ಪಿಎಂಇಂಡಿಯಾ
ಅಧ್ಯಕ್ಷರು ಹಾಗೂ ನನ್ನ ಮಿತ್ರರಾದ ಶ್ರೀಮಾನ್ ಮೂನ್ ಜೇ ಇನ್ ಅವರೇ ಸ್ಯಾಮ್ ಸಂಗ್ ನ ಉಪಾಧ್ಯಕ್ಷರಾದ ಜೇ ವೈ ಲೀ ಅವರೇ, ಇಲ್ಲಿ ಹಾಜರಿರುವ ಕೊರಿಯಾ ಮತ್ತು ಭಾರತದ ಪ್ರತಿನಿಧಿಗಳೇ ಮತ್ತು ಎಲ್ಲ ಪ್ರತಿನಿಧಿಗಳೇ,
ನನ್ನ ಮಿತ್ರರಾದ ಮೂನ್ ಅವರ ಜತೆ ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಸ್ಯಾಮ್ ಸಂಗ್ ಘಟಕಕ್ಕೆ ಭೇಟಿ ನೀಡುತ್ತಿರುವುದು ನನಗೆ ಸಂತಸದ ಸಂಗತಿಯೇ ಆಗಿದೆ. ಉತ್ತರ ಪ್ರದೇಶ ಮತ್ತು ನೋಯ್ಡಾಗೆ ಸ್ಯಾಮ್ ಸಂಗ್ ನ ಈ ಮೊಬೈಲ್ ಉತ್ಪಾದನಾ ಘಟಕವು ಒಂದು ಹೆಮ್ಮೆಯೇ ಸರಿ. ಹೊಸ ಘಟಕವನ್ನು ಆರಂಭಿಸುತ್ತಿರುವ ಸ್ಯಾಮ್ ಸಂಗ್ ಮತ್ತು ಅವರೆಲ್ಲರ ಇಡೀ ತಂಡಕ್ಕೆ ನನ್ನ ಶುಭ ಕಾಮನೆಗಳನ್ನು ತಿಳಿಸಲು ಬಯಸುತ್ತೇನೆ.
ಸ್ನೇಹಿತರೇ,
ಭಾರತವನ್ನು ಜಗತ್ತಿನ ಉತ್ಪಾದನಾ ವಲಯದ ಹಬ್ ಮಾಡುವಲ್ಲಿ ಇವತ್ತಿನ ಸಂದರ್ಭವು ಅತ್ಯಂತ ಮಹತ್ವದ ಸಂದರ್ಭವೇ ಆಗಿದೆ. 5000 ಕೋಟಿ ರೂಪಾಯಿಗಳ ಈ ಹೂಡಿಕೆಯು ಭಾರತದಲ್ಲಿ ಸ್ಯಾಮ್ ಸಂಗ್ ನ ವ್ಯಾವಹಾರಿಕ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವುದಷ್ಟೇ ಅಲ್ಲದೇ ಭಾರತ ಮತ್ತು ಕೊರಿಯಾ ನಡುವಿನ ಸಂಬಂಧ ಸುಧಾರಣೆಗೂ ಮಹತ್ವದ್ದಾಗಿದೆ. ಸ್ಯಾಮ್ ಸಂಗ್ ನ ಆರ್ ಅಂಡ್ ಡಿ ಹಬ್ ಭಾರತದಲ್ಲೇ ಇದೆ. ಮತ್ತು ಈ ತಯಾರಿಕಾ ಘಟಕವು ನಮ್ಮ ಹೆಮ್ಮೆಯನ್ನು ಇನ್ನಷ್ಟು ವೃದ್ಧಿಸುತ್ತದೆ.
ಸ್ನೇಹಿತರೇ,
ನಾನು ಯಾವತ್ತೂ ಉದ್ಯಮ ಸಮುದಾಯವನ್ನು ಕುರಿತು ಮಾತನಾಡಿದರೂ ಭಾರತದಲ್ಲಿ ಕೊರಿಯಾದ ವಸ್ತುವಿಲ್ಲದ ಒಂದೂ ಮಧ್ಯಮ ಕುಟುಂಬದ ಮನೆಯನ್ನು ಕಾಣದೇ ಇರುವುದಿಲ್ಲ ಎಂದು ಹೇಳುತ್ತಲೇ ಇರುತ್ತೇನೆ. ಭಾರತದ ಜನರ ಜೀವನದಲ್ಲಿ ಸ್ಯಾಮ್ ಸಂಗ್ ಅದರದ್ದೇ ಆದ ಒಂದು ವಿಶೇಷ ಸ್ಥಾನವನ್ನು ಮಾಡಿಕೊಂಡಿದೆ. ವಿಶೇಷವಾಗಿ ನಿಮ್ಮ ಫೋನ್ ಗಳು, ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ನಿಮ್ಮ ಫೋನ್ ಗಳು ವಿಶ್ವ ನಾಯಕರೆನಿಸಿಕೊಂಡಿವೆ. ಇವು ಶರವೇಗದಲ್ಲಿ ಬೆಳೆಯುತ್ತಾ ಸಾಗುತ್ತಿವೆ. ನಾನು ಯಾವಗಲೇ ಸ್ಯಾಮ್ ಸಂಗ್ ಮುಖ್ಯಸ್ಥರ ಜತೆ ಮಾತನಾಡಿದರೂ ಭಾರತದಲ್ಲಿ ಉತ್ಪಾದನೆ ಮಾಡುವಂತೆ ಉತ್ತೇಜಿಸುತ್ತಲೇ ಇರುತ್ತೇನೆ. ಇವತ್ತು ನೋಯ್ಡಾದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವು ಅದರ ಪ್ರತಿಫಲವೇ ಆಗಿದೆ. ಇವತ್ತು ಸಾಮಾನ್ಯ ಮನುಷ್ಯನ ಜೀವನವನ್ನು ಸುಲಭ ಮಾಡುವಲ್ಲಿ ಡಿಜಿಟಲ್ ತಂತ್ರಜ್ಞಾನವು ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಇವತ್ತು ಸರಿಸುಮಾರು 40 ಕೋಟಿ ಸ್ಮಾರ್ಟ್ ಫೋನ್ ಗಳು ಭಾರತದಲ್ಲಿ ಬಳಕೆಯಲ್ಲಿವೆ. ಮತ್ತು 32 ಕೋಟಿ ಜನರು ಬ್ರಾಡ್ ಬ್ಯಾಂಡ್ ಬಳಕೆ ಮಾಡುತ್ತಿದ್ದಾರೆ. ಇಂಟರ್ ನೆಟ್ ಡೆಟಾ ಅತ್ಯಂತ ಕಡಿಮೆ ದರದಲ್ಲಿ ಲಭಿಸುತ್ತಿದೆ. ನಮ್ಮ ದೇಶದ ಒಂದು ಲಕ್ಷಕ್ಕೂ ಹೆಚ್ಚು ಗ್ರಾಮೀಣ ಸಂಸ್ಥೆ( ಗ್ರಾಮ ಪಂಚಾಯ್ತಿಗಳು)ಗಳನ್ನು ಫೈಬರ್ ಕೇಬಲ್ ಸಂಪರ್ಕದ ವ್ಯವಸ್ಥೆಗೆ ತರಲಾಗುತ್ತಿದೆ. ಇದೆಲ್ಲವೂ ಭಾರತದಲ್ಲಿ ಡಿಜಿಟಲ್ ಕ್ರಾಂತಿಯು ಆಗುತ್ತಿದೆ ಎನ್ನುವುದನ್ನು ತೋರಿಸುತ್ತದೆ.
ಸ್ನೇಹಿತರೇ,
ಇವತ್ತು ಅಗ್ಗದ ಬೆಲೆಯ ಮೊಬೈಲ್ ಫೋನ್ ಗಳು, ವೇಗದ ಇಂಟರ್ ನೆಟ್ ವ್ಯವಸ್ಥೆ ಮತ್ತು ಕಡಿಮೆ ದರದ ಇಂಟರ್ ನೆಟ್ ಡೆಟಾ ಕಾರಣದಿಂದ ತ್ವರಿತಗತಿಯ ಮತ್ತು ಪಾರದರ್ಶಕ ಪೂರೈಕೆ ಸೇವೆಯು ಸಾಧ್ಯವಾಗುತ್ತಿದೆ. ಬಹುತೇಕ ಎಲ್ಲ ಸೇವೆಗಳೂ ಇಂದು ಆನ್ ಲೈನ್ ವ್ಯವಸ್ಥೆಗೆ ಬರುತ್ತಿವೆ. ಅದು ವಿದ್ಯುತ್ ಅಥವಾ ನೀರಿನ ಬಿಲ್ ಗಳನ್ನು ಪಾವತಿಸುವುದೇ ಆಗಲಿ, ಶಾಲೆ ಮತ್ತು ಕಾಲೇಜುಗಳ ಪ್ರವೇಶವೇ ಆಗಲಿ ಅದು ಭವಿಷ್ಯ ನಿಧಿ ಅಥವಾ ಪಿಂಚಣಿಗಳೇ ಆಗಲಿ ಎಲ್ಲವೂ ಸುಲಭವಾಗುತ್ತಿದೆ. ದೇಶದ ಉದ್ದಗಲಕ್ಕೂ ಇಂದು ಮೂರು ಲಕ್ಷಕ್ಕೂ ಅಧಿಕ ಸಾಮಾನ್ಯ ಸೇವಾ ಕೇಂದ್ರಗಳು ಹರಡಿಕೊಂಡಿವೆ. ಇವು ಗ್ರಾಮೀಣ ಜನರಿಗೆ ಸೇವೆಯನ್ನು ನೀಡುತ್ತಿವೆ. ನಗರ ಪ್ರದೇಶಗಳ 0.ಬಡ ಮತ್ತು ಮಧ್ಯಮ ವರ್ಗದ ಯುವಕ-ಯುವತಿಯರಿಗೆ ಉಚಿತ ವೈ-ಫೈ ಮತ್ತು ಹಾಟ್ ಸ್ಪಾಟ್ ಸೌಲಭ್ಯಗಳನ್ನು ಒದಗಿಸುತ್ತಾ ಅವರ ಆಶೋತ್ತರಗಳಿಗೆ ರೆಕ್ಕೆಗಳನ್ನು ನೀಡುತ್ತಿದೆ.
ಇದೊಂದೇ ಅಲ್ಲ ಸರ್ಕಾರವು ಜೆಮ್- ಗೌರ್ನಮೆಂಟ್ ಇ ಮಾರ್ಕೆಟಿಂಗ್ ಸ್ಥಳದ ಮೂಲಕ ವಸ್ತುಗಳನ್ನು ಸಂಸ್ಕರಣೆ ಮಾಡುತ್ತಿದೆ. ಇದು ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಲಾಭ ತಂದಿರುವುದಲ್ಲದೇ ಸರ್ಕಾರಿ ಸಂಗ್ರಹಣೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಿದೆ.
ಸ್ನೇಹಿತರೇ
ಇವತ್ತು ಡಿಜಿಟಲ್ ವಿನಿಮಯವು ನಿರಂತರವಾಗಿ ಹೆಚ್ಚುತ್ತಲೇ ಇದೆ. ಭೀಮ್ ಆಪ್ ಮತ್ತು ರುಪೇ ಕಾರ್ಡ್ ಕಾರಣದಿಂದ ಹಣ ವಿನಿಮಯವು ಸುಲಭವಾಗಿದೆ. ಜೂನ್ ತಿಂಗಳಲ್ಲೇ ಭೀಮ್ ಆಪ್ ಒಂದರಲ್ಲೇ ಸುಮಾರು 41 ಸಾವಿರ ಕೋಟಿ ರೂಪಾಯಿಯ ವಿನಿಮಯವು ಆಗಿದೆ. ಭಾರತ ಅಷ್ಟೇ ಅಲ್ಲದೇ ಇಡೀ ವಿಶ್ವದಲ್ಲಿ ಭೀಮ್ ಆಪ್ ಮತ್ತು ರುಪೆ ಕಾರ್ಡ್ ಗಳ ಬಗ್ಗೆ ಕುತೂಹಲ ಇದೆ. ಕೆಲವು ದಿನಗಳ ಹಿಂದೆ ಸಿಂಗಾಪುರದಲ್ಲಿ ಭೀಮ್ ಮತ್ತು ರೂಪೆ ಉದ್ಘಾಟನೆ ಮಾಡುವ ಅವಕಾಶ ಪಡೆದುಕೊಂಡಿದ್ದೆ. ಇಂತಹ ಸಂದರ್ಭದಲ್ಲಿ ಭಾರತದ ನಾಗರಿಕರಿಗೆ ಸ್ವಾವಲಂಬನೆ ಅಷ್ಟೇ ಅಲ್ಲದೇ ಮೇಕ್ ಇನ್ ಇಂಡಿಯಾಗೆ ಇಲ್ಲಿ ನಡೆಯುತ್ತಿರುವ ಕಾರ್ಯಕ್ರಮವು ಚೇತೋಹಾರಿ ವಾತಾವರಣವನ್ನು ನಿರ್ಮಾಣ ಮಾಡುತ್ತದೆ.
ಸ್ನೇಹಿತರೇ,
ಮೇಕ್ ಇನ್ ಇಂಡಿಯಾಗೆ ನಾವು ನೀಡುತ್ತಿರುವ ಆದ್ಯತೆಯು ಕೇವಲ ನಮ್ಮ ಆರ್ಥಿಕ ನೀತಿಯ ಒಂದು ಭಾಗ ಮಾತ್ರವಲ್ಲ ಕೊರಿಯಾದಂತಹ ಸ್ನೇಹಿತ ರಾಷ್ಟ್ರಗಳ ಜತೆಗಿನ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳುವುದೇ ಆಗಿದೆ. ಸ್ಯಾಮ್ ಸಂಗ್ ನಂತಹ ನಂಬಿಕಸ್ಥ ಬ್ರ್ಯಾಂಡ್ ಗೆ ಅವಕಾಶಗಳನ್ನು ಒದಗಿಸಿಕೊಡುವುದಲ್ಲದೇ ನವ ಭಾರತದ ಹೊಸ ಮತ್ತು ಪಾರದರ್ಶಕವಾದ ವ್ಯವಹಾರ ಸಂಸ್ಕೃತಿಯ ಲಾಭ ಪಡೆದುಕೊಳ್ಳಲು ಬಯಸುವವರಿಗೆ ಒಂದು ಉತ್ತಮ ಆಮಂತ್ರಣವಾಗಿದೆ. ಭಾರತದ ಬೆಳೆಯುತ್ತಿರುವ ಆರ್ಥಿಕತೆ ಮತ್ತು ಹೆಚ್ಚುತ್ತಿರುವ ನವ ಮಧ್ಯಮ ವರ್ಗವು ಅಗಾಧವಾದ ಹೂಡಿಕೆಯ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಇವತ್ತು ನಮ್ಮ ಈ ಆಸಕ್ತಿಯನ್ನು ಇಡೀ ಜಗತ್ತು ಬೆಂಬಲಿಸುತ್ತಿದೆ ಮತ್ತು ಚಾಚಿದ ಕೈಗಳಿಂದ ಸ್ವಾಗತಿಸುತ್ತಿದೆ. ನಾವು ಮೊಬೈಲ್ ಫೋನ್ ಗಳ ತಯಾರಿಕೆ ಬಗ್ಗೆಯೇ ಮಾತನಾಡುವುದಾದರೆ ಇವತ್ತು ಭಾರತವು ಎರಡನೇ ಅತೀ ದೊಡ್ಡ ತಯಾರಿಕಾ ಕೇಂದ್ರವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ 120 ಮೊಬೈಲ್ ತಯಾರಿಕಾ ಘಟಕಗಳು ತಲೆ ಎತ್ತಿವೆ. ಇದರಲ್ಲಿ ನೋಯ್ಡಾದಲ್ಲೇ 50 ಘಟಕಗಳಿವೆ ಎನ್ನುವುದು ಒಂದು ಸಂತೃಪ್ತಿಯ ಸಂಗತಿಯೇ ಆಗಿದೆ. 4 ಲಕ್ಷಕ್ಕೂ ಹೆಚ್ಚು ಯುವಕರಿಗೆ ಈ ಘಟಕಗಳು ನೇರ ಉದ್ಯೋಗವನ್ನು ಕಲ್ಪಿಸಿವೆ. ಉದ್ಯೋಗ ಸೃಷ್ಟಿ ಮಾಡುವಲ್ಲಿ ಸ್ಯಾಮ್ ಸಂಗ್ ಗಣನೀಯ ಪಾತ್ರ ವಹಿಸಿದೆ. ನೀವು ಇಡೀ ದೇಶದಲ್ಲಿ 70,000 ಉದ್ಯೋಗಗಳನ್ನು ನೇರವಾಗಿ ಕಲ್ಪಿಸಿದ್ದೀರಿ.ಅದರಲ್ಲಿ ಐದು ಸಾವಿರ ಉದ್ಯೋಗಗಳು ನೋಯ್ಡಾದಲ್ಲೇ ಸಿಕ್ಕಿವೆ. ಈ ಹೊಸ ಘಟಕದ ಮೂಲಕ ಇನ್ನೂ ಒಂದು ಸಾವಿರ ಮಂದಿಗೆ ನೇರ ಉದ್ಯೋಗ ಲಭಿಸಲಿದೆ. ಇಲ್ಲಿ ನಿರ್ಮಾಣ ಮಾಡುತ್ತಿರುವ ಈ ಘಟಕವು ಸ್ಯಾಮ್ ಸಂಗ್ ಕಂಪನಿಯ ಅತೀ ದೊಡ್ಡ ತಯಾರಿಕಾ ಘಟಕ ಎನಿಸಿಕೊಂಡಿದೆ. ಪ್ರತಿ ತಿಂಗಳೂ ಇಲ್ಲಿ ಸುಮಾರು ಒಂದು ಕೋಟಿ ಮೊಬೈಲ್ ಗಳನ್ನು ತಯಾರಿಕೆ ಮಾಡಲಾಗುತ್ತದೆ. ಈ ಘಟಕದ ಶೇಕಡಾ 30 ರಷ್ಟು ಉತ್ಪಾದಕಗಳು ಹೊರ ದೇಶಗಳಿಗೆ ರಫ್ತಾಗಲಿವೆ. ವಿಶ್ವದ ವಿವಿಧ ರಾಷ್ಟ್ರಗಳಿಗೆ ಇವು ರಫ್ತಾಗಲಿವೆ. ಇದು ಜಾಗತಿಕ ಮಾರುಕಟ್ಟೆಯಲ್ಲಿ ನಿಮ್ಮ ಗುಣಮಟ್ಟ ಮತ್ತು ಸ್ಥಾನವನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಕೊರಿಯಾದ ತಂತ್ರಜ್ಞಾನವನ್ನು ಬಳಸಿಕೊಂಡು ಇಂದು ನಾವು ವಿಶ್ವದ ಉತ್ತಮ ಉತ್ಪಾದನಾ ಕೇಂದ್ರ ಎನಿಸಿಕೊಳ್ಳುತ್ತಿದ್ದೇವೆ. ಭಾರತದ ನಿರ್ಮಾಣ ಮತ್ತು ಸಾಫ್ಟ್ ವೇರ್ ಸಹಾಯವನ್ನು ಇದಕ್ಕೆ ಪಡೆದುಕೊಳ್ಳಲಾಗುತ್ತಿದೆ. ಇದು ನಮ್ಮ ಎರಡೂ ದೇಶಗಳ ಸಾಮರ್ಥ್ಯವಾಗಿದೆ. ಇದು ನಮ್ಮ ದೂರ ದೃಷ್ಟಿಯ ಪರಸ್ಪರ ವಿನಿಮಯವೇ ಆಗಿದೆ.
ಮತ್ತೊಮ್ಮೆ ಸ್ಯಾಮ್ ಸಂಗ್ ನ ಇಡೀ ತಂಡವನ್ನು ನಾನು ಅಭಿನಂದಿಸುತ್ತೇನೆ. ಈ ಸುಸಂದರ್ಭದಲ್ಲಿ ನನ್ನನ್ನೂ ಭಾಗಿ ಮಾಡಿಕೊಳ್ಳಲು ಇಲ್ಲಿಗೆ ಸ್ವಾಗತಿಸಿದ ನಿಮಗೆ ನಾನು ಅತ್ಯಂತ ಹೃದಯ ಪೂರ್ವಕವಾದ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ.
——–
अपने मित्र President Moon के साथ नोएडा में बनी Samsung की इस फैक्ट्री में आना मेरे लिए बहुत सुखद अनुभव है। मोबाइल मैन्यूफैक्चरिंग की नई यूनिट भारत के साथ ही ये उत्तर प्रदेश और नोएडा के लिए भी गर्व का विषय है। इस नई यूनिट के लिए Samsung की पूरी टीम को बहुत-बहुत बधाई: PM
— PMO India (@PMOIndia) July 9, 2018
भारत को manufacturing का वैश्विक हब बनाने की दिशा में आज का दिन बहुत विशेष है।
— PMO India (@PMOIndia) July 9, 2018
5 हज़ार करोड़ रुपए का ये निवेश ना सिर्फ Samsung के भारत में व्यापारिक रिश्तों को मजबूत बनाएगा, बल्कि भारत और कोरिया के संबंधों के लिए भी अहम सिद्ध होगा: PM @narendramodi
जब भी बिजनेस कम्यूनिटी के लोगों से मेरी बातचीत होती है तो एक बात मैं अक्सर कहता हूं। भारत में शायद ही ऐसा कोई मिडिल क्लास घर हो जहां कम से कम एक कोरियाई प्रोडक्ट ना पाया जाता हो: PM @narendramodi
— PMO India (@PMOIndia) July 9, 2018
निश्चित तौर पर भारतीय लोगों के जीवन में Samsung ने अपना विशेष स्थान बनाया है। खासतौर पर आपके फोन, तेज़ी से बढ़ रहे Smart Phone Market में आज World Leader की तरह हैं: PM @narendramodi
— PMO India (@PMOIndia) July 9, 2018
आज Digital Technology सामान्य नागरिक के जीवन को सरल बनाने में अहम भूमिका निभा रही है। आज भारत में लगभग 40 करोड़ स्मार्टफोन उपयोग में है, 32 करोड़ लोग ब्रॉडबैंड इस्तेमाल कर रहे हैं: PM @narendramodi
— PMO India (@PMOIndia) July 9, 2018
बहुत कम दर पर इंटरनेट डेटा उपलब्ध है, देश की एक लाख से अधिक ग्राम पंचायतों तक फाइबर नेटवर्क पहुंच चुका है। ये सारी बातें, देश में हो रही डिजिटल क्रांति का संकेत हैं: PM @narendramodi
— PMO India (@PMOIndia) July 9, 2018
सस्ते मोबाइल फोन, तेज़ इंटरनेट, सस्ते डेटा के चलते आज Fast और Transparent Service Delivery सुनिश्चित हुई है: PM @narendramodi
— PMO India (@PMOIndia) July 9, 2018
GeM यानि Government e Market के जरिए सरकार अब सीधे Producers से सामान की खरीदारी कर रही है। इससे Medium और Small Entrepreneurs को भी लाभ हुआ है तो सरकारी खरीदारी में Transparency भी बढ़ी है: PM @narendramodi
— PMO India (@PMOIndia) July 9, 2018
बिजली – पानी का बिल भरना हो, स्कूल-कॉलेज में एडमिशन हो, PF हो या पेंशन, लगभग हर सुविधा ऑनलाइन मिल रही है: PM @narendramodi
— PMO India (@PMOIndia) July 9, 2018
देशभर में फैले लगभग 3 लाख कॉमन सर्विस सेंटर गांव वालों की सेवा में काम कर रहे हैं। तो शहरों में फ्री Wi Fi Hotspot गरीब, मध्यम वर्गीय युवाओं की आकांक्षाओं को नई उड़ान दे रहे हैं: PM @narendramodi
— PMO India (@PMOIndia) July 9, 2018
'Make in India' के प्रति हमारा आग्रह सिर्फ एक Economic Policy का हिस्सा भर नहीं है, बल्कि ये कोरिया जैसे हमारे मित्र देशों के साथ रिश्तों का संकल्प भी है: PM @narendramodi
— PMO India (@PMOIndia) July 9, 2018
भारत की बढ़ती हुई अर्थव्यवस्था और बढ़ता हुआ Neo Middle Class निवेश की असीम संभावनाओं से भरा हुआ है: PM @narendramodi
— PMO India (@PMOIndia) July 9, 2018
मुझे प्रसन्नता है कि इस Initiative को आज दुनियाभर से सहयोग मिल रहा है। मोबाइल फोन Manufacturing की अगर बात करें तो आज भारत दुनिया में दूसरे नंबर पर पहुंच गया है: PM @narendramodi
— PMO India (@PMOIndia) July 9, 2018