ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಆಂಧ್ರಪ್ರದೇಶಧಲ್ಲಿ ಎನ್.ಐ.ಟಿ. ಸ್ಥಾಪನೆಗೆ ಪೂರ್ವನ್ವಯವಾಗಿ ತನ್ನ ಅನುಮೋದನೆಯನ್ನು ನೀಡಿದೆ. ಇದು 2015ರ ಆಗಸ್ಟ್ 20ರಿಂದ ಆಂಧ್ರಪ್ರದೇಶದ ಸೊಸೈಟಿ ನೋಂದಣಿ ಕಾಯಿದೆ 2001ರಡಿಯಲ್ಲಿ ಸೊಸೈಟಿ ಎಂದು ನೋಂದಣಿ ಆಗಿದೆ.
ಆಂಧ್ರಪ್ರದೇಶದ ಎನ್.ಐ.ಟಿ.ಯನ್ನು ತನ್ನ ಮೊದಲ ಕಾರ್ಯಕ್ರಮಪಟ್ಟಿಯಲ್ಲಿ ಸೇರ್ಪಡೆ ಮಾಡಲು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ, ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆ (ತಿದ್ದುಪಡಿ) ವಿಧೇಯಕ 2016 ಎಂಬ ಹೆಸರಿನ ಮಸೂದೆಯನ್ನು ಮಂಡಿಸಲೂ ಸಂಪುಟ ತನ್ನ ಸಮ್ಮತಿ ಸೂಚಿಸಿದೆ.
ಆಂಧ್ರಪ್ರದೇಶದಲ್ಲಿ ಎನ್.ಐ.ಟಿ.ಯನ್ನು 2001ರ ಸೊಸೈಟಿ ನೋಂದಣಿ ಕಾಯಿದೆ ಅಡಿ ಸೊಸೈಟಿ ಎಂದು ಸ್ಥಾಪಿಸುವುದಕ್ಕೆ ಈ ಪೂರ್ವಾನ್ವಯ ಅನುಮೋದನೆಯು ಆಂಧ್ರಪ್ರದೇಶದ ಎನ್.ಐ.ಟಿ. ಎಂದು ಕಾನೂನಾತ್ಮಕ ಸ್ಥಾನ ನೀಡಲಿದೆ. ಉದ್ದೇಶಿತ ಎನ್.ಐ.ಟಿ.ಎಸ್.ಇ.ಆರ್. ಕಾಯಿದೆ 2007 ತಿದ್ದುಪಡಿಯು ಉನ್ನತ ಮಟ್ಟದ ಸಾರ್ವಜನಿಕ ಹೊಣೆಗಾರಿಕೆ ಮತ್ತು ಬಾಧ್ಯಸ್ಥರಿಗೆ ಸಂಸ್ಥೆಯ ಆಡಳಿತ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಪಾಲ್ಗೊಳ್ಳುವಿಕೆಯ ಖಾತ್ರಿ ಒದಗಿಸುತ್ತದೆ.
ಈ ಸಂಸ್ಥೆಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಲಿದೆ. ಈ ಸಂಸ್ಥೆಯು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಕಾಯಿದೆ (ಎನ್.ಐ.ಟಿ.ಎಸ್.ಇ.ಆರ್)2007ರ ಅಡಿಯಲ್ಲಿ ಬರುವವರೆಗೆ ಆಂಧ್ರಪ್ರದೇಶದ ಸೊಸೈಟಿ ನೊಂದಣಿ ಕಾಯಿದೆ 2001ರಡಿ ನೋಂದಣಿಯಾಗಿರುವ ಸೊಸೈಟಿಯೇ ಸಂಸ್ಥೆಯನ್ನು ನಡೆಯಲಿದೆ ಮತ್ತು ನಿರ್ವಹಿಸಲಿದೆ. ಇದರ ಲೆಕ್ಕಪತ್ರಗಳನ್ನು ಭಾರತದ ಸಿ ಮತ್ತು ಎ.ಜಿ. ಅವರು ಲೆಕ್ಕಪರಿಶೋಧನೆ ಮಾಡುತ್ತಾರೆ ಮತ್ತು ಇದನ್ನು ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಲಾಗುತ್ತದೆ.
ಹಿನ್ನೆಲೆ:
ಎನ್.ಐ.ಟಿ. ಇಲ್ಲದ ಆಂಧ್ರಪ್ರದೇಶದ ಅಗತ್ಯವನ್ನು ಪೂರೈಸಲು ಆಂಧ್ರಪ್ರದೇಶ ಎನ್.ಐ.ಟಿ.ಯನ್ನು ಸ್ಥಾಪಿಸಲಾಯಿತು. ಆಂಧ್ರಪ್ರದೇಶದ ಎನ್.ಐ.ಟಿ., ನಿರ್ದಿಷ್ಟವಾಗಿ ಆಂಧ್ರಪ್ರದೇಶಕ್ಕೆ ಮತ್ತು ಇಡೀ ರಾಷ್ಟ್ರಕ್ಕೇ ಲಾಭ ತರಲಿದೆ. ರಾಷ್ಟ್ರೀಯ ಮಹತ್ವದ ಸಂಸ್ಥೆ ಎಂದು ಘೋಷಿಸಲು ಆಂಧ್ರಪ್ರದೇಶದ ಎನ್.ಐ.ಟಿ.ಯನ್ನು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ, ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆ ಕಾಯಿದೆ 2007ರ ವ್ಯಾಪ್ತಿಗೆ ಸೇರಿಸಲಾಗುತ್ತಿದೆ. ಇದು ತಾಂತ್ರಿಕ ಶಿಕ್ಷಣದ ಜನರ ಆಕಾಂಕ್ಷೆಯನ್ನು ಪೂರೈಸಲಿದೆ.
ಆಂಧ್ರಪ್ರದೇಶದ ಎನ್.ಐ.ಟಿ.ಯನ್ನು ಪಶ್ಚಿಮ ಗೋದಾವರಿ ಜಿಲ್ಲೆಯ ತಾತ್ಕಾಲಿಕ ಸಮುಚ್ಛಯದಲ್ಲಿ ಸ್ಥಾಪಿಸಲಾಗಿದೆ. ಆಂಧ್ರಪ್ರದೇಶ ರಾಜ್ಯ ಸರ್ಕಾರ ಆಂಧ್ರಪ್ರದೇಶದ ಎನ್.ಐ.ಟಿ.ಗೆ. ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಜಮೀನು ಒದಗಿಸುತ್ತಿದೆ. ಸರ್ಕಾರದ ನೀತಿಯ ಪ್ರಕಾರ ಶೇಕಡ 50ರಷ್ಟು ಸೀಟುಗಳನ್ನು ರಾಜ್ಯದ /ಎನ್.ಐ.ಟಿ. ಇರುವ ಸ್ಥಳದ ಸುತ್ತಲಿನ ಅರ್ಹ ವಿದ್ಯಾರ್ಥಿಗಳಿಗೆ ಮೀಸಲಾಗಿರುತ್ತದೆ. ಆಂಧ್ರಪ್ರದೇಶದ ಎನ್.ಐ.ಟಿ. ಆಂಧ್ರಪ್ರದೇಶದ ರಾಜ್ಯದ ವಿದ್ಯರ್ಥಿಗಳಿಗೆ ಪದವಿ ಮಟ್ಟದಲ್ಲಿ, ಸ್ನಾತಕೋತ್ತರ ಮಟ್ಟದಲ್ಲಿ ಮತ್ತು ಡಾಕ್ಟರೇಟ್ ಹಂತದಲ್ಲಿ ಅಂತರ ಶಿಸ್ತು ಜ್ಞಾನ ಆಡಳಿತ ಮತ್ತು ಸಂಶೋಧನಾ ಪರಿಸರದಲ್ಲಿ ಸಂಶೋಧನೆ ಕೈಗೊಳ್ಳಲು ವಿಫುಲ ಅವಕಾಶ ಕಲ್ಪಿಸಲಿದೆ. ಆಂಧ್ರಪ್ರದೇಶ ನೋಂದಣಿ ಕಾಯಿದೆ 2014ರ 13ನೇ ಪರಿಚ್ಛೇದ(ಶಿಕ್ಷಣ)ದಂತೆ ಉತ್ತರಾಧಿಕಾರಿ ರಾಜ್ಯ ಆಂಧ್ರಪ್ರದೇಶದಲ್ಲಿ ಭಾರತ ಸರ್ಕಾರ 12 ಮತ್ತು 13ನೇ ಯೋಜನಾ ಅವಧಿಯಲ್ಲಿ ರಾಷ್ಟ್ರೀಯ ಮಹತ್ವದ ಸಂಸ್ಥೆ ಸ್ಥಾಪಿಸಲು ಕ್ರಮ ಕೈಗೊಳ್ಳಬಹುದಾಗಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ರೀತ್ಯ, ಆಂಧ್ರಪ್ರದೇಶ ಸೊಸೈಟಿ ನೋಂದಣಿ ಕಾಯಿದೆ 2001ರ ಅಡಿಯಲ್ಲಿ ನೋಂದಣಿ ಆಗಿ ತಾತ್ಕಾಲಿಕ ಕ್ಯಾಂಪಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್.ಐ.ಟಿ.ಯನ್ನು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ, ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆ (ಎನ್.ಐ.ಟಿ.ಎಸ್.ಇ.ಆರ್) ಕಾಯಿದೆ 2007ರ ವ್ಯಾಪ್ತಿಗೆ ತರಲು ಹಾಲಿ ಇರ
ುವ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ಎನ್.ಐ.ಟಿ, ವಾರಂಗಲ್ ಅನ್ನು ಆಂಧ್ರಪ್ರದೇಶದ ಎನ್.ಐ.ಟಿ. ವ್ಯಾಪ್ತಿಗೆ ಬರುವ ತನಕ ಅಥವಾ ಈ ಸ್ಥಳದಲ್ಲಿ ಶಾಶ್ವತ ಎನ್.ಐ.ಟಿ. ತಲೆ ಎತ್ತುವ ತನಕ ಮೊದಲ 2-3 ವರ್ಷಗಳ ವರಗೆ ತನ್ನ ಬೋಧನಾ ಸಂಸ್ಥೆ ಎಂದು ಘೋಷಿಸಲು ಆಂಧ್ರಪ್ರದೇಶ ಎನ್.ಐ.ಟಿ. ಸ್ಥಾಪನೆಗೆ ನಿರ್ಧರಿಸಿದೆ. ಆಂಧ್ರಪ್ರದೇಶದ ಶಾಶ್ವತ ಎನ್.ಐ.ಟಿ.ಗೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತಡೇಪಲ್ಲಿಗುಡಂ ಮಂಡಲದ ವಾಯು ನೆಲೆ ಭೂಮಿಯ ಸ್ಥಳವನ್ನು ಈಗಾಗಲೇ ಆಖೈರು ಮಾಡಲಾಗಿದೆ.