ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಪುರುಷರ 100 ಮೀಟರ್ ಟಿ35 ವಿಭಾಗದಲ್ಲಿ ಅತ್ಯುತ್ತಮ ಸಮಯದೊಂದಿಗೆ ಕಂಚಿನ ಪದಕ ಗೆದ್ದ ಅನುಭವ್ ಚೌಧರಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಇದು ಅವರ ಕ್ರೀಡಾ ಪಯಣದ ಒಂದು ಸ್ಮರಣೀಯ ಆರಂಭ ಮತ್ತು ಅವರ ವೈಯಕ್ತಿಕ ಅತ್ಯುತ್ತಮ ಸಾಧನೆ ಎಂದು ಬಣ್ಣಿಸಿದ ಶ್ರೀ ಮೋದಿ, ಈ ಅದ್ಭುತ ಸಾಧನೆಗಾಗಿ ಅವರನ್ನು ಅಭಿನಂದಿಸಿದರು. ಅಲ್ಲದೆ, ಅವರ ಕ್ರೀಡಾ ಜೀವನದಲ್ಲಿ ಇಂತಹ ಇನ್ನೂ ಅನೇಕ ಮೈಲಿಗಲ್ಲುಗಳನ್ನು ಅವರು ತಲುಪಲಿ ಎಂದು ಆಶಿಸಿದರು.
ಪ್ರಧಾನಮಂತ್ರಿ ಅವರ ಕಾರ್ಯಾಲಯವು ‘ಎಕ್ಸ್’ ಪೋಸ್ಟ್ ನಲ್ಲಿ ಹೀಗೆ ಹಂಚಿಕೊಂಡಿದೆ:
“ಒಂದು ಸ್ಮರಣೀಯ ಆರಂಭ ಮತ್ತು ವೈಯಕ್ತಿಕ ಅತ್ಯುತ್ತಮ ಸಾಧನೆ!
ಅನುಭವ್ ಚೌಧರಿ ಅವರು ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಪುರುಷರ 100 ಮೀಟರ್ ಟಿ35 ವಿಭಾಗದಲ್ಲಿ ಅತ್ಯುತ್ತಮ ಸಮಯದೊಂದಿಗೆ ಕಂಚಿನ ಪದಕ ಗೆಲ್ಲುವ ಮೂಲಕ ಭವ್ಯ ಆರಂಭವನ್ನು ಪಡೆದಿದ್ದಾರೆ. ಈ ಅದ್ಭುತ ಸಾಧನೆಗಾಗಿ ಅವರಿಗೆ ಅಭಿನಂದನೆಗಳು. ಅವರ ಕ್ರೀಡಾ ಜೀವನದಲ್ಲಿ ಇಂತಹ ಇನ್ನೂ ಅನೇಕ ಮೈಲಿಗಲ್ಲುಗಳನ್ನು ಅವರು ತಲುಪಲಿ: ಪ್ರಧಾನಮಂತ್ರಿ @narendramodi”
*****
A memorable debut and a personal best! Anubhav Choudhary has made an impressive start to his Asian Para Games journey, winning Bronze in the Men's 100m T35 event with an impressive timing. Congratulations to him on this wonderful achievement. May this lead to many more milestones in his sporting career: PM @narendramodi
— PMO India (@PMOIndia) October 21, 2026