ಪಿಎಂಇಂಡಿಯಾ
ಏಷ್ಯನ್ ಕ್ರೀಡಾಕೂಟದ ಮಹಿಳೆಯರ ಸ್ಕಿಫ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಹರ್ಷಿತಾ ತೋಮರ್ ಮತ್ತು ಶೀತಲ್ ವರ್ಮಾ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ದೃಢ ಸಂಕಲ್ಪ ಮತ್ತು ನಿರಂತರ ಪ್ರಯತ್ನದ ಮೂಲಕ ಅವರು ಭಾರತಕ್ಕೆ ಪದಕ ತಂದುಕೊಟ್ಟಿದ್ದಾರೆ ಹಾಗೂ ತಮ್ಮ ಹಿಂದಿನ ಎಲ್ಲಾ ಸಾಧನೆಯನ್ನು ಉತ್ತಮಪಡಿಸಿಕೊಂಡಿದ್ದಾರೆ ಎಂದು ಪ್ರಧಾನ ಮಂತ್ರಿಗಳು ಹೇಳಿದರು.
ಶ್ರೀ ಮೋದಿ ಅವರು ಹರ್ಷಿತಾ ತೋಮರ್ ಮತ್ತು ಶೀತಲ್ ವರ್ಮಾ ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸಿದರು.
ಪ್ರಧಾನ ಮಂತ್ರಿಗಳ ಕಾರ್ಯಾಲಯವು ‘ಎಕ್ಸ್’ ನಲ್ಲಿ ಹೀಗೆ ಪೋಸ್ಟ್ ಮಾಡಿದೆ:
“ಏಷ್ಯನ್ ಕ್ರೀಡಾಕೂಟದ ಮಹಿಳೆಯರ ಸ್ಕಿಫ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಹರ್ಷಿತಾ ತೋಮರ್ ಮತ್ತು ಶೀತಲ್ ವರ್ಮಾ ಅವರಿಗೆ ಅಭಿನಂದನೆಗಳು! ದೃಢ ಸಂಕಲ್ಪ ಮತ್ತು ನಿರಂತರ ಪ್ರಯತ್ನದ ಮೂಲಕ ಅವರು ಭಾರತಕ್ಕೆ ಪದಕ ತಂದುಕೊಟ್ಟಿದ್ದಾರೆ ಹಾಗೂ ತಮ್ಮ ಹಿಂದಿನ ಸಾಧನೆಯನ್ನು ಉತ್ತಮಪಡಿಸಿಕೊಂಡಿದ್ದಾರೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು:” ಪ್ರಧಾನಮಂತ್ರಿ @narendramodi”
*****
Congratulations to Harshita Tomar and Shital Verma on winning the Bronze Medal in the Women’s Skiff event at the Asian Games! With determination and consistency, they have taken India onto the podium and also bettered the previous performance. Best wishes to them for their future…
— PMO India (@PMOIndia) October 2, 2026