Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾವಿನಾ ಪಟೇಲ್‌ ಮತ್ತು ಶುಭಂ ವಾಧ್ವಾ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ


ಏಷ್ಯನ್‌ ಪ್ಯಾರಾ ಗೇಮ್ಸ್‌ 2026 ರ ಮಿಶ್ರ ಡಬಲ್ಸ್‌ ಕ್ಲಾಸ್‌ ಎಕ್ಸ್‌ ಡಿ 7 ಸ್ಪರ್ಧೆಯಲ್ಲಿಕಂಚಿನ ಪದಕ ಗೆದ್ದ ಭಾವಿನಾ ಪಟೇಲ್‌ ಮತ್ತು ಶುಭಂ ವಾಧ್ವಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು. ಕ್ರೀಡಾಕೂಟದಲ್ಲಿ ಮಿಶ್ರ ಡಬಲ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಮತ್ತು ಭಾರತೀಯ ಪ್ಯಾರಾ ಟೇಬಲ್‌ ಟೆನಿಸ್‌ಗೆ ಐತಿಹಾಸಿಕ ಮೊದಲ ಸ್ಥಾನವನ್ನು ದಾಖಲಿಸಿದರು.

ಅವರ ತಂಡದ ಕೆಲಸ, ಸಮರ್ಪಣೆ ಮತ್ತು ದೃಢನಿಶ್ಚಯವು ರಾಷ್ಟ್ರಕ್ಕೆ ಹೆಮ್ಮೆ ತಂದಿದೆ ಎಂದು ಹೇಳಿದ ಶ್ರೀ ನರೇಂದ್ರ ಮೋದಿ ಅವರು, ಈ ಅದ್ಭುತ ಮೈಲಿಗಲ್ಲಿಗಾಗಿ ಇಬ್ಬರೂ ಕ್ರೀಡಾಪಟುಗಳನ್ನು ಅಭಿನಂದಿಸಿದರು ಮತ್ತು ಅವರ ಯಶಸ್ಸು ಮುಂದುವರೆಯಲಿ ಎಂದು ಹಾರೈಸಿದರು.

ಎಕ್ಸ್‌ ಖಾತೆಯಲ್ಲಿ ಪ್ರಧಾನಮಂತ್ರಿ ಕಾರ್ಯಾಲಯ ಈ ರೀತಿ ಹಂಚಿಕೊಂಡಿದೆ:

‘‘ಭಾರತದ ಪ್ಯಾರಾ ಟೇಬಲ್‌ ಟೆನಿಸ್‌ನಲ್ಲಿಇದೊಂದು ಐತಿಹಾಸಿಕ ಪ್ರಥಮ ಸಾಧನೆ!

ಭಾವಿನಾ ಪಟೇಲ್‌ ಮತ್ತು ಶುಭಂ ವಾಧ್ವಾ ಅವರು ಏಷ್ಯನ್‌ ಪ್ಯಾರಾ ಗೇಮ್ಸ್‌ 2026ರ ಮಿಶ್ರ ಡಬಲ್ಸ್‌ ಕ್ಲಾಸ್‌ ಎಕ್ಸ್‌ಡಿ 7 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ, ಕ್ರೀಡಾಕೂಟದಲ್ಲಿ ಮಿಶ್ರ ಡಬಲ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕವನ್ನು ಗಳಿಸಿದ್ದಾರೆ.

ಅವರ ತಂಡದ ಕೆಲಸ, ಸಮರ್ಪಣೆ ಮತ್ತು ದೃಢನಿಶ್ಚಯವು ರಾಷ್ಟ್ರಕ್ಕೆ ಹೆಮ್ಮೆ ತಂದಿದೆ.

ಈ ಅದ್ಭುತ ಮೈಲಿಗಲ್ಲುಸ್ಥಾಪಿಸಿದ್ದಕ್ಕಾಗಿ ಇಬ್ಬರೂ ಕ್ರೀಡಾಪಟುಗಳಿಗೆ ಅಭಿನಂದನೆಗಳು. ಅವರ ಯಶಸ್ಸು ಮುಂದುವರಿಯಲಿ ಎಂದು ಹಾರೈಸುತ್ತೇನೆ: ಪ್ರಧಾನಮಂತ್ರಿ @narendramodi’’

 

*****