ಪಿಎಂಇಂಡಿಯಾ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯ ಸಚಿವ ಸಂಪುಟವು ಆಂಧ್ರಪ್ರದೇಶದ ಎನ್‍ಐಟಿ( ನ್ಯಾಷನಲ್ ಇನ್ಸ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ)ಗೆ ಹೊಸ ನಿರ್ದೇಶಕರ ಹುದ್ದೆ ಹಾಗೂ ಮೂವರು ಬೋಧಕೇತರ ಹುದ್ದೆಗಳ ಸೃಷ್ಟಿಗೆ ಅನುಮೋದನೆ ನೀಡಿದೆ.
ನಿರ್ದೇಶಕರ ಹುದ್ದೆಯು ಮೂಲ ವೇತನ 75.000 ರೂಪಾಯಿ ಜತೆಗೆ 5.000 ಭತ್ಯೆಯೂ ಒಳಗೊಂಡಿದೆ. ಅಲ್ಲದೆ
ಬೋಧಕೇತರ ಮೂರು ಹುದ್ದೆಗಳು (ರಿಜಿಸ್ಟ್ರಾರ್, ಲೈಬ್ರೇರಿಯನ್, ಮತ್ತು ಪ್ರಿನ್ಸಿಪಾಲ್ ಸ್ಟೂಡೆಂಟ್ ಆಕ್ಟಿವಿಟಿ ಮತ್ತು ಸ್ಪೋರ್ಟ್ಸ್ ಆಫೀಸರ್( ಎಸ್‍ಎಸ್) ಆಗಿವೆ. ಇವರಿಗೆ ತಲಾ 10 000 ರೂಪಾಯಿ ಮೂಲ ವೇತನ ನೀಡಲಾಗುತ್ತದೆ.
ಹಿನ್ನೆಲೆ:
ಇಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಎನ್‍ಐಟಿ ಪಾತ್ರ ಪ್ರಮುಖವಾಗಿದೆ. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಈ ಸಂಸ್ಥೆಯು ತಾಂತ್ರಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ ರಿಜಿಸ್ಟ್ರಾರ್, ಲೆಬ್ರ್ರೇರಿಯನ್, ಮತ್ತು ಪ್ರಿನ್ಸಿಪಾಲ್ ಸ್ಟೂಡೆಂಟ್ ಆಕ್ಟಿವಿಟಿ ಮತ್ತು ಸ್ಪೋರ್ಟ್ಸ್ ಆಫೀಸರ್ ನೇಮಕವಾಗಿರುವುದನ್ನು ಹೆಸರಿಸಬಹುದಾಗಿದೆ. ಆಂಧ್ರಪ್ರದೇಶದಲ್ಲಿರುವ ಈ ಎನ್‍ಐಟಿ ಸಂಸ್ಥೆಯು ಉತ್ತಮ ಗುಣಮಟ್ಟ ಕಾಯ್ದುಕೊಳ್ಳುವುದು, ತಾಂತ್ರಿಕ ಉದ್ಯೋಗಿಗಳನ್ನು ಹುಟ್ಟುಹಾಕುವುದರ ಮೂಲಕ ಉದ್ಯಮಶೀಲತೆಯನ್ನು ಬೆಳೆಸುವುದು ಸೇರಿದಂತೆ ದೇಶದಲ್ಲೆಡೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಇವರ ಗುರುತರ ಹೊಣೆಗಾರಿಕೆಯಾಗಿದೆ.
2014ರ ಮಾರ್ಚ್ 1ರಂದು ಅಂದಿನ ರಾಷ್ಟ್ರಪತಿಯವರು ಪ್ರತ್ಯೇಕ ಆಂಧ್ರಪ್ರದೇಶ ರಚನೆಗೆ ಅನುಮತಿ ನೀಡಿದ್ದರು. ಈ ವೇಳೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಸೆಕ್ಷನ್ 13ರ ನಿಯಮದಂತೆ ಆಂಧ್ರಪ್ರದೇಶಕ್ಕೆ ಎನ್‍ಐಟಿ ಸಂಸ್ಥೆಯ ಸ್ಥಾಪನೆಗೆ ಅವಕಾಶ ನೀಡಿತ್ತು.
***
AKT/VBA/SH