Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಈಶಾನ್ಯ ಮಂಡಳಿಯ ಪುನರ್ ಸ್ಥಾಪನೆಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಕೇಂದ್ರ ಗೃಹ ಸಚಿವರನ್ನು ಎಲ್ಲ 8 ಈಶಾನ್ಯ ಸದಸ್ಯ ರಾಜ್ಯಗಳ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳನ್ನು ಒಳಗೊಂಡ ಶಾಸನಾತ್ಮಕ ಕಾಯವಾದ- ಈಶಾನ್ಯ ಮಂಡಲಿ (ಎನ್.ಇ.ಸಿ.)ಯ ಪದನಿಮಿತ್ತ ಅಧ್ಯಕ್ಷರನ್ನಾಗಿ ನಾಮಾಂಕನ ಮಾಡುವ ಈಶಾನ್ಯ ವಲಯ ಅಭಿವೃದ್ಧಿ ಸಚಿವಾಲಯ (ಡಿ.ಓ.ಎನ್.ಇ.ಆರ್.)ನ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ. ಈಶಾನ್ಯ ವಲಯ ಅಭಿವೃದ್ಧಿ ಸಚಿವಾಲಯದ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವರು ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುವ ಪ್ರಸ್ತಾಪಕ್ಕೂ ಸಂಪುಟ ತನ್ನ ಅನುಮೋದನೆ ನೀಡಿದೆ.

ಪರಿಣಾಮಗಳು:

ಎನ್.ಇ.ಸಿ. ಕೇಂದ್ರ ಮತ್ತು ರಾಜ್ಯದ ಸಂಸ್ಥೆಗಳ ಮೂಲಕ ವಿವಿಧ ಯೋಜನೆಗಳನ್ನು ಜಾರಿ ಮಾಡುತ್ತದೆ. ಗೃಹ ಸಚಿವರು ಅಧ್ಯಕ್ಷರಾಗಿ ಮತ್ತು ಡಿಓಎನ್ಇಆರ್ ಸಚಿವರು ಉಪಾಧ್ಯಕ್ಷರಾಗುವ ಹೊಸ ವ್ಯವಸ್ಥೆಯ ಅಡಿಯಲ್ಲಿ, ಎನ್.ಇಸಿ ಮತ್ತು ಎಲ್ಲ ಈಶಾನ್ಯ ರಾಜ್ಯಗಳ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಸದಸ್ಯರಾಗಿ, ಹೆಚ್ಚು ಸಮಗ್ರವಾಗಿ ಅಂತರ ರಾಜ್ಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ವೇದಿಕೆಯನ್ನು ಕಲ್ಪಿಸುತ್ತದೆ ಮತ್ತು ಭವಿಷ್ಯದಲ್ಲಿ ಸಮಾನ ದೃಷ್ಟಿಕೋನದ ಪರಿಗಣನೆಗೆ ಅವಕಾಶ ನೀಡುತ್ತದೆ.

ಅಂತರ ರಾಜ್ಯ ಸಮಸ್ಯೆಗಳಾದ ಮಾದಕ ವಸ್ತು ಕಳ್ಳಸಾಗಣೆ, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಕಳ್ಳಸಾಗಣೆ ಹಾಗೂ ಗಡಿ ವಿವಾದ ಇತ್ಯಾದಿಗಳ ಕುರಿತು ವಿವಿಧ ವಲಯ ಮಂಡಳಿಗಳು ಕೈಗೊಂಡಿರುವ ಸವಾಲನ್ನೂ ಎನ್.ಇ.ಸಿ. ಈಗ ನಿಭಾಯಿಸಬಹುದಾಗಿದೆ. ಎನ್.ಇ.ಸಿ.ಯ ಈ ಮರು ಸ್ಥಾಪನೆಯು ಈಶಾನ್ಯ ವಲಯದ ಸಮರ್ಥ ಕಾಯವಾಗಿ ಹೊರಹೊಮ್ಮಲು ನೆರವಾಗಲಿದೆ.

ಕಾಲ ಕಾಲಕ್ಕೆ ಮಂಡಳಿಯು ಯೋಜನೆಗಳಲ್ಲಿ ಸೇರಿದ ಯೋಜನೆ/ಕಾರ್ಯಕ್ರಮಗಳ ಅನುಷ್ಠಾನದ ಪರಾಮರ್ಶೆ ನಡೆಸುತ್ತದೆ ಮತ್ತು ರಾಜ್ಯ ಸರ್ಕಾರಗಳ ನಡುವೆ ಈ ಯೋಜನೆಗಳಿಗೆ ಸಂಬಂಧಿಸಿದಂತೆ ಸಮನ್ವಯತೆಗೆ ಸಮರ್ಥವಾದ ಕ್ರಮಗಳನ್ನು ಶಿಫಾರಸು ಮಾಡುತ್ತದೆ. ಕೇಂದ್ರ ಸರ್ಕಾರದಿಂದ ಮಂಡಳಿಗೆ ಇಂಥ ಅಧಿಕಾರವನ್ನು ನೀಡಿದೆ.

ಹಿನ್ನೆಲೆ:

ಎನ್.ಇ.ಸಿ.ಯನ್ನು ಸಮತೋಲಿತ ಮತ್ತು ಸಮನ್ವಯತೆಯ ಅಭಿವೃದ್ಧಿಯ ಖಾತ್ರಿಗಾಗಿ ಮತ್ತು ರಾಜ್ಯಗಳ ನಡುವೆ ಸಮನ್ವಯತೆಗಾಗಿ ಉನ್ನತ ಮಟ್ಟದ ಕಾಯವಾಗಿ ಈಶಾನ್ಯ ವಲಯ ಮಂಡಳಿ ಕಾಯಿದೆ 1971ರ ಅಡಿಯಲ್ಲಿ ಸ್ಥಾಪಿಸಲಾಗಿದೆ. 2002ರಲ್ಲಿ ತರಲಾದ ತಿದ್ದುಪಡಿಯನ್ವಯ, ಎನ್.ಇ.ಸಿ. ಈಶಾನ್ಯ ಪ್ರದೇಶಗಳ ಪ್ರಾದೇಶಿಕ ಯೋಜನಾ ಕಾಯವಾಗಿ ಕಾರ್ಯನಿರ್ವಹಿಸುವುದು ಕಡ್ಡಾಯವಾಗಿದೆ ಮತ್ತು ಈ ಪ್ರದೇಶಗಳಿಗೆ ಪ್ರಾದೇಶಿಕ ಯೋಜನೆ ರೂಪಿಸುವಾಗ, ಎರಡು ಅಥವಾ ಹೆಚ್ಚಿನ ರಾಜ್ಯಗಳಿಗೆ ಲಾಭವಾಗುವಂಥ ಯೋಜನೆ ಮತ್ತು ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕಾಗಿದೆ ಮತ್ತು ಸಿಕ್ಕಿಂ ವಿಚಾರದಲ್ಲಿ ಮಂಡಳಿಯು ಆ ರಾಜ್ಯಕ್ಕೆ ನಿರ್ದಿಷ್ಟ ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸಬೇಕಾಗುತ್ತದೆ.

*****

AKT/VBA