ಪಿಎಂಇಂಡಿಯಾ
ದೀನ್ದಯಾಳ್ ಅಂತ್ಯೋದಯ ಯೋಜನೆ ಮೂಲಕಸ್ವಸಹಾಯ ಸಂಘಗಳ ಅಭಿಯಾನಕ್ಕೆಮತ್ತಷ್ಟು ಉತ್ತೇಜನ ಸಿಕ್ಕಿದೆ. ಅಲ್ಲದೇಈಶಾನ್ಯ ರಾಜ್ಯಗಳ ಅಭಿವೃದ್ಧಿಸಚಿವಾಲಯದಿಂದ ನೀಡಲಾಗುವ ಬಡ್ಡಿಮೇಲಿನ ಸಬ್ಸಿಡಿಯ ಜೊತೆಗೆ ಈಶಾನ್ಯರಾಜ್ಯಗಳ ಅಭಿವೃದ್ಧಿ ಆರ್ಥಿಕಸಂಸ್ಥೆಯ ಮೂಲಕ ನೀಡಲಾಗ್ತಿರುವಸಾಲಗಳ ಮೂಲಕ ಅತಿದೊಡ್ಡ ಸಂಖ್ಯೆಯಲ್ಲಿಸ್ವಸಹಾಯ ಸಂಘಗಳು ಲಾಭವನ್ನುಪಡೆದುಕೊಳ್ಳುತ್ತಿವೆ.
ಕೇಂದ್ರಸರ್ಕಾರ ಸ್ವಸಹಾಯ ಸಂಘಗಳು ಅಭಿವೃದ್ಧಿಗೆ ಬದ್ಧವಾಗಿದೆ. ಅದರಲ್ಲೂಮಹಿಳಾ ಸ್ವಸಹಾಯ ಸಂಘಗಳ ಅಭಿವೃದ್ಧಿಗೆಕೇಂದ್ರ ಸರ್ಕಾರ ಕಟಿಬದ್ಧವಾಗಿದೆ. ಮತ್ತುಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು 2015 ನೇಸಾಲಿನ ಡಿಸೆಂಬರ್ ನಲ್ಲಿ ಕೇಂದ್ರಸರ್ಕಾರದ ಸಚಿವಸಂಪುಟ ಈಶಾನ್ಯರಾಜ್ಯಗಳಿಗೆಂದೇ ವಿಶೇಷವಾಗಿವಿಶೇಷ ಅನುಧಾನವನ್ನುನೀಡಲುಸಮ್ಮತ್ತಿಸಿದೆ..ಇದುರಾಷ್ಟ್ರೀಯ ಗ್ರಾಮೀಣ ಜೀವನಾಧಾರಮಿಷನ್ ಅನುಷ್ಠಾನದ ವೇಗವನ್ನುಹೆಚ್ಚಿಸಲಿದೆ..ಅಲ್ಲದೆಇದು ಮುಂದಿನ 2023-24 ನೇಸಾಲಿನೊಳಗೆ ಈಶಾನ್ಯರಾಜ್ಯಗಳಮೂರನೇ ಎರಡು ಭಾಗದಷ್ಟು ಗ್ರಾಮೀಣಗೃಹಿಣಿಯರನ್ನೂ ಈ ಮಿಷನ್ಒಳಗೊಂಡಿರುತ್ತದೆ..
ಸ್ನೇಹಿತರೇ,
ಇವತ್ತು, ಪುಟ್ಬಾಲ್ಸ್ಟೇಡಿಯಂನ ನಿರ್ಮಾಣಕ್ಕ ನಾಮಫಲಕವನ್ನು ಅನಾವರಣಗೊಳಿಸುವಮೂಲಕ ಶಂಕುಸ್ಥಾಪನೆ ಮಾಡಲಾಗಿದೆ. ಈಶಾನ್ಯರಾಜ್ಯಗಳು, ಅದರಲ್ಲೂಮೇಘಾಲಯದ ಜನರು ಪುಟ್ಬಾಲ್ ಆಟದಮೇಲಿಟ್ಟಿರುವ ವಿಶೇಷಪ್ರೇಮದಬಗ್ಗೆ ನಮಗೆ ವಿಶೇಷ ಅರಿವಿದೆ. ಪುಟ್ಬಾಲ್ಇಲ್ಲಿ ಫ್ಯಾಷನ್ ಮತ್ತು ಇಲ್ಲಿನಮೂಲೆ ಮೂಲೆಗಳಲ್ಲಿ ಪುಟ್ಬಾಲ್ಆಡಲಾಗುತ್ತದೆ. ಅಷ್ಟೆಅಲ್ಲಾನಾವೇಲ್ಲಾ ಪ್ರಖ್ಯಾತ ಪುಟ್ಬಾಲ್ತಾರೆಯರಾದ ಯುಜೆನೆಸನ್ ಲಿಂಗ್ಡೊ, ಮರ್ಲಾಂಗ್ಕಿಸಟಿಂಗ್, ಐಬೋರ್ಖೊಂಗ್ಜಿರನ್ನೂ ಆತ್ಮಿಯ ಅನ್ನೋವಷ್ಟರಮಟ್ಟಿಗೆ ಪರಿಚಯ ಇಟ್ಟುಕೊಂಡಿದ್ದೇವೆ. ಅವರೆಲ್ಲರೂಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿಹಾಗೂ ಕ್ಲಬ್ಸ್ ಮತ್ತು ಇಂಡಿಯನ್ಸೂಪರ್ ಲೀಗ್ಗಳಲ್ಲಿ ಭಾರತವನ್ನುಪ್ರತಿನಿಧಿಸುವ ಮೂಲಕ ದೇಶ ಹಾಗೂಹಾಗೂ ರಾಜ್ಯಗಳಿಗೆ ಗೌರವ ತರುವಂತಃಕಾರ್ಯವನ್ನ ಶ್ರೇಷ್ಠ ರೀತಿಯಲ್ಲಿಮಾಡಿದ್ದಾರೆ.
ಮೇಘಾಲಯಸರ್ಕಾರಕ್ಕೆ ನಾನೊಂದು ಸೂಚನೆನೀಡಿದ್ದೇನೆ. ಮೇಘಾಲಯಮಿಷನ್ ಪುಟ್ಬಾಲ್ ತಳಮಟ್ಟದಲ್ಲಿಪ್ರತಿಭೆಗಳನ್ನು ಗುರುತಿಸುವಕೆಲಸ ಮಾಡಬೇಕು. ಮತ್ತುಮಕ್ಕಳನ್ನೂ ಈ ನಿಟ್ಟಿನಲ್ಲಿರೂಪುಗೊಳಿಸುವುದಕ್ಕೆ ಹಾಗೂ ಫೋಷಿಸುವುದಕ್ಕೆ ಅಗತ್ಯ ಸೌಲಭ್ಯಗಳನ್ನುನೀಡಬೇಕು ಮತ್ತು ಇದೇ ರೀತಿಯಪ್ರೋತ್ಸಾಹವನ್ನು ಯುವಕರಿಗೆಹಾಗೂವೃತ್ತಿಪರ ಪುಟ್ಬಾಲ್ಆಟಗಾರರಿಗೆ ನೀಡಬೇಕು ಎಂದು ಮೇಘಾಲಯಸರ್ಕಾರಕ್ಕೆ ಹೇಳಿದ್ದೇನೆ.. ಕೇಂದ್ರಈಶಾನ್ಯರಾಜ್ಯಗಳ ಅಭಿವೃದ್ಧಿಸಚಿವಾಲಯದ ಬೆಂಬಲದೊಂದಿಗೆ ಮೂವತ್ತೆಂಟು ಕೋಟಿ ರೂಪಾಯಿವೆಚ್ಚದಲ್ಲಿ ನಿರ್ಮಾಣವಾಗುತ್ತಿರುವಪುಟ್ಬಾಲ್ ಕ್ರೀಡಾಂಗಣ ಈ ಎಲ್ಲಾಆಶಯಗಳನ್ನು ಸುದೀರ್ಘವಾಗಿಪೂರೈಸಬಲ್ಲದಾಗಿದೆ..
ಮುಂದಿನವರ್ಷ, ಭಾರತ 17 ನೇವರ್ಷದೊಳಗಿನ ಫಿಫಾ ವಿಶ್ವ ಕಪ್ಪುಟ್ಬಾಲ್ ಪಂದ್ಯಾವಳಿಯನ್ನುಭಾರತ ಆಯೋಜಿಸುತ್ತಿದೆ. ದೇಶದಲ್ಲಿವಿಶೇಷವಾಗಿ ನಡೆಯಲಿರುವ ಈ ಪಂದ್ಯಾವಳಿಯ ಸಂಪೂರ್ಣ ಲಾಭವನ್ನುನಾವುಗಳು ಪಡೆದುಕೊಳ್ಳುವ ಅವಶ್ಯಕತೆಇದೆ. ಹಾಗೂನನಗೆ ವಿಶ್ವಾಸ ಇದೆ.. ಈಪಂದ್ಯಾವಳಿ ಪುಟ್ಬಾಲ್ನ ಖ್ಯಾತಿಯನ್ನು ಪ್ರಚುರಪಡಿಸುವುದರಜೊತೆಗೆ ಪುಟ್ಬಾಲ್ ಆಟವನ್ನುದೇಶದಲ್ಲಿ ಮತ್ತಷ್ಟುಅಭಿವೃದ್ಧಿಗೊಳಿಸಬಲ್ಲದು..ಅದುಕೂಡ ಕೇವಲ ಈಶಾನ್ಯ ರಾಜ್ಯಗಳಪ್ರದೇಶದಲ್ಲಷ್ಟೇ ಅಲ್ಲದೇ ದೇಶದಇತರೆ ಭಾಗಗಳಿಗೂ ಇದರ ಖ್ಯಾತಿಹರಡಲಿದೆ.
ಮೇಘಾಲಯಅತಿದೊಡ್ಡ ಸಂಖ್ಯೆಯಲ್ಲಿ ಪುಟ್ಬಾಲ್ಕ್ಲಬ್ ಹಾಗೂ ಅಸೋಶಿಯೇಷನ್ಗಳನ್ನುಹೊಂದಿದೆ. ಬಹುಶಃ
ನೀವುಗಳುಸ್ಪರ್ಧಾತ್ಮಕ ಸ್ಥಳೀಯ ಪಂದ್ಯಾವಳಿಗಳನ್ನೂಆಯೋಜಿಸುವ ಮೂಲಕ ದೇಶದ ವಿವಿಧಭಾಗಗಳ ಪರವಾಗಿ ಮುಂದಾಳತ್ವವನ್ನುವಹಿಸಬಹುದು. 17 ವರ್ಷದೊಳಗಿನವಿಶ್ವ ಕಪ್ ಪಂದ್ಯಾವಳಿಯನ್ನುಮುನ್ನೆಡೆಸುವ ನಿಟ್ಟಿನಲ್ಲಿಪ್ರಮುಖ ಸರಣಿ ಪಂದ್ಯಗಳನ್ನುನಡೆಸುವ ಸಲುವಾಗಿ ಇವುಗಳುಸಹಕಾರಿಯಾಗಲಿದೆ..
ಸ್ನೇಹಿತರೇ
ನಮಗೆಲ್ಲರಿಗೂ ಗೊತ್ತಿರುವಂತದ್ದೆ…ಚಿರಾಪುಂಚಿ ವಿಶ್ವದಲ್ಲೇ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಅನ್ನುವ ಕೀರ್ತಿ ಪಡೆದುಕೊಂಡಿದೆ.. ಇವತ್ತೂ ಚಿರಾಪುಂಜಿಯ ಕಿರೀಟಕ್ಕೆ ಮತ್ತೊಂದು ಗರಿ ಮೂಡಿಸಿದೆ.. ಹವಾಮಾನಕ್ಕೆ ಸಂಬಂಧಿಸಿದ ಡೂಪ್ಲೆರ್ ವೆತೆರ್ ರಾಡಾರ್ ಚಿರಾಪಂಜಿಯಲ್ಲಿ ತಲೆ ಎತ್ತಿದೆ. ಈ ಅಭೂತಪೂರ್ವ ಕಾರ್ಯಕ್ಕಾಗಿ ನಾನು ಭಾರತೀಯ ಬ್ಯಾಹ್ಯಾಕಾಶಾ ಸಂಶೋಧನಾ ಕೇಂದ್ರ, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಭಾರತೀಯ ಹವಾಮಾನ ಇಲಾಖೆಯನ್ನು ತುಂಬು ಹೃದಯದಿಂದ ಅಭಿನಂದಿಸುತ್ತೇನೆ..
ಸುಂದರ ಹಾಗೂ ಸಾಹಸ ಕಾರ್ಯಸಾಧನೆಯ ಭೂಮಿಯನ್ನು ಹೊಂದಿರುವ ಈಶಾನ್ಯ ಭಾರತ, ಇತ್ತೀಚಿನ ದಿನಗಳಲ್ಲಿ ಭಾರೀ ಮಳೆ , ಭೂಕುಸಿತಗಳಿಂದಾಗಿ ಹವಾಮಾನ ವೈಫರಿತ್ಯಗಳಿಗೆ ತುತ್ತಾಗುತ್ತಿದೆ.. ಸದ್ಯ ಅಳವಡಿಸಲಾಗಿರುವ ಹವಮಾನ ರಾಡಾರ್ ವ್ಯವಸ್ಥೆ ವಿಶೇಷವಾಗಿ ಈಶಾನ್ಯ ಭಾಗಗಳಿಗೆ ಸಂಬಂಧಿಸಿದ ಹವಮಾನದ ಮಾಹಿತಿಯನ್ನು ಉತ್ತಮವಾಗಿ ನೀಡಬಲ್ಲದು..ಈ ಮೂಲಕ ನಿಸರ್ಗವಿಕೋಪಗಳಿಂದ ಸಂಭವಿಸಬಹುದಾದ ಹಾನಿಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಬಹುದಾಗಿದೆ.
ಇವತ್ತು ಬೆಳಗ್ಗೆ, ನನಗೆ ಈಶಾನ್ಯ ಭಾಗದ ಕೌನ್ಸಿಲ್ ಸಭೆಯಲ್ಲಿ ಪಾಲ್ಗೊಳ್ಳುವ ಹಾಗೂ ಈ ಪ್ರದೇಶದ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳ ಜೊತೆಯಲ್ಲಿ ಚರ್ಚೆ ನಡೆಸುವ ಸೌಭಾಗ್ಯ ಒದಗಿ ಬಂದಿತ್ತು..ಮತ್ತು ಈ ಅವಕಾಶದಿಂದಾಗಿ ಈಶಾನ್ಯ ಭಾಗಗಳಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳ ಮಿನುಗು ನೋಟ ಸಿಕ್ಕಿತು..ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಇಲ್ಲಿ ನಡೆದಿವೆ..ಆದ್ರೆ ಆಗಿರೋ ಕಾರ್ಯಗಳಿಗಿಂತ ಇಲ್ಲಿ ಮತ್ತಷ್ಟು ಸಾಧನೆಗಳು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ
ನನ್ನ ಸರ್ಕಾರ ಆಕ್ಟ್ ಈಸ್ಟ್ ಪಾಲಿಸಿಯನ್ನು ಸಂರಕ್ಷಣಾತ್ಮಕವಾಗಿ ಅನುಸರಿಸುತ್ತಲೇ ಬಂದಿದೆ. ಈಶಾನ್ಯ ಪ್ರದೇಶಗಳು ಆಗ್ನೇಯ ಎಷ್ಯಾಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಹೆಬ್ಬಾಗಿಲು ಎಂದು ನಾನು ಭಾವಿಸುತ್ತೇನೆ. ಇನ್ನೂ ಈ ನೀತಿಯ ಅನ್ವಯ, ರಸ್ತೆ, ರೈಲು, ದೂರವಾಣಿ, ವಿದ್ಯುತ್, ಜಲಮಾರ್ಗಗಳನ್ನೂ ಈ ಪ್ರದೇಶದಲ್ಲಿ ಅಭಿವೃದ್ಧಿ ಪಡಿಸುವುದು ನಮ್ಮ ಗುರಿಯಾಗಿದೆ. ಮತ್ತು ನಮ್ಮ ಮಿಷನ್ ನನ್ವಯ ಇವತ್ತು ಮೂರು ಹೊಸ ರೈಲುಗಳಿಗೆ ನಾನು ಹಸಿರು ನಿಶಾನೆಯನ್ನು ತೋರಿಸಿದ್ದೇನೆ.. ಹಾಗೂ ಇದೇ ವೇಳೆ ನಾವು ಈಶಾನ್ಯ ರಾಜ್ಯಗಳನ್ನು ದೇಶದ ರೇಲ್ವೆ ಸಂಪರ್ಕಜಾಲದೊಂದಿಗೆ ಬೆಸೆಯುಲು ಕಟಿಬದ್ಧರಾಗಿದ್ದೇವೆ.. ಕೇಂದ್ರದಲ್ಲಿಎನ್ ಡಿಎ ಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸುಮಾರು ಹತ್ತು ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣವನ್ನು ಈಶಾನ್ಯ ರಾಜ್ಯಗಳಲ್ಲಿ ರೇಲ್ವೆ ಸಂಪರ್ಕ ಜಾಲ ಅಭಿವೃದ್ಧಿಗೆ ವ್ಯಯಿಸಲಾಗಿದೆ. ಅಲ್ಲದೇ ರೇಲ್ವೆ ಇಲಾಖೆ ಐದು ಸಾವಿರ ಕೋಟಿಗೂ ಅಧಿಕ ಹಣವನ್ನು ಪ್ರಸ್ತುತ ಸಾಲಿನಲ್ಲಿ ವ್ಯಯಿಸಲು ನಿರ್ಧರಿಸಿದೆ.
2014 ರ ನವೆಂಬರ್ ನಲ್ಲಿ ಮೇಘಾಲಯ ಹಾಗೂ ಅರುಣಾಚಲ ಪ್ರದೇಶ ಭಾರತ ದೇಶದ ರೇಲ್ವೆ ನಕ್ಷೆಯಲ್ಲಿ ಕಾಣಿಸಿಕೊಂಡವು ಇತ್ತೀಚೆಗೆ ತ್ರಿಪುರಾದ ಅಗರ್ತಲಾ ಬ್ರಾಡ್ ಗೇಜ್ ರೇಲ್ವೆ ಮಾರ್ಗವನ್ನು ಹೊಂದಿತು.. ಇನ್ನು ಇವತ್ತು ಈಶಾನ್ಯ ಪ್ರದೇಶಗಳ ಇತಿಹಾಸದಲ್ಲಿ ಕೇಂಪಾಕ್ಷರದಲ್ಲಿ ಬರೆದಿಡುವಂತಃ ದಿನವಾಗಿದೆ.. ಬ್ರಾಡ್ ಗೇಜ್ ಪ್ರಾಸೆಂಜರ್ ಟ್ರೈನ್ ಗಳು ಈಗ ಮಣಿಪುರ ಹಾಗೂ ಮಿಜೋರಾಂನನ್ನ ಸಂಪರ್ಕಿಸಲಿವೆ.. ಮತ್ತು ಇವತ್ತು ಗೌಹಾಟಿಯ ಕಾಮಾಕ್ಯ ಹಾಗೂ ಜಮ್ಮುವಿನ ಸಮೀಪದಲ್ಲಿರುವ ಕತ್ರಾದಲ್ಲಿನ ವೈಷ್ಣೋದೇವಿಗೆ ನೇರವಾಗಿ ಸಂಪರ್ಕ ಕಲ್ಪಿಸಲಾಗಿದೆ.. ಇದರ ಜೊತೆಯಲ್ಲಿ ರಸ್ತೆ ಹಾಗೂ ರೇಲ್ವೆ ಮಾರ್ಗಗಳನ್ನು ನಮ್ಮ ನೆರೆರಾಷ್ಟ್ರಗಳಿಗೆ ಮುಕ್ತವಾಗಿ ತೆರೆದಿಡುತ್ತಿದ್ದೇವೆ.. ಇದು ಈ ಪ್ರದೇಶಗಳ ಆರ್ಥಿಕಾಭಿವೃದ್ಧಿಗೆ ಪೂರಕವಾಗಿದೆ
ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ನಿಗಮವನ್ನು 2014 ರ ಜುಲೈನಲ್ಲಿ ಸ್ಥಾಪಿಸಿದೆ.. ಈಶಾನ್ಯ ಪ್ರದೇಶಗಳಲ್ಲಿ ಹೆದ್ದಾರಿಗಳನ್ನು ನಿರ್ಮಿಸುವ ಸಲುವಾಗಿಯೇ ಈ ನಿಗಮವನ್ನು ವಿಶೇಷವಾಗಿ ನಿರ್ಮಿಸಲಾಗಿದೆ. ಮತ್ತು ಈ ನಿಗಮ ಬ್ರಹ್ಮಪುತ್ರ ನದಿಗೆ ಮೂರು ಹೊಸ ಸೇತುವೆಗಳನ್ನು ನಿರ್ಮಿಸುತ್ತಿದೆ.. ಅಲ್ಲದೇ 34 ರಸ್ತೆ ಯೋಜನೆಗಳನ್ನು ಈಶಾನ್ಯ ರಾಜ್ಯದಲ್ಲಿ ಈ ನಿಗಮ ಕೈಗೆತ್ತಿಕೊಂಡಿದೆ.. ಈ ಮೂಲಕ 1000 ಕಿಲೋಮೀಟರ್ ರಸ್ತೆಗಳನ್ನು ಹತ್ತು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಯೋಜನೆ ರೂಪಿಸಿದೆ.. ಇದರ ಜೊತೆಯಲ್ಲಿ ಈಶಾನ್ಯ ರಾಜ್ಯ ರಸ್ತೆ ಕ್ಷೇತ್ರಾಭಿವೃದ್ಧಿ ಯೋಜನೆಯನ್ನು ಕೂಡ ಆರಂಭಿಸಿಲಾಗಿದ್ದು ಈ ಭಾಗದ ಪ್ರತಿಜಿಲ್ಲೆಗಳನ್ನು ರಾಷ್ಟ್ರೀಯ ಹೆದ್ದಾರಿಯೊಂದಿಗೆ ಸಂಪರ್ಕಿಸುವುದಾಗಿದೆ.
ಇದಷ್ಟೆ ಅಲ್ಲದೇ ಒಳನಾಡು ಜಲಸಾರಿಗೆಯ ಅಭಿವೃದ್ಧಿಗೂ ವಿಶೇಷ ಗಮನವನ್ನು ಹರಿಸಲಾಗಿದೆ.. ಈ ಸಂಬಂಧ ಕೇಂದ್ರ ಸರ್ಕಾರ ಲ್ಲಿನ 19 ಒಳನಾಡು ಜಲಮಾರ್ಗಗಳನ್ನು ರಾಷ್ಟ್ರೀಯ ಜಲಮಾರ್ಗಗಳನ್ನಾಗಿ ಘೋಷಿಸಿದೆ.
ಇನ್ನೂ ದಿನ ಇಪ್ಪತ್ತಾನಾಲ್ಕು ಗಂಟೆ ವಾರದ ಏಳು ದಿನವೂ ಜನರಿಗೆ ವಿದ್ಯುತ್ ಪೂರೈಕೆ ಒದಿಗಿಸಲು ಕೇಂದ್ರ ಸರ್ಕಾರ ಕಟಿಬದ್ಧವಾಗಿದೆ. ಅಲ್ಲದೇ ಇದನ್ನು ಗಮನದಲ್ಲಿಟ್ಟುಕೊಂಢು ಕೇಂದ್ರ ಸರ್ಕಾರ ವಿದ್ಯುತ್ ಕ್ಷೇತ್ರದಲ್ಲಿ ಭಾರೀ ಪ್ರಮಾಣದ ಬಂಡವಾಳನ್ನು ಹೂಡಿಕೆ ಮಾಡುತ್ತಿದೆ. ಈ ಸಂಬಂಧ ಈಶಾನ್ಯ ಭಾಗದ ಎಲ್ಲಾ ಎಂಟು ರಾಜ್ಯಗಳನ್ನು ವ್ಯಾಪಿಸುವ ಎರಡು ಯೋಜನೆಗಳನ್ನು ಈಗಾಗಲೇ ಅನುಷ್ಠಾನಗೊಳಿಸಲಾಗಿದೆ. 10 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಭಾಗರದಲ್ಲಿ ವಿದ್ಯುತ್ ಪ್ರಸರಣವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಈ ಯೋಜನೆ ಕೈಗೊಳ್ಳಲಾಗಿದೆ,
ಬಿಷವಂಥ್-ಛರಿಯಾಲಿಯಿಂದ ಆಗ್ರಾ ಟ್ರಾನ್ಸ್ಮಿಷನ್ವರೆಗಿನ ಸಂಪರ್ಕಜಾಲವವನ್ನು ಸಿದ್ಧಪಡಿಸಲಾಗ್ತಿದ್ದು,ಇದು 500 ಮೆಗಾವ್ಯಾಟ್ ವಿದ್ಯುತ್ ನ್ನು ಈಶಾನ್ಯ ರಾಜ್ಯಗಳಿಗೆ ಹೊರಗಡೆಯಿಂದ ಪೂರೈಸುವ ಕೆಲಸ ಮಾಡಲಿದೆ.. ವಿದ್ಯುತ್ ಸಂಪರ್ಕಗಳನ್ನ ಹೊಂದಿರದ ಒಟ್ಟು ಹದಿನೆಂಟು ಸಾವಿರ ಹಳ್ಳಿಗಳ ಪೈಕಿ ಒಟ್ಟಾರೆ ಈಗಾಗಲೇ ಏಳು ಸಾವಿರಕ್ಕೂ ಅಧಿಕ ಈಶಾನ್ಯ ರಾಜ್ಯಗಳ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ.. ಈಶಾನ್ಯ ರಾಜ್ಯಗಳು ಸೇರಿದಂತೆ ದೇಶದ ಯಾವೊಂದು ಹಳ್ಳಿಗಳು 2018 ರೊಳಗಾಗಿ ವಿದ್ಯುತ್ ಸೌಲಭ್ಯದಿಂದ ವಂಚಿತವಾಗಿ ಉಳಿಯಬಾರದು ಅಂತಾ ನಾನು ನಿರೀಕ್ಷಿಸುತ್ತೇನೆ.
ಇದಷ್ಟೆ ಅಲ್ಲದೇ ಕೇಂದ್ರ ಸರ್ಕಾರ ಈಶಾನ್ಯ ರಾಜ್ಯಗಳಿಗೆ ಸಂಬಂಧಿಸಿದಂತೆ ಸಮಗ್ರ ದೂರಸಂಪರ್ಕ ಯೋಜನೆಯನ್ನು ರೂಪಿಸಿದೆ..ಮತ್ತು ಇದ್ರ ಮೊತ್ತ 5300 ಕೋಟಿ ರೂಪಾಯಿಗಳಷ್ಟಾಗಿದೆ.. ಅಗರ್ತಲಾ ಅಂತಾರಾಷ್ಟ್ರೀಯ ಗೇಟ್ ವೇ ಮೂಲಕ ಬಾಂಗ್ಲಾದೇಶದ ಕಾಕ್ಸ್ ಬಜಾರ್ ನೊಂದಿಗೆ ನೇರ ಸಂಪರ್ಕವನ್ನು ಹೊಂದಿದ ದೇಶದ ಮೊದಲ ನಗರವಾಗಿ ಹೊರಹೊಮ್ಮಿದೆ.. ಮತ್ತಿದು ಸುಧಾರಿತ ದೂರಸಂಪರ್ಕ ಜಾಲವನ್ನು ಹೊಂದಿದ್ದು ಈ ಭಾಗದ ಆರ್ಥಿಕ ಅಭಿವೃದ್ಧಿಗೆ ವಿಶೇಷ ಉತ್ತೇಜನ ನೀಡಲಿದೆ.
ಕೆಲ ತಿಂಗಳ ಹಿಂದೇ ಗ್ಯಾಂಗ್ಟಾಕ್ ಗೆ ಭೇಟಿಕೊಟ್ಟ ಸಂದರ್ಭದಲ್ಲಿ ಸಿಕ್ಕಿಂನನ್ನು ದೇಶದ ಮೊದಲ ಸಾವಯವ ರಾಜ್ಯ ಎಂದು ಘೋಷಿಸಲಾಗಿತ್ತು…ಈ ಸಿಕ್ಕಿಂ ರಾಜ್ಯವನ್ನು ಮಾದರಿಯಾಗಿಟ್ಟುಕೊಂಡು ಈಶಾನ್ಯ ಭಾಗದ ಉಳಿದ ರಾಜ್ಯಗಳು ಕೂಡ ಸಾವಯವದತ್ತ ಹೆಜ್ಜೆಯನ್ನು ಇಡಬಹುದಾಗಿದೆ.. ವಾಸ್ತವವಾಗಿ ಈಶಾನ್ಯ ರಾಜ್ಯಗಳು ಭಾರತ ದೇಶದ ಸಾವಯವ ಆಹಾರಗಳ ಬುಟ್ಟಿ ಅಂತಾ ಕರೆಸಿಕೊಳ್ಳುವ ಎಲ್ಲಾ ಲಕ್ಷಣಗಳಿವೆ.. ಮತ್ತಿದು ಈ ಭಾಗದ ರೈತರ ಆದಾಯವನ್ನು ಹೆಚ್ಚಿಸಲಿದೆ..
ಸ್ನೇಹಿತರೇ,,
ಇವತ್ತು, ಸಣ್ಣ ಸಾಲವನ್ನು ಪಡೆಯುವ ಸಲುವಾಗಿ ಯಾರೊಬ್ಬರು ಬ್ಯಾಂಕ್ ಅಧಿಕಾರಿಗಳಿಂದ ಇನ್ನಿಲ್ಲದ ಪರೀಶೀಲನೆಗೆ ಒಳಪಡಬೇಕಾದ ಅಗತ್ಯ ಈಗಿಲ್ಲ.. ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು ಈ ಕಾರಣಕ್ಕಾಗಿಯೇ ಜಾರಿಗೆ ತಂದಿದೆ. ಈ ಮೂಲಕ ಆಧಾರ ರಹಿತ ಸಾಲಗಳನ್ನು ಸಣ್ಣ ವ್ಯಾಪಾರಸ್ಥರಿಗೆ ಒದಗಿಸುತ್ತಿದೆ.. 2015 -16 ನೇ ಸಾಲಿನ್ನಲ್ಲಿ ಮೂರು ಕೋಟಿ ನಲವತ್ತೆಂಟು ಲಕ್ಷ ವ್ಯಾಪಾರಸ್ಥರು ಒಂದು ಲಕ್ಷ ಮೂವತ್ತೇಳು ಸಾವಿರ ಕೋಟಿ ರೂಪಾಯಿಗಳಷ್ಟು ಸಾಲವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.. ಇದ್ರಲ್ಲಿ ಆರು ಲಕ್ಷ ಸಾಲಗಳು ಈಶಾನ್ಯ ರಾಜ್ಯಗಳಲ್ಲ ಬಿಡುಗಡೆಯಾಗಿದ್ದು, ಒಟ್ಟಾರೆ ಸುಮಾರು 2800 ಕೋಟಿ ರೂಪಾಯಿಗಳಷ್ಟು ಸಾಲ ಈಶಾನ್ಯ ರಾಜ್ಯಗಳಿಗೆ ಹರಿದುಬಂದಿದೆ.
ಇದಕ್ಕೆ ಪೂರಕವಾಗಿ 93 ಲಕ್ಷ ಬ್ಯಾಂಕ್ ಖಾತೆಗಳು ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿಯಲ್ಲಿ ಈಶಾನ್ಯ ಭಾಗಗಳಲ್ಲಿ ತೆರೆಯಲ್ಪಟ್ಟಿವೆ.. ಸುಮಾರು 21 ಲಕ್ಷದಷ್ಟು ಜನರು ಈ ಭಾಗದಲ್ಲಿ ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಯೋಜನೆ ಅಡಿಯಲ್ಲಿ ಲಾಭವನ್ನು ಪಡೆದುಕೊಂಡಿದ್ದಾರೆ..ಸುಮಾರು 19 ಲಕ್ಷ ಜನರು ಪ್ರಧಾನ್ ಮಂತ್ರಿ ಸುರಕ್ಷಾ ಭಿಮಾ ಯೋಜನೆ ಅಡಿಯಲ್ಲಿ ಸದಸ್ಯರಾಗಿದ್ದಾರೆ.
ಕೃಷಿ ಕ್ಷೇತ್ರವನ್ನು ಹೊರತುಪಡಿಸಿದರೇ ಜವಳಿ ಕ್ಷೇತ್ರ ಇಲ್ಲಿನ ನಾಗರಿಕರಿಗೆ ವಿಶೇಷವಾಗಿ ಉದ್ಯೋಗವನ್ನು ನೀಡಬಲ್ಲದು..ಇನ್ನೂ ಈ ಕ್ಷೇತ್ರದಲ್ಲಿ ಸಿದ್ಧ ಉಡುಪು ತಯಾರಿಕೆ ಅಪಾರಪ್ರಮಾಣದ ಉದ್ಯೋಗವನ್ನು ಒದಗಿಸಿಕೊಡಬಲ್ಲದು..ಅತಿದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.. ಈ ಕ್ರಮದಲ್ಲಿ ಕೈಗಾರಿಕಾ ಚಟುವಟಿಕೆಗಳನ್ನ ಉತ್ತೇಜನಗೊಳಿಸುವ ನಿಟ್ಟಿನಲ್ಲಿ ಈಶಾನ್ಯ ಪ್ರದೇಶಗಳ ಜವಳಿ ಪ್ರೋತ್ಸಾಹ ಯೋಜನೆಯನ್ನು ಜಾರಿಗೆ ತರಲಾಗಿದೆ.. ಒಂದು ಸಿದ್ದುಉಡುಪು ಹಾಗು ಬಟ್ಟೆ ತಯಾರಿಕಾ ಘಟಕವನ್ನು ಎಲ್ಲಾ ಎಂಟು ರಾಜ್ಯಗಳಲ್ಲೂ ನಿರ್ಮಿಸಲಾಗುತ್ತಿದೆ… 145 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಗಮನಾರ್ಹ ಅಂಶವೆಂದರೆ ಒಟ್ಟು ಎಂಟು ರಾಜ್ಯಗಳ ಎಂಟು ಘಟಕಗಳಲ್ಲಿ ಏಳು ಘಟಕಗಳ ಕಾಮಗಾರಿ ಪೂರ್ಣಗೊಂಡಿವೆ ಮತ್ತು ಇವು ಮೂರು ಘಟಕಗಳನ್ನು ಹೊಂದಿವೆ.
ಸ್ನೇಹಿತರೇ,,
ಮೇಘಾಲಯ ವಿಶಿಷ್ಟ ಐತಿಹಾಸಿಕ ಪ್ರದೇಶವಾಗಿದ್ದು ಸಾಂಸ್ಕೃತಿಕ ಹಾಗೂ ಜನಾಂಗೀತ ಪರಂಪರೆಯನ್ನು ಹೊಂದಿರುವ ನಾಡಾಗಿದೆ. ನಿಸರ್ಗ ಸೌಂದರ್ಯ ಹಾಗೂ ವನ್ಯಜೀವಿಗಳನ್ನು ಈ ಮೇಘಾಲಯ ಒಳಗೊಂಡಿದೆ.. ಈ ಎಲ್ಲಾ ಅಂಶಗಳನ್ನು ಹೊಂದಿರುವ ಮೇಘಾಲಯಕ್ಕೆ ಬರೋದಿಲ್ಲ ಅನ್ನೋದಕ್ಕೆ ಪ್ರವಾಸಿಗರಿಗೆ ಯಾವುದೇ ಕಾರಣಗಳು ಉಳಿಯೊಲ್ಲ.. ಹೀಗಾಗಿ ಇಲ್ಲಿ ಪ್ರವಾಸೋದ್ಯಮದ ಅತ್ಯದ್ಭುತ ಅವಕಾಶ ತೆರೆದುಕೊಂಡಿದೆ. ಕೇವಲ ಪ್ರವಾಸೋಧ್ಯಮಕ್ಕಷ್ಟೆ ಅಲ್ಲದೇ ಸಾಹಸ ಕ್ರೀಡೆಗಳಿಗೂ ಇದು ಹೇಳಿಮಾಡಿಸಿದ ಜಾಗ.
ನಾವು ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿ ಮಾಡುವ ಮೂಲಕ ಪ್ರವಾಸಿಗರಿಗೆ ವಿಶಿಷ್ಟ ಸೌಲಭ್ಯಗಳನ್ನು ಒದಗಿಸಬೇಕಾದೆ ಅನಿವಾರ್ಯತೆ ಇದೆ. ರಸ್ತೆ ಮಾರ್ಗಗಳನ್ನು ಅಭಿವೃದ್ಧಿ ಪಡಿಸುವುದು ಹೋಟೆಲ್ಗಳನ್ನು ಅಭಿವೃದ್ಧಿ ಪಡಿಸುವುದು ಸಚ್ಚತೆಯನ್ನು ಕಾಪಾಡಿಕೊಳ್ಳುವುದು ಇಂತಹ ಕ್ರಮಗಳ ಮೂಲಕ ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಈ ಸಂಬಂಧ ಕೇಂಧ್ರ ಸರ್ಕಾರ ಸ್ವದೇಶ ದರ್ಶನ್ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಮತ್ತು ಈ ಯೋಜನೆಯಡಿಯಲ್ಲಿ ದೇಶದಲ್ಲಿ ಹಲವು ಪ್ರವಾಸೋದ್ಯಮ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.. ಇದರಕ್ಕಿ ಒಂದು ಕೇಂದ್ರವನ್ನು ಈಶಾನ್ಯ ಭಾಗಕ್ಕಾಗಿ ಪ್ರಸ್ತಾವನೆ ಇಡಲಾಗಿದೆ
ಎರಡು ವರ್ಷಗಳ ಹಿಂದೆ ಅಕ್ಟೋಬರ್ 2 ನೇ ತಾರೀಖು 2014 ನೇ ಸಾಲಿನಲ್ಲಿನ ಕೇಂದ್ರ ಸರ್ಕಾರ 2019 ಅಕ್ಟೋಬರ್ ತಿಂಗಳೊಳಗಾಗಿ ಸ್ವಚ್ಛಭಾರತ್ ನಿರ್ಮಾಣದ ಪ್ರಯಾಣವನ್ನು ಆರಂಭಿಸಿತು.. ಮಹಾತ್ಮ ಗಾಂಧಿಜಿಯವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ವಿಶೀಷ್ಟ ಕಾರ್ಯವನ್ನು ಕೈಗೊಳ್ಳಲಾಯ್ತು.. ಸರಿಯಾಗಿ ಅವತ್ತಿಗೆ ಒಂದು ವರ್ಷಕ್ಕೆ ಅಂದ್ರ 2014 ಅಗಸ್ಟ್ ಹದಿನೈದಿಂರಿಂದ 2015 ಅಗಸ್ಟ್ ಹದಿನೈದರೊಳಗೆ ಸ್ವಚ್ಛಭಾರತ್ ಹಾಗೂ ಸ್ಚಚ್ಛ ವಿದ್ಯಾಲಯ ಕಾರ್ಯಕ್ರಮದಡಿಯಲ್ಲಿ ನಾಲ್ಕ ಲಕ್ಷ 17 ಸಾವಿರ ಟಾಯ್ಲೆಟ್ ಗಳನ್ನು 2 ಲಕ್ಷ ಶಾಲೆಗಳಲ್ಲಿ ನಿರ್ಮಿಸಿದ್ದೇವೆ.
ಸ್ವಚ್ಛತೆಗಾಗಿ ಸ್ಚಚ್ಛಾ ಭಾರತ್ ಸಾರ್ವಜನಿಕ ಅಭಿಯಾನ ಆಗಿ ಮಾರ್ಪಾಡಾಯ್ತು. ಬಡವರಲ್ಲೇ ಕಡುಬಡವರು ಈ ಅಭಿಯಾನದ ಅತಿದೊಡ್ಡ ಫಲಾನುಭವಿಗಳು.. ನಾನು ನಿಮಗೆ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.. ನೀವೆಲ್ಲದರೂ ಸಕ್ರೀಯರಾಗಿ ಈ ಅಭಿಯಾನದಲ್ಲಿ ಪಾಲ್ಗೊಳ್ಳಿ ಹಾಗೂ ಬಯಲು ಶೌಚ ಮುಕ್ತ ಸಮಾಜ ಹಾಗೂ ಸ್ಚಚ್ಛ ಪರಿಸರ ನಿರ್ಮಾಣದ ಭರವಸೆಯನ್ನು ನೀಡಿ.
ಈ ಭಾಗದಲ್ಲಿ ನೈರ್ಮಲ್ಯ ಹಾಗೂ ಸ್ಚಚ್ಛತೆಯ ಸಂಸ್ಕೃತಿ ಸ್ವಚ್ಛ ಭಾರತ್ ಅಭಿಯಾನದಿಂದಾಗಿ ಮತ್ತಷ್ಟು ಉತ್ತೇಜನ ಪಡೆದುಕೊಂಡಿದೆ ಅಂತಾ ಹೇಳಲು ನನಗೆ ಮತ್ತಷ್ಟು ಸಂತೋಷವಾಗುತ್ತಿದೆ.. ಮಾವ್ಲಯಾನಾಂಗ್ ಮೇಗಾಲಯದ ಈ ಹಳ್ಳಿ ಸ್ಚಚ್ಛ ಹಳ್ಳಿ ಎಂದು ಹೆಸರು ಪಡೆದಿದೆ ಮತ್ತು ಗ್ಯಾಂಗ್ಟಾಕ್ ನ್ನುಒಳಗೊಂಡಂತೆ ಸಂಪೂರ್ಣ ಸಿಕ್ಕಿಂ ರಾಜ್ಯ ಪ್ರವಾಸಿಗರ ಗಮನ ಸೆಳೆಯುವ ಪ್ರಮುಖ ಪ್ರದೇಶಗಳಾಗಿವೆ..
ನಾರ್ತ್ ಈಸ್ಟ್ ಲೀಡ್ಸ್ ದಿ ವೇ ಸ್ವಚ್ಛ ಭಾರತ್ ಅಭಿಯಾನ್ ಎಂಬ ಥೀಮ್ ನಡಿಯಲ್ಲಿ ಆಯೋಜಿಸಲಾಗಿದ್ದ ಓಟದಲ್ಲಿ ಪಾಲ್ಗೊಂಡು ಗೆಲುವು ಸಾಧಿಸಿದ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ.. ಅಲ್ಲದೇ ಈಶಾನ್ಯ ಭಾಗದ ಕೌನ್ಸಿಲ್ಸ್ ನ್ನು ಈ ಕೂಟವನ್ನು ಆಯೋಜಿಸಿದ್ದಕ್ಕೆ ಅಭಿನಂದಿಸುತ್ತೇನೆ. ಅಲ್ಲದೆ ಈಶಾನ್ಯ ಪ್ರದೇಶದಲ್ಲನ ಸ್ಚಚ್ಛ ನಗರಗಳ ಪೈಕಿ ಸ್ಥಾನ ಪಡೆದಿರುವ ಗ್ಯಾಂಗ್ಟಾಕ್ ಕೂಡ ಚಪ್ಪಾಳಗೆ ಅರ್ಹವಾಗಿದೆ.. ಇನ್ನೂ ಈಶಾನ್ಯ ಪ್ರದೇಶದ ಕೌನ್ಸಿಲ್ಸ್ ನ ಪ್ರಾದೇಶಿಕ ಸಭೆಯನ್ನು ಶಿಲ್ಲೋಂಗ್ನಲ್ಲಿ ಆಯೋಜಿಸಿದ ಮೇಘಾಲಯದ ಜನರಿಗೂ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ ಜೊತೆಯಲ್ಲಿ ಈ ಸುಂದರ ಚರ್ಚೆಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ನನಗೆ ಒದಗಿಸಿಕೊಟ್ಟಿದ್ದಕೆ ನಿಮ್ಮೆಲ್ಲಿರಿಗೂ ನನ್ನ ತುಂಬು ಹೃದಯದ ಅಭಿನಂದನೆಗಳು
ಜೈ ಹಿಂದ್..