆ. ಗುಜರಾತ್ ಇದರಲ್ಲಿ ದೊಡ್ಡ ಕ್ಷೇತ್ರ ಎನಿಸಿಕೊಂಡಿದೆ. ಜೈವಿಕ ತಂತ್ರಜ್ಞಾನದ ಸಂಶೋಧನೆಗಳಲ್ಲಿ ಭಾರತವನ್ನು ನಾಯಕನ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ನಮ್ಮದಾಗಿದೆ.
ವಿಜ್ಞಾನ ನಗರದಲ್ಲಿ ಈ ಪ್ರದರ್ಶನವನ್ನು ಆಯೋಜಿಸಿರುವುದು ನನಗೆ ತುಂಬಾ ಸಂತಸ ತಂದಿದೆ. ಇದು ಸಮುದಾಯವನ್ನು ವಿಜ್ಞಾನದೊಂದಿಗೆ ಜೋಡಿಸುವ ಕೆಲಸವನ್ನು ಮಾಡುತ್ತದೆ.
ಜಾಗತಿಕವಾಗಿ ನಾವು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರಗಳನ್ನು ಹುಡುಕವ ಕಲಿಕೆಯಲ್ಲಿ ಸಾರ್ವಜನಿಕರನ್ನು ಒಳಗೊಳಿಸಿಕೊಳ್ಳಲು ಇದೊಂದು ಸೂಕ್ತ ವೇದಿಕೆ ಎನಿಸಿಕೊಂಡಿದೆ.
ವಿಜ್ಞಾನ ನಗರವನ್ನು ಆಕರ್ಷಕ, ದೇಶದ ಎಲ್ಲ ಭಾಗದ ಯುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ವಿಶ್ವದರ್ಜೆಯ ಸ್ಥಳವಾಗ ಬೇಕು ಎನ್ನುವ ಹಸಿವು ನಮ್ಮಲ್ಲಿದೆ. ಇಲ್ಲಿಗೆ ಇಡೀ ವಿಶ್ವವೇ ಆಗಮಿಸಿ ಪ್ರದರ್ಶನವನ್ನು ಕಂಡು ಪ್ರೇರಣೆ ಹೊಂದಬೇಕು. ಈ ವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಸವಾಲನ್ನು ಸ್ವೀಕರಿಸಬೇಕಿದೆ.
ನನ್ನ ಯುವ ಸ್ನೇಹಿತರೇ,
ಇಲ್ಲಿಗೆ ಬದಿರುವ ವಿಜ್ಙಾನಿಗಳು ವಿಜ್ಞಾನದ ಶಿಖರವನ್ನು ಪ್ರತಿನಿಧಿಸುವವರು. ಅವರಿಂದ ನೀವು ಅಗಾಧವಾದುದನ್ನು ಕಲಿಯಿರಿ. ಅದೊಂದೇ ನಿಲ್ಲಲಾರದು ಮತ್ತು ಮಹಾನ್ ಪರ್ವತದಿಂದ ಆ ಶಿಖರವು ಬೆಳೆಯುತ್ತದೆ ಎನ್ನುವುದನ್ನು ನೀವು ಮರೆಯಬೇಡಿ.
ನೀವು ಈ ಭಾರತದ ಅಡಿಪಾಯ ಮತ್ತು ಭವಿಷ್ಯ. ಶಿಖರ ಎಲ್ಲಿ ಬೆಳೆಯುತ್ತದೋ ಅದರ ವ್ಯಾಪ್ತಿಯನ್ನು ಬೆಳೆಸುವ ಪ್ರಯತ್ನಗಳನ್ನು ನೀವು ಮಾಡಬೇಕು. ನಮ್ಮ ಶಾಲೆಗಳು, ಕಾಲೇಜುಗಳು, ಶಿಕ್ಷಕರ ಬಳಿ ಕಲಿಯುವ ಸಂದರ್ಭದಲ್ಲಿ ಈ ತಳಪಾಯದ ಮೇಲೆ ನಾವು ಗಮನ ಕೇಂದ್ರೀಕರಿಸಿದರೆ ಎಲ್ಲ ಪವಾಡಗಳೂ ಸಾಧ್ಯವಿದೆ. ಭಾರತದಿಂದ ಇಂತಹ ನೂರಾರು ಶಿಖರಗಳನ್ನು ನಾವು ಕಾಣಬಹುದು. ತಳದಿಂದಲೇ ನಾವು ಕಠಿಣ ಶ್ರಮವನ್ನು ಹಾಕದೇ ಹೋದರೆ ಯಾವುದೇ ಶಿಖರವು ಮ್ಯಾಜಿಕ್ ಮೂಲಕ ಮೇಲೇಳುವುದಿಲ್ಲ.
ಸದಾ ಪ್ರೇರೇಪಣೆಗೊಳ್ಳಿ, ಧೈರ್ಯವಾಗಿರಿ, ಸ್ಥೈರ್ಯದಿಂದಿರಿ. ನಿಮ್ಮ ವ್ಯಕ್ತಿತ್ವದ ಮೇಲೆ ವಿಶ್ವಾಸ ಇಡಿ. ಇನ್ನೊಬ್ಬರನ್ನು ಅನುಕರಣೆ ಮಾಡಬೇಡಿ. ನಮ್ಮ ಗೌರವಾನ್ವಿತ ಎಲ್ಲ ಅತಿಥಿಗಳೂ ಇದೇ ರೀತಿ ಸಾಧನೆಯ ಶಿಖರ ಏರಿ ಬಂದಿದ್ದಾರೆ. ಅವರಿಂದ ಇದನ್ನೇ ಕಲಿಯಬೇಕಿರುವುದು.
ನಾನು ಈ ಸಂದರ್ಭದಲ್ಲಿ ನೋಬೆಲ್ ಮೀಡಿಯಾ ಪ್ರತಿಷ್ಠಾನಕ್ಕೆ, ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಸಚಿವಾಲಯ , ಗುಜರಾತ್ ಸರ್ಕಾರಗಳಿಗೆ ಈ ಅವಿಷ್ಕಾರಾತ್ಮಕ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಅಭಿನಂದಿಸಲು ಬಯಸುತ್ತೇನೆ.
ಈ ಪ್ರದರ್ಶನವು ಅತ್ಯಂತ ಯಶಸ್ಸು ಕಾಣಲಿ ಎಂದು ಆಶಿಸುತ್ತೇನೆ ಮತ್ತು ನೀವೆಲ್ಲರೂ ಇದರಿಂದ ಲಾಭ ಪಡೆಯುತ್ತೀರಿ ಎಂದು ನಾನು ಭಾವಿಸಿದ್ದೇನೆ.
Opportunities in science for the youth, India as a hub for research and innovation. pic.twitter.com/nT9bB6aXVj
— PMO India (@PMOIndia) January 9, 2017
The Prime Minister speaks at Science City in Ahmedabad. pic.twitter.com/qjGrhSdZqU
— PMO India (@PMOIndia) January 9, 2017
Science driven enterprise and catering to local needs and aspirations through science. pic.twitter.com/HULKnJ5eRn
— PMO India (@PMOIndia) January 9, 2017
Science for the betterment of humanity. pic.twitter.com/beOVOLPSca
— PMO India (@PMOIndia) January 9, 2017
Inauguration of Nobel Exhibition at Ahmedabad's Science City was special. Many Nobel Laureates & several young friends joined the programme. pic.twitter.com/zw74W7QXsx
— PMO India (@PMOIndia) January 9, 2017
Some pictures from the exhibition. pic.twitter.com/7WnOSWAUEA
— PMO India (@PMOIndia) January 9, 2017
Here are some glimpses from the Nobel Exhibition held at Ahmedabad's Science City. @VibrantGujarat pic.twitter.com/kyKjvg5Qar
— Narendra Modi (@narendramodi) January 9, 2017
My special gratitude to all the Nobel Laureates who have joined us. Their presence is a source of great learning & inspiration.
— Narendra Modi (@narendramodi) January 9, 2017
We are working to ensure that opportunities in science & technology are widely available to our youth & India is a great science destination
— Narendra Modi (@narendramodi) January 9, 2017
We in India have a major challenge to eliminate poverty. Science & technology can be a vital means for poverty elimination & human progress.
— Narendra Modi (@narendramodi) January 9, 2017
Science is the pivot through which our vision for a glorious India will translate into strategy and action. https://t.co/pOSBwEpCeH
— Narendra Modi (@narendramodi) January 9, 2017