Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಇಂಧನ ದಕ್ಷತೆ ಸೇವೆಗಳನ್ನು ಒದಗಿಸಲು ಸಂಯುಕ್ತ ಅರಬ್ ಎಮಿರೇಟ್ಸ್ ಮತ್ತು ಭಾರತದ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಪೂರ್ವಾನ್ವಯ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಇಂಧನ ನಿರ್ವಹಣೆ ಮತ್ತು ಸಂರಕ್ಷಣೆಯ ಕ್ಷೇತ್ರದಲ್ಲಿ ವಿವಿಧ ಸೇವೆಗಳನ್ನು ಒದಗಿಸಲು ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆಯ ಅಡಿ ಬರುವ ಸ್ವಾಯತ್ತ ಸಂಸ್ಥೆಯಾದ ರಾಷ್ಟ್ರೀಯ ಉತ್ಪಾದಕ ಮಂಡಳಿ ಹಾಗೂ ಯು.ಎ.ಇ.ಯ ಅಲ್ ಎತಿಹಾದ್ ಇಂಧನ ಸೇವೆಗಳ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ತಿಳಿವಳಿಕೆ ಒಪ್ಪಂದ (ಎಂ.ಓ.ಯು)ಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

ಈ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿ, ಎನ್.ಪಿ.ಸಿ. ಈ ಕೆಳಕಂಡ ಸೇವೆಗಳನ್ನು ಒದಗಿಸುತ್ತದೆ:

1. ಇಂಧನ ನಿರ್ಧರಣೆ ಸೇವೆ
2. ಇಂಧನ ಆಡಿಟರ್ ಗಳ ತರಬೇತಿ ಮತ್ತು ಪ್ರಮಾಣೀಕರಣ
3. ಬೇಡಿಕೆಯ ಕಡೆಯ ನಿರ್ವಹಣೆ.

ಈ ಮಧ್ಯೆ, ಅಲ್ ಎತಿಹಾದ್ ಇ.ಎಸ್. ಪ್ರಕರಣದಿಂದ ಪ್ರಕರಣದ ಆಧಾರದ ಮೇಲೆ ಎಲ್ಲ ಸೂಕ್ತ ಯೋಜನೆಗಳಿಗೆ ಈ ಕೆಳಕಂಡ ಸೇವೆಗಳನ್ನು ಒದಗಿಸುತ್ತದೆ:

i) ಯು.ಎ.ಇ. ಸರ್ಕಾರ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ ನಲ್ಲಿರುವ ಖಾಸಗಿ ಒಡೆತನದ ಸಂಸ್ಥೆಗಳೊಂದಿಗೆ ಗ್ರಾಹಕ ಬೆಂಬಲ.

ii) ಯು.ಎ.ಇ.ಯಲ್ಲಿ ಕ್ಷೇತ್ರ ಲೆಕ್ಕಪರಿಶೋಧನೆ ವೃತ್ತಿಪರರಿಗೆ ಎಲ್ಲ ಸ್ಥಳೀಯ ಬೆಂಬಲ.

iii) ಯು.ಎ.ಇ.ಯಲ್ಲಿ ಇಂಧನ ಲೆಕ್ಕಪರಿಶೋಧಕರಿಗೆ ತರಬೇತಿ ಮತ್ತು ಪ್ರಮಾಣೀಕರಣಕ್ಕೆ ಎಲ್ಲ ಸ್ಥಳೀಯ ಬೆಂಬಲ.

iv) ಯು.ಎ.ಇ.ಯಲ್ಲಿ ನೆಲೆ ಹೊಂದಿರುವ ಕೈಗಾರಿಕೆಗಳಿಗೆ ಬೇಡಿಕೆ ಕಡೆಯ ನಿರ್ವಹಣೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಬೆಂಬಲ.

ಈ ಒಪ್ಪಂದವು ಎನ್.ಪಿ.ಸಿ. ಅತ್ಯುನ್ನತ ಮೌಲ್ಯದ ಅವಕಾಶಗಳನ್ನು ಅಂದರೆ, ದುಬೈ ಮತ್ತು ಇತರ ಗಲ್ಫ್ ಸಹಕಾರ ಮಂಡಳಿಗಳ (ಜಿಸಿಸಿ) ಸದಸ್ಯ ರಾಷ್ಟ್ರಗಳಲ್ಲಿ ಇಂಧನ ನಿರ್ಮಾಣ ಮತ್ತು ಇಂಧನ ದಕ್ಷತೆ ಕ್ಷೇತ್ರದಲ್ಲಿ ಸಾಂಸ್ಥಿಕ ವ್ಯವಸ್ಥೆ ಅಭಿವೃದ್ಧಿಪಡಿಸಲು ಅವಕಾಶ ಕಲ್ಪಿಸುತ್ತದೆ. ಇದು ತ್ವರಿತವಾಗಿ ಬದಲಾಗುತ್ತಿರುವ ಅಂತಾರಾಷ್ಟ್ರೀಯ ವಾಣಿಜ್ಯ ಸನ್ನಿವೇಶದಲ್ಲಿ ಎನ್.ಸಿ.ಪಿ.ಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಮಾನ್ಯತೆ ಮತ್ತು ಅವಕಾಶವನ್ನು ಒದಗಿಸುತ್ತದೆ. ಈ ತಿಳಿವಳಿಕೆ ಒಪ್ಪಂದವು, ಎನ್.ಸಿ.ಪಿ.ಗೆ ಇತರ ಅಂತಾರಾಷ್ಟ್ರೀಯ ಸಹಯೋಗಿ ಪಾಲುದಾರರೊಂದಿಗೆ ತನ್ನ ಕಾರ್ಯಕ್ರಮಗಳನ್ನು ಹೆಚ್ಚಿಸಿಕೊಳ್ಳಲು ಮತ್ತು ಈ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಲು ಅಭೂತಪೂರ್ವ ಅವಕಾಶ ನೀಡುತ್ತದೆ. ಈ ತಿಳಿವಳಿಕೆ ಒಪ್ಪಂದವು ಜಿಸಿಸಿ ಸದಸ್ಯ ರಾಷ್ಟ್ರಗಳಲ್ಲಿ ಎನ್.ಸಿ.ಪಿ.ಯ ಉತ್ತೇಜನಕ್ಕೆ ಸಹಕಾರಿಯಾಗುತ್ತದೆ ಮತ್ತು ಇಂಧನ ಕ್ಷೇತ್ರದಲ್ಲಿ ಎನ್.ಸಿ.ಪಿ.ಗೆ. ವಾಣಿಜ್ಯಾವಕಾಶ ಸೃಷ್ಟಿಸುತ್ತದೆ.

*****

AKT/VBA/SH