ಪಿಎಂಇಂಡಿಯಾ
ಏಷ್ಯನ್ ಕ್ರೀಡಾಕೂಟದ ‘ರಿಕರ್ವ್ ಮಿಶ್ರ ತಂಡ’ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಧೀರಜ್ ಬೊಮ್ಮದೇವರ ಮತ್ತು ಕುಂಕುಮ್ ಅನಿಲ್ ಮೊಹೋದ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಅವರು ಅತ್ಯುತ್ತಮ ಕೌಶಲ ಮತ್ತು ಉತ್ಸಾಹವನ್ನು ಪ್ರದರ್ಶಿಸಿ, ಏಷ್ಯನ್ ಕ್ರೀಡಾಕೂಟದ ಈ ವಿಭಾಗದಲ್ಲಿ ಭಾರತಕ್ಕೆ ಮೊಟ್ಟಮೊದಲ ಬೆಳ್ಳಿ ಪದಕವನ್ನು ತಂದುಕೊಟ್ಟಿದ್ದಾರೆ ಎಂದು ಪ್ರಧಾನ ಮಂತ್ರಿಗಳು ಹೇಳಿದರು.
ಈ ಸ್ಮರಣೀಯ ಸಾಧನೆಗಾಗಿ ಶ್ರೀ ಮೋದಿ ಅವರು ಇಬ್ಬರೂ ಬಿಲ್ಲುಗಾರರನ್ನು ಅಭಿನಂದಿಸಿದರು ಮತ್ತು ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸಿದರು.
ಪ್ರಧಾನಮಂತ್ರಿಗಳ ಕಾರ್ಯಾಲಯವು ‘ಎಕ್ಸ್’ ಪೋಸ್ಟ್ನಲ್ಲಿ ಹೀಗೆ ಹೇಳಿದೆ:
“ಅದ್ಭುತ ಬೆಳ್ಳಿ ಪದಕ!
ಏಷ್ಯನ್ ಕ್ರೀಡಾಕೂಟದ ‘ರಿಕವರ್ವ್ ಮಿಶ್ರ ತಂಡ’ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಧೀರಜ್ ಬೊಮ್ಮದೇವರ ಮತ್ತು ಕುಂಕುಮ್ ಅನಿಲ್ ಮೊಹೋದ್ ಅವರ ಬಗ್ಗೆ ಹೆಮ್ಮೆ ಇದೆ.
ಅವರು ಅತ್ಯುತ್ತಮ ಕೌಶಲ ಮತ್ತು ಉತ್ಸಾಹವನ್ನು ಪ್ರದರ್ಶಿಸಿ, ಏಷ್ಯನ್ ಕ್ರೀಡಾಕೂಟದ ಈ ವಿಭಾಗದಲ್ಲಿ ನಮ್ಮ ದೇಶಕ್ಕೆ ಮೊಟ್ಟಮೊದಲ ಬೆಳ್ಳಿ ಪದಕವನ್ನು ತಂದುಕೊಟ್ಟಿದ್ದಾರೆ.
ಈ ಸ್ಮರಣೀಯ ಸಾಧನೆಗಾಗಿ ನಮ್ಮ ಇಬ್ಬರೂ ಬಿಲ್ಲುಗಾರರಿಗೆ ಅಭಿನಂದನೆಗಳು ಮತ್ತು ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು: ಪ್ರಧಾನಮಂತ್ರಿ @narendramodi”
*****