Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ 2020ರ ಫೆಬ್ರವರಿ 29ರಂದು ನಡೆಯಲಿರುವ ಬೃಹತ್ ವಿತರಣಾ ಶಿಬಿರದಲ್ಲಿ ದಿವ್ಯಾಂಗ ಜನ ಮತ್ತು ಹಿರಿಯ ನಾಗರಿಕರಿಗೆ ದಿನನಿತ್ಯದ ಅಗತ್ಯ ಉಪಕರಣ ಮತ್ತು ಸಲಕರಣೆ ವಿತರಿಸಲಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2020ರ ಫೆಬ್ರವರಿ 29ರಂದು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯಲಿರುವ ಬೃಹತ್ ವಿತರಣಾ ಶಿಬಿರದಲ್ಲಿ ಹಿರಿಯ ನಾಗರಿಕರಿಗೆ(ರಾಷ್ಟ್ರೀಯ ವಯೋಶ್ರೀ ಯೋಜನೆ – ಆರ್ ವಿ ವೈ)ಅಡಿಯಲ್ಲಿ ಮತ್ತು ದಿವ್ಯಾಂಗ ಜನರಿಗೆ(ಎಡಿಐಪಿ) ಯೋಜನೆ ಅಡಿಯಲ್ಲಿ ದಿನನಿತ್ಯ ಅಗತ್ಯದ ಉಪಕರಣ ಮತ್ತು ಸಲಕರಣೆ ವಿತರಿಸಲಿದ್ದಾರೆ.

ಇದು ಫಲಾನುಭವಿಗಳ ಸಂಖ್ಯೆಯ ಪ್ರಕಾರ ಮತ್ತು ವಿತರಿಸುತ್ತಿರುವ ಉಪಕರಣಗಳ ಸಂಖ್ಯೆ ಹಾಗೂ ಆ ಉಪಕರಣ ಮತ್ತು ಸಲಕರಣೆಗಳ ಮೌಲ್ಯದ ಆಧಾರದಲ್ಲಿ ದೇಶದಲ್ಲೇ ಅತಿ ದೊಡ್ಡದಾದ ವಿತರಣಾ ಶಿಬಿರವಾಗಿದೆ.

ಈ ಬೃಹತ್ ಶಿಬಿರದಲ್ಲಿ ಸುಮಾರು 26,000 ಫಲಾನುಭವಿಗಳಿಗೆ ಉಚಿತವಾಗಿ ನಾನಾ ವಿಧದ ಸುಮಾರು 56,000 ಸಹಾಯಕ ಉಪಕರಣ ಮತ್ತು ಸಲಕರಣೆಗಳನ್ನು ಉಚಿತವಾಗಿ ವಿತರಿಸಲಾಗುವುದು. ಈ ಉಪಕರಣ ಮತ್ತು ಸಲಕರಣೆಗಳ ಒಟ್ಟು ಮೌಲ್ಯ 19 ಕೋಟಿ ರೂಪಾಯಿಗಳು.

ಈ ಸಲಕರಣೆ ಮತ್ತು ಉಪಕರಣಗಳನ್ನು ನೀಡುತ್ತಿರುವ ಉದ್ದೇಶ, ಅವರಿಗೆ ಸಹಾಯ ನೀಡುವುದು ಮತ್ತು ದಿವ್ಯಾಂಗ ಜನ ಮತ್ತು ಹಿರಿಯ ನಾಗರಿಕರನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿಗೊಳಿಸುವುದಾಗಿದೆ.

***