Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಇಂದು ಅಧಿಕಾರಕ್ಕೆ ಬಂದ ಉತ್ತರ ಪ್ರದೇಶದ ನೂತನ ಸರ್ಕಾರಕ್ಕೆ ಪ್ರಧಾನಿ ಶುಭಾಶಯ

ಇಂದು ಅಧಿಕಾರಕ್ಕೆ ಬಂದ ಉತ್ತರ ಪ್ರದೇಶದ ನೂತನ ಸರ್ಕಾರಕ್ಕೆ ಪ್ರಧಾನಿ ಶುಭಾಶಯ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಉತ್ತರ ಪ್ರದೇಶದಲ್ಲಿ ನೂತನ ಸರ್ಕಾರ ರಚನೆಗಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ ಶ್ರೀ. ಯೋಗಿ ಆದಿತ್ಯನಾಥ್, ಶ್ರೀ. ಕೇಶವ ಪ್ರಸಾದ್ ಮೌರ್ಯ, ಶ್ರೀ. ದಿನೇಶ್ ಶರ್ಮಾ ಮತ್ತು ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ. ನೂತನ ಸರ್ಕಾರದ ಮೇಲೆ ಅಪಾರ ವಿಶ್ವಾಸ ವ್ಯಕ್ತಪಡಿಸಿರುವ ಪ್ರಧಾನಮಂತ್ರಿ, ಹೊಸ ತಂಡದ ಅಡಿಯಲ್ಲಿ ಯು.ಪಿ. ದಾಖಲೆಯ ಅಭಿವೃದ್ಧಿ ಕಾಣಲಿದೆ ಮತ್ತು ಯು.ಪಿ. ಅಭಿವೃದ್ಧಿ ಹೊಂದಿದಾಗ ಭಾರತ ಕೂಡ ಅಭಿವೃದ್ಧಿ ಕಾಣುತ್ತದೆ ಎಂದು ತಿಳಿಸಿದ್ದಾರೆ.

“ಯೋಗಿ ಆದಿತ್ಯನಾಥ್ ಜೀ, ಕೇಶವ ಪ್ರಸಾದ್ ಮೌರ್ಯ ಜೀ, ದಿನೇಶ್ ಶರ್ಮಾ ಜೀ ಮತ್ತು ಇಂದು ಪ್ರಮಾಣ ವಚನ ಸ್ವೀಕರಿಸಿದ ಎಲ್ಲರಿಗೂ ಅಭಿನಂದನೆಗಳು. ಯು.ಪಿ.ಯ ಸೇವೆ ಮಾಡುವುದಕ್ಕೆ ಶುಭ ಹಾರೈಕೆಗಳು.

ಈ ಹೊಸ ತಂಡ ಉತ್ತರ ಪ್ರದೇಶವನ್ನು ಉತ್ತಮ ಪ್ರದೇಶ ಮಾಡುವಲ್ಲಿ ಯಾವುದೇ ಅವಕಾಶ ಕೈಚೆಲ್ಲುವುದಿಲ್ಲ ಎಂಬ ಅತೀವ ವಿಶ್ವಾಸ ನನಗಿದೆ. ದಾಖಲೆಯ ಅಭಿವೃದ್ಧಿ ಕಾಣಲಿದೆ.

ನಮ್ಮ ಏಕೈಕ ಉದ್ದೇಶ ಮತ್ತು ಮಿಷನ್ ಅಭಿವೃದ್ಧಿಯಾಗಿದೆ. ಯಾವಾಗ ಯು.ಪಿ. ಅಭಿವೃದ್ಧಿ ಹೊಂದುತ್ತದೋ, ಆಗ ಭಾರತವೂ ಅಭಿವೃದ್ಧಿ ಕಾಣುತ್ತದೆ. ನಾವು ಯುಪಿಯ ಯುವಕರಿಗೆ ಅವಕಾಶಗಳನ್ನು ಸೃಷ್ಟಿಸ ಬಯಸುತ್ತೇವೆ.”, ಎಂದು ಪ್ರಧಾನಿ ತಿಳಿಸಿದ್ದಾರೆ.

*****

AKT/NT