ಪಿಎಂಇಂಡಿಯಾ
ಪುರುಷರ ವೈಯಕ್ತಿಕ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಏಷ್ಯನ್ ಕ್ರೀಡಾಕೂಟದ ಸಾಫ್ಟ್ ಟೆನಿಸ್ ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದ ಶ್ರೀ ಜಯ್ ಮೀನಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ. ಇದು ಭಾರತೀಯ ಸಾಫ್ಟ್ ಟೆನಿಸ್ ಗೆ ಐತಿಹಾಸಿಕ ಸಾಧನೆಯಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.
ಶ್ರೀ ಜಯ್ ಮೀನಾ ಅವರ ಸಾಧನೆಯು ಭಾರತದಲ್ಲಿ ಕ್ರೀಡೆಗೆ ಒಂದು ಸ್ಮರಣೀಯ ಹೊಸ ಅಧ್ಯಾಯವನ್ನು ಸೂಚಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಈ ಪದಕವು ಇನ್ನೂ ಅನೇಕ ಯುವಕರು ಸಾಫ್ಟ್ ಟೆನಿಸ್ ಕ್ರೀಡೆಯನ್ನು ಕೈಗೆತ್ತಿಕೊಂಡು ಉತ್ತಮ ಸಾಧನೆ ಮಾಡಲು ಸ್ಫೂರ್ತಿ ನೀಡುತ್ತದೆ ಎಂದು ಅವರು ಆಶಿಸಿದ್ದಾರೆ ಮತ್ತು ಕ್ರೀಡಾಳುವಿನ ಮುಂದಿನ ಪ್ರಯಾಣಕ್ಕಾಗಿ ಅವರಿಗೆ ಶುಭ ಹಾರೈಸಿದ್ದಾರೆ.
ಪ್ರಧಾನಮಂತ್ರಿಯವರ ಕಾರ್ಯಾಲಯ ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ:
“ಭಾರತೀಯ ಸಾಫ್ಟ್ ಟೆನಿಸ್ ಗೆ ಒಂದು ಐತಿಹಾಸಿಕ ಸಾಧನೆ!
ಪುರುಷರ ವೈಯಕ್ತಿಕ ಸ್ಪರ್ಧೆಯಲ್ಲಿ ಕಂಚು ಗೆದ್ದ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ಸಾಫ್ಟ್ ಟೆನಿಸ್ ನಲ್ಲಿ ಭಾರತದ ಮೊದಲ ಪದಕ ವಿಜೇತರಾದ ಶ್ರೀ ಜಯ್ ಮೀನಾ ಅವರಿಗೆ ಅಭಿನಂದನೆಗಳು. ಅವರ ಸಾಧನೆಯು ಭಾರತದಲ್ಲಿ ಕ್ರೀಡೆಗೆ ಒಂದು ಸ್ಮರಣೀಯ ಹೊಸ ಅಧ್ಯಾಯವನ್ನು ಸೂಚಿಸುತ್ತದೆ.
ಈ ಪದಕವು ಇನ್ನೂ ಅನೇಕ ಯುವಕರು ಸಾಫ್ಟ್ ಟೆನಿಸ್ ಕ್ರೀಡೆಯನ್ನು ಕೈಗೆತ್ತಿಕೊಂಡು ಶ್ರೇಷ್ಠ ಸಾಧನೆ ಮಾಡಲು ಸ್ಫೂರ್ತಿ ನೀಡಲಿ. ಮುಂದಿನ ಪ್ರಯಾಣಕ್ಕೆ ಅವರಿಗೆ ಶುಭಾಶಯಗಳು: ಪ್ರಧಾನಮಂತ್ರಿ @narendramodi”
*****
A historic achievement for Indian Soft Tennis!
— PMO India (@PMOIndia) September 23, 2026
Congratulations to Jay Meena on winning Bronze in the Men’s Individual event and becoming India’s first-ever Asian Games medallist in Soft Tennis. His achievement marks a memorable new chapter for the sport in India.
May this medal… pic.twitter.com/UMrKAyLrnY