2026ರ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಪುರುಷರ ಡಬಲ್ಸ್ SL3-SU5 ವಿಭಾಗದಲ್ಲಿ ಕಂಚಿನ ಪದಕ ಗೆದ್ದ ನವೀನ್ ಶಿವಕುಮಾರ್ ಮತ್ತು ಸೂರ್ಯ ಕಾಂತ್ ಯಾದವ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಅಭಿನಂದಿಸಿದ್ದಾರೆ. ಈ ವಿಭಾಗದಲ್ಲಿ ಭಾರತಕ್ಕೆ ಲಭಿಸಿದ ಮೊದಲ ಐತಿಹಾಸಿಕ ಪದಕ ಇದಾಗಿದೆ.
ತಮ್ಮ ಚೊಚ್ಚಲ ಪ್ರವೇಶದಲ್ಲೇ ಸಾಧಿಸಿರುವ ಈ ಗೆಲುವು ಇಬ್ಬರೂ ಕ್ರೀಡಾಪಟುಗಳಿಗೆ ಒಂದು ವಿಶೇಷ ಮೈಲಿಗಲ್ಲಾಗಿದೆ ಎಂದು ಶ್ರೀ ಮೋದಿ ಹೇಳಿದ್ದಾರೆ. ಅಲ್ಲದೆ, ಅವರ ತಂಡದ ಒಗ್ಗಟ್ಟು, ದೃಢ ನಿಶ್ಚಯ ಮತ್ತು ಸಮರ್ಪಣಾ ಭಾವವು ಶ್ಲಾಘನೀಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಧಾನಮಂತ್ರಿಗಳ ಕಾರ್ಯಾಲಯವು ‘ಎಕ್ಸ್’ ಪೋಸ್ಟ್ ನಲ್ಲಿ ಹೀಗೆ ಹಂಚಿಕೊಂಡಿದೆ.
“ಭಾರತೀಯ ಪ್ಯಾರಾ ಬ್ಯಾಡ್ಮಿಂಟನ್ಗೆ ಐತಿಹಾಸಿಕ ಕಂಚಿನ ಪದಕ!
ನವೀನ್ ಶಿವಕುಮಾರ್ ಮತ್ತು ಸೂರ್ಯ ಕಾಂತ್ ಯಾದವ್ ಅವರು 2026ರ ಏಷ್ಯನ್ ಪ್ಯಾರಾ ಗೇಮ್ಸ್ನ ಪುರುಷರ ಡಬಲ್ಸ್ SL3-SU5 ವಿಭಾಗದಲ್ಲಿ ಭಾರತಕ್ಕೆ ಮೊದಲ ಪದಕವನ್ನು ತಂದುಕೊಟ್ಟಿದ್ದಾರೆ. ತಮ್ಮ ಚೊಚ್ಚಲ ಪ್ರವೇಶದಲ್ಲೇ ಸಾಧಿಸಿರುವ ಈ ಗೆಲುವು ಇಬ್ಬರೂ ಕ್ರೀಡಾಪಟುಗಳಿಗೆ ಒಂದು ವಿಶೇಷ ಮೈಲಿಗಲ್ಲಾಗಿದೆ. ಅವರ ತಂಡದ ಒಗ್ಗಟ್ಟು, ದೃಢ ನಿಶ್ಚಯ ಮತ್ತು ಸಮರ್ಪಣಾ ಭಾವವು ಶ್ಲಾಘನೀಯ. ಅವರಿಗೆ ಅಭಿನಂದನೆಗಳು: ಪ್ರಧಾನಮಂತ್ರಿ @narendramodi”
*****
A historic Bronze for Indian Para Badminton! Naveen Sivakumar and Surya Kant Yadav have secured India's first-ever medal in the Men's Doubles SL3-SU5 category at the Asian Para Games 2026. This achievement on their debut is a special milestone for both athletes. Their teamwork, perseverance and dedication deserve appreciation. Congratulations to them: PM @narendramodi
— PMO India (@PMOIndia) October 22, 2026