Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಗೇಮ್ಸ್ 2018ರ 65 ಕೆಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿಯಲ್ಲಿ ಚಿನ್ನ ಗೆದ್ದ ಭಜರಂಗ್ ಪುನಿಯಾಗೆ ಪ್ರಧಾನಮಂತ್ರಿ ಅಭಿನಂದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಏಷ್ಯನ್ ಗೇಮ್ಸ್ 2018ರ 65 ಕೆ.ಜಿ. ವಿಭಾಗದ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಭಜರಂಗ್ ಪುನಿಯಾಗೆ ಅಭಿನಂದನೆ ಸಲ್ಲಿಸಿದ್ದಾರೆ.

“65 ಕೆಜಿ ಫ್ರೀಸ್ಟೈಲ್ ನಲ್ಲಿ ಸ್ಮರಣೀಯ ಜಯ ಸಾಧಿಸಿದ ಭಜರಂಗ್ ಪುನಿಯಾಗೆ ಶುಭಾಶಯಗಳು. ಇದು ಏಷ್ಯನ್ ಕ್ರೀಡಾಕೂಟ 2018ರ ಪ್ರಥಮ ಚಿನ್ನದ ಪದಕವಾಗಿರುವ ಹಿನ್ನೆಲೆಯಲ್ಲಿ ಈ ಜಯ ಇನ್ನೂ ಹೆಚ್ಚು ವಿಶೇಷವಾದುದಾಗಿದೆ. ನಿಮ್ಮ ಭವಿಷ್ಯದ ಪ್ರಯತ್ನಗಳಿಗೆ ಶುಭಾಶಯಗಳು”, ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.

***