Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಇಂಡಿಯಾ ಪೋರ್ಟ್ಸ್ ಗ್ಲೋಬಲ್ ಲಿಮಿಟೆಡ್ (ಐಪಿಜಿಎಲ್) ಗೆ ಡಿಪಿಇ ಮಾರ್ಗಸೂಚಿಗಳು ಅನ್ವಯವಾಗದಂತೆ ವಿನಾಯಿತಿ ನೀಡಲು ಸಂಪುಟ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಇಂಡಿಯಾ ಪೋರ್ಟ್ಸ್ ಗ್ಲೋಬಲ್ ಲಿಮಿಟೆಡ್ (ಐಪಿಜಿಎಲ್)ಗೆ ಮೀಸಲು ಮತ್ತು ಜಾಗೃತ ನೀತಿಗಳನ್ನು ಹೊರತುಪಡಿಸಿ ಡಿಪಿಇ ಮಾರ್ಗಸೂಚಿಗಳಿಂದ ವಿನಾಯಿತಿ ನೀಡಲು ತನ್ನ ಅನುಮೋದನೆ ನೀಡಿದೆ.

ಐಪಿಜಿಎಲ್ ಕಂಪನಿಗಳ ಕಾಯಿದೆ 2013ರ ಅಡಿಯಲ್ಲಿ ರಚನೆಯಾಗಿದ್ದು, ಒಂದು ವಿಶೇಷ ಉದ್ದೇಶದ ವಾಹಕವಾಗಿದೆ, ಶಿಪ್ಪಿಂಗ್ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಡಿಯಲ್ಲಿ ಇರಾನ್ ನಲ್ಲಿನ ಚಬಹರ್ ನ ಶಾಹಿದ್ ಬೆಹೇಸ್ತಿ ಬಂದರಿನ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಇದನ್ನು ಜವಾಹರಲಾಲ್ ನೆಹರೂ ಬಂದರು ಟ್ರಸ್ಟ್ (ಜೆಎನ್.ಪಿ.ಟಿ.) ಮತ್ತು ದೀನದಯಾಳ್ ಬಂದರು ಟ್ರಸ್ಟ್ (ಡಿಪಿಟಿ) [ಈ ಹಿಂದೆ ಕಾಂಡ್ಲಾ ಬಂದರು ಟ್ರಸ್ಟ್ (ಕೆಪಿಟಿ) ಆಗಿತ್ತು], ಜಂಟಿಯಾಗಿ ರೂಪಿಸಿವೆ.

ಜಂಟಿ ಸಮಗ್ರ ಯೋಜನೆ (ಜೆಸಿಪಿಒಎ) ಯಿಂದ ಯುಎಸ್ಎ ಹಿಂತೆಗೆದುಕೊಂಡ ನಂತರ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅಮೆರಿಕ ನಿರ್ಬಂಧಗಳ ಸಂಭವನೀಯ ಪರಿಣಾಮದಿಂದ ಜೆಎನ್‌.ಪಿಟಿ ಮತ್ತು ಡಿಪಿಟಿಯನ್ನು ಹೊರಗಿಡುವಂತೆ 29 ಅಕ್ಟೋಬರ್ 2018 ರಂದು ಶಿಪ್ಪಿಂಗ್ ಸಚಿವಾಲಯಕ್ಕೆ ಸಲಹೆ ನೀಡಿತ್ತು.

ಇದರ ಆಧಾರದ ಮೇಲೆ ಮತ್ತು ಅಧಿಕಾರಯುಕ್ತ ಸಮಿತಿಯ ಅನುಮೋದನೆಯ ಮೇಲೆ ಜೆಎನ್.ಪಿ.ಟಿ. ಮತ್ತು ಡಿಪಿಟಿಯ ಎಲ್ಲ ಶೇರುಗಳನ್ನು ಸಾಗರಮಾಲಾ ಅಭಿವೃದ್ಧಿ ಕಂಪನಿ ನಿಯಮಿತ (ಎಸ್.ಡಿ.ಸಿ.ಎಲ್.) 2018ರ ಡಿಸೆಂಬರ್ 17ರಂದು ಖರೀದಿಸಿದೆ. ಎಸ್.ಡಿ.ಸಿ.ಎಲ್. ಒಂದು ಸಿಪಿಎಸ್.ಇ. ಆಗಿದೆ, ಹೀಗಾಗಿ ಐಪಿಜಿಎಲ್ ಎಸ್.ಡಿ.ಸಿ.ಎಲ್.ನ ಅಂಗಸಂಸ್ಥೆಯಾಗಿದ್ದು, ಅದು ಕೂಡ ಸಿಪಿಎಸ್ಇ ಆಗಿದೆ. ಇದರ ಪರಿಣಾಮವಾಗಿ, ಡಿಪಿಇಯ ಮಾರ್ಗಸೂಚಿಗಳು ತಾಂತ್ರಿಕವಾಗಿ ಐಪಿಜಿಎಲ್ ಗೂ ಅನ್ವಯವಾಗುತ್ತವೆ.

ಚಬಹರ್ ಬಂದರು ವ್ಯೂಹಾತ್ಮಕ ಉದ್ದೇಶಗಳೊಂದಿಗೆ ದೇಶದ ಮೊದಲ ಸಾಗರೋತ್ತರ ಬಂದರು ಯೋಜನೆಯಾಗಿರುವ ಕಾರಣ, ಶಿಪ್ಪಿಂಗ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನಿರ್ದೇಶನಗಳ ಅನ್ವಯ, ಡಿಪಿಇಯ ಮಾರ್ಗಸೂಚಿಗಳು 5 ವರ್ಷಗಳ ಅವಧಿಯವರೆಗೆ ಅನ್ವಯವಾಗದಂತೆ ಐಪಿಜಿಎಲ್ ಅನ್ನು ಬೋರ್ಡ್ ನಿರ್ವಹಣೆಯ ಕಂಪನಿಯಾಗಿ ಮುಂದುವರಿಸುವ ತುರ್ತು ಅಗತ್ಯವಿದೆ. ಆ ಪ್ರಕಾರವಾಗಿ, ಯೋಜನೆಯ ಸುಗಮ ಅನುಷ್ಠಾನಕ್ಕಾಗಿ ಶಿಪ್ಪಿಂಗ್ ಸಚಿವಾಲಯವು ಡಿಪಿಇ ಮಾರ್ಗಸೂಚಿಗಳು ಅನ್ವಯವಾಗುವುದರಿಂದ ಐಪಿಜಿಎಲ್ ಗೆ ವಿನಾಯಿತಿ ಕೋರಿತ್ತು.

**********