Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಸಿಡಿಲಿಗೆ ಪ್ರಾಣಹಾನಿ; ಪ್ರಧಾನ ಮಂತ್ರಿ ತೀವ್ರ ಸಂತಾಪ


ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ನಿನ್ನೆ ಸುರಿದ ಭಾರಿ ಮಳೆ, ಗುಡುಗು ಸಿಡಿಲಿಗೆ ಆಗಿರುವ ಹಲವು ಪ್ರಾಣಹಾನಿಗಳಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅವರು ಮೃತ ಸಂತ್ರಸ್ತರಿಗೆ ಪರಿಹಾರ ಧನ ಘೋಷಿಸಿದ್ದಾರೆ.

ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಭಾರಿ ಮಳೆ, ಗುಡುಗು ಸಿಡಿಲು ಬಡಿದು ಹಲವು ಮಂದಿ ಮೃತಪಟ್ಟಿರುವ ಜತೆಗೆ, ಹಲವೆಡೆ ಹಾನಿ ಉಂಟಾಗಿರುವ ವಿಷಯವನ್ನು ಪ್ರಧಾನ ಮಂತ್ರಿ ಅವರು ಗಮನಕ್ಕೆ ತರಲಾಯಿತು. ನಂತರ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಸಿಡಿಲು ಬಡಿದು ಮೃತಪಟ್ಟ ಸಂತ್ರಸ್ತರ ಪ್ರತಿ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಧನ ಪ್ರಕಟಿಸಿದರು.

***