ಪಿಎಂಇಂಡಿಯಾ
ನಾನು ಜುಲೈ 6 ರಿಂದ 11ರ ವರೆಗೆ ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ಗೆ ಮೂರು ರಾಷ್ಟ್ರಗಳ ಭೇಟಿ ಕೈಗೊಳ್ಳುತ್ತಿದ್ದೇನೆ.
ಇಂಡೋನೇಷ್ಯಾ ಗಣತಂತ್ರದ ಅಧ್ಯಕ್ಷ ಘನತೆವೆತ್ತ ಶ್ರೀ ಪ್ರಬೊವೊ ಸುಬಿಯಾಂಟೊ ಅವರ ಆಹ್ವಾನದ ಮೇರೆಗೆ ನಾನು ಜುಲೈ 6-8ರವರೆಗೆ ಇಂಡೋನೇಷ್ಯಾಕ್ಕೆ ಭೇಟಿ ನೀಡುತ್ತಿದ್ದೇನೆ. 2018ರಲ್ಲಿ ನಾನು ಇಂಡೋನೇಷ್ಯಾಕ್ಕೆ ನೀಡಿದ ಮೊದಲ ಭೇಟಿಯ ಸಂದರ್ಭದಲ್ಲಿ ಭಾರತ ಮತ್ತು ಇಂಡೋನೇಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಸಮಗ್ರ ಕಾರ್ಯತಂತ್ರದ ಸಹಭಾಗಿತ್ವದ ಮಟ್ಟಕ್ಕೆ ಏರಿಸಲಾಗಿತ್ತು. ನಮ್ಮ ದ್ವಿಪಕ್ಷೀಯ ಸಂಬಂಧಗಳ ಉನ್ನತಿಯ ನಂತರ ಇದು ನನ್ನ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. 2025ರ ಜನವರಿ 26ರಂದು ನಮ್ಮ ಗಣರಾಜ್ಯೋತ್ಸವ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿದ್ದ ಅಧ್ಯಕ್ಷ ಪ್ರಬೋವೊ ಅವರ ಅಧಿಕೃತ ಭಾರತ ಭೇಟಿಯ ನಂತರ ಇದು ನನ್ನ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. ಭಾರತ ಮತ್ತು ಇಂಡೋನೇಷ್ಯಾ ಬಲವಾದ ನಾಗರಿಕ ಮತ್ತು ಜನ ಸಂಬಂಧಗಳನ್ನು ಹಂಚಿಕೊಂಡಿವೆ. ನನ್ನ ಭೇಟಿಯು ನಮ್ಮ ಬಹುಮುಖಿ ಪಾಲುದಾರಿಕೆಯ ಎಲ್ಲಾ ಅಂಶಗಳನ್ನು ಮತ್ತಷ್ಟು ಗಾಢಗೊಳಿಸುತ್ತದೆ. ಈ ಭೇಟಿಯ ಸಮಯದಲ್ಲಿ, ನಾನು ಇಂಡೋನೇಷ್ಯಾದಲ್ಲಿರುವ ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸುತ್ತೇನೆ ಮತ್ತು ಅಧ್ಯಕ್ಷ ಪ್ರಬೋವೊ ಅವರೊಂದಿಗೆ ಯೋಗ್ಯಕರ್ತಾದಲ್ಲಿರುವ ಪ್ರಂಬನನ್ ದೇವಾಲಯ ಸಂಕೀರ್ಣಕ್ಕೆ ಭೇಟಿ ನೀಡಲಿದ್ದೇನೆ. ಈ ದೇವಾಲಯವು ನಮ್ಮ ನಿಕಟ ಸಾಂಸ್ಕೃತಿಕ ಸಂಬಂಧಗಳಿಗೆ ಮತ್ತೊಂದು ಗಮನಾರ್ಹ ಸಾಕ್ಷಿಯಾಗಿದೆ.
ಇಂಡೋನೇಷ್ಯಾದಿಂದ ನಾನು, ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಗೌರವಾನ್ವಿತ ಆಂಥೋನಿ ಅಲ್ಬನೀಸ್ ಅವರ ಆಹ್ವಾನದ ಮೇರೆಗೆ, ಮೆಲ್ಬೋರ್ನ್ಗೆ ಪ್ರಯಾಣಿಸುತ್ತೇನೆ. ನನ್ನ ಭೇಟಿಯು ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲಿದೆ. ನಾನು ಪ್ರಧಾನಮಂತ್ರಿ ಅಲ್ಬನೀಸ್ ಅವರೊಂದಿಗಿನ ನನ್ನ ಚರ್ಚೆಯ ವೇಳೆ ರಕ್ಷಣೆ ಮತ್ತು ಭದ್ರತೆ, ವ್ಯಾಪಾರ ಮತ್ತು ಹೂಡಿಕೆಗಳು, ಶಿಕ್ಷಣ ಮತ್ತು ಸಾರಿಗೆ ಹಾಗೂ ಜನರ ನಡುವಿನ ಸಂಬಂಧಗಳ ಕ್ಷೇತ್ರಗಳಲ್ಲಿ ನಮ್ಮ ಸಂಬಂಧಗಳನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯುತ್ತೇನೆ. ಮೆಲ್ಬೋರ್ನ್ನಲ್ಲಿ, ನಮ್ಮ ವ್ಯೂಹಾತ್ಮಕ ಪಾಲುದಾರಿಕೆಯ ಪ್ರಮುಖ ಆಧಾರಸ್ತಂಭವಾಗಿರುವ ಭಾರತೀಯ ವಲಸಿಗರೊಂದಿಗೆ ಸಂವಹನ ನಡೆಸುವ ಅವಕಾಶ ನನಗೆ ದೊರೆತಿದೆ. ಇದಲ್ಲದೆ, ಈ ಭೇಟಿಯು ಉದಯೋನ್ಮುಖ ಮತ್ತು ನಿರ್ಣಾಯಕ ತಂತ್ರಜ್ಞಾನಗಳು, ಕ್ರೀಡೆ ಮತ್ತು ಕ್ರೀಡಾ ವಿಜ್ಞಾನ ಕ್ಷೇತ್ರಗಳಲ್ಲಿ ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಗಾಢವಾಗಿಸಲು ಭಾರತ ಮತ್ತು ಆಸ್ಟ್ರೇಲಿಯಾಕ್ಕೆ ಅವಕಾಶವನ್ನು ಒದಗಿಸುತ್ತದೆ.
ಮೆಲ್ಬೋರ್ನ್ನಿಂದ ನಾನು ನ್ಯೂಜಿಲೆಂಡ್ನ ಪ್ರಧಾನಮಂತ್ರಿ ಗೌರವಾನ್ವಿತ ಕ್ರಿಸ್ಟೋಫರ್ ಲುಕ್ಸನ್ ಅವರ ಆಹ್ವಾನದ ಮೇರೆಗೆ, ನ್ಯೂಜಿಲೆಂಡ್ನ ಆಕ್ಲೆಂಡ್ಗೆ ಭೇಟಿ ನೀಡಲಿದ್ದೇನೆ. ಮಾರ್ಚ್ 2025ರಲ್ಲಿ ಪ್ರಧಾನಮಂತ್ರಿ ಲುಕ್ಸನ್ ಅವರು ಭಾರತಕ್ಕೆ ಭೇಟಿ ನೀಡಿದ ನಂತರ ನಮ್ಮ ದ್ವಿಪಕ್ಷೀಯ ಸಂಬಂಧಗಳಲ್ಲಿ ಬಲವರ್ಧನೆಗೆ ನನ್ನ ಭೇಟಿ ಅನುವುಮಾಡಿಕೊಡಲಿದೆ. ನನ್ನ ಭೇಟಿಯ ವೇಳೆ ಆರ್ಥಿಕ ಮತ್ತು ವಾಣಿಜ್ಯ ಯೋಜನೆಗಳನ್ನು ಮತ್ತಷ್ಟು ವಿಸ್ತರಿಸುವುದು ಹೇಗೆ ಎಂಬ ಬಗ್ಗೆ ಪ್ರಧಾನಿ ಲುಕ್ಸನ್ ಅವರೊಂದಿಗೆ ಚರ್ಚಿಸಲಿದ್ದೇನೆ. ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ದ್ವಿಪಕ್ಷೀಯ ವ್ಯಾಪಾರ ಮತ್ತು ವಾಣಿಜ್ಯ ಸಂಬಂಧಗಳನ್ನು ಬಲಪಡಿಸಲು ಭಾರತ ಮತ್ತು ನ್ಯೂಜಿಲೆಂಡ್ ಬದ್ಧವಾಗಿವೆ. ನಮ್ಮ ದ್ವಿಪಕ್ಷೀಯ ಸಂಬಂಧಗಳಿಗೆ ಭಾರತೀಯ ವಲಸಿಗರು ಗಮನಾರ್ಹ ಕೊಡುಗೆಯನ್ನು ನೀಡಿದ್ದಾರೆ. ಈ ಭೇಟಿಯ ಸಮಯದಲ್ಲಿ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಭಾರತೀಯ ಸಮುದಾಯದ ದೊಡ್ಡ ಸಭೆಯನ್ನು ಉದ್ದೇಶಿಸಿ ಮಾತನಾಡಲು ನಾನು ಎದುರು ನೋಡುತ್ತಿದ್ದೇನೆ.
ಪೂರ್ವ ಹಿಂದೂ ಮಹಾಸಾಗರದಲ್ಲಿ ಇಂಡೋನೇಷ್ಯಾ, ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಆಸ್ಟ್ರೇಲಿಯಾ ಹಾಗೂ ನಂತರ ನ್ಯೂಜಿಲೆಂಡ್ಗೆ ನನ್ನ ಭೇಟಿಯು ಭಾರತದ ʻಆಕ್ಟ್ ಈಸ್ಟ್ ಪಾಲಿಸಿʼ, ʻಮಹಾಸಾಗರ್ ದೃಷ್ಟಿಕೋನʼ ಹಾಗೂ ʻಮುಕ್ತ ಇಂಡೋ-ಪೆಸಿಫಿಕ್ʼ ಕಡೆಗೆ ನಮ್ಮ ದೃಷ್ಟಿಕೋನವನ್ನು ಮತ್ತಷ್ಟು ಬಲಪಡಿಸುತ್ತದೆ.
*****
Over the next few days, I will be attending various programmes in Indonesia, Australia and New Zealand. The aim of these meetings would be to boost economic and strategic cooperation with these valued developmental partners and ensure the youth of our nation get more…
— Narendra Modi (@narendramodi) July 6, 2026