ಪಿಎಂಇಂಡಿಯಾ
ಏಷ್ಯನ್ ಗೇಮ್ಸ್ನ ಮಹಿಳೆಯರ 65 ಕೆಜಿ ಬಾಕ್ಸಿಂಗ್ ವಿಭಾಗದ ತೀವ್ರ ಪೈಪೋಟಿಯಿಂದ ಕೂಡಿದ ಅಂತಿಮ ಹಣಾಹಣಿಯಲ್ಲಿ ಚಿನ್ನದ ಪದಕ ಗೆದ್ದ ಪರ್ವೀನ್ ಅವರನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಪರ್ವೀನ್ ಅವರ ಈ ಸಾಧನೆಯು ಭಾರತೀಯ ಬಾಕ್ಸಿಂಗ್ ಇತಿಹಾಸದಲ್ಲಿ ಮತ್ತೊಂದು ವೈಭವದ ಅಧ್ಯಾಯವನ್ನು ಸೇರಿಸಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. ಅವರ ಯಶಸ್ಸು ಅತ್ಯಂತ ಸ್ಫೂರ್ತಿದಾಯಕವಾಗಿದ್ದು, ಕ್ರೀಡಾ ಕ್ಷೇತ್ರದಲ್ಲಿ ಶ್ರೇಷ್ಠತೆಯನ್ನು ಸಾಧಿಸುವಲ್ಲಿನ ಅವರ ಬದ್ಧತೆಯನ್ನು ತೋರಿಸುತ್ತದೆ ಎಂದು ಅವರು ತಿಳಿಸಿದರು.
ಮುಂದಿನ ದಿನಗಳಲ್ಲಿನ ಅವರ ಪ್ರಯತ್ನಗಳಿಗೆ ಶ್ರೀ ಮೋದಿ ಅವರು ಶುಭ ಹಾರೈಸಿದರು.
ಪ್ರಧಾನಮಂತ್ರಿ ಕಾರ್ಯಾಲಯವು ‘ಎಕ್ಸ್’ ನಲ್ಲಿ ಹೀಗೆ ಪೋಸ್ಟ್ ಮಾಡಿದೆ:
“ಅದ್ಭುತವಾದ ಚಿನ್ನದ ಪದಕ!
ಏಷ್ಯನ್ ಗೇಮ್ಸ್ನ ಮಹಿಳೆಯರ 65 ಕೆಜಿ ಬಾಕ್ಸಿಂಗ್ ವಿಭಾಗದ ತೀವ್ರ ಪೈಪೋಟಿಯ ಅಂತಿಮ ಹಣಾಹಣಿಯಲ್ಲಿ ಚಿನ್ನದ ಪದಕ ಗೆದ್ದ ಪರ್ವೀನ್ ಅವರಿಗೆ ಅಭಿನಂದನೆಗಳು. ಇದು ಭಾರತೀಯ ಬಾಕ್ಸಿಂಗ್ಗೆ ಮತ್ತೊಂದು ವೈಭವದ ಅಧ್ಯಾಯವನ್ನು ಸೇರಿಸುವ ಗಮನಾರ್ಹ ಸಾಧನೆಯಾಗಿದೆ. ಅವರ ಯಶಸ್ಸು ಅತ್ಯಂತ ಸ್ಫೂರ್ತಿದಾಯಕವಾಗಿದ್ದು, ಕ್ರೀಡಾ ಶ್ರೇಷ್ಠತೆಯೆಡೆಗಿನ ಅವರ ಬದ್ಧತೆಯನ್ನು ಉಲ್ಲೇಖಿಸುತ್ತದೆ. ಮುಂದಿನ ದಿನಗಳಲ್ಲಿನ ಅವರ ಪ್ರಯತ್ನಗಳಿಗೆ ನನ್ನ ಶುಭ ಹಾರೈಕೆಗಳು: ಪ್ರಧಾನಮಂತ್ರಿ @narendramodi”
*****
A magnificent Gold!
— PMO India (@PMOIndia) October 2, 2026
Congratulations to Parveen on winning the Women’s 65kg Boxing Gold at the Asian Games after a hard-fought final. Hers is a remarkable achievement that adds another glorious chapter to Indian boxing. Her success is deeply motivating and highlights her…