2026ರ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಪುರುಷರ ಹೈ ಜಂಪ್ (ಎತ್ತರ ಜಿಗಿತ) T42/T63 ವಿಭಾಗದಲ್ಲಿ, ಶೈಲೇಶ್ ಕುಮಾರ್ ಅವರು ಅದ್ಭುತ ಪ್ರದರ್ಶನ ನೀಡಿ, ಆಕರ್ಷಕ ಜಿಗಿತದೊಂದಿಗೆ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಲ್ಲದೇ, ಹೊಸ ಗೇಮ್ಸ್ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಸಾಧನೆಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇದು ಅವರ ಪ್ರತಿಭೆ, ಸ್ಥಿರತೆ ಮತ್ತು ಸಮರ್ಪಣಾ ಭಾವವನ್ನು ಪ್ರತಿಬಿಂಬಿಸುವ ಗಮನಾರ್ಹ ಸಾಧನೆಯಾಗಿದೆ ಎಂದು ಹೇಳಿರುವ ಶ್ರೀ ಮೋದಿ, ಭಾರತಕ್ಕೆ ಅವರ ಬಗ್ಗೆ ಹೆಮ್ಮೆಯಿದೆ ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಕಾರ್ಯಾಲಯವು ‘ಎಕ್ಸ್’ ಪೋಸ್ಟ್ ನಲ್ಲಿ ಹೀಗೆ ಹಂಚಿಕೊಂಡಿದೆ.
“2026ರ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಪುರುಷರ ಹೈ ಜಂಪ್ T42/T63 ವಿಭಾಗದಲ್ಲಿ ಶೈಲೇಶ್ ಕುಮಾರ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ಆಕರ್ಷಕ ಜಿಗಿತದೊಂದಿಗೆ ಚಿನ್ನದ ಪದಕ ಗೆದ್ದಿರುವುದಲ್ಲದೇ, ಹೊಸ ಗೇಮ್ಸ್ ದಾಖಲೆಯನ್ನೂ ನಿರ್ಮಿಸಿದ್ದಾರೆ! ಇದು ಅವರ ಪ್ರತಿಭೆ, ಸ್ಥಿರತೆ ಮತ್ತು ಸಮರ್ಪಣಾ ಭಾವವನ್ನು ಪ್ರತಿಬಿಂಬಿಸುವ ಗಮನಾರ್ಹ ಸಾಧನೆಯಾಗಿದೆ. ಭಾರತಕ್ಕೆ ಅವರ ಬಗ್ಗೆ ಹೆಮ್ಮೆಯಿದೆ: ಪ್ರಧಾನಮಂತ್ರಿ @narendramodi”
*****
Shailesh Kumar has delivered a magnificent performance in the Men's High Jump T42/T63 event at the Asian Para Games 2026, winning Gold with an impressive jump and setting a new Games Record! This is a remarkable accomplishment that reflects his talent, consistency and dedication. India is proud of him: PM @narendramodi
— PMO India (@PMOIndia) October 22, 2026