Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಈಶಾನ್ಯ ಭಾಗದ ವಿವಿಧೆಡೆಯ ಪ್ರವಾಹ ಪರಿಸ್ಥಿತಿಯ ಬಗ್ಗೆ ವ್ಯಾಕುಲ ವ್ಯಕ್ತಪಡಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಈಶಾನ್ಯ ಭಾಗದ ವಿವಿಧೆಡೆ ಪ್ರವಾಹದಿಂದ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ವ್ಯಾಕುಲ ವ್ಯಕ್ತಪಡಿಸಿದ್ದಾರೆ.

“ಈಶಾನ್ಯದ ವಿವಿಧ ಭಾಗಗಳಲ್ಲಿ ಪ್ರವಾಹದಿಂದ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ನಾನು ವ್ಯಾಕುಲಗೊಂಡಿದ್ದೇನೆ. ಪ್ರವಾಹದಿಂದ ಬಾಧಿತರಾಗಿರುವ ಎಲ್ಲರ ನೋವನ್ನು ನಾನು ಹಂಚಿಕೊಳ್ಳುತ್ತೇನೆ.

ಈ ಸಮಯದಲ್ಲಿ ಈಶಾನ್ಯ ಭಾಗದ ಜನರೊಂದಿಗೆ ಇಡೀ ದೇಶವೇ ನಿಲ್ಲುತ್ತದೆ. ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಕೇಂದ್ರ ಸರ್ಕಾರ ಎಲ್ಲ ಅಗತ್ಯ ನೆರವು ಒದಗಿಸಲಿದೆ.

ನಾನು ಪ್ರವಾಹ ಪರಿಸ್ಥಿತಿ ಕುರಿತಂತೆ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಮತ್ತು ದೆಹಲಿಯಲ್ಲಿ ಮತ್ತು ರಾಜ್ಯಗಳಲ್ಲಿರುವ ಇತರ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ.

ಅಲ್ಲದೆ ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ಖುದ್ದು ಪರಿಶೀಲಿಸುವಂತೆ ಮತ್ತು ಎಲ್ಲ ಅಗತ್ಯ ನೆರವು ಒದಗಿಸುವಂತೆ ನನ್ನ ಸಹೋದ್ಯೋಗಿ ಕಿರಣ್ ರಿಜಿಜು ಅವರಿಗೆ ನಾನು ಸೂಚಿಸಿದ್ದೇನೆ.”, ಎಂದು ಪ್ರಧಾನಿ ತಿಳಿಸಿದ್ದಾರೆ.

****

AKT/NT