Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಹಮದಾಬಾದ್ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಪ್ರಧಾನಿ ಅವರ ಉದ್ಘಾಟನಾ ಭಾಷಣ


ಭಾರತ್ ಮಾತಾ ಕಿ ಜೈ

ಭಾರತ್ ಮಾತಾ ಕಿ ಜೈ

ಭಾರತ್ ಮಾತಾ ಕಿ ಜೈ

ನಮಸ್ತೆ ಟ್ರಂಪ್ ! ನಮಸ್ತೆ ಟ್ರಂಪ್ ! ‘ಭಾರತ – ಅಮೆರಿಕ ಸ್ನೇಹ’ ಎಂದು ನಾನು ಹೇಳುತ್ತೇನೆ, ನೀವು ‘ದೀರ್ಘಕಾಲ ಉಳಿಯಲಿ’ – ‘ದೀರ್ಘಕಾಲ ಉಳಿಯಲಿ’ ಎಂದು ಹೇಳಿ. ಭಾರತ – ಅಮೆರಿಕ ಸ್ನೇಹ! ಭಾರತ – ಅಮೆರಿಕ ಸ್ನೇಹ! ಭಾರತ – ಅಮೆರಿಕ ಸ್ನೇಹ!

ನಮಸ್ತೆ,

ಇಂದು ಮೊಟೇರಾ ಕ್ರೀಡಾಂಗಣದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ನಾವು ಇಂದು ಇತಿಹಾಸ ತನ್ನಿಂತಾನೆ ಪುನರಾವರ್ತನೆಯಾಗುವುದನ್ನೂ ಸಹ ನೋಡುತ್ತಿದ್ದೇವೆ. 5 ತಿಂಗಳ ಹಿಂದೆ ನನ್ನ ಅಮೆರಿಕ ಪ್ರವಾಸ ಹೂಸ್ಟನ್ ನಲ್ಲಿ ಹೌಡಿ ಮೋದಿ ಕಾರ್ಯಕ್ರಮದ ಮೂಲಕ ಆರಂಭವಾಗಿತ್ತು ಮತ್ತು ಇಂದು ನನ್ನ ಮಿತ್ರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಐತಿಹಾಸಿಕ ಭಾರತ ಪ್ರವಾಸ ಅಹಮದಾಬಾದ್ ನಲ್ಲಿ ‘ನಮಸ್ತೆ ಟ್ರಂಪ್’ ಮೂಲಕ ಆರಂಭವಾಗುತ್ತಿದೆ. ಸುಮ್ಮನೆ ಊಹಿಸಿಕೊಳ್ಳಿ ! ಅವರು ಅಮೆರಿಕದಿಂದ ನೇರವಾಗಿ ಆಗಮಿಸಿದ್ದಾರೆ. ಸುದೀರ್ಘ ಪಯಣದ ನಂತರ ಭಾರತದಲ್ಲಿ ಬಂದಿಳಿದ ಅಧ್ಯಕ್ಷ ಟ್ರಂಪ್ ಮತ್ತು ಅವರ ಕುಟುಂಬ ನೇರವಾಗಿ ಸಬರಮತಿ ಆಶ್ರಮಕ್ಕೆ ತೆರಳಿತು ಮತ್ತು ಅಲ್ಲಿಂದ ಈ ಕಾರ್ಯಕ್ರಮಕ್ಕೆ ಇಲ್ಲಿಗೆ ಆಗಮಿಸಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ತಮ್ಮನ್ನು ನಾವು ನಮ್ಮ ಹೃದಯಾಂತರಾಳದಿಂದ ಆತ್ಮೀಯವಾಗಿ ಸ್ವಾಗತಿಸುತ್ತೇವೆ. ಈ ನೆಲ ಗುಜರಾತ್ ಗೆ ಸೇರಿದ್ದು, ಆದರೆ ಇಡೀ ಭಾರತ ನಿಮ್ಮನ್ನು ಅತ್ಯುತ್ಸಾಹದಿಂದ ಬರಮಾಡಿಕೊಳ್ಳುತ್ತಿದೆ. ಈ ಅತ್ಯುತ್ಸಾಹ ಮತ್ತು ಕಹಳೆ ಗಗನದೆತ್ತರಕ್ಕೆ ಅನುರಣಿಸುತ್ತಿದೆ. ವಿಮಾನ ನಿಲ್ದಾಣದಿಂದ ಕ್ರೀಡಾಂಗಣದವರೆಗಿನ ಒಟ್ಟು ವಾತಾವರಣದಲ್ಲಿ ಭಾರತದ ವೈವಿಧ್ಯತೆಯ ಬಣ್ಣಗಳು ಪ್ರತಿಫಲನಗೊಂಡಿವೆ. ಅಧ್ಯಕ್ಷ ಟ್ರಂಪ್ ಅವರ ಸಮಕ್ಷಮದಲ್ಲಿ ಮೊದಲ ಮಹಿಳೆ ಮೆಲಾನಿಯಾ ಟ್ರಂಪ್, ಇವಾಂಕ ಮತ್ತು ಜಾರೆದ್ ಅವರೂ ಕೂಡ ಇರುವುದು ನಮಗೆ ಹೆಮ್ಮೆ ಎನಿಸುತ್ತಿದೆ. ಅಧ್ಯಕ್ಷ ಟ್ರಂಪ್ ಅವರು, ತಮ್ಮ ಕುಟುಂಬದ ಜೊತೆ ಇಲ್ಲಿಗೆ ಆಗಮಿಸಿರುವುದು ಭಾರತ – ಅಮೆರಿಕ ಸಂಬಂಧಗಳಿಗೆ ಕುಟುಂಬದಂತಹ ಸಿಹಿ ಮತ್ತು ಆತ್ಮೀಯತೆಯನ್ನು ನೀಡಿದಂತಾಗಿದೆ. ಭಾರತ ಮತ್ತು ಅಮೆರಿಕ ಸಂಬಂಧಗಳು ಕೇವಲ ಒಂದು ಸಹಭಾಗಿತ್ವದ ಸಂಬಂಧವಲ್ಲ, ಅದಕ್ಕೂ ಮಿಗಿಲಾದುದು ಮತ್ತು ಅದು ಅತ್ಯಂತ ನಿಕಟವಾದ ಸಂಬಂಧವಾಗಿದೆ. ಈ ಕಾರ್ಯಕ್ರಮಕ್ಕೆ ‘ನಮಸ್ತೆ’ ಎಂದು ಹೆಸರಿಡಲಾಗಿದ್ದು, ಇದಕ್ಕೆ ಆಳವಾದ ಅರ್ಥವಿದೆ. ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾದ ಸಂಸ್ಕೃತದ ಈ ಪದದ ಅರ್ಥ ನಾವು ಕೇವಲ ವ್ಯಕ್ತಿಗೆ ಮಾತ್ರ ಗೌರವ ಸೂಚಿಸುವುದಲ್ಲ, ಆತನಲ್ಲಿ ದೈವತ್ವವನ್ನು ತಿಳಿಸುವ ಭಾವನೆಯಾಗಿದೆ. ನಾನು ಗುಜರಾತ್ ನ ಜನತೆಯನ್ನು ಮತ್ತು ಗುಜರಾತ್ ನಲ್ಲಿ ನೆಲೆಸಿರುವ ಇತರೆ ರಾಜ್ಯಗಳ ಜನರನ್ನೂ ಸಹ ಇಂತಹ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಿರುವುದಕ್ಕಾಗಿ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಗೌರವಾನ್ವಿತ ಅಧ್ಯಕ್ಷರು ಮತ್ತು ಗೆಳೆಯರೇ ಇಂದು ಸುಮಾರು 5000 ವರ್ಷಗಳಷ್ಟು ಹಳೆಯದಾದ ಯೋಜಿತ ನಗರಿ ದೋಲಾವಿರ ಭೂಮಿಯಲ್ಲಿದ್ದೇವೆ. ಇದು ಲೋತಲ್ ಸಮುದ್ರ ಬಂದರಿನಷ್ಟೆ ಹಳೆಯದಾದ ಪ್ರದೇಶವಾಗಿದೆ. ಇಂದು ನೀವು ಸಬರಮತಿ ನದಿಯ ತಟದಲ್ಲಿದ್ದೀರಿ. ಅದು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿರುವ ಪ್ರದೇಶ. ಇಂದು ನೀವು ವೈವಿಧ್ಯಕ್ಕೆ ಹೆಸರಾದ ಭಾರತದಲ್ಲಿದ್ದೀರಿ, ಇಲ್ಲಿ ಸಹಸ್ರಾರು ಭಾಷೆಗಳನ್ನು ಜನರು ಮಾತನಾಡುತ್ತಾರೆ. ಅಲ್ಲದೆ ನೂರಾರು ಬಗೆಯ ವೇಷಭೂಷಣಗಳು, ಆಹಾರ, ಜಾತಿ ಮತ್ತು ಸಮುದಾಯಗಳಿವೆ. ನಮ್ಮ ಶ್ರೀಮಂತ ವೈವಿಧ್ಯತೆ ಮತ್ತು ವಿವಿಧತೆಯಲ್ಲಿ ಏಕತೆ ಹಾಗೂ ಏಕತೆಯ ಕಂಪನ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಕ್ಕೆ ಭದ್ರ ಬುನಾದಿಯಾಗಿವೆ. ಒಂದು, ಭೂಮಿ ಮುಕ್ತವಾಗಿದ್ದರೆ, ಇನ್ನೊಂದು ಇಡೀ ಪ್ರಪಂಚವನ್ನೇ ಒಂದು ಕುಟುಂಬವನ್ನಾಗಿ ನೋಡಲಾಗುತ್ತಿದೆ. ಒಂದು ಏಕತಾ ಮೂರ್ತಿಯ ಗೌರವವಾದರೆ ಮತ್ತೊಂದು ವಿಶ್ವದ ಅತಿ ಎತ್ತರದ ಸರ್ದಾರ್ ಪಟೇಲರ ಏಕತಾ ಮೂರ್ತಿಯ ಹೆಮ್ಮೆ. ಅಲ್ಲದೆ ಇನ್ನೂ ನಾವು ಹಂಚಿಕೊಳ್ಳುವ ಸಾಕಷ್ಟು ಸಂಗತಿಗಳಿವೆ. ಅವುಗಳೆಂದರೆ ಮೌಲ್ಯಗಳು ಮತ್ತು ಆದರ್ಶಗಳ ವಿನಿಮಯ, ಉದ್ಯಮಶೀಲ ಸ್ಫೂರ್ತಿ ಮತ್ತ ಆವಿಷ್ಕಾರ ವಿನಿಮಯ, ಸಮಾನ ಅವಕಾಶಗಳು ಮತ್ತು ಸವಾಲುಗಳು, ಆಸೆ ಮತ್ತು ಆಶೋತ್ತರಗಳ ಸಮಾನ ವಿನಿಮಯ. ಅಧ್ಯಕ್ಷ ಟ್ರಂಪ್ ಅವರ ನಾಯಕತ್ವದಲ್ಲಿ ಭಾರತ ಮತ್ತು ಅಮೆರಿಕ ನಡುವಣ ಸಂಬಂಧ ಇನ್ನಷ್ಟು ಬಲವರ್ಧನೆಗೊಂಡಿದೆ ಮತ್ತು ಆದ್ದರಿಂದ ಅಧ್ಯಕ್ಷ ಟ್ರಂಪ್ ಅವರ ಈ ಭೇಟಿ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳಲ್ಲಿ ಹೊಸ ಅಧ್ಯಾಯಕ್ಕೆ ಕಾರಣವಾಗಿದೆ. ಅಮೆರಿಕ ಮತ್ತು ಭಾರತದ ಜನರ ಅಭಿವೃದ್ಧಿ ಮತ್ತು ಅಭ್ಯುದಯಕ್ಕೆ ಹೊಸ ದಾಖಲೆಯನ್ನು ಬರೆಯುವಂತಹ ಅಧ್ಯಾಯ ಇದಾಗಲಿದೆ.

ಗೆಳೆಯರೇ,

ಅಧ್ಯಕ್ಷ ಟ್ರಂಪ್ ಅವರು, ತುಂಬಾ ದೊಡ್ಡ ಮಟ್ಟದಲ್ಲಿ ಯೋಚನೆ ಮಾಡುತ್ತಾರೆ ಮತ್ತು ಅಮೆರಿಕನ್ನರ ಕನಸನ್ನು ನನಸು ಮಾಡಲು ಅವರು ಏನು ಮಾಡಿದ್ದಾರೆಂಬುದು ಇಡೀ ಜಗತ್ತಿಗೆ ತಿಳಿದಿದೆ. ಇಂದು ನಾವು ಇಡೀ ಟ್ರಂಪ್ ಕುಟುಂಬವನ್ನು ಅಭಿನಂದಿಸುತ್ತಿದ್ದೇವೆ. ಮೊದಲ ಮಹಿಳೆ ಮೆಲಿನಿಯಾ ಟ್ರಂಪ್ ಅವರೂ ಸಹ ಇಲ್ಲಿ ನಮ್ಮೊಡನಿರುವುದು ಅತ್ಯಂತ ಹೆಮ್ಮೆ ಎನಿಸುತ್ತದೆ. ಅಮೆರಿಕದ ಆರೋಗ್ಯ ಮತ್ತು ಸಂತೋಷಕ್ಕೆ ನೀವು ಏನೆಲ್ಲಾ ಮಾಡಿದ್ದೀರೋ ಅವುಗಳು ಉತ್ತಮ ಫಲಿತಾಂಶವನ್ನು ನೀಡುತ್ತಿವೆ. ನೀವು ಸಮಾಜದಲ್ಲಿನ ಮಕ್ಕಳಿಗೆ ನೀಡಿರುವ ಕೊಡುಗೆ ನಿಜಕ್ಕೂ ಶ್ಲಾಘನಾರ್ಹ, ನೀವು ಸದಾ ಹೇಳುತ್ತಿರುತ್ತೀರಿ, ಬಿ ದ ಬೆಸ್ಟ್ ಅಂದರೆ ಸದಾ ಅತ್ಯುತ್ತಮರಾಗಿರಿ ಎಂದು. ಇಂದಿನ ಸ್ವಾಗತ ಕಾರ್ಯಕ್ರಮದ ವೇಳೆ ಜನರನ್ನು ನೋಡಿ ಅದೇ ರೀತಿಯ ಭಾವನೆ ನಿಮ್ಮಲ್ಲಿ ಮೂಡಿರಬಹುದು. ಇವಾಂಕ ಎರಡು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದರು. ಆಗ ಅವರು ಮತ್ತೆ ಭಾರತಕ್ಕೆ ಬರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಇಂದು ಅವರನ್ನು ಮತ್ತೆ ನಿಮ್ಮೆಲ್ಲರ ಜೊತೆ ಸ್ವಾಗತಿಸುವುದು ನನಗೆ ಹರ್ಷ ತಂದಿದೆ ಮತ್ತು ಜಾರೆಡ್, ನಿಮ್ಮ ವಿಶೇಷ ಗುಣ ಎಂದರೆ ನೀವು ಎಲೆಮರೆಯ ಕಾಯಿಯಂತೆ ದೂರ ಉಳಿಯುತ್ತೀರಿ, ಆದರೆ ನಿಮ್ಮ ಕೆಲಸ ಭಾರೀ ಪರಿಣಾಮಗಳನ್ನು ಬೀರುತ್ತದೆ ಮತ್ತು ಆ ಪರಿಣಾಮಗಳು ದೂರಗಾಮಿಯಾಗಿರುತ್ತವೆ. ನಾನು ನಿಮ್ಮನ್ನು ಭೇಟಿ ಮಾಡುವ ಅವಕಾಶ ದೊರೆತಾಗಲೆಲ್ಲ ನೀವು ನಿಮ್ಮ ಭಾರತೀಯ ಗೆಳೆಯರ ಬಗ್ಗೆ ಚರ್ಚಿಸುತ್ತೀರಿ, ಇಂದು ಇಲ್ಲಿ ನಿಮ್ಮನ್ನು ಭೇಟಿ ಮಾಡುತ್ತಿರುವುದು ನನಗೆ ಪರಮಾನಂದವಾಗಿದೆ.

ಗೆಳೆಯರೇ,

ಇಂದು ಪ್ರತಿಯೊಬ್ಬ ಭಾರತೀಯರು ಮಾತ್ರವಲ್ಲ, ಅಮೆರಿಕನ್ನರೂ ಸೇರಿದಂತೆ ಇಡೀ ವಿಶ್ವ ಅಧ್ಯಕ್ಷ ಟ್ರಂಪ್ ಅವರು, ಈ ವೇದಿಕೆಯಿಂದ ಏನು ಹೇಳುತ್ತಾರೆ ಎಂಬುದನ್ನು ಕೇಳಲು ಬಯಸುತ್ತಿದೆ. ಅವರ ಭಾಷಣದ ನಂತರ ಅವರಿಗೆ ಧನ್ಯವಾದ ಹೇಳುವಾಗ ನಾನು ಖಂಡಿತ ನಿಮಗೆ ಹಲವು ಸಂಗತಿಗಳ ಬಗ್ಗೆ ತಿಳಿಸುತ್ತೇನೆ.

130 ಕೋಟಿ ಭಾರತೀಯರ ಪರವಾಗಿ ನಾನು ಅಧ್ಯಕ್ಷ ಟ್ರಂಪ್ ಅವರನ್ನು ಸ್ವಾಗತಿಸುತ್ತೇನೆ, ಗೆಳೆಯರೇ, ನಾನು ನನ್ನ ಮಿತ್ರ, ಭಾರತದ ಸ್ನೇಹಿತ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನಿಮ್ಮ ಮುಂದೆ ಸಾದರಪಡಿಸುತ್ತಿದ್ದೇನೆ.