Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಇಂಡೋನೇಷಿಯಾ ಮತ್ತು ಗಿರ್ಗಿಜ್ ಗಣರಾಜ್ಯದೊಂದಿಗೆ ಯುವ ಮತ್ತು ಕ್ರೀಡಾ ವಿಚಾರಗಳಲ್ಲಿನ ಸಹಕಾರದ ತಿಳಿವಳಿಕೆ ಒಪ್ಪಂದಗಳ ಬಗ್ಗೆ ಸಂಪುಟಕ್ಕೆ ವಿವರಣೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಭಾರತ ಮತ್ತು ಈ ಕೆಳಗಿನ ರಾಷ್ಟ್ರಗಳೊಂದಿಗೆ ಸಹಿ ಹಾಕಲಾಗಿರುವ ತಿಳಿವಳಿಕೆ ಒಪ್ಪಂದಗಳ ಬಗ್ಗೆ ವಿವರ ನೀಡಲಾಯಿತು:

(i) ಇಂಡೋನೇಷಿಯಾದೊಂದಿಗೆ ಯುವ ಮತ್ತು ಕ್ರೀಡಾ ವಿಚಾರಗಳಲ್ಲಿನ ಸಹಕಾರ, ಮತ್ತು

(ii) ಕಿರ್ಗಿಜ್ ಗಣರಾಜ್ಯದೊಂದಿಗೆ ಯುವ ಅಭಿವೃದ್ಧಿ ಕ್ಷೇತ್ರದ ಸಹಕಾರ.

ಈ ತಿಳಿವಳಿಕೆ ಒಪ್ಪಂದವು ಇಂಡೋನೇಷಿಯಾ ಮತ್ತು ಕಿರ್ಗಿಜ್ ಗಣರಾಜ್ಯದೊಂದಿಗೆ ಯುವ ವಿನಿಮಯ ಕಾರ್ಯಕ್ರಮ ಆಯೋಜನೆಗೆ ಮತ್ತು ಇತರ ಯುವ ಮತ್ತು ಕ್ರೀಡಾ ಸಂಬಂಧಿತ ವಿಚಾರಗಳ ಸಹಕಾರಕ್ಕೆ ಅವಕಾಶ ನೀಡುತ್ತದೆ.

ಅಂತಾರಾಷ್ಟ್ರೀಯ ಯುವ ವಿನಿಮಯ ಕಾರ್ಯಕ್ರಮಗಳು ಯುವಜನರ ನಡುವೆ ಕಲ್ಪನೆಗಳು, ಮೌಲ್ಯಗಳು ಮತ್ತು ಸಾಂಸ್ಕೃತಿಕ ವಿನಿಮಯ ಉತ್ತೇಜಿಸುತ್ತವೆ ಮತ್ತು ಯುವಕರಲ್ಲಿ ಅಂತಾರಾಷ್ಟ್ರೀಯ ದೃಷ್ಟಿಕೋನ ಬೆಳೆಯಲು ನೆರವಾಗುತ್ತವೆ. ಜೊತೆಗೆ ಈ ಕಾರ್ಯಕ್ರಮಗಳು ಶಾಂತಿಯನ್ನು ಉತ್ತೇಜಿಸುವುದಲ್ಲದೆ, ರಾಷ್ಟ್ರಗಳ ನಡುವೆ ತಿಳಿವಳಿಕೆ ಮತ್ತು ಬಾಂಧವ್ಯ ಬಲಪಡಿಸಲು ನೆರವಾಗುತ್ತದೆ. ಕ್ರೀಡೆ ಮತ್ತು ಯುವ ಜನರಿಗೆ ಸಂಬಂಧಿಸಿದ ಇತರ ವಿಚಾರಗಳ ಸಹಕಾರ ಸಹ ಪಾಲುದಾರ ರಾಷ್ಟ್ರದ ಯುವ ಅಭಿವೃದ್ಧಿ ಮತ್ತು ಕ್ರೀಡಾ ಉತ್ತೇಜನಕ್ಕೆ ಸಹಕಾರಿಯಾಗಲಿದೆ.

ಯುವ ಮತ್ತು ಕ್ರೀಡಾ ಕ್ಷೇತ್ರದಲ್ಲಿನ ದ್ವಿಪಕ್ಷೀಯ ವಿನಿಮಯ ಕಾರ್ಯಕ್ರಮಗಳಿಂದ ಆದ ಲಾಭವು, ಜಾತಿ, ಧರ್ಮ ಮತ್ತು ಲಿಂಗ ತಾರತಮ್ಯವಿಲ್ಲದೆ ಎಲ್ಲ ಯುವಕರಿಗೂ ಸಮಾನವಾಗಿ ಲಭ್ಯವಾಗಲಿದೆ.

ಯುವ ವಿನಿಮಯ ಕಾರ್ಯಕ್ರಮಗಳಿಗೆ ಮತ್ತು ಇತರ ಕಾರ್ಯಕ್ರಮಗಳಿಗೆ ಯುವಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪಾದರ್ಶಕ ಮಾದರಿಯಲ್ಲಿ ನಡೆಯಲಿದೆ ಮತ್ತು ಈ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿನ ಕಾರ್ಯಕ್ರಮದ ಫಲಶ್ರುತಿ ಸಾರ್ವಜನಿಕ ಪರಿಶೀಲನೆಗೆ ಮುಕ್ತವಾಗಿರುತ್ತದೆ.

ಯುವ ವಿನಿಮಯ ಮತ್ತು ಇತರ ಕಾರ್ಯಕ್ರಮಗಳು ಯುವಕರಲ್ಲಿ ಅಂತಾರಾಷ್ಟ್ರೀಯ ದೃಷ್ಟಿಕೋನ ಬೆಳೆಸಿಕೊಳ್ಳಲು ನೆರವಾಗುತ್ತವೆ ಮತ್ತು ಅವರ ತಜ್ಞತೆ ಮತ್ತು ಜ್ಞಾನವನ್ನು ವಿಸ್ತರಿಸುತ್ತದೆ.

*****

AKT/VBA/SH