Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಸ್ವಾತಿಕ್ ಪಾಟೀಲ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಏಷ್ಯನ್ ಪ್ಯಾರಾ ಕ್ರೀಡಾಕೂಟ 2026ರಲ್ಲಿ, ಪುರುಷರ 100 ಮೀಟರ್ ಬ್ರೆಸ್ಟ್‌ಸ್ಟ್ರೋಕ್ (SB9) ವಿಭಾಗದಲ್ಲಿ ಅತ್ಯುತ್ತಮ ಈಜು ಪ್ರದರ್ಶನದ ಮೂಲಕ ಕಂಚಿನ ಪದಕ ಗೆದ್ದ ಸ್ವಾತಿಕ್ ಪಾಟೀಲ್ ಅವರನ್ನು ಅಭಿನಂದಿಸಿದ್ದಾರೆ.

ಸ್ವಾತಿಕ್ ಅವರ ಈ ಗಮನಾರ್ಹ ಸಾಧನೆಯು ಅವರ ಶಿಸ್ತು, ಸಮರ್ಪಣಾ ಭಾವ ಮತ್ತು ನಿರಂತರ ಪರಿಶ್ರಮವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿರುವ ಶ್ರೀ ನರೇಂದ್ರ ಮೋದಿ ಅವರು, ಅವರ ಕ್ರೀಡಾ ಪಯಣದಲ್ಲಿ ಮುಂದೆಯೂ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದ್ದಾರೆ.

ಪ್ರಧಾನಮಂತ್ರಿಗಳ ಕಾರ್ಯಾಲಯವು ‘ಎಕ್ಸ್’ ಪೋಸ್ಟ್ ನಲ್ಲಿ ಹೀಗೆ ತಿಳಿಸಿದೆ:

“ಸ್ವಾತಿಕ್ ಪಾಟೀಲ್ ಅವರಿಂದ ಅತ್ಯುತ್ತಮ ಈಜು ಪ್ರದರ್ಶನ! ಅವರು ಏಷ್ಯನ್ ಪ್ಯಾರಾ ಕ್ರೀಡಾಕೂಟ 2026ರ ಪುರುಷರ 100 ಮೀಟರ್ ಬ್ರೆಸ್ಟ್‌ಸ್ಟ್ರೋಕ್ (SB9) ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಈ ಶ್ರೇಷ್ಠ ಸಾಧನೆಯು ಅವರ ಶಿಸ್ತು, ಸಮರ್ಪಣಾ ಭಾವ ಮತ್ತು ನಿರಂತರ ಪರಿಶ್ರಮವನ್ನು ಉಲ್ಲೇಖಿಸುತ್ತದೆ. ಸ್ವಾತಿಕ್ ಅವರ ಕ್ರೀಡಾ ಪಯಣದಲ್ಲಿ ಮುಂದೆಯೂ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ: ಪ್ರಧಾನಮಂತ್ರಿ @narendramodi”

 

*****