ಪಿಎಂಇಂಡಿಯಾ
ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಜಯಂತಿಯ ಅಂಗವಾಗಿ ಗುಜರಾತ್ ನ ಕೆವಾಡಿಯಾದಲ್ಲಿಂದು ನಡೆದ ಏಕತಾ ದಿನದ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪಾಲ್ಗೊಂಡರು. ಏಕತೆಯ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಅವರು ಏಕತೆಯ ಪ್ರತಿಜ್ಞೆ ಬೋಧಿಸಿದರು ಮತ್ತು ಈ ಸಂದರ್ಭದಲ್ಲಿ ಏಕತಾ ದಿನದ ಪರೇಡ್ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ಕೆವಾಡಿಯಾದ ಸಮಗ್ರ ಅಭಿವೃದ್ಧಿಗೆ ಉದ್ಘಾಟಿಸಲಾದ ವಿವಿಧ ಯೋಜನೆಗಳು ವಲಯದ ಪ್ರವಾಸೋದ್ಯಮದ ಹೆಚ್ಚಳಕ್ಕೆ ನೆರವಾಗಲಿದೆ ಎಂದರು. ಈಗ ಪ್ರವಾಸಿಗರಿಗೆ ಸಮುದ್ರ ವಿಮಾನ ಸೇವೆಯ ಮೂಲಕವೂ ಏಕತೆಯ ಪ್ರತಿಮೆಗೆ ಆಗಮಿಸಿ ಸರ್ದಾರ್ ಸಾಹೇಬ್ ಅವರ ದರ್ಶನ ಪಡೆಯಬಹುದಾಗಿದೆ ಎಂದರು.
ಮಹರ್ಷಿ ವಾಲ್ಮೀಕಿಗಳಿಂದ ಸಾಂಸ್ಕೃತಿಯ ಏಕತೆ
ಕೆಲವು ಶತಮಾನಗಳ ಹಿಂದೆ, ಆದಿಕವಿ ಮಹರ್ಷಿ ವಾಲ್ಮೀಕಿ ನಾವಿಂದು ಅನುಭವಿಸುತ್ತಿರುವ ಭಾರತಕ್ಕಿಂತ ಹೆಚ್ಚು ರೋಮಾಂಚಕ, ಚೈತನ್ಯಶೀಲ ಭಾರತವನ್ನು ಸಾಂಸ್ಕೃತಿಕವಾಗಿ ಒಗ್ಗೂಡಿಸಲು ಪ್ರಯತ್ನಿಸಿದ್ದರು ಎಂದು ಪ್ರಧಾನಮಂತ್ರಿ ಹೇಳಿದರು. ಏಕತಾ ದಿನದಂದೆ ವಾಲ್ಮೀಕಿ ಜಯಂತಿಯೂ ಬಂದಿರುವ ಬಗ್ಗೆ ಶ್ರೀ ಮೋದಿ ಹರ್ಷ ವ್ಯಕ್ತಪಡಿಸಿದರು. ಈ ಸಾಂಕ್ರಾಮಿಕದ ಸಂದರ್ಭದಲ್ಲಿ ದೇಶ ತನ್ನ ಒಗ್ಗಟ್ಟಿನ ಬಲ, ತನ್ನ ಸಂಘಟಿತ ಛಲವನ್ನು ಸಾಬೀತುಪಡಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಏಕತೆಯ ಹೊಸ ಆಯಾಮ
ಇಂದು ಕಾಶ್ಮೀರ ತನ್ನ ಅಭಿವೃದ್ದಿಗೆ ಬರುವ ಅಡ್ಡಿಗಳನ್ನು ನಿವಾರಿಸಿ ಅಭಿವೃದ್ಧಿಯ ಹೊಸ ಹಾದಿಯಲ್ಲಿ ಸಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ದೇಶ ಇಂದು ಏಕತೆಯ ಹೊಸ ಆಯಾಮ ಪಡೆದಿದೆ ಎಂದು ಹೇಳಿದರು. ಈಶಾನ್ಯ ಭಾಗದಲ್ಲಿ ಶಾಂತಿ ಪುನರ್ಸ್ಥಾಪಿಸಲು ಕೈಗೊಂಡಿರುವ ಕ್ರಮಗಳು ಮತ್ತು ಅಭಿವೃದ್ಧಿಗೆ ಕೈಗೊಂಡಿರುವ ಉಪಕ್ರಮಗಳನ್ನು ಪಟ್ಟಿ ಮಾಡಿದರು.
ಮಾನ್ಯ ಸುಪ್ರೀಂಕೋರ್ಟ್ ತೀರ್ಪಿನ ತರುವಾಯ ಅಯೋಧ್ಯಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಮಾಡುತ್ತಿರುವುದು ಸರ್ದಾರ್ ಪಟೇಲ್ ಅವರ ಕಲ್ಪನೆಯ ಭಾರತದ ಸಾಂಸ್ಕೃತಿಕ ವೈಭವವನ್ನು ಪುನರ್ ಸ್ಥಾಪಿಸುವ ಪ್ರಯತ್ನ ಎಂದರು.
ಆತ್ಮ ನಿರ್ಭರ ಭಾರತ
ಇಂದು ದೇಶದ 130 ಕೋಟಿ ಜನರು ಒಟ್ಟಾಗಿ ಬಲಿಷ್ಠ ಮತ್ತು ಸಮರ್ಥ ದೇಶ ಕಟ್ಟುತ್ತಿದ್ದು, ಇದರಲ್ಲಿ ಸಮಾನತೆ ಮತ್ತು ಸಮಾನ ಅವಕಾಶಗಳು ಇರಬೇಕು ಎಂದರು. ಸ್ವಾವಲಂಬಿ ದೇಶದಿಂದ ಮಾತ್ರ ಅದರ ಪ್ರಗತಿ ಮತ್ತು ಭದ್ರತೆ ಸಾಧ್ಯ ಎಂದರು. ಹೀಗಾಗಿಯೇ ದೇಶ ರಕ್ಷಣೆಯೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಸಾಗಿದೆ ಎಂದರು.
ಗಡಿ ಪ್ರದೇಶಗಳ ಅಭಿವೃದ್ಧಿ ಮತ್ತು ಭಾರತದ ಸಾರ್ವಭೌಮತ್ವ ಮತ್ತು ಏಕತೆಯ ಸಂರಕ್ಷಣೆ
ಗಡಿಯ ವಿಚಾರದಲ್ಲಿ ಭಾರತದ ವರ್ತನೆ ಮತ್ತು ಚಿಂತನೆ ಎರಡೂ ಬದಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ನೆರೆಯ ರಾಷ್ಟ್ರಗಳನ್ನು ಟೀಕಿಸಿದ ಅವರು, ಇಂದು ಭಾರತದ ಭೂಮಿಯತ್ತ ಕಣ್ಣಿಟ್ಟವರು ತಕ್ಕ ಉತ್ತರವನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು. ಭಾರತವು ಗಡಿಯಲ್ಲಿ ನೂರಾರು ಕಿಲೋ ಮೀಟರ್ ರಸ್ತೆಗಳು, ಡಜನ್ನುಗಟ್ಟಲೆ ಸೇತುವೆಗಳು ಮತ್ತು ಅನೇಕ ಸುರಂಗಗಳನ್ನು ನಿರ್ಮಿಸುತ್ತಿದೆ ಎಂದು ಅವರು ಉಲ್ಲೇಖಿಸಿದರು. ಇಂದಿನ ಭಾರತವು ತನ್ನ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ರಕ್ಷಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಅವರು ದೃಢಪಡಿಸಿದರು.
ಭಯೋತ್ಪಾದನೆಯ ವಿರುದ್ಧ ಏಕತೆ
ಈ ಪ್ರಯತ್ನಗಳ ಹೊರತಾಗಿಯೂ ಭಾರತ ಮತ್ತು ಇಡೀ ವಿಶ್ವ ಹಲವು ಸವಾಲುಗಳನ್ನು ಎದುರಿಸುತ್ತಿದೆ ಎಂದರು. ಕೆಲವರು ಹೊರಬಂದು ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ರೀತಿ ಇಂದು ಜಾಗತಿಕ ಕಾಳಜಿಯ ವಿಷಯವಾಗಿದೆ ಎಂದು ಅವರು ಹೇಳಿದರು. ವಿಶ್ವದ ಎಲ್ಲ ದೇಶಗಳು, ಎಲ್ಲಾ ಸರ್ಕಾರಗಳು, ಎಲ್ಲಾ ಧರ್ಮಗಳು ಭಯೋತ್ಪಾದನೆ ವಿರುದ್ಧ ಒಂದಾಗಬೇಕಾದ ಅಗತ್ಯವನ್ನು ಅವರು ಪ್ರತಿಪಾದಿಸಿದರು. ಶಾಂತಿ, ಭ್ರಾತೃತ್ವ ಮತ್ತು ಪರಸ್ಪರ ಗೌರವದ ಭಾವನೆ ಮಾನವೀಯತೆಯ ನಿಜವಾದ ಪರಿಚಯವಾಗಿದೆ ಎಂದು ಅವರು ಹೇಳಿದರು. ಭಯೋತ್ಪಾದನೆ –ಹಿಂಸಾಚಾರದಿಂದ ಯಾರೂ ಕಲ್ಯಾಣವನ್ನು ಪಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ನಮ್ಮ ವೈವಿಧ್ಯತೆಯು ನಮ್ಮ ಅಸ್ತಿತ್ವ ಮತ್ತು ನಾವು ತುಂಬಾ ಅಸಾಧಾರಣವಾದವರು ಎಂದರು. ಭಾರತದ ಈ ಏಕತೆಯ ಶಕ್ತಿ ಇತರರನ್ನು ತುದಿ ಬೆರಳಲ್ಲಿ ನಿಲ್ಲುವಂತೆ ಮಾಡಿತ್ತು ಎಂದು ಅವರು ಸ್ಮರಿಸಿದರು. ಈ ವೈವಿಧ್ಯತೆಯನ್ನೇ ಅವರು ನಮ್ಮ ಏಕೈಕ ದೌರ್ಬಲ್ಯವನ್ನಾಗಿ ಮಾಡಲು ಬಯಸುತ್ತಾರೆ. ಅಂತಹ ಶಕ್ತಿಗಳನ್ನು ಗುರುತಿಸಿ ಜಾಗರೂಕರಾಗಿರಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಪುಲ್ವಾಮಾ ದಾಳಿ
ಇಂದು ಅರೆ ಸೇನಾ ಪಡೆಯ ಪರೇಡ್ ವೀಕ್ಷಿಸುವಾಗ ತಮಗೆ ಪುಲ್ವಾಮಾ ದಾಳಿ ನೆನಪಿಗೆ ಬಂತೆಂದು ಪ್ರಧಾನಮಂತ್ರಿ ಹೇಳಿದರು. ದೇಶ ಎಂದಿಗೂ ಆ ಘಟನೆಯನ್ನು ಮರೆಯುವುದಿಲ್ಲ ಮತ್ತು ಇಡೀ ದೇಶ ತನ್ನ ವೀರ ಯೋಧರ ಅಗಲಿಕೆಯಿಂದ ದುಃಖಿತವಾಗಿದೆ ಎಂದರು. ಈ ಘಟನೆಯ ಬಗ್ಗೆ ನೀಡಲಾದ ಹೇಳಿಕೆಗಳನ್ನೂ ದೇಶ ಮರೆಯುವುದಿಲ್ಲ ಎಂದರು. ನೆರೆಯ ದೇಶದ ಸಂಸತ್ತಿನಲ್ಲಿ ಈ ಘಟನೆಯ ಬಗ್ಗೆ ಇತ್ತೀಚೆಗೆ ನೀಡಲಾದ ಹೇಳಿಕೆ ಸತ್ಯ ಬಯಲು ಮಾಡಿದೆ ಎಂದರು.
ದೇಶದಲ್ಲಿನ ಕೊಳಕು ರಾಜಕೀಯದ ನಾಟಕದ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿದರು, ಅದು ಸಂಪೂರ್ಣ ಸ್ವಾರ್ಥ ಮತ್ತು ದುರಹಂಕಾರವನ್ನು ಪ್ರದರ್ಶಿಸುತ್ತದೆ. ಪುಲ್ವಾಮಾ ದಾಳಿಯ ನಂತರ ಮಾಡಿದ ರಾಜಕೀಯ ಈ ಜನರು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಯಾವ ಮಟ್ಟಕ್ಕೆ ಹೋಗಬಹುದು ಎಂಬುದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ಅಂತಹ ರಾಜಕೀಯ ಪಕ್ಷಗಳು ದೇಶದ ಭದ್ರತೆಯ ಹಿತದೃಷ್ಟಿಯಿಂದ ಮತ್ತು ನಮ್ಮ ಭದ್ರತಾ ಪಡೆಗಳ ಆತ್ಮಸ್ಥೈರ್ಯ ಹೆಚ್ಚಿಸಲು ಶ್ರಮಿಸಬೇಕು ಎಂದು ಅವರು ಆಗ್ರಹಿಸಿದರು.
ನಿಮ್ಮ ಸ್ವಾರ್ಥಕ್ಕಾಗಿ ರಾಷ್ಟ್ರ ವಿರೋಧಿ ಶಕ್ತಿಗಳ ಕೈಗೆ ಆಡುವ ವಸ್ತುವಾಗುವ ಮೂಲಕ ತಿಳಿದೋ ಅಥವಾ ತಿಳಿಯದೆಯೋ ನೀವು ದೇಶದ ಹಿತಾಸಕ್ತಿಗಾಗಿ ಅಥವಾ ನಿಮ್ಮ ಪಕ್ಷಕ್ಕಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ನಮ್ಮೆಲ್ಲರಿಗೂ ಹೆಚ್ಚಿನ ಆಸಕ್ತಿ ದೇಶದ ಹಿತಾಸಕ್ತಿಯಾಗಿರಬೇಕು ಎಂದು ಅವರು ಒತ್ತಿ ಹೇಳಿದರು. ಪ್ರತಿಯೊಬ್ಬರ ಹಿತಾಸಕ್ತಿಗಳ ಬಗ್ಗೆ ಚಿಂತಿಸಿದಾಗ ನಾವು ಪ್ರಗತಿ ಹೊಂದುತ್ತೇವೆ ಎಂದು ಹೇಳಿದರು.
ಇದಕ್ಕೂ ಮುನ್ನ ಪ್ರಧಾನಮಂತ್ರಿಯವರು ಗುಜರಾತ್ ರಾಜ್ಯ, ಕೇಂದ್ರ ಮೀಸಲು ಸಶಸ್ತ್ರಪಡೆ, ಗಡಿ ಭದ್ರತಾ ಪಡೆ, ಭಾರತ ಟಿಬೆಟಿಯನ್ ಗಡಿ ಪೊಲೀಸ್, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳು ಮತ್ತು ರಾಷ್ಟ್ರೀಯ ಭದ್ರತಾ ಪಡೆಗಳ ವರ್ಣರಂಜಿತ ಪರೇಡ್ ವೀಕ್ಷಿಸಿದರು. ಈ ಪರೇಡ್ ಸಿಆರ್.ಪಿ.ಎಫ್.ನ ಮಹಿಳಾ ಅಧಿಕಾರಿಗಳ ರೈಫಲ್ ಕಸರತ್ತನ್ನೂ ಒಳಗೊಂಡಿತ್ತು. ಈ ಕಾರ್ಯಕ್ರಮದ ಅಂಘವಾಗಿ ಭಾರತೀಯ ವಾಯುಪಡೆಯ ಜಾಗ್ವಾರ್ ಗಳು ಸಹ ಫ್ಲೈ–ಪಾಸ್ಟ್ ಪ್ರದರ್ಶನ ನೀಡಿದವು. ರಾಷ್ಟ್ರೀಯ ಏಕತಾ ದಿನದ ಸಂದರ್ಭದಲ್ಲಿ ಭಾರತದ ಬುಡಕಟ್ಟು ಪರಂಪರೆಯನ್ನು ಪ್ರದರ್ಶಿಸುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಪ್ರಧಾನಮಂತ್ರಿ ಸಾಕ್ಷಿಯಾದರು.
***
आज सरदार सरोवर से साबरमती रिवर फ्रंट तक सी-प्लेन सेवा का भी शुभारंभ होने जा रहा है।
— PMO India (@PMOIndia) October 31, 2020
सरदार साहब के दर्शन के लिए, स्टैच्यू ऑफ यूनिटी को देखने के लिए देशवासियों को अब सी-प्लेन सर्विस का भी विकल्प मिलेगा।
ये सारे प्रयास इस क्षेत्र में पर्यटन को भी बहुत ज्यादा बढ़ाने वाले हैं: PM
ये भी अद्भुत संयोग है कि आज ही वाल्मीकि जयंती भी है।
— PMO India (@PMOIndia) October 31, 2020
आज हम भारत की जिस सांस्कृतिक एकता का दर्शन करते हैं,
जिस भारत को अनुभव करते हैं,
उसे और जीवंत और ऊर्जावान बनाने का काम सदियों पहले आदिकवि महर्षि वाल्मीकि ने ही किया था: PM
ये आपदा अचानक आयी। इसने पूरे विश्व में मानव जीवन को प्रभावित किया है, हमारी गति को प्रभावित किया।
— PMO India (@PMOIndia) October 31, 2020
लेकिन इस महामारी के सामने देश ने जिस तरह अपने सामूहिक सामर्थ्य को, अपनी सामूहिक इच्छाशक्ति को साबित किया वो अभूतपूर्व है: PM
कश्मीर के विकास में जो बाधायें आ रही थीं, उन्हें पीछे छोडकर अब कश्मीर विकास के नए मार्ग पर बढ़ चुका है।
— PMO India (@PMOIndia) October 31, 2020
चाहे नॉर्थईस्ट में शांति की बहाली हो, या नॉर्थईस्ट के विकास के लिए उठाए जा रहे कदम, आज देश एकता के नए आयाम स्थापित कर रहा है: PM#RashtriyaEktaDiwas
सोमनाथ के पुनर्निर्माण से सरदार पटेल ने भारत के सांस्कृतिक गौरव को लौटाने का जो यज्ञ शुरू किया था, उसका विस्तार देश ने अयोध्या में भी देखा है।
— PMO India (@PMOIndia) October 31, 2020
आज देश राममंदिर पर सुप्रीमकोर्ट के फैसले का साक्षी बना है, और भव्य राममंदिर को बनते भी देख रहा है।#RashtriyaEktaDiwas
आज हम 130 करोड़ देशवासी मिलकर एक ऐसे राष्ट्र का निर्माण कर रहे हैं जो सशक्त भी हो और सक्षम भी हो।
— PMO India (@PMOIndia) October 31, 2020
जिसमें समानता भी हो, और संभावनाएं भी हों: PM#RashtriyaEktaDiwas
आत्मनिर्भर देश ही अपनी प्रगति के साथ साथ अपनी सुरक्षा के लिए भी आश्वस्त रह सकता है।
— PMO India (@PMOIndia) October 31, 2020
इसलिए, आज देश रक्षा के क्षेत्र में भी आत्मनिर्भर बनने की ओर बढ़ रहा है।
इतना ही नहीं, सीमाओं पर भी भारत की नज़र और नज़रिया अब बदल गए हैं: PM
आज भारत की भूमि पर नज़र गड़ाने वालों को मुंहतोड़ जवाब मिल रहा है।
— PMO India (@PMOIndia) October 31, 2020
आज का भारत सीमाओं पर सैकड़ों किलोमीटर लंबी सड़कें बना रहा है, दर्जनों ब्रिज, अनेक सुरंगें बना रहा है।
अपनी संप्रभुता और सम्मान की रक्षा के लिए आज का भारत पूरी तरह तैयार है: PM
प्रगति के इन प्रयासों के बीच, कई ऐसी चुनौतियां भी हैं जिसका सामना आज भारत, और पूरा विश्व कर रहा है।
— PMO India (@PMOIndia) October 31, 2020
बीते कुछ समय से दुनिया के अनेक देशों में जो हालात बने हैं,
जिस तरह कुछ लोग आतंकवाद के समर्थन में खुलकर सामने आ गए हैं,
वो आज वैश्विक चिंता का विषय है: PM
आज के माहौल में,
— PMO India (@PMOIndia) October 31, 2020
दुनिया के सभी देशों को,
सभी सरकारों को,
सभी पंथों को,
आतंकवाद के खिलाफ एकजुट होने की बहुत ज्यादा जरूरत है।
शांति-भाईचारा और परस्पर आदर का भाव ही मानवता की सच्ची पहचान है।
आतंकवाद-हिंसा से कभी भी, किसी का कल्याण नहीं हो सकता: PM
हमारी विविधता ही हमारा अस्तित्व है।
— PMO India (@PMOIndia) October 31, 2020
हम एक हैं तो असाधारण हैं।
लेकिन साथियों, हमें ये भी याद रखना है कि भारत की ये एकता, ये ताकत दूसरों को खटकती भी रहती है।
हमारी इस विविधता को ही वो हमारी कमजोरी बनाना चाहते हैं।
ऐसी ताकतों को पहचानना जरूरी है, सतर्क रहने की जरूरत है: PM
आज यहां जब मैं अर्धसैनिक बलों की परेड देख रहा था, तो मन में एक और तस्वीर थी।
— PMO India (@PMOIndia) October 31, 2020
ये तस्वीर थी पुलवामा हमले की।
देश कभी भूल नहीं सकता कि जब अपने वीर बेटों के जाने से पूरा देश दुखी था, तब कुछ लोग उस दुख में शामिल नहीं थे,
वो पुलवामा हमले में अपना राजनीतिक स्वार्थ देख रहे थे: PM
देश भूल नहीं सकता कि तब कैसी-कैसी बातें कहीं गईं, कैसे-कैसे बयान दिए गए।
— PMO India (@PMOIndia) October 31, 2020
देश भूल नहीं सकता कि जब देश पर इतना बड़ा घाव लगा था, तब स्वार्थ और अहंकार से भरी भद्दी राजनीति कितने चरम पर थी: PM
पिछले दिनों पड़ोसी देश से जो खबरें आईं हैं,
— PMO India (@PMOIndia) October 31, 2020
जिस प्रकार वहां की संसद में सत्य स्वीकारा गया है,
उसने इन लोगों के असली चेहरों को देश के सामने ला दिया है।
अपने राजनीतिक स्वार्थ के लिए, ये लोग किस हद तक जा सकते हैं,
पुलवामा हमले के बाद की गई राजनीति, इसका बड़ा उदाहरण है: PM
मैं ऐसे राजनीतिक दलों से आग्रह करूंगा कि,
— PMO India (@PMOIndia) October 31, 2020
देश की सुरक्षा के हित में, हमारे सुरक्षाबलों के मनोबल के लिए, कृपा करके ऐसी राजनीति न करें, ऐसी चीजों से बचें।
अपने स्वार्थ के लिए, जाने-अनजाने आप देशविरोधी ताकतों की हाथों में खेलकर, न आप देश का हित कर पाएंगे और न ही अपने दल का: PM
हमें ये हमेशा याद रखना है कि हम सभी के लिए सर्वोच्च हित- देशहित है।
— PMO India (@PMOIndia) October 31, 2020
जब हम सबका हित सोचेंगे, तभी हमारी भी प्रगति होगी, उन्नति होगी: PM
महाकवि और स्वतंत्रता सेनानी सुब्रह्मण्यम भारती ने भारत की विविधता के बारे में जो लिखा, उस अद्भुत भावना को मां नर्मदा के किनारे सरदार साहब की प्रतिमा की छांव में और करीब से महसूस कर सकते हैं। pic.twitter.com/cJ8MhG9bek
— Narendra Modi (@narendramodi) October 31, 2020
विपदाओं और चुनौतियों के बीच भी देश ने कई ऐसे काम किए हैं, जो कभी असंभव मान लिए गए थे। pic.twitter.com/7Rv11B8cow
— Narendra Modi (@narendramodi) October 31, 2020
आज हम 130 करोड़ देशवासी मिलकर एक ऐसे राष्ट्र का निर्माण कर रहे हैं, जो सशक्त भी हो और सक्षम भी हो, जिसमें समानता भी हो और संभावनाएं भी हों।
— Narendra Modi (@narendramodi) October 31, 2020
आत्मनिर्भर देश ही अपनी प्रगति के साथ-साथ अपनी सुरक्षा के लिए भी आश्वस्त रह सकता है। pic.twitter.com/U9nVCNzPVd
हमें यह हमेशा याद रखना है कि हम सभी के लिए सर्वोच्च हित- देशहित है।
— Narendra Modi (@narendramodi) October 31, 2020
जब हम सबका हित सोचेंगे, तभी हमारी प्रगति भी होगी, उन्नति भी होगी। pic.twitter.com/EvXLTf8v3H