Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಇಸ್ಲಾಮಿಕ್ ಗಣರಾಜ್ಯ ಇರಾನ್‌ ಅಧ್ಯಕ್ಷರಾಗಿ ಚುನಾಯಿತರಾದ ಮಸೌದ್‌ ಪೆಜೆಶ್ಕಿಯಾನ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ


ಇಸ್ಲಾಮಿಕ್‌ ಗಣರಾಜ್ಯ ಇರಾನ್‌ ನ ಅಧ್ಯಕ್ಷರಾಗಿ ಚುನಾಯಿತರಾದ ಮಸೌದ್‌ ಮೆಜೆಶ್ಕಿಯಾನ್‌ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. 

ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್‌ ಮಾಡಿದ್ದಾರೆ: 

“ಇಸ್ಲಾಮಿಕ್ ಗಣರಾಜ್ಯವಾದ ಇರಾನ್ ಅಧ್ಯಕ್ಷರಾಗಿ ಚುನಾಯಿತರಾದ @drpezeshkian ಅವರಿಗೆ ಅಭಿನಂದನೆಗಳು. ನಮ್ಮ ಜನರು ಮತ್ತು ಪ್ರದೇಶದ ಅಭ್ಯುದಯಕ್ಕಾಗಿ ನಮ್ಮ ಆತ್ಮೀಯ ಮತ್ತು ದೀರ್ಘಾಕಾಲದ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಬಲಗೊಳಿಸಲು ನಿಮ್ಮೊಂದಿಗೆ ನಿಕಟ ಕಾರ್ಯನಿರ್ವಹಣೆಗೆ ಎದುರು ನೋಡುತ್ತಿದ್ದೇನೆ.”

*****