Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಕ ಕೊಂಬಿನ ಘೇಂಡಾಮೃಗದ ಸಂರಕ್ಷಣಾ ಉಪಕ್ರಮವನ್ನು ಇನ್ನಷ್ಟು ಬಲಪಡಿಸುವ ಪ್ರಯತ್ನಗಳನ್ನು ವಿವರಿಸುವ ಕೇಂದ್ರ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ


ಕೇಂದ್ರ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಬರೆದ ಲೇಖನವನ್ನು ಪ್ರಧಾನಮಂತ್ರಿಯವರು ಹಂಚಿಕೊಂಡಿದ್ದಾರೆ.

ಭಾರತದ ಘೇಂಡಾಮೃಗದ ವೃದ್ಧಿಯ ವಿಷಯವು, ಈ ಜಾತಿಯ ಮೃಗಗಳ ಗಮನಾರ್ಹ ಚೇತರಿಕೆಯ ವಿಶೇಷ ಕಥೆಯಾಗಿದೆ ಎಂದು ಪ್ರಧಾನಮಂತ್ರಿಯವರು ಗಮನಿಸಿದರು. ಖಡ್ಗಮೃಗಗಳ ಸಂಖ್ಯೆಯು ನಿರಂತರ ಬೆಳವಣಿಗೆಯನ್ನು ತೋರಿಸುತ್ತಿರುವುದರಿಂದ, ಭಾರತವು ಈಗ ದೊಡ್ಡ ಒಂದು ಕೊಂಬಿನ ಘೇಂಡಾಮೃಗದ ವಿಶ್ವದ ಪ್ರಮುಖ ರಕ್ಷಕರಲ್ಲಿ ಒಂದಾಗಿದೆ ಮತ್ತು ಈ ಮೃಗದ ಜಾತಿಗಳನ್ನು ಉಳಿಸಿಕೊಳ್ಳುವ ಹುಲ್ಲುಗಾವಲುಗಳು ಮತ್ತು ಜೌಗು ಪ್ರದೇಶಗಳನ್ನು ರಕ್ಷಿಸುವುದು ಅದರ ಭವಿಷ್ಯದ ಕೇಂದ್ರವಿಷಯವಾಗಿದೆ ಎಂದು ಅವರು ಹೇಳಿದರು. ಎಲ್ಲರೂ ಓದಲೇಬೇಕಾದ ಕೇಂದ್ರ ಸಚಿವರ ಈ ಲೇಖನವು ಕೇಂದ್ರ ಸರ್ಕಾರದ ಪ್ರಯತ್ನಗಳು ಸಂರಕ್ಷಣಾ ಉಪಕ್ರಮವನ್ನು ಹೇಗೆ ಬಲಪಡಿಸುತ್ತಿದೆ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದು ಶ್ರೀ ಮೋದಿ ಅವರು ಗಮನಸೆಳೆದರು.

ಪ್ರಧಾನಮಂತ್ರಿಯವರ ಕಾರ್ಯಾಲಯವು ಎಕ್ಸ್  ನಲ್ಲಿ:

“ಭಾರತದ ಖಡ್ಗಮೃಗದ ಕಥೆಯು , ಈ ಮೃಗ ಜಾತಿಯ ಗಮನಾರ್ಹ ಚೇತರಿಕೆಯ ವಿಷಯವಾಗಿದೆ.

ಖಡ್ಗಮೃಗದ ಸಂಖ್ಯೆಯು ನಿರಂತರ ಬೆಳವಣಿಗೆಯನ್ನು ತೋರಿಸುತ್ತಿರುವುದರಿಂದ, ಭಾರತವು ಈಗ ದೊಡ್ಡ ಏಕ ಕೊಂಬು ಖಡ್ಗಮೃಗದ ವಿಶ್ವದ ಪ್ರಮುಖ ರಕ್ಷಕರಲ್ಲಿ ಒಂದಾಗಿದೆ. ಈ ಮೃಗ ಜಾತಿಗಳನ್ನು ಉಳಿಸಿಕೊಳ್ಳುವ ಹುಲ್ಲುಗಾವಲುಗಳು ಮತ್ತು ಜೌಗು ಪ್ರದೇಶಗಳನ್ನು ರಕ್ಷಿಸುವುದು ಅದರ ಭವಿಷ್ಯದ ಕೇಂದ್ರವಾಗಿದೆ.

ಕೇಂದ್ರ ಸಚಿವರಾದ ಶ್ರೀ @byadavbjp ಅವರ ಈ ಓದಲೇಬೇಕಾದ ಲೇಖನವು ಕೇಂದ್ರ ಸರ್ಕಾರದ ಪ್ರಯತ್ನಗಳು ಸಂರಕ್ಷಣಾ ಪ್ರಯಾಣವನ್ನು ಹೇಗೆ ಬಲಪಡಿಸುತ್ತಿವೆ ಎಂಬುದನ್ನು ಉಲ್ಲೇಖಿಸುತ್ತದೆ.”

 

*****