ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ 2023-24 ನೇ ಸಾಲಿನಿಂದ 2025-26ನೇ ಹಣಕಾಸು ವರ್ಷಕ್ಕೆ ಮೂರು ವರ್ಷಗಳ ಅವಧಿಗೆ 75 ಲಕ್ಷ ಎಲ್ ಪಿಜಿ ಸಂಪರ್ಕಗಳನ್ನು ಬಿಡುಗಡೆ ಮಾಡಲು ಪ್ರಧಾನಮಂತ್ರಿ ಉಜ್ವಲಾ ಯೋಜನೆ (ಪಿಎಂಯುವೈ) ಯ ವಿಸ್ತರಣೆಗೆ ಅನುಮೋದನೆ ನೀಡಿದೆ. 75 ಲಕ್ಷ ಹೆಚ್ಚುವರಿ ಉಜ್ವಲಾ ಸಂಪರ್ಕಗಳಿಂದಾಗಿ ಒಟ್ಟಾರೆ ಪಿಎಂಯುವೈ ಫಲಾನುಭವಿಗಳ ಸಂಖ್ಯೆ 10.35 ಕೋಟಿಗೆ ಏರಿಕೆಯಾಗಲಿದೆ.
2014 ಕ್ಕೆ ಹೋಲಿಸಿದರೆ 2023 ರಲ್ಲಿ ಎಲ್ ಪಿಜಿ ಸಂಪರ್ಕದ ಪ್ರಮುಖ ವಿವರ
|
ರಾಷ್ಟ್ರೀಯ ಎಲ್ ಪಿಜಿ ಸಂಪರ್ಕ |
% |
55.90% |
61.9% |
ಗರಿಷ್ಠ ಪ್ರಮಾಣ ತಲುಪುವ ಹಂತದಲ್ಲಿ |
|
ಒಎಂಸಿಗಳಲ್ಲಿನ ಬಾಟ್ಲಿಂಗ್ ಘಟಕಗಳ ಸಂಖ್ಯೆ |
ಸಂಖ್ಯೆಗಳಲ್ಲಿ. |
186 |
188 |
208 |
|
ಭಾರತದಲ್ಲಿನ ಎಲ್ ಪಿಜಿ ವಿತರಕರ ಸಂಖ್ಯೆ |
ಸಂಖ್ಯೆಗಳಲ್ಲಿ |
13896 |
17916 |
25386 |
|
ಭಾರತದಲ್ಲಿ ಗೃಹ ಬಳಕೆಯ ಎಲ್ ಪಿಜಿ ಸಕ್ರಿಯ ಗ್ರಾಹಕರ ಸಂಖ್ಯೆ |
ಲಕ್ಷಗಳಲ್ಲಿ |
1451.76 |
1662.5 |
3140.33 |
(ಘಟಕ) | 01.04.2014 | 01.04.2016 | 01.04.2023 |
|---|
ಉಜ್ವಲಾ 2.0 ಯೋಜನೆಯಡಿ ಹಾಲಿ ಇರುವ ವಿಧಾನಗಳಡಿಯಲ್ಲಿ, ಮೊದಲ ರಿಫಿಲ್ ಮತ್ತು ಸ್ಟೌವ್ ಅನ್ನು ಉಜ್ವಲಾ ಫಲಾನುಭವಿಗಳಿಗೆ ಉಚಿತವಾಗಿ ಒದಗಿಸಲಾಗುವುದು.
ಪಿಎಂಯುವೈ ಫಲಾನುಭವಿಗಳಿಗೆ 14.2 ಕೆ ಜಿ ತೂಕದ ಎಲ್ ಪಿಜಿ ಸಿಲಿಂಡರ್ ಗಳಿಗೆ ವರ್ಷಕ್ಕೆ 12 ಸಿಲಿಂಡರ್ ವರೆಗೆ ಪ್ರತಿ ಸಿಲಿಂಡರ್ ಗೆ 200 ರೂ. ಸಬ್ಸಿಡಿ ಒದಗಿಸಲಾಗುವುದು. ಪಿಎಮಯುವೈ ನಡಿ ಮುಂದುಯದಿರುವ ಅರ್ಹ ಬಡ ಕುಟುಂಬಗಳು ಈ ಯೋಜನೆಯಡಿ ನಿಗದಿತ ಲಾಭವನ್ನು ಪಡೆಯಲಾಗದು.
ಶುದ್ಧ ಅಡುಗೆ ಅನಿಲ ಪದ್ದತಿಯಿಂದ ಮಹಿಳೆಯರ ಸುಲಭ ಜೀವನ
ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲೂಎಚ್ ಒ) ಪ್ರಕಾರ, ಜಗತ್ತಿನಾದ್ಯಂತ ಸುಮಾರು 2.4 ಶತಕೋಟಿ ಜನರು (ಇದು ಜಾಗತಿಕ ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗವಾಗಿದೆ), ತೆರೆದ ಬೆಂಕಿ ಅಥವಾ ಸೀಮೆಎಣ್ಣೆ, ಜೀವರಾಶಿ (ಮರ, ಪ್ರಾಣಿಗಳ ಸಗಣಿ ಮತ್ತು ಬೆಳೆ ತ್ಯಾಜ್ಯ ಮುಂತಾದವುಗಳಿಂದ) ಮತ್ತು ಅಡುಗೆಗಾಗಿ ಕಲ್ಲಿದ್ದಲು ಮತ್ತಿತರ ಅಸಮರ್ಥ ಒಲೆಗಳ ಮೇಲೆ ಅವಲಂಬಿತವಾಗಿದೆ. ಇದು ಹಾನಿಕಾರಕ ಮನೆಯ ವಾಯುಮಾಲಿನ್ಯಕ್ಕೆ ಕಾರಣವಾಗುತ್ತದೆ, 2020 ರಲ್ಲಿ ವಾರ್ಷಿಕವಾಗಿ ಅಂದಾಜು 3.2 ಮಿಲಿಯನ್ ಸಾವುಗಳಿಗೆ ಕಾರಣವಾಗುತ್ತದೆ, 237,000 ಕ್ಕೂ ಅಧಿಕ ಸಾವುಗಳು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು. ಸುಸ್ಥಿರ ಮತ್ತು ಮಾಲಿನ್ಯ-ಮುಕ್ತ ಭವಿಷ್ಯವನ್ನು ಸಾಧಿಸಲು ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ನಡುವಿನ ಸಂಕಟವನ್ನು ತಡೆಯಲು ಮನೆಯ ವಾಯು ಮಾಲಿನ್ಯದ ಸಮಸ್ಯೆಯನ್ನು ಪರಿಹರಿಸುವ ಅಗತ್ಯವಿದೆ.
ಈ ಹಿಂದೆ, ಭಾರತದಲ್ಲಿನ ಬಡ ಸಮುದಾಯಗಳು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಉರುವಲು, ಕಲ್ಲಿದ್ದಲು ಮತ್ತು ಸಗಣಿಯ ಬೆರಣಿಗಳಂತಹ ಸಾಂಪ್ರದಾಯಿಕ ಇಂಧನಗಳನ್ನು ಅವುಗಳಿಂದ ಉಂಟಾದ ಆರೋಗ್ಯದ ದುಷ್ಪರಿಣಾಮಗಳ ಬಗ್ಗೆ ಅರಿವಿಲ್ಲದೆ ಬಳಸುತ್ತಿದ್ದರು. ಅದರ ಪರಿಣಾಮವಾಗಿ, ಅವರು ಮೂಲ ಕಾರಣವನ್ನು ತಿಳಿಯದೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದರು. ನ್ಯುಮೋನಿಯಾ, ಶ್ವಾಸಕೋಶದ ಕ್ಯಾನ್ಸರ್, ರಕ್ತಕೊರತೆಯ ಹೃದಯ ಮತ್ತು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆಗಳಂತಹ ಕಾಯಿಲೆಗಳಿಂದ ಉಂಟಾಗುವ ಮರಣದ ಅಪಾಯವು ವ್ಯಾಪಕವಾಗಿ ವರದಿಯಾಗಿದೆ. ಅಡುಗೆಗಾಗಿ ನವೀಕರಿಸಲಾಗದ ಮರದ ಇಂಧನಗಳು ಗಿಗಾಟನ್ ಇಂಗಾಲ (ಸಿಒ2) ಹೊರಸೂಸುವಿಕೆಗೆ ಕಾರಣವಾಗುತ್ತವೆ ಮತ್ತು ವಸತಿ ಘನ ಇಂಧನಗಳನ್ನು ಸುಡುವುದು ಕಪ್ಪು ಇಂಗಾಲದ ಹೊರಸೂಸುವಿಕೆಯ ಶೇ.58ರಷ್ಟನ್ನು ಒಳಗೊಂಡಿರುತ್ತದೆ. ಘನ ಜೀವರಾಶಿಯ ಅರೆಬರೆ ಸುಡುವುದರಿಂದ ಅದು ಮನೆಯ ವಾಯು ಮಾಲಿನ್ಯಕ್ಕೆ (ಎಚ್ ಎಪಿ)ಗೆ ಗಮನಾರ್ಹ ಕೊಡುಗೆ ನೀಡುತ್ತದೆ.
ಇದು ಲಿಂಗ ಸಮಸ್ಯೆ ಎಂದು ಸಂಶೋಧನೆ ಸೂಚಿಸುತ್ತದೆ: ಹುಡುಗಿಯರು ಮತ್ತು ಮಹಿಳೆಯರು ಘನ ಇಂಧನಗಳಿಗೆ ಹೆಚ್ಚಿನ ಮಟ್ಟದಲ್ಲಿ ತೆರೆದುಕೊಳ್ಳುವ ಸ್ಥಿತಿ ಎದುರಿಸುತ್ತಿದ್ದಾರೆ. ಘನ ಇಂಧನಗಳೊಂದಿಗೆ ಅಡುಗೆ ಮಾಡುವುದು ವಿಶ್ವಸಂಸ್ಥೆಯ ಸುಸ್ಥಿರ ಗುರಿ-ಐದರೆಡೆಗೆ ಪ್ರಗತಿಯನ್ನು ವಿಳಂಬ ಮಾಡುತ್ತದೆ.
ಪಿಎಂಯುವೈ ಯೋಜನೆಯು ಮಹಿಳೆಯರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲೀಕರಣಗೊಳಿಸಿದೆ. ಎಲ್ ಪಿಜಿ ಸುಲಭವಾಗಿ ಲಭ್ಯವಾಗುವುದರೊಂದಿಗೆ, ಮಹಿಳೆಯರಿಗೆ ಉರುವಲು ಅಥವಾ ಇತರ ಸಾಂಪ್ರದಾಯಿಕ ಇಂಧನಗಳನ್ನು ಸಂಗ್ರಹಿಸುವ ಕಾರ್ಯವು ಇನ್ನು ಮುಂದೆ ಹೊರೆಯಾಗುವುದಿಲ್ಲ, ಇದು ಸಾಮಾನ್ಯವಾಗಿ ದೀರ್ಘ ಮತ್ತು ಪ್ರಯಾಸಕರ ಪ್ರಯಾಣದ ಅಗತ್ಯವಿರುತ್ತದೆ. ಈ ಹೊಸ ಸೌಕರ್ಯವು ಸಮುದಾಯ ಜೀವನದಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸಲು ಮತ್ತು ಇತರ ಆದಾಯ-ಉತ್ಪಾದಿಸುವ ಅವಕಾಶಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.
ಅಲ್ಲದೆ, ಉಜ್ವಲ ಯೋಜನೆಯು ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸಲು ಕೊಡುಗೆ ನೀಡಿದೆ, ಏಕೆಂದರೆ ಅವರು ಇನ್ನು ಮುಂದೆ ಉರುವಲು ಅಥವಾ ಇಂಧನವನ್ನು ಸಂಗ್ರಹಿಸಲು ಪ್ರತ್ಯೇಕ ಮತ್ತು ಸಂಭಾವ್ಯ ಅಸುರಕ್ಷಿತ ಪ್ರದೇಶಗಳಿಗೆ ತೆರಳಿ ಸಾಹಸ ಮಾಡುವ ಅಗತ್ಯವಿಲ್ಲ
ಎಲ್ ಪಿಜಿ ಅಡಿ ವಿಸ್ತರಣೆ ಉಪಕ್ರಮಗಳು
*****