Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆಯುಷ್ಮಾನ್ ಭಾರತಕ್ಕೆ ಧನ್ಯವಾದ – ಸಾಮಾನ್ಯ ಬದುಕಿಗೆ ಮರಳಿದ ದೂರದ ದ್ವೀಪವಾಸಿ: ಈಗ ಆರೋಗ್ಯಕರ ಜೀವನ ನಡೆಸುತ್ತಿರುವ ರತನ್ ಬರೈ


ಅಂಡಮಾನ್ ಮತ್ತು ನಿಕೋಬಾರ್‌ನ ಬಡ ಕುಟುಂಬದ 52 ವರ್ಷದ ರತನ್ ಬರೈ, ಮಯೋಕಾರ್ಡಿಯಲ್ ಇನ್ಫಾರ್ಕ್ಷನ್‌ನಿಂದ ಬಳಲುತ್ತಿದ್ದರು. ಎದೆಯ ಎಡಭಾಗದಲ್ಲಿ ನೋವು ಮತ್ತು ಅಧಿಕ ಬೆವರಿನ ಕಾರಣಕ್ಕಾಗಿ ಪೋರ್ಟ್ ಬ್ಲೇರ್‌ನ ಜಿ ಬಿ ಪಂತ್ ಆಸ್ಪತ್ರೆಗೆ ಅವರು ದಾಖಲಾಗಿದ್ದರು. ಅವರಿಗೆ ಡಯಾಬಿಟಿಸ್ ಮೆಲ್ಲಿಟಸ್ ಕೂಡ ಇತ್ತು. ತೀವ್ರ ಅಂಟೇರಿಯರ್ ವಾಲ್ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಇರುವುದು ತಪಾಸಣೆಯಿಂದ ತಿಳಿದುಬಂತು. ವೈದ್ಯಕೀಯ ನಿರ್ವಹಣೆಯಿಂದ ಅವರ ಆರೋಗ್ಯ ಸ್ಥಿರಗೊಳಿಸಲಾಯಿತು. ನಂತರ ಹೃದ್ರೋಗ ತಜ್ಞರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸೂಚಿಸಲಾಯಿತು.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಯಾವುದೇ ಚಿಕಿತ್ಸಾ ಸೌಲಭ್ಯವಿಲ್ಲದ ಕಾರಣ, ಅಂತಹ ಎಲ್ಲಾ ರೋಗಿಗಳು ಕೋಲ್ಕತಾ ಮತ್ತು ಚೆನ್ನೈನಂತಹ ನಗರಗಳಲ್ಲಿ ಚಿಕಿತ್ಸೆಗಾಗಿ ಭಾರತದ ಮುಖ್ಯ ಭೂಭಾಗಕ್ಕೆ ಪ್ರಯಾಣಿಸುತ್ತಾರೆ.

ರತನ್‌ ಬರೈ ಬಳಿ ಅಷ್ಟೊಂದು ಹಣವಿಲ್ಲದ ಕಾರಣ ಇದು ಕಷ್ಟಕರವಾಗಿತ್ತು. ಆದರೆ ಆಯುಷ್ಮಾನ್ ಭಾರತ್- PMJAY ಮೂಲಕ ಹಣವಿಲ್ಲದ ವಿಮಾ ರಕ್ಷಣೆಯ ಬಗ್ಗೆ ತಿಳಿದಾಗ ಅದು ಅವರ ಜೀವನದಲ್ಲಿ ಹೊಸ ಭರವಸೆಯ ಕಿರಣವನ್ನು ತಂದಿತು. ಅದರ ಸಹಾಯದಿಂದ ಅವರು ನಿಗದಿತ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಲು ಸಾಧ್ಯವಾಯಿತು.

ಇಂದು ಅವರು ಆರೋಗ್ಯವಂತ ವ್ಯಕ್ತಿಯಾಗಿದ್ದಾರೆ ಮತ್ತು ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆಯ ಯಶಸ್ಸಿನ ಬಗ್ಗೆ ವಿವರಿಸಲು ಪ್ರಧಾನಮಂತ್ರಿಯವರನ್ನು ಭೇಟಿಯಾದ 31 ಫಲಾನುಭವಿಗಳಲ್ಲಿ ಅವರೂ ಒಬ್ಬರು. ಸರಿಯಾಗಿ ಒಂದು ವರ್ಷದ ಹಿಂದೆ 2018 ರಲ್ಲಿ ಪ್ರಾರಂಭವಾದ ಆಯುಷ್ಮಾನ್ ಭಾರತ್ ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಯಾಗಿದ್ದು, ಇದು ದೇಶದ 10.74 ಕೋಟಿ ಬಡ ಜನರಿಗೆ ವೈದ್ಯಕೀಯ ಸೌಲಭ್ಯಗಳನ್ನು ಸುಲಭವಾಗಿ ಒದಗಿಸುವ ಗುರಿಯನ್ನು ಹೊಂದಿದೆ.

ಕಳೆದ ಒಂದು ವರ್ಷದಲ್ಲಿ ರತನ್‌ ಬರೈ ಅವರಂತಹ 50,000 ಕ್ಕೂ ಹೆಚ್ಚು ರೋಗಿಗಳು ಆಯುಷ್ಮಾನ್ ಭಾರತ್ ಕಾರ್ಯಕ್ರಮದ ಕಾರಣದಿಂದಾಗಿ ಅತ್ಯುತ್ತಮ ಸೌಕರ್ಯಗಳು ಲಭ್ಯವಿರುವ ತಮ್ಮ ರಾಜ್ಯದ ಹೊರಗೂ ವೈದ್ಯಕೀಯ ಸೌಲಭ್ಯಗಳನ್ನು ಪಡೆದಿದ್ದಾರೆ.
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ (PM-JAY) ಅಡಿಯಲ್ಲಿ 16,085 ಆಸ್ಪತ್ರೆಗಳನ್ನು ಪಟ್ಟಿ ಮಾಡಲಾಗಿದೆ. 41 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಚಿಕಿತ್ಸೆ ನೀಡಲಾಗಿದೆ ಮತ್ತು 10 ಕೋಟಿಗೂ ಹೆಚ್ಚು ಇ-ಕಾರ್ಡ್‌ಗಳನ್ನು ನೀಡಲಾಗಿದೆ.

ಆಯುಷ್ಮಾನ್ ಭಾರತ್ ಅಡಿಯಲ್ಲಿ ದೇಶಾದ್ಯಂತ 20,700 ಕ್ಕೂ ಹೆಚ್ಚು ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು ಕಾರ್ಯರೂಪಕ್ಕೆ ಬಂದಿವೆ.