ಪಿಎಂಇಂಡಿಯಾ
ಆರೋಗ್ಯ ಕ್ಷೇತ್ರದಲ್ಲಿನ ಸಹಕಾರ ಕುರಿತಂತೆ ಭಾರತ ಗಣರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಕೋಟ್ ಡಿ‘ಐವರಿ ಗಣರಾಜ್ಯದ ಆರೋಗ್ಯ ಮತ್ತು ಸಾರ್ವಜನಿಕ ನೈರ್ಮಲ್ಯ ಸಚಿವಾಲಯದ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟ ತನ್ನ ಅನುಮೋದನೆ ನೀಡಿದೆ.
ಈ ತಿಳಿವಳಿಕೆ ಒಪ್ಪಂದವು ಈ ಕೆಳಕಂಡ ಕ್ಷೇತ್ರಗಳ ಸಹಕಾರವನ್ನು ಒಳಗೊಂಡಿರುತ್ತದೆ:
1. ಮುಂದುವರಿದ ವೈದ್ಯಕೀಯ ತಂತ್ರಜ್ಞಾನ, ಪರಮಾಣು ಔಷಧ, ಮೂತ್ರಪಿಂಡ ಕಸಿ, ಹೃದಯ ಶಸ್ತ್ರಚಿಕಿತ್ಸೆ, ಮೂತ್ರಪಿಂಡ ಶಾಸ್ತ್ರ, ಹಿಮೋ ಡಯಾಲಿಸಿಸ್ ಮತ್ತು ವೈದ್ಯಕೀಯ ಸಂಶೋಧನಾ ಕ್ಷೇತ್ರದಲ್ಲಿ ವೈದ್ಯರು, ಅಧಿಕಾರಿಗಳು, ಇತರ ಆರೋಗ್ಯ ವೃತ್ತಿಪರರು ಮತ್ತು ತಜ್ಞರ ವಿನಿಮಯ ಮತ್ತು ತರಬೇತಿ;
2. ಔಷಧ ಮತ್ತು ಔಷಧೀಯ ಉತ್ಪನ್ನಗಳ ನಿಯಂತ್ರಣ;
3. ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಆರೋಗ್ಯ ಆರೈಕೆ ಸೌಲಭ್ಯಗಳ ಸ್ಥಾಪನೆಗೆ ನೆರವು;
4. ವೈದ್ಯಕೀಯ ಮತ್ತು ಆರೋಗ್ಯ ಸಂಶೋಧನೆ ಅಭಿವೃದ್ಧಿ;
5. ವೈದ್ಯಕೀಯವಾಗಿ ಸ್ಥಳಾಂತರ ಸೇರಿದಂತೆ ಆರೋಗ್ಯ ಆರೈಕೆ ಮತ್ತು ಸಾರ್ವಜನಿಕ ಆರೋಗ್ಯ ಸೇವೆಗಳ ನಿರ್ವಹಣೆ;
6. ಜನೌಷಧ ಮತ್ತು ಅತ್ಯಗತ್ಯ ಔಷಧಗಳ ದಾಸ್ತಾನು ಮತ್ತು ಔಷಧ ಪೂರೈಕೆಗೆ ನೆರವು;
7. ಎಚ್.ಐ.ವಿ/ ಏಡ್ಸ್ ಕ್ಷೇತ್ರಗಳಲ್ಲಿ ಸಹಯೋಗ ಮತ್ತು ಸಂಶೋಧನೆ;
8. ಸಾಂಕ್ರಾಮಿಕ ರೋಗಗಳ ನಿಗಾ ತಂತ್ರಗಳು ಮತ್ತು ತಂತ್ರಗಳ ಅಭಿವೃದ್ಧಿ ಮತ್ತು ಸುಧಾರಣೆ;
9. ಪ್ರಾಥಮಿಕ ಆರೋಗ್ಯ ಸೇವೆಗಳಲ್ಲಿನ ಉತ್ತಮ ರೂಢಿಗಳ ವಿನಿಮಯ;
10. ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ನಿರ್ವಹಣೆಯ ಜ್ಞಾನದ ವಿನಿಮಯ;
11. ಸಾರ್ವಜನಿಕ ಆರೋಗ್ಯಕ್ಕೆ ಉತ್ತೇಜನ ಮತ್ತು ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಅನುಭವದ ವಿನಿಮಯ;
12. ಆರೋಗ್ಯದ ಉತ್ತೇಜನ ಮತ್ತು ರೋಗ ತಡೆ;
13. ಸಾಂಕ್ರಾಮಿಕವಲ್ಲದ ರೋಗಗಳು;
14. ವೃತ್ತಿ ಸಂಬಂಧಿ ಮತ್ತು ಪರಿಸರಾತ್ಮಕ ಆರೋಗ್ಯ;
15. ವೈದ್ಯಕೀಯ ಸಂಶೋಧನೆ; ಮತ್ತು
16. ಪರಸ್ಪರರು ಸಮ್ಮತಿಸುವ ಇತರ ಯಾವುದೇ ಕ್ಷೇತ್ರದ ಸಹಕಾರ
ಸಹಕಾರದ ವಿವರಗಳನ್ನು ಇನ್ನಷ್ಟು ವಿಸ್ತರಿಸಲು ಮತ್ತು ಈ ತಿಳಿವಳಿಕೆ ಪತ್ರದ ಅನುಷ್ಠಾನದ ಮೇಲ್ವಿಚಾರಣೆಗೆ ಕಾರ್ಯ ಪಡೆಯನ್ನು ರಚಿಸಲಾಗುವುದು.
****