Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಭಾರತಕ್ಕೆ ಬಂದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರು ನೀಡಿದಂತಹ ಮಾಧ್ಯಮ ಹೇಳಿಕೆ….

ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ  ಭಾರತಕ್ಕೆ ಬಂದ ಸಂದರ್ಭದಲ್ಲಿ ಪ್ರಧಾನ ಮಂತ್ರಿ  ಅವರು  ನೀಡಿದಂತಹ ಮಾಧ್ಯಮ ಹೇಳಿಕೆ….

ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ  ಭಾರತಕ್ಕೆ ಬಂದ ಸಂದರ್ಭದಲ್ಲಿ ಪ್ರಧಾನ ಮಂತ್ರಿ  ಅವರು  ನೀಡಿದಂತಹ ಮಾಧ್ಯಮ ಹೇಳಿಕೆ….


ಮಾನ್ಯರೆ,,
 
ನಮ್ಮ ದೇಶಕ್ಕೆ ಮೊದಲ ಬಾರಿಗೆ ಆಗಮಿಸಿರುವ ನಿಮಗೆ ನನ್ನ ತುಂಬು ಹೃದಯದ ಸ್ವಾಗತ ಕೋರುತ್ತಿದ್ದೇನೆ. ಇವತ್ತಿಗೆ ಒಂದು ತಿಂಗಳ ಹಿಂದಷ್ಟೆ ಬಾರ್ಡರ್ –ಗವಾಸ್ಕರ್ ಟ್ರೋಫಿ ಸರಣಿಯ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದ್ದೇವೆ. 2014 ರಲ್ಲಿ ಆಸ್ಟ್ರೇಲಿಯಾದ ಸಂಸತ್ ಭವನದಲ್ಲಿ ನಾನು ಭಾಷಣ ಮಾಡುತ್ತಿದ್ದ   ಸಂದರ್ಭ.  ಅವತ್ತು ಕ್ರಿಕೆಟ್ ಇತಿಹಾಸ ಕಂಡ ಮಹಾನ್ ಸಾಧಕರಾದ ಬ್ರಾಡ್ ಮನ್ ಹಾಗೂ  ತೆಂಡೂಲ್ಕರ್ ಬಗ್ಗೆ ಪ್ರಸ್ತಾಪಿಸಿದ್ದೆ. ಇವತ್ತು ಭಾರತದ ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯದ ಸ್ಟೀವನ್ ಸ್ಮಿತ್ ಕ್ರಿಕೆಟ್ ಜಗತ್ತಿನ ಯುವ ಬ್ರಿಗೇಡ್ ಆಗಿ ಕಾಣಿಸಿಕೊಳ್ತಿದ್ದಾರೆ. ಭಾರತಕ್ಕೆ ನಿಮ್ಮ ಭೇಟಿ ಸ್ವೀವನ್ ಸ್ಮಿತ್ ಬ್ಯಾಟಿಂಗ್ ಗೆ ಫಲಕಾರಿ   ಅಷ್ಟೇ  ಲಾಭದಾಯಕವಾಗಿರುತ್ತದೆ ಎಂಬ  ನನ್ನ ವಿಶ್ವಾಸ
ಜಿ-20 ಯ ಭಾಗವಾಗಿದ್ದ ನಮ್ಮ ಭೇಟಿಯ ಕ್ಷಣಗಳನ್ನ ವಿಶೇಷವಾಗಿ ನಾನು ನೆನಪು ಮಾಡಿಕೊಳ್ಳಲು ಬಯಸುತ್ತೇನೆ. 
 
ಅವುಗಳು ಎಂದೆಂದಿಗೂ ಒಗ್ಗೂಡಿಸುವಿಕೆಯ ಬಲವಾದ ಸಂವೇದನೆ ಹಾಗೂ ಸಂಕಲ್ಪವನ್ನ ಪ್ರತಿಬಿಂಬಿಸುತ್ತವೆ. ಈ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಮುನ್ನೆಡೆಸುವ ನಿಟ್ಟಿನಲ್ಲಿ ನೀವು ತೋರುತ್ತಿರುವ ಸಕ್ರಿಯ ಉತ್ಸುಕತೆಯನ್ನು ನಾನು ನಿರ್ಧಿಷ್ಟವಾಗಿ ಅಭಿನಂದಿಸುತ್ತೇನೆ. ನಮ್ಮ ಈ ಸಹಕಾರದ ಪ್ರಯಾಣ ನಿರ್ದಿಷ್ಟ   ಹಾದಿಯಲ್ಲಿ ಸಾಗುತ್ತಿದೆ. ಇನ್ನೂ  ನಿಮ್ಮ ನಾಯಕತ್ವದಲ್ಲಿ ಈ ಸಂಬಂಧ ಹೊಸ ಮೈಲಿಗಲ್ಲನ್ನು ಮುಟ್ಟಲಿದೆ. ಹಾಗೂ ನಿಮ್ಮ  ಈ ಭೇಟಿ ಉಭಯ ರಾಷ್ಟ್ರಗಳ ನಡುವಿನ ತಾಂತ್ರಿಕ ಪಾಲುಗಾರಿಕೆಯಲ್ಲಿ ಹೊಸ ಆದ್ಯತೆಯನ್ನು   ಕಂಡುಕೊಳ್ಳಲು ನಮಗೆ  ಉತ್ತಮ ಅವಕಾಶವನ್ನು ಒದಗಿಸಿದೆ.
 
 
ಹಿಂದೂ  ಮಹಾಸಾಗರದ ಜಲರಾಶಿ ನಮ್ಮ ಜೊತೆ ಹೊಂದಿಕೊಂಡಿರುವ ಇತಿಹಾಸವನ್ನು ನೆನಪಿಸುತ್ತದೆ  ಮತ್ತು ಅವುಗಳು ನಮಗೆ ಹೊಂದಿಕೊಂಡಿರುವ  ಗುರಿಸಾಧನೆಗೆ ನಿರ್ದೇಶನ ನೀಡುತ್ತವೆ. ಪ್ರಜಾಪ್ರಭುತ್ವದ ತತ್ವ ಹಾಗೂ ಮೌಲ್ಯಗಳು ಮತ್ತು ಕಾನೂನು ಆಡಳಿತ ಉಭಯ ದೇಶಗಳಿಗೂ ಒಂದೇ ಆಗಿದೆ.. ಭಾರತದ 125 ಕೋಟಿ ನಾಗರಿಕರು ಮತ್ತು ಆಸ್ಟ್ರೇಲಿಯಾದ ಶಕ್ತಿ ಹಾಗೂ ಸಾಮರ್ಥ್ಯದಿಂದ ಆರ್ಥಿಕ ಸಮೃದ್ಧಿಯನ್ನು ಸಾಧಿಸುವ ಬಲವಾದ ಬಯಕೆಯನ್ನು 
 ನಮ್ಮ  ಈ ಒಪ್ಪಂದಗಳಲ್ಲಿನ ಅದ್ಭುತ   ಅವಕಾಶಗಳ ವ್ಯಾಪಕ ವ್ಯಾಪ್ತಿ ವ್ಯಾಖ್ಯಾನಿಸುತ್ತದೆ.
 
 
ಇನ್ನೂ ಇವತ್ತಿನ ಮಾತುಕತೆಯಲ್ಲಿ ಪ್ರಧಾನ ಮಂತ್ರಿಯವರು ಹಾಗೂ ನಾನು ದ್ವಿಪಕ್ಷೀಯ ಸಂಬಂಧಗಳ ಹರಿವಿನ ಸಂಪೂರ್ಣ ವಿಮರ್ಶೆಯನ್ನು ನಡೆಸಿದೆವು..ಅಲ್ಲದೇ  ನಮ್ಮ  ಈ ಸಹಭಾಗಿತ್ವವನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ನಾವುಗಳು ಹಲವು ಪ್ರಗತಿಪರ ನಿರ್ಧಾರಗಳನ್ನು ಕೈಗೊಂಡಿದ್ದೇವೆ.   ನಮ್ಮ ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಣದ ಹಾಗೂ ಸಂಶೋಧನೆಯ ಮೂಲ ಮೌಲ್ಯಗಳನ್ನು ಭಾರತ ಹಾಗೂ ಆಸ್ಟ್ರೇಲಿಯಗಳೆರಡೂ ಗುರುತಿಸಿವೆ. ಇದು ಅಚ್ಚರಿಯ ವಿಷಯವೇನಲ್ಲಾ.   ಹೀಗಾಗಿ ಶಿಕ್ಷಣ ಹಾಗು ಸಂಶೋಧನಾ ಕ್ಷೇತ್ರದಲ್ಲಿನ ಸಹಕಾರ ನಮ್ಮ ನಡುವಿನ ಬಾಂಧವ್ಯದ ಬಹುಮುಖ್ಯ ಅಂಶಗಳಾಗಿವೆ. ನ್ಯಾನೋ ಹಾಗೂ ಜೈವಿಕ ತಂತ್ರಜ್ಙಾನದ  ” ತೇರಿ -ಡೆಕ್ಕಿನ್” 
 ಸಂಶೋಧನಾ ಕೇಂಧ್ರದ ಉದ್ಘಾಟನೆಯನ್ನು ಈಗಷ್ಟೆ ನಾನು ಹಾಗೂ ಪ್ರಧಾನಮಂತ್ರಿಯವರು ಕೂಡಿ ನೆರವೇರಿಸಿದ್ದೇವೆ. ಇದು ಉಭಯ ರಾಷ್ಟ್ರಗಳ ನಡುವಿನ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ಮಧ್ಯೆ  ಸೃಷ್ಟಿಯಾಗುತ್ತಿರುವ ಸಹಕಾರದ ಅತ್ಯುತ್ಕೃಷ್ಟ ಉದಾಹರಣೆಯಾಗಿದೆ..ಆಸ್ಟ್ರೇಲಿಯ ಹಾಗೂ ಭಾರತ ಸಂಶೋಧನಾ ಅನುದಾನವಾದ ಸುಮಾರು 100 ಮಿಲಿಯನ್ ಡಾಲರ್ಸ್  ಸಹಕಾರಿ ಸಂಶೋಧನಾ ಯೋಜನೆಗಳ ಮೇಲೆ ನಿರ್ದಿಷ್ಟ   ಗಮನ ಹರಿಸುತ್ತದೆ.    ಉದಾಹರಣೆಗೆ ನ್ಯಾನೋ ತಂತ್ರಜ್ಙಾನ , ಸ್ಮಾರ್ಟ್ ಸಿಟಿಗಳು, ಮೂಲಭೂತ ಸೌಕರ್ಯಗಳು, ಕೃಷಿ ಹಾಗೂ ವಿಪತ್ತು ನಿರ್ವಹಣೆ ಇತ್ಯಾದಿ.. ಜಂಟಿಯಾಗಿ ನಾವು ಅಭಿವೃದ್ಧಿ ಪಡಿಸಿರುವ ಎ ವಿಟಮಿನ್ ನನ್ನು ಸಮೃದ್ಧವಾಗಿ ಹೊಂದಿರುವ ಬಾಳೆಹಣ್ಣುಗಳ ಅಭಿವೃದ್ಧಿ ಇಡೀ   ಕ್ಷೇತ್ರವಾರು ಪರೀಕ್ಷಾ ಹಂತವನ್ನು ತಲುಪಿದೆ.
 
 ನಮ್ಮ ವಿಜ್ಙಾನಿಗಳು ಹೆಚ್ಚು ಪೌಷ್ಠಿಕ ಹಾಗೂ ಆರೋಗ್ಯಯುತ ವೈವಿಧ್ಯಮಯ   ದಿದ್ವಳ ಧಾನ್ಯಗಳನ್ನು ಸಂಶೋಧಿಸುವ  ನಿಟ್ಟಿನಲ್ಲಿ ಒಂದಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ನಮ್ಮ ರೈತರನ್ನೂ ಒಳಗೊಂಡಂತೆ ಲಕ್ಷಾಂತರ ನಾಗರಿಕರ ಜೀವನ ಶೈಲಿಯನ್ನ ಉತ್ತಮಗೊಳಿಸುವ ನಿಟ್ಟಿನಲ್ಲಿ, ಅತ್ಯುತ್ತಮ ವೈಜ್ಞಾನಿಕ ಸಹಕಾರ ಸ್ಪಷ್ಟವಾದ ಫಲಿತಾಂಶವನ್ನೂ ಹೊರತರುವ ನಿಟ್ಟಿನಲ್ಲಿ ಆಳವಾಗಿ ಬೇರೂರಿದೆ ಅನ್ನೋದಕ್ಕೇ ಈ ಎರಡು ಉದಾಹರಣೆಗಳು ನಿದರ್ಶನಗಳಾಗಿವೆ   . .ಮಾನ್ಯ ಪ್ರಧಾನಮಂತ್ರಿಯವರ ಜೊತೆಯಲ್ಲಿ ಬಂದಿರುವ ವೈಸ್ ಚಾನ್ಸಲರ್ ಗಳು ಮತ್ತು ವೆಕೇಶನಲ್ ಟ್ರೈನಿಂಗ್ ಇನ್ಸ್ ಟಿಟ್ಯೂಟ್ ಗಳ ಮುಖ್ಯಸ್ಥರುಗಳಿಗೆ ಹಾರ್ದಿಕ  ಸ್ವಾಗತವನ್ನು ಬಯಸುತ್ತೇನೆ. ಸಂಸ್ಥೆಗಳಿಂದ ಸಂಸ್ಥೆಗಳಿಗೆ ಸಂಬಂಧಿಸಿದ ಹಲವು  ಒಪ್ಪಂದಗಳು ಈ ಭೇಟಿಯಲ್ಲಿ ಸಂಪನ್ನಗೊಂಡಿವೆ. ಇನ್ನೂ ದ್ವಿಪಕ್ಷೀಯ ಶೈಕ್ಷಣಿಕ ಸಹಕಾರದಲ್ಲಿ  ವಿದ್ಯಾರ್ಥಿಗಳ ವಿನಿಮಯ ಬಹುಮಖ್ಯ ಅಂಶವಾಗಿರುತ್ತವೆ  ಮತ್ತು ಆಸ್ಟ್ರೇಲಿಯಾ ಸುಮಾರು ಅರವತ್ತು  ಸಾವಿರಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳ ಮನೆಯಾಗಿ ಮಾರ್ಪಾಡಾಗಿದೆ.  ಅಲ್ಲದೇ ಭಾರತಕ್ಕೆ ಶಿಕ್ಷಣಕ್ಕಾಗಿ ಬರುತ್ತಿರುವ ಆಸ್ಟ್ರೇಲಿಯ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಮೇಲಾಗಿ ಭಾರತೀಯ ಯುವ ಸಮುದಾಯ  ಆಕಾಂಕ್ಷೆಗಳಿಗೆ ಪ್ರತಿಸ್ಪಂದಿಸುವ ನಿಟ್ಟಿನಲ್ಲಿ ವಿಶ್ವದರ್ಜೆಯ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುವುದು ನನ್ನ ಸರ್ಕಾರದ ಪ್ರಮುಖ ಉದ್ದೇಶಿತ ಗುರಿಗಳಲ್ಲಿ ಒಂದಾಗಿದೆ.  ಈ ಸಂಬಂಧ ಯಾವ ಆಸ್ಟ್ರೇಲಿಯದ ವಿಶ್ವವಿದ್ಯಾಲಯಗಳು ಪ್ರಧಾನಮಂತ್ರಿ ಟರ್ನ್ ಬುಲ್ ಮತ್ತು ನಾನು ಈ ಸಂಬಂಧ ಯಾವೆಲ್ಲಾ ವಿಶ್ವವಿದ್ಯಾಲಯಗಳು ನಮ್ಮ ಗುರಿಸಾಧನೆಗೆ ನಮ್ಮನ್ನ ಸಂಪರ್ಕಿಸಿ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡಬಲ್ಲವು ಅನ್ನೋದರ ಕುರಿತಾಗಿ   ನಾನು ಹಾಗೂ ಪ್ರಧಾನ ಮಂತ್ರಿ ಟರ್ನ್ ಬುಲ್  ಚರ್ಚೆಯನ್ನು ನೆಡೆಸಿದ್ದೇವೆ.
 
ಪ್ರಧಾನ ಮಂತ್ರಿ ಹಾಗೂ ನಾನು  ನಮ್ಮ ಆರ್ಥಿಕ ಅಭಿವೃದ್ಧಿ ಹಾಗೂ ಸಮೃದ್ಧಿ ಪ್ರಕೃತಿಗೆ  ಪ್ರತಿಕೂಲವಾಗಿರ ಬಾರದು  ಅನ್ನೋ ಕಠಿಣ ನಿಲುವನ್ನ ತಳೆದಿದ್ದೇವೆ  ಮತ್ತು ನವೀಕರೀಸಬಹುದಾದ ಇಂಧನ ಮೂಲಗಳು ಸೇರಿದಂತೆ ಇತರೇ ಇಂಧನ ಮೂಲಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ನಮ್ಮ ನಡುವಿನ ಮಾತುಕತೆ ಹಾಗೂ ಸಹಕಾರ ಸಂಬಂಧ ನಮಗೆ ಸಂತೋಷವಿದೆ. ಇದರ   ಜೊತೆಯಲ್ಲಿ ಅಂತರಾಷ್ಟ್ರೀಯ ಸೌರ ಕೂಟಕ್ಕೆ ಸೇರ್ಪಡೆಗೊಳ್ಳುವ   ನಿರ್ಧಾರ ತೆಗೆದುಕೊಂಡಿರುವುದಕ್ಕೆ ನಾನು ಪ್ರಧಾನ ಮಂತ್ರಿ ಟರ್ನ್ ಬುಲ್ ರವರಿಗೆ ಧನ್ಯವಾದವನ್ನು ಅರ್ಪಿಸುತ್ತೇನೆ.  ಮತ್ತು ಆಸ್ಟ್ರೇಲಿಯ ಸಂಸತ್  ನಲ್ಲಿ   ಸರ್ವಾನುಮತದೊಂದಿಗೆ ಮಸೂದೆಯನ್ನ ಮಂಡಿಸಿ ಒಪ್ಪಿಗೆ ಪಡೆಯುವ ಮೂಲಕ ಆಸ್ಟ್ರೇಲಿಯ  ಇದೀಗ ಭಾರತಕ್ಕೆ ಯುರೇನಿಯಂ   ಅನ್ನು  ರಪ್ತು ಮಾಡಲು ಸಿದ್ಧವಾಗಿದೆ. 
 
ಪ್ರಧಾನ ಮಂತ್ರಿಯವರು ಮತ್ತು ನಾನು ಇಂಡೋ ಪೆಸಿಫಿಕ್ ನಲ್ಲಿ ಶಾಂತಿ ಹಾಗೂ ಸ್ಥಿರತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಭವಿಷ್ಯದಲ್ಲಿ ಆಳವಾದ ಒಪ್ಪಂದವನ್ನ ಹೊಂದಬೇಕಾಗಿರುವುದನ್ನು ಗುರುತಿಸಿದ್ದೇವೆ. ಈ ನಿಟ್ಟಿನಲ್ಲಿ ಸುರಕ್ಷಿತ ಹಾಗೂ ಆಡಳಿತಾತ್ಮಕ ಇಂಡೋ ಪೆಸಿಫಿಕ್ ಗಾಗಿ ಬೇಕಾದ ಅಗತ್ಯತೆಗಳ ಕುರಿತಾಗಿ ಸಮ್ಮತ ಹೊಂದಿದ್ದೇವೆ. ಅಲ್ಲದೇ ಪ್ರಸ್ತುತ   ಜಾಗತೀಕರಣಗೊಂಡಿರುವ ಪ್ರಪಂಚದಲ್ಲಿ ಸವಾಲುಗಳಾದ ಭಯೋತ್ಪಾದನೆ,  ಸೈಬರ್ ಸುರಕ್ಷತೆ, ಪ್ರಾದೇಶಿಕ ಗಡಿ ಉಲ್ಲಂಘನೆಯಂತಹ    ವಿಷಯಗಳ ಬಗ್ಗೆ ಅರಿವನ್ನೂ ಕೂಡ ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಜಾಗತಿಕ ತಂತ್ರಗಾರಿಕೆ ಹಾಗೂ ಪರಿಹಾರದ ಅಗತ್ಯವಿದೆ. ಹೀಗಿದ್ದರೂ   ಉಭಯ ರಾಷ್ಟ್ರಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ನಮ್ಮ ನಡುವಿನ ಸಹಕಾರಕ್ಕೆ ಸಂಬಂಧಿಸಿದಂತೆ  ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳಲ್ಲಿನ ಪ್ರಧಾನಮಂತ್ರಿಗಳ ನಡುವಿನ ಹೊಂದಾಣಿಕೆ ಹಾಗೂ ಒಳನೋಟ ಹೊಸ ಆಯಾಮವನ್ನು ತಂದುಕೊಡುತ್ತದೆ. ರಕ್ಷಣಾ ಹಾಗೂ ಸುರಕ್ಷತಾ ಕ್ಷೇತ್ರಗಳಿಗೆ  ಸಂಬಂಧಿಸಿದಂತೆ ನಮ್ಮ ನಡುವಿನ ಸಹಕಾರ ಮತ್ತಷ್ಟು ಎತ್ತರಕ್ಕೇರಿದೆ.  ಈ ಸಂಬಂಧ ಸಾಗರೋತ್ತರ ಶಸ್ತ್ರಾಭ್ಯಾಸ   ಹಾಗೂ ವಿನಿಮಯ ಫಲಕಾರಿಯಾಗಿವೆ  ಮತ್ತು ಭಯೋತ್ಪಾದನೆ ನಿಗ್ರಹ ಹಾಗೂ ಗಡಿಯಾಚೆಗಿನ ಅಪರಾಧಗಳಿಗೆ ಸಂಬಂಧಿಸಿದಂತೆ ಉಭಯ ದ್ವಿಪಕ್ಷೀಯ  ವ್ಯವಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಇವೆಲ್ಲದರ ಜೊತೆಯಲ್ಲಿ ರಕ್ಷಣಾ ಸಹಕಾರಕ್ಕೆ ಸಂಬಂಧಿಸಿದಂತೆ ಮಹತ್ವದ ಒಪ್ಪಂದ  ಭೇಟಿಯಲ್ಲಿ ಏರ್ಪಟ್ಟಿರುವುದಕ್ಕೆ ನನಗೆ ವೈಯಕ್ತಿಕವಾಗಿ ತುಂಬಾ ಸಂತೋಷವಾಗುತ್ತಿದೆ.  ನಮ್ಮ ಪ್ರದೇಶದಲ್ಲಿ ಸಮತೋಲನ , ಸಮೃದ್ಧಿ, ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಬಲವಾದ  ಪ್ರಾದೇಶಿಕ ಸಂಸ್ಥೆಗಳನ್ನು ಹೊಂದುವುದು ಅನಿವಾರ್ಯ ಅನ್ನೋದನ್ನು ನಾವಿಬ್ಬರು ಮನಗಂಡಿದ್ದೇವೆ. ಈ ಹಿನ್ನೆಲೆಯಲ್ಲಿ ನಮ್ಮ ಸಾಮಾನ್ಯ ಆಸಕ್ತಿಗಳನ್ನ ಮುಂದುವರಿಸಿಕೊಂಡು ಹೋಗುವ ಸಲುವಾಗಿ ಈಸ್ಟ್ ಏಷ್ಯಾ ಸಮ್ಮಿತ್ ಹಾಗೂ ಇಂಡಿಯನ್ ಓಸಿನ್ ರಿಮ್ ಕಂಟ್ರೀಸ್ ನ ಸದಸ್ಯರ ಜೊತೆ ನಾವು   ಮತ್ತಷ್ಟು ಸಹಭಾಗಿತ್ವ ಸಾಧಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ  ಕಾರ್ಯನಿರ್ವಹಿಸುತ್ತಿದ್ದೇವೆ.
 
 
ನಮ್ಮ ಸಮಾಜಗಳ ನಡುವಿನ ಸಂಪರ್ಕ ಉಭಯ ರಾಷ್ಟ್ರಗಳ ನಡುವಿನ ಸಹಭಾಗಿತ್ವದ ಪ್ರಮುಖ ಆಧಾರಸ್ತಂಭವಾಗಿದೆ. ಆಸ್ಟ್ರೇಲಿಯಾ ಅರ್ಧ ಮಿಲಿಯನ್ ಭಾರತ ಮೂಲದ ನಾಗರಿಕರಿಗೆ ಮನೆಯಾಗಿದೆ. ಅವರ ಸಮೃದ್ಧಿ ಹಾಗೂ ಕಂಪನಶೀಲ  ಸಂಸ್ಕೃತಿ ನಮ್ಮ ನಡುವಿನ ಸಹಭಾಗಿತ್ವವನ್ನ  ಉತ್ಕ್ರಷ್ಟಗೊಳಿಸಿದೆ…ಕನ್ ಫ್ಲ್ಯೂಯೆನ್ಸ್ ಹೆಸರಿನ ಹಬ್ಬವನ್ನು ಆಸ್ಟ್ರೇಲಿಯಾದ ಹಲವಡೆ ಕಳೆದ  ವರ್ಷದಲ್ಲಿ ಆಚರಿಸಲಾಯಿತು. ಈ ನಿಟ್ಟಿನಲ್ಲಿ ಆಸ್ಟ್ರೇಲಿಯಾ ಸರ್ಕಾರ ನೀಡಿದ ಎಲ್ಲಾ ರೀತಿಯ ಬೆಂಬಲಕ್ಕೆ ನಾನು  ಅಲ್ಲಿನ ಪ್ರಧಾನಮಂತ್ರಿಯವರಿಗೆ ಧನ್ಯವಾದವನ್ನು ಅರ್ಪಿಸುತ್ತಿದ್ದೇನೆ. 
 
ಇತ್ತೀಚಿನ ವರ್ಷಗಳಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧದಲ್ಲಿ ಮಹತ್ತರ ದಾಪುಗಾಲನ್ನು ಇಡುತ್ತಿವೆ. ಮುಂದಿನ ದಿನಗಳಲ್ಲಿ ಎರಡು ರಾಷ್ಟ್ರಗಳಿಗಾಗಿ ನಾವು ಆಶ್ವಾಸನೆ ಹಾಗೂ ಅವಕಾಶಗಳನ್ನ ಎದುರುನೋಡುತ್ತಿದ್ದೇವೆ. ನಮ್ಮ ಬಲಿಷ್ಟ ಹಾಗೂ ಉಜ್ವಲ ಕಾರ್ಯತಂತ್ರದ ಸಹಕಾರ ಸುರಕ್ಷತೆ ಹಾಗೂ ಸಮಾಜದ ಅಭ್ಯುದ್ಯಯಕ್ಕಾಗಿ ಮಾತ್ರವಲ್ಲದೇ ನಮ್ಮ ಪ್ರಾದೇಶಿಕ ವ್ಯವಸ್ಥೆಯಲ್ಲಿನ ಸುರಕ್ಷತೆ , ಸ್ಥಿರತೆ ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಮಹತ್ತರ ಪಾತ್ರವನ್ನು ಹೊಂಧಿದೆ. ನನ್ನ ಈ ಎಲ್ಲಾ ಮಾತುಗಳೊಂಧಿಗೆ ಮತ್ತೊಮ್ಮೆ ಘನತೆವೆತ್ತ  ನಿಮಗೆ   ಸ್ವಾಗತವನ್ನು ಕೋರುತ್ತೇನೆ.  ಹಾಗೂ ಇವತ್ತಿನ   ಮಾತುಕತೆ ಫಲಪ್ರದ ಹಾಗೂ ಫಲಕಾರಿಯಾಗಿರಲಿ ಎಂದು ಹಾರೈಸುತ್ತೇನೆ….
 
ಧನ್ಯವಾದಗಳು…
 
****
AKT/NT