Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಇಸ್ರೋದಿಂದ ಭಾರತದ ಅತ್ಯಂತ ಭಾರವಾದ ಸಂವಹನ ಉಪಗ್ರಹ CMS-03ರ ಯಶಸ್ವಿ ಉಡಾವಣೆಗೆ ಪ್ರಧಾನಮಂತ್ರಿ ಅಭಿನಂದನೆ


ಭಾರತದ ಅತ್ಯಂತ ಭಾರವಾದ ಸಂವಹನ ಉಪಗ್ರಹ CMS-03ರ ಯಶಸ್ವಿ ಉಡಾವಣೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿ ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ: 

“ನಮ್ಮ ಬಾಹ್ಯಾಕಾಶ ವಲಯವು ನಮ್ಮನ್ನು ಹೆಮ್ಮೆಪಡುವಂತೆ ಮಾಡುತ್ತಲೇ ಇದೆ!

ಭಾರತದ ಅತ್ಯಂತ ಭಾರವಾದ ಸಂವಹನ ಉಪಗ್ರಹ CMS-03ರ ಯಶಸ್ವಿ ಉಡಾವಣೆ ಮಾಡಿರುವ ಇಸ್ರೋಗೆ ಅಭಿನಂದನೆಗಳು.

ನಮ್ಮ ಬಾಹ್ಯಾಕಾಶ ವಿಜ್ಞಾನಿಗಳಿಂದ ನಡೆಸಲ್ಪಡುವ ನಮ್ಮ ಬಾಹ್ಯಾಕಾಶ ವಲಯವು ಶ್ರೇಷ್ಠತೆ ಮತ್ತು ನಾವಿನ್ಯತೆಗೆ ಸಮಾನಾರ್ಥಕವಾಗಿದೆ ಎಂಬುದು ಶ್ಲಾಘನೀಯ. ಅವರ ಯಶಸ್ಸುಗಳು ರಾಷ್ಟ್ರದ ಪ್ರಗತಿಯನ್ನು ಮುನ್ನಡೆಸಿವೆ ಮತ್ತು ಅಸಂಖ್ಯಾತರ ಜೀವನವನ್ನು ಸಬಲಗೊಳಿಸಿವೆ.

@isro”

*****