ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಆರ್ಥಿಕ ಪರಿಹಾರ (ಫೈನಾನ್ಷಿಯಲ್ ರೆಸಲ್ಯೂಷನ್) ಮತ್ತು ಠೇವಣಿ ವಿಮೆ ವಿಧೇಯಕ 2017ರ ಮಂಡನೆಯ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ. ಈ ವಿಧೇಯಕವು ನಿರ್ದಿಷ್ಟ ಹಣಕಾಸು ವಲಯದ ಕಾಯಗಳಿಗೆ ಬ್ಯಾಂಕ್, ವಿಮಾ ಕಂಪನಿಗಳು ಮತ್ತು ಹಣಕಾಸು ವಲಯದ ಕಾಯಗಳಲ್ಲಿ ದಿವಾಳಿ ಸ್ಥಿತಿಯನ್ನು ಎದುರಿಸಲು ಸಮಗ್ರ ಪರಿಹಾರದ ಚೌಕಟ್ಟನ್ನು ಒದಗಿಸುತ್ತದೆ.
ಹಣಕಾಸು ಪರಿಹಾರ ಮತ್ತು ಠೇವಣಿ ವಿಮಾ ಮಸೂದೆ 2017 ಕಾಯಿದೆಯಾದ ತರುವಾಯ, ಪರಿಹಾರ ನಿಗಮ (ರೆಸಲ್ಯೂಷನ್ ಕಾರ್ಪೊರೇಷನ್) ಸ್ಥಾಪನೆಗೆ ಅವಕಾಶ ಕಲ್ಪಿಸುತ್ತದೆ. ಮಸೂದೆಯ ಪರಿಶಿಷ್ಟದಲ್ಲಿ ಪಟ್ಟಿ ಮಾಡಲಾಗಿರುವ ವಲಯವಾರು ಕಾಯಿದೆಗಳ ನಿಬಂಧನೆಗಳಿಗೆ ಸಂಬಂಧಿಸಿದಂತೆ ತಿದ್ದುಪಡಿ ಮಾಡಲು ಇಲ್ಲವೇ ಕೈಬಿಡಲು ಇದು ಅವಕಾಶ ನೀಡುತ್ತದೆ. ಇದು ಠೇವಣಿ ವಿಮೆ ಅಧಿಕಾರ ಮತ್ತು ಹೊಣೆಗಾರಿಕೆಗಳನ್ನು ಪರಿಹಾರ ನಿಗಮಕ್ಕೆ ಹಸ್ತಾಂತರ ಮಾಡುವ ಸಲುವಾಗಿ ಠೇವಣಿ ವಿಮೆ ಮತ್ತು ಸಾಲ ಖಾತ್ರಿ ನಿಗಮ ಕಾಯಿದೆ 1961ರ ರದ್ದತಿಗೂ ಕಾರಣವಾಗುತ್ತದೆ.
ಈ ಪರಿಹಾರ ನಿಗಮವು ಹಣಕಾಸು ವ್ಯವಸ್ಥೆಯ ಸ್ಥಿರತೆ ಮತ್ತು ಸ್ಥಿತಿಸ್ಥಾಪಕತೆಯನ್ನು ಸಂರಕ್ಷಿಸುತ್ತದೆ; ಒಂದು ಸಮಂಜಸ ಮಿತಿಯವರೆಗೆ ಒಳಪಡುವ ಹೊಣೆಯಡಿ ಗ್ರಾಹಕರನ್ನು ರಕ್ಷಿಸುತ್ತದೆ; ಮತ್ತು ಸಾಧ್ಯವಾದಷ್ಟು ಮಿತಿ ವರೆಗೆ ಸಾರ್ವಜನಿಕ ನಿಧಿಯನ್ನು ಕಾಪಾಡುತ್ತದೆ.
ಇತ್ತೀಚೆಗೆ ಸರ್ಕಾರವು ಹಣಕಾಸೇತರ ಕಾಯಗಳ ದಿವಾಳಿ ಪರಿಹಾರಕ್ಕಾಗಿ ದಿವಾಳಿ ಮತ್ತು ದಿವಾಳಿತನ ಸಂಹಿತೆ 2106ನ್ನು ಜಾರಿ ಮಾಡಿದೆ. ಉದ್ದೇಶಿತ ಮಸೂದೆಯು ಈ ಸಂಹಿತೆಗೆ ಹಣಕಾಸು ವಲಯದಲ್ಲಿ ಪರಿಹಾರದ ಚೌಕಟ್ಟು ಒದಗಿಸುತ್ತದೆ. ಈ ಮಸೂದೆ ಸಂಹಿತೆಯೊಂದಿಗೆ ಅನುಷ್ಠಾನಕ್ಕೆ ಬಂದರೆ, ಆರ್ಥಿಕತೆಗೆ ಸಮಗ್ರ ಪರಿಹಾರದ ಚೌಕಟ್ಟನ್ನು ಒದಗಿಸುತ್ತದೆ.
ಹಣಕಾಸು ಪರಿಹಾರ ಮತ್ತು ಠೇವಣಿ ವಿಮೆ ಮಸೂದೆ 2017 ಹಣಕಾಸು ಸೇವೆ ಒದಗಿಸುವ ಸಂಸ್ಥೆಗಳಿಂದ ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲಿ ಗ್ರಾಹಕರಿಗೆ ಸುರಕ್ಷತೆ ಒದಗಿಸುತ್ತದೆ. ಅಲ್ಲದೆ ಆರ್ಥಿಕ ಮುಗ್ಗಟ್ಟು ಉಂಟಾದ ಸನ್ನಿವೇಶದಲ್ಲಿ, ಈ ಮುಗ್ಗಟ್ಟಿನಿಂದ ಹೊರಬರಲು ಸಾರ್ವಜನಿಕ ಹಣದ ಬಳಕೆಗೆ ಮಿತಿ ಹಾಕಿ ಹಣಕಾಸು ಸೇವೆ ಒದಗಿಸುವ ಸಂಸ್ಥೆಗಳಲ್ಲಿ ಶಿಸ್ತು ಮೂಡಿಸುವ ಗುರಿ ಹೊಂದಿರುತ್ತದೆ. ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಹಣಕಾಸು ಸ್ಥಿರತೆಯನ್ನು ನಿರ್ವಹಿಸುವ ಖಾತ್ರಿಯನ್ನು ಒದಗಿಸಲು ಇದು ನೆರವಾಗುತ್ತದೆ ಮತ್ತು ಅದೇ ವೇಳೆ, ಬಿಕ್ಕಟ್ಟಿನ ಸಂದರ್ಭವನ್ನು ನಿರ್ವಹಿಸಲು ಅಗತ್ಯ ಸಾಧನಗಳನ್ನೂ ನೀಡುತ್ತದೆ. ದೊಡ್ಡ ಸಂಖ್ಯೆಯ ಚಿಲ್ಲರೆ ಠೇವಣಿದಾರರ ಹಿತದೃಷ್ಟಿಯಿಂದ ಈ ಮಸೂದೆಯು ಪ್ರಸಕ್ತ ಠೇವಣಿ ವಿಮೆ ಚೌಕಟ್ಟನ್ನು ಬಲಪಡಿಸುವ ಗುರಿಯನ್ನೂ ಹೊಂದಿದೆ. ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ ಕಾಯಗಳ ಪುನಶ್ಚೇತನಕ್ಕೆ ತಗಲುವ ವೆಚ್ಚವನ್ನು ಮತ್ತು ಸಮಯವನ್ನು ಇಳಿಕೆ ಮಾಡುವುದನ್ನೂ ಈ ಮಸೂದೆ ಬಯಸುತ್ತದೆ.
****
AKT/VBA/SH